Deuteronomy · chapter 7 · verse 3
Deuteronomy 7:3 in Kannada
ಇಲ್ಲವೆ ಅವರ ಸಂಗಡ ಮದುವೆಮಾಡಿ ಕೊಳ್ಳಬಾರದು; ನಿನ್ನ ಕುಮಾರ್ತೆಯನ್ನು ಅವನ ಮಗ ನಿಗೆ ಕೊಡಬಾರದು. ನಿನ್ನ ಕುಮಾರನಿಗೆ ಅವನ ಕುಮಾರ್ತೆಯನ್ನು ತಕ್ಕೊಳ್ಳಬಾರದು.
Illave avara sangada maduvemaadi kollabaaradu; ninna kumaarteyannu avana maga nige kodabaaradu. Ninna kumaaranige avana kumaarteyannu takkollabaaradu.
Deuteronomy 7:3 in English
- King James Version (KJV)
- Neither shalt thou make marriages with them; thy daughter thou shalt not give unto his son, nor his daughter shalt thou take unto thy son.
- World English Bible (WEB)
- You shall not make marriages with them. You shall not give your daughter to his son, nor shall you take his daughter for your son.
- American Standard Version (ASV)
- neither shalt thou make marriages with them; thy daughter thou shalt not give unto his son, nor his daughter shalt thou take unto thy son.
- Bible in Basic English (BBE)
- Do not take wives or husbands from among them; do not give your daughters to their sons, or take their daughters for your sons.
- Darby Translation (DBY)
- And thou shalt make no marriages with them: thy daughter thou shalt not give unto his son, nor take his daughter for thy son;
- Webster's Bible (WBS)
- Neither shalt thou make marriages with them; thy daughter thou shalt not give to his son, nor his daughter shalt thou take to thy son.
- Young's Literal Translation (YLT)
- 'And thou dost not join in marriage with them; thy daughter thou dost not give to his son, and his daughter thou dost not take to thy son,
Read in context
- 1ನೀನು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಬರಮಾಡಿದಾಗ ಆತನು ನಿನಗಿಂತ ದೊಡ್ಡ ವರೂ ಬಲಿಷ್ಠರೂ ಆದ ಏಳು ಜನಾಂಗಗಳನ್ನು ಅಂದರೆ ಹಿತ್ತಿಯರನ್ನೂ ಗಿರ್ಗಾಷಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಈ ಪ್ರಕಾರ ಬಹಳ ಜನಾಂಗ ಗಳನ್ನು ನಿನ್ನ ಮುಂದೆ ಹೊರಡಿಸಿ
- 2ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಒಪ್ಪಿಸಲು ನೀನು ಅವರನ್ನು ಹೊಡೆದು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕು. ಅವರ ಸಂಗಡ ಒಡಂಬಡಿಕೆ ಮಾಡಿ ಕೊಳ್ಳಬಾರದು. ಇಲ್ಲವೆ ಅವರಿಗೆ ದಯೆತೋರಿಸ ಬಾರದು.
- 3ಇಲ್ಲವೆ ಅವರ ಸಂಗಡ ಮದುವೆಮಾಡಿ ಕೊಳ್ಳಬಾರದು; ನಿನ್ನ ಕುಮಾರ್ತೆಯನ್ನು ಅವನ ಮಗ ನಿಗೆ ಕೊಡಬಾರದು. ನಿನ್ನ ಕುಮಾರನಿಗೆ ಅವನ ಕುಮಾರ್ತೆಯನ್ನು ತಕ್ಕೊಳ್ಳಬಾರದು.
- 4ಯಾಕಂದರೆ ಅವರು ಬೇರೆ ದೇವರುಗಳನ್ನು ನಿನ್ನ ಕುಮಾರರು ಸೇವಿಸುವ ಹಾಗೆ ನನ್ನಿಂದ ತೊಲಗಿಸಾರು. ಆಗ ಕರ್ತನ ಕೋಪವು ನಿಮ್ಮ ಮೇಲೆ ಉರಿಯಲು ಆತನು ನಿನ್ನನ್ನು ಬೇಗ ನಾಶಮಾಡಿಯಾನು.
- 5ಅವರಿಗೆ ಮಾಡಬೇಕಾದ ದ್ದೇನಂದರೆ ಅವರ ಬಲಿಪೀಠಗಳನ್ನು ಒಡೆದುಹಾಕ ಬೇಕು; ಅವರ ವಿಗ್ರಹಗಳನ್ನು ಮುರಿದುಹಾಕಬೇಕು; ಅವರ ತೋಪುಗಳನ್ನು ಕಡಿದುಹಾಕಬೇಕು; ಅವರು ಕೆತ್ತಿದ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು.
Cross references
- 1 Kings 11:2 1 ಅರಸುಗಳು 11:2ಈ ಜನಾಂಗಗಳನ್ನು ಕುರಿತು ಕರ್ತನು ಇಸ್ರಾಯೇಲ್ ಮಕ್ಕಳಿಗೆ--ನಿಮಗೂ ಅವರಿಗೂ ಕೊಟ್ಟುಕೊಳ್ಳುವದು ಇರಬಾರದು, ಅವರು ನಿಶ್ಚಯವಾಗಿ ನಿಮ್ಮ ಹೃದಯವನ್ನು ತಮ್ಮ ದೇವರುಗಳ ಕಡೆಗೆ ತಿರುಗಿಸುವರು ಎಂದು ಹೇಳಿದ್ದನು. ಆದರೆ ಸೊಲೊಮೋನನು ಪ್ರೀತಿಯಲ್ಲಿ ಇವರನ್ನು ಅಂಟಿಕೊಂಡನು.
- Joshua 23:12–13 ಯೆಹೋಶುವ 23:12–13ನೀವು ಹಿಂತಿರಿಗಿ ಕೊಂಡು ನಿಮ್ಮಲ್ಲಿ ಉಳಿದಿರುವ ಈ ಜನಾಂಗ ಗಳಲ್ಲಿ ಸೇರಿಕೊಂಡು ಅವರಿಗೆ ಮದುವೆಮಾಡಿ ಕೊಟ್ಟರೆ ನೀವು ಅವರ ಬಳಿಗೂ ಅವರು ನಿಮ್ಮ ಬಳಿಗೂ ಪ್ರವೇಶಿಸಿದರೆ ನಿಮ್ಮ ದೇವರಾದ ಕರ್ತನು ಇನ್ನು ಮೇಲೆ ಈ ಜನಾಂಗಗಳನ್ನು ನಿಮ್ಮ ಮುಂದೆ ಹೊರಡಿಸಿ ಬಿಡುವದಿಲ್ಲ. ನಿಮ್ಮ ದೇವರಾದ ಕರ್ತನು ನಿಮಗೆ ಕೊಟ್ಟ ಈ ಒಳ್ಳೇ ದೇಶದೊಳಗಿಂದ ನೀವು ನಾಶವಾಗುವ ವರೆಗೂ ಅವರು ನಿಮಗೆ ಉರುಲಾಗಿಯೂ ಬೋನಾ ಗಿಯೂ ನಿಮ್ಮ ಪಕ್ಕೆಯಲ್ಲಿ ಶೂಲವಾಗಿಯೂ ನಿಮ್ಮ ಕಣ್ಣುಗಳಿಗೆ ಮುಳ್ಳುಗಳಾಗಿಯೂ ಇರುವರೆಂದು ನಿಶ್ಚಯ ವಾಗಿ ತಿಳಿದುಕೊಳ್ಳುವಿರಿ.
- Exodus 34:15–16 ವಿಮೋಚನಕಾಂಡ 34:15–16ಆ ದೇಶ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಬಾರದು. ಅವರು ಅನ್ಯ ದೇವರುಗಳನ್ನು ಆರಾಧಿಸಿ, ಅವುಗಳಿಗೆ ಯಜ್ಞಗಳನ್ನು ಮಾಡುವಾಗ ಒಬ್ಬನು ನಿನ್ನನ್ನು ಕರೆದಾನು; ನೀನು ಅವನ ಬಲಿಯನ್ನು ತಿನ್ನ ಬೇಕಾದೀತು. ಇದಲ್ಲದೆ ಅವರ ಕುಮಾರ್ತೆಯರನ್ನು ನಿನ್ನ ಕುಮಾರರಿಗೋಸ್ಕರ ತಕ್ಕೊಳ್ಳಬೇಕಾಗಬಹುದು. ತಕ್ಕೊಂಡರೆ ಅವರ ಕುಮಾರ್ತೆಯರು ತಮ್ಮ ದೇವರುಗಳನ್ನು ಆರಾಧಿಸಿ ನಿಮ್ಮ ಕುಮಾರರು ತಮ್ಮ ದೇವರುಗಳನ್ನು ಆರಾಧಿಸುವಂತೆ ಮಾಡಾರು.
- Judges 3:6–7 ನ್ಯಾಯಸ್ಥಾಪಕರು 3:6–7ಅವರ ಕುಮಾರ್ತೆಯರನ್ನು ತಾವು ಹೆಂಡತಿಯರ ನ್ನಾಗಿ ತಕ್ಕೊಂಡು ತಮ್ಮ ಕುಮಾರ್ತೆಯರನ್ನು ಅವರ ಕುಮಾರರಿಗೆ ಮದುವೆ ಮಾಡಿಕೊಟ್ಟು ಅವರ ದೇವರು ಗಳನ್ನು ಸೇವಿಸಿದರು. ಇಸ್ರಾಯೇಲ್ ಮಕ್ಕಳು ಕರ್ತನ ಮುಂದೆ ಕೆಟ್ಟತನ ಮಾಡಿ ತಮ್ಮ ದೇವರಾದ ಕರ್ತನನ್ನು ಮರೆತು ಬಾಳ ನನ್ನೂ ತೋಪುಗಳನ್ನೂ ಸೇವಿಸಿದರು.
- Nehemiah 13:23–27 ನೆಹೆಮೀಯ 13:23–27ಆ ದಿವಸಗಳಲ್ಲಿ ಅಮ್ಮೋನು ಮೋವಾಬು ಅಷ್ಡೋದು ಎಂಬ ದೇಶಗಳ ಸ್ತ್ರೀಯರನ್ನು ಮದುವೆ ಮಾಡಿಕೊಂಡ ಯೆಹೂದ್ಯರನ್ನು ಕಂಡೆನು. ಇವರ ಮಕ್ಕಳು ಅರ್ಧ ಅಷ್ಡೋದಿನ ಮಾತು ಆಡಿದರು; ಅವರು ಯೆಹೂದ್ಯರ ಮಾತು ಆಡಲಾರದೆ ಈ ಜನರು ಅನ್ಯರ ಮಾತನ್ನು ಆಡಿದರು. ಆಗ ನಾನು ಅವರನ್ನು ಗದರಿಸಿ ಶಪಿಸಿ ಅವರಲ್ಲಿ ಕೆಲವರನ್ನು ಹೊಡೆದು ಅವರ ಕೂದಲನ್ನು ಕಿತ್ತು--ನೀವು ನಿಮ್ಮ ಕುಮಾರ್ತೆಯರನ್ನು ಅವರ ಕುಮಾರರಿಗೂ ಅವರ ಕುಮಾರ್ತೆಯರನ್ನು ನಿಮ್ಮ ಕುಮಾರರಿಗೂ ನಿಮಗೂ ತಕ್ಕೊಳ್ಳದೆ ಮತ್ತು ಕೊಡದೆ ಇರ್ರಿ ಎಂದು ದೇವರ ಹೆಸರಿನಲ್ಲಿ ಅವರಿಗೆ ಆಣೆ ಇಟ್ಟೆನು; ಇಸ್ರಾಯೇಲಿನ ಅರಸನಾದ ಸೊಲೊಮೋನನು ಇವುಗಳಿಂದ ಪಾಪ ಮಾಡಿದ ನಲ್ಲವೇ? ಆದರೆ ಅನೇಕ ಜನಾಂಗಗಳಲ್ಲಿ ಅವನ ಹಾಗೆ ಮತ್ತೊಬ್ಬ ಅರಸನು ಇದ್ದದ್ದಿಲ್ಲ; ಅವನು ತನ್ನ ದೇವರಿಗೆ ಪ್ರಿಯನಾಗಿದ್ದ ಕಾರಣ ದೇವರು ಅವನನ್ನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನನ್ನಾಗಿ ಮಾಡಿ ದನು; ಆದರೂ ಅನ್ಯಸ್ತ್ರೀಯರು ಅವನನ್ನು ಸಹ ಪಾಪ ಮಾಡುವ ಹಾಗೆ ಮಾಡಿದರು. ನೀವು ಅನ್ಯ ಸ್ತ್ರೀಯರನ್ನು ಮದುವೆಮಾಡಿಕೊಳ್ಳುವದರಿಂದ ನಮ್ಮ ದೇವರಿಗೆ ಅಪರಾಧ ಮಾಡಿ ಈ ಸಮಸ್ತವಾದ ದೊಡ್ಡ ಕೇಡು ಮಾಡುವ ಹಾಗೆ ನಾವು ನಿಮ್ಮ ಮಾತು ಕೇಳ ಬಹುದೋ ಅಂದೆನು.
- 2 Corinthians 6:14–17 2 ಕೊರಿಂಥದವರಿಗೆ 6:14–17ನೀವು ಅವಿಶ್ವಾಸಿಗಳೊಂದಿಗೆ ಸೇರಿ ಸಮವಲ್ಲದ ನೊಗವನ್ನು ಹೊರಬೇಡಿರಿ; ಯಾಕಂದರೆ ಅನೀತಿಯ ಕೂಡ ನೀತಿಗೆ ಅನ್ಯೋನ್ಯತೆ ಏನು? ಕತ್ತಲೆಯ ಕೂಡ ಬೆಳಕಿಗೆ ಐಕ್ಯವೇನು? ಬೆಲಿಯಾಳನ ಕೂಡ ಕ್ರಿಸ್ತನಿಗೆ ಒಪ್ಪಂದವೇನು? ನಂಬದಿರುವವನ ಕೂಡ ನಂಬುವ ವನಿಗೆ ಪಾಲುಗಾರಿಕೆ ಏನು? ವಿಗ್ರಹಗಳ ಕೂಡ ದೇವರ ಮಂದಿರಕ್ಕೆ ಒಪ್ಪಿಗೆ ಏನು? ಯಾಕಂದರೆ ನೀವು ಜೀವವುಳ್ಳ ದೇವರ ಮಂದಿರವಾಗಿದ್ದೀರಲ್ಲಾ, ಇದರ ಸಂಬಂಧವಾಗಿ ದೇವರು--ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ. ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರ್ತೆಯರಾಗಿರುವಿರಿ ಎಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.
- Genesis 6:2–3 ಆದಿಕಾಂಡ 6:2–3ಆಗ ದೇವಕುಮಾರರು ಮನುಷ್ಯ ಕುಮಾರ್ತೆಯರ ಸೌಂದರ್ಯವನ್ನು ನೋಡಿ ತಾವು ಆರಿಸಿಕೊಂಡವರನ್ನೆಲ್ಲಾ ತಮಗೆ ಹೆಂಡತಿಯ ರನ್ನಾಗಿ ಮಾಡಿಕೊಂಡರು. ಆಗ ಕರ್ತನು--ನನ್ನ ಆತ್ಮನು ಮನುಷ್ಯನ ಸಂಗಡ ಯಾವಾಗಲೂ ವಿವಾದಮಾಡುವದಿಲ್ಲ; ಅವನು ಮನುಷ್ಯನಷ್ಟೆ. ಆದರೂ ಅವನ ದಿನಗಳು ಇನ್ನು ನೂರ ಇಪ್ಪತ್ತು ವರುಷಗಳಾಗಿರುವವು ಅಂದನು.
- Ezra 9:1–2 ಎಜ್ರನು 9:1–2ಇವುಗಳಾದ ತರುವಾಯ ಪ್ರಧಾನರು ನನ್ನ ಬಳಿಗೆ ಬಂದು--ಇಸ್ರಾಯೇಲ್ ಜನರೂ ಯಾಜಕರೂ ಲೇವಿಯರೂ ದೇಶಗಳ ಜನ ಗಳೊಳಗಿಂದ ತಮ್ಮನ್ನು ಪ್ರತ್ಯೇಕಿಸದೆ ಕಾನಾನ್ಯರು, ಹಿತ್ತಿಯರು, ಪೆರಿಜ್ಜೀಯರು, ಯೆಬೂಸ್ಯರು, ಅಮ್ಮೋ ನ್ಯರು, ಮೋವಾಬ್ಯರು, ಐಗುಪ್ತ್ಯರು, ಅಮೋರಿಯರು ಇವರ ಅಸಹ್ಯಗಳ ಪ್ರಕಾರ ಮಾಡುತ್ತಾ ಇದ್ದಾರೆ. ಏನಂದರೆ, ಅವರು ತಮಗೂ ತಮ್ಮ ಕುಮಾರರಿಗೂ ಅವರ ಕುಮಾರ್ತೆಯರನ್ನು ತಕ್ಕೊಂಡರು. ಆದಕಾರಣ ಪರಿಶುದ್ಧ ಸಂತಾನದವರು ಈ ದೇಶದ ಜನರ ಸಂಗಡ ಬೆರೆತುಕೊಂಡಿದ್ದಾರೆ; ನಿಶ್ಚಯವಾಗಿ ಪ್ರಧಾನರ, ಅಧಿಕಾರಸ್ಥರ ಕೈ ಈ ಅಕೃತ್ಯದಲ್ಲಿ ಮುಖ್ಯವಾಗಿದೆ ಎಂದು ಹೇಳಿದರು.