Genesis · chapter 6 · verse 2
Genesis 6:2 in Kannada
ಆಗ ದೇವಕುಮಾರರು ಮನುಷ್ಯ ಕುಮಾರ್ತೆಯರ ಸೌಂದರ್ಯವನ್ನು ನೋಡಿ ತಾವು ಆರಿಸಿಕೊಂಡವರನ್ನೆಲ್ಲಾ ತಮಗೆ ಹೆಂಡತಿಯ ರನ್ನಾಗಿ ಮಾಡಿಕೊಂಡರು.
Aaga devakumaararu manushya kumaarteyara saundaryavannu nodi taavu aarisikondavarannellaa tamage hendatiya rannaagi maadikondaru.
Genesis 6:2 in English
- King James Version (KJV)
- That the sons of God saw the daughters of men that they [were] fair; and they took them wives of all which they chose.
- World English Bible (WEB)
- God’s sons saw that men’s daughters were beautiful, and they took any that they wanted for themselves as wives.
- American Standard Version (ASV)
- that the sons of God saw the daughters of men that they were fair; and they took them wives of all that they chose.
- Bible in Basic English (BBE)
- The sons of God saw that the daughters of men were fair; and they took wives for themselves from those who were pleasing to them.
- Darby Translation (DBY)
- that the sons of God saw the daughters of men that they were fair, and took themselves wives of all that they chose.
- Webster's Bible (WBS)
- That the sons of God saw the daughters of men that they [were] fair; and they took them wives of all whom they chose.
- Young's Literal Translation (YLT)
- and sons of God see the daughters of men that they [are] fair, and they take to themselves women of all whom they have chosen.
Read in context
- 1ತರುವಾಯ ಭೂಮಿಯ ಮೇಲೆ ಜನರು ಹೆಚ್ಚುವದಕ್ಕೆ ಆರಂಭಿಸಿದಾಗ ಅವರಿಗೆ ಕುಮಾರ್ತೆಯರು ಹುಟ್ಟಿದರು.
- 2ಆಗ ದೇವಕುಮಾರರು ಮನುಷ್ಯ ಕುಮಾರ್ತೆಯರ ಸೌಂದರ್ಯವನ್ನು ನೋಡಿ ತಾವು ಆರಿಸಿಕೊಂಡವರನ್ನೆಲ್ಲಾ ತಮಗೆ ಹೆಂಡತಿಯ ರನ್ನಾಗಿ ಮಾಡಿಕೊಂಡರು.
- 3ಆಗ ಕರ್ತನು--ನನ್ನ ಆತ್ಮನು ಮನುಷ್ಯನ ಸಂಗಡ ಯಾವಾಗಲೂ ವಿವಾದಮಾಡುವದಿಲ್ಲ; ಅವನು ಮನುಷ್ಯನಷ್ಟೆ. ಆದರೂ ಅವನ ದಿನಗಳು ಇನ್ನು ನೂರ ಇಪ್ಪತ್ತು ವರುಷಗಳಾಗಿರುವವು ಅಂದನು.
- 4ಆ ದಿನಗಳಲ್ಲಿ ಭೂಮಿಯ ಮೇಲೆ ಮಹಾ ಶರೀರಗಳಾದವರು ಇದ್ದರು, ಆಮೇಲೆಯೂ ಇದ್ದರು; ದೇವಕುಮಾರರು ಮನುಷ್ಯ ಕುಮಾರ್ತೆಯರನ್ನು ಕೂಡಿದಾಗ ಅವರಿಗೆ ಮಕ್ಕಳನ್ನು ಹೆತ್ತರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾದ ಪರಾಕ್ರಮಶಾಲಿ ಗಳಾಗಿದ್ದವರು.
Cross references
- Psalm 82:6–7 ಕೀರ್ತನೆಗಳು 82:6–7ನಾನು--ನೀವು ದೇವರುಗಳು; ನೀವೆಲ್ಲರು ಮಹೋನ್ನತನ ಮಕ್ಕಳು ಎಂದು ಹೇಳಿದೆನು. ಆದಾಗ್ಯೂ ಮನುಷ್ಯರ ಹಾಗೆ ನೀವು ಸಾಯುವಿರಿ; ಪ್ರಧಾನರಲ್ಲಿ ಒಬ್ಬನ ಹಾಗೆ ಬೀಳುವಿರಿ.ಓ ದೇವರೇ, ಏಳು; ಭೂಮಿಗೆ ನ್ಯಾಯತೀರಿಸು; ನೀನು ಜನಾಂಗಗಳನ್ನೆಲ್ಲಾ ಬಾಧ್ಯವಾಗಿ ಹೊಂದುವಿ.
- 1 John 2:16 1 ಯೋಹಾನನು 2:16ಲೋಕದಲ್ಲಿರುವವುಗಳೆಲ್ಲವು ಅಂದರೆ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಗೆ ಸಂಬಂಧ ಪಟ್ಟವುಗಳಲ್ಲ, ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ.
- Romans 9:7–8 ರೋಮಾಪುರದವರಿಗೆ 9:7–8ಇಲ್ಲವೆ ಅವರು ಅಬ್ರಹಾಮನ ಸಂತತಿಯವರಾದ ಕಾರಣ ಅವರೆ ಲ್ಲರೂ ಮಕ್ಕಳಲ್ಲ; ಆದರೆ--ಇಸಾಕನಲ್ಲಿಯೇ ನಿನ್ನ ಸಂತ ತಿಯು ಕರೆಯಲ್ಪಡುವದು ಎಂಬದೇ. ಅಂದರೆ--ಶರೀರ ಸಂಬಂಧವಾದ ಮಕ್ಕಳು ದೇವರ ಮಕ್ಕಳಲ್ಲ; ಆದರೆ ವಾಗ್ದಾನದ ಮಕ್ಕಳೇ ಆತನ ಸಂತತಿಯೆಂದು ಎಣಿಸಲ್ಪಟ್ಟಿದ್ದಾರೆ.
- Deuteronomy 7:3–4 ಧರ್ಮೋಪದೇಶಕಾಂಡ 7:3–4ಇಲ್ಲವೆ ಅವರ ಸಂಗಡ ಮದುವೆಮಾಡಿ ಕೊಳ್ಳಬಾರದು; ನಿನ್ನ ಕುಮಾರ್ತೆಯನ್ನು ಅವನ ಮಗ ನಿಗೆ ಕೊಡಬಾರದು. ನಿನ್ನ ಕುಮಾರನಿಗೆ ಅವನ ಕುಮಾರ್ತೆಯನ್ನು ತಕ್ಕೊಳ್ಳಬಾರದು. ಯಾಕಂದರೆ ಅವರು ಬೇರೆ ದೇವರುಗಳನ್ನು ನಿನ್ನ ಕುಮಾರರು ಸೇವಿಸುವ ಹಾಗೆ ನನ್ನಿಂದ ತೊಲಗಿಸಾರು. ಆಗ ಕರ್ತನ ಕೋಪವು ನಿಮ್ಮ ಮೇಲೆ ಉರಿಯಲು ಆತನು ನಿನ್ನನ್ನು ಬೇಗ ನಾಶಮಾಡಿಯಾನು.
- Nehemiah 13:24–27 ನೆಹೆಮೀಯ 13:24–27ಇವರ ಮಕ್ಕಳು ಅರ್ಧ ಅಷ್ಡೋದಿನ ಮಾತು ಆಡಿದರು; ಅವರು ಯೆಹೂದ್ಯರ ಮಾತು ಆಡಲಾರದೆ ಈ ಜನರು ಅನ್ಯರ ಮಾತನ್ನು ಆಡಿದರು. ಆಗ ನಾನು ಅವರನ್ನು ಗದರಿಸಿ ಶಪಿಸಿ ಅವರಲ್ಲಿ ಕೆಲವರನ್ನು ಹೊಡೆದು ಅವರ ಕೂದಲನ್ನು ಕಿತ್ತು--ನೀವು ನಿಮ್ಮ ಕುಮಾರ್ತೆಯರನ್ನು ಅವರ ಕುಮಾರರಿಗೂ ಅವರ ಕುಮಾರ್ತೆಯರನ್ನು ನಿಮ್ಮ ಕುಮಾರರಿಗೂ ನಿಮಗೂ ತಕ್ಕೊಳ್ಳದೆ ಮತ್ತು ಕೊಡದೆ ಇರ್ರಿ ಎಂದು ದೇವರ ಹೆಸರಿನಲ್ಲಿ ಅವರಿಗೆ ಆಣೆ ಇಟ್ಟೆನು; ಇಸ್ರಾಯೇಲಿನ ಅರಸನಾದ ಸೊಲೊಮೋನನು ಇವುಗಳಿಂದ ಪಾಪ ಮಾಡಿದ ನಲ್ಲವೇ? ಆದರೆ ಅನೇಕ ಜನಾಂಗಗಳಲ್ಲಿ ಅವನ ಹಾಗೆ ಮತ್ತೊಬ್ಬ ಅರಸನು ಇದ್ದದ್ದಿಲ್ಲ; ಅವನು ತನ್ನ ದೇವರಿಗೆ ಪ್ರಿಯನಾಗಿದ್ದ ಕಾರಣ ದೇವರು ಅವನನ್ನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನನ್ನಾಗಿ ಮಾಡಿ ದನು; ಆದರೂ ಅನ್ಯಸ್ತ್ರೀಯರು ಅವನನ್ನು ಸಹ ಪಾಪ ಮಾಡುವ ಹಾಗೆ ಮಾಡಿದರು. ನೀವು ಅನ್ಯ ಸ್ತ್ರೀಯರನ್ನು ಮದುವೆಮಾಡಿಕೊಳ್ಳುವದರಿಂದ ನಮ್ಮ ದೇವರಿಗೆ ಅಪರಾಧ ಮಾಡಿ ಈ ಸಮಸ್ತವಾದ ದೊಡ್ಡ ಕೇಡು ಮಾಡುವ ಹಾಗೆ ನಾವು ನಿಮ್ಮ ಮಾತು ಕೇಳ ಬಹುದೋ ಅಂದೆನು.
- 2 Peter 2:14 2 ಪೇತ್ರನು 2:14ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ.
- Ezra 9:12 ಎಜ್ರನು 9:12ಆದದರಿಂದ ನೀವು ಪ್ರಬಲವಾಗಿ ದೇಶದ ಒಳ್ಳೇ ದನ್ನು ತಿಂದು ಅದನ್ನು ಎಂದಿಗೂ ನಿಮ್ಮ ಮಕ್ಕಳಿಗೆ ಸ್ವಾಸ್ಥ್ಯವಾಗಿ ಕೊಡುವ ಹಾಗೆ ನೀವು ನಿಮ್ಮ ಕುಮಾರ್ತೆ ಯರನ್ನು ಅವರ ಕುಮಾರರಿಗೆ ಕೊಡಬೇಡಿರಿ; ಅವರ ಕುಮಾರ್ತೆಯರನ್ನು ನಿಮ್ಮ ಕುಮಾರರಿಗೆ ತಕ್ಕೊಳ್ಳ ಬೇಡಿರಿ. ಇಲ್ಲವೆ ಅವರ ಸಮಾಧಾನವನ್ನೂ ಅವರ ಮೇಲನ್ನೂ ಎಂದಿಗೂ ಬಯಸಬೇಡಿರಿ ಎಂಬದು.
- 2 Samuel 11:2 2 ಸಮುವೇಲನು 11:2ಆಗ ಆದದ್ದೇನಂದರೆ, ದಾವೀದನು ಒಂದು ದಿನ ಸಾಯಂಕಾಲದಲ್ಲಿ ತನ್ನ ಹಾಸಿಗೆಯಿಂದ ಎದ್ದು ಅರಮನೆಯ ಉಪ್ಪರಿಗೆಯ ಮೇಲೆ ತಿರುಗಾಡುತ್ತಾ ಇರುವಾಗ ಸ್ನಾನಮಾಡುತ್ತಿರುವ ಒಬ್ಬ ಸ್ತ್ರೀಯನ್ನು ಉಪ್ಪರಿಗೆಯ ಮೇಲಿನಿಂದ ನೋಡಿದನು.
- Genesis 3:6 ಆದಿಕಾಂಡ 3:6ಸ್ತ್ರೀಯು--ಆ ಮರದ ಫಲವು ಆಹಾರಕ್ಕೆ ಒಳ್ಳೇದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಒಬ್ಬನನ್ನು ಜ್ಞಾನಿಯನ್ನಾಗಿ ಮಾಡುವದಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಅದೆ ಎಂದು ನೋಡಿ ಅದರ ಫಲವನ್ನು ತೆಗೆದುಕೊಂಡು ತಿಂದಳು; ತನ್ನ ಸಂಗಡ ಇದ್ದ ತನ್ನ ಗಂಡನಿಗೂ ಕೊಟ್ಟಳು; ಅವನೂ ತಿಂದನು.
- Ezra 9:1–2 ಎಜ್ರನು 9:1–2ಇವುಗಳಾದ ತರುವಾಯ ಪ್ರಧಾನರು ನನ್ನ ಬಳಿಗೆ ಬಂದು--ಇಸ್ರಾಯೇಲ್ ಜನರೂ ಯಾಜಕರೂ ಲೇವಿಯರೂ ದೇಶಗಳ ಜನ ಗಳೊಳಗಿಂದ ತಮ್ಮನ್ನು ಪ್ರತ್ಯೇಕಿಸದೆ ಕಾನಾನ್ಯರು, ಹಿತ್ತಿಯರು, ಪೆರಿಜ್ಜೀಯರು, ಯೆಬೂಸ್ಯರು, ಅಮ್ಮೋ ನ್ಯರು, ಮೋವಾಬ್ಯರು, ಐಗುಪ್ತ್ಯರು, ಅಮೋರಿಯರು ಇವರ ಅಸಹ್ಯಗಳ ಪ್ರಕಾರ ಮಾಡುತ್ತಾ ಇದ್ದಾರೆ. ಏನಂದರೆ, ಅವರು ತಮಗೂ ತಮ್ಮ ಕುಮಾರರಿಗೂ ಅವರ ಕುಮಾರ್ತೆಯರನ್ನು ತಕ್ಕೊಂಡರು. ಆದಕಾರಣ ಪರಿಶುದ್ಧ ಸಂತಾನದವರು ಈ ದೇಶದ ಜನರ ಸಂಗಡ ಬೆರೆತುಕೊಂಡಿದ್ದಾರೆ; ನಿಶ್ಚಯವಾಗಿ ಪ್ರಧಾನರ, ಅಧಿಕಾರಸ್ಥರ ಕೈ ಈ ಅಕೃತ್ಯದಲ್ಲಿ ಮುಖ್ಯವಾಗಿದೆ ಎಂದು ಹೇಳಿದರು.
- John 8:41–42 ಯೋಹಾನನು 8:41–42ನೀವು ನಿಮ್ಮ ತಂದೆಯ ಕ್ರಿಯೆಗಳನ್ನು ಮಾಡುತ್ತೀರಿ ಅಂದನು. ಅದಕ್ಕವರು ಆತನಿಗೆ--ನಾವು ವ್ಯಭಿಚಾರದಿಂದ ಹುಟ್ಟಿ ದವರಲ್ಲ; ನಮಗೆ ಒಬ್ಬನೇ ತಂದೆ, ಆತನು ದೇವರೇ ಅಂದರು. ಯೇಸು ಅವರಿಗೆ--ದೇವರು ನಿಮ್ಮ ತಂದೆಯಾಗಿದ್ದರೆ ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ; ಯಾಕಂದರೆ ನಾನು ದೇವರಿಂದ ಹೊರಟುಬಂದಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ; ಆದರೆ ಆತನೇ ನನ್ನನ್ನು ಕಳುಹಿಸಿದನು.
- Genesis 24:3 ಆದಿಕಾಂಡ 24:3ನೀನು ನನ್ನ ಸುತ್ತಲೂ ವಾಸವಾಗಿರುವ ಕಾನಾನ್ಯರ ಕುಮಾರ್ತೆಯರೊಳಗಿಂದ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳುವದಿಲ್ಲವೆಂದೂ