Ecclesiastes · chapter 4 · verse 16
Ecclesiastes 4:16 in Kannada
ಎಲ್ಲಾ ಜನರಿಗೂ ಅವರಿಗಿಂತ ಮುಂಚೆ ಇದ್ದ ಎಲ್ಲವುಗಳಿಗೂ ಅಂತ್ಯವಿಲ್ಲ; ಅವನ ತರುವಾಯ ಬರುವವನು ಸಹ ಅವನಲ್ಲಿ ಆನಂದಿಸುವದಿಲ್ಲ. ಖಂಡಿತವಾಗಿಯೂ ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ.
Ellaa janarigoo avariginta munche idda ellavugaligoo antyavilla; avana taruvaaya baruvavanu saha avanalli aanandisuvadilla. Khanditavaagiyoo idoo kooda vyarthavoo manassige aayaasakaravoo aagide.
Ecclesiastes 4:16 in English
- King James Version (KJV)
- [There is] no end of all the people, [even] of all that have been before them: they also that come after shall not rejoice in him. Surely this also [is] vanity and vexation of spirit.
- World English Bible (WEB)
- There was no end of all the people, even of all them over whom he was—yet those who come after shall not rejoice in him. Surely this also is vanity and a chasing after wind.
- American Standard Version (ASV)
- There was no end of all the people, even of all them over whom he was: yet they that come after shall not rejoice in him. Surely this also is vanity and a striving after wind.
- Bible in Basic English (BBE)
- There was no end of all the people, of all those whose head he was, but they who come later will have no delight in him. This again is to no purpose and desire for wind.
- Darby Translation (DBY)
- [There is] no end of all the people, of all that stood before them; those however that come after shall not rejoice in him. Surely this also is vanity and a striving after the wind.
- Webster's Bible (WBS)
- [There is] no end of all the people, [even] of all that have been before them: they also that come after shall not rejoice in him. Surely this also [is] vanity and vexation of spirit.
- Young's Literal Translation (YLT)
- there is no end to all the people, to all who were before them; also, the latter rejoice not in him. Surely this also is vanity and vexation of spirit.
Read in context
- 14ಸೆರೆ ಯಿಂದ ಆಳುವದಕ್ಕಾಗಿ ಅವನು ಬರುತ್ತಾನೆ; ಇದಲ್ಲದೆ, ತನ್ನ ರಾಜ್ಯದಲ್ಲಿ ಹುಟ್ಟಿದವನು ಬಡವನಾಗುತ್ತಾನೆ.
- 15ತನಗೆ ಪ್ರತಿಯಾಗಿ ನಿಲ್ಲುವ ಎರಡನೆಯ ಮಗು ವಿನೊಂದಿಗೆ ನಡೆಯುವ ಜೀವಿತರನ್ನೆಲ್ಲಾ ಸೂರ್ಯನ ಕೆಳಗೆ ನಾನು ನೋಡಿದೆನು.ಎಲ್ಲಾ ಜನರಿಗೂ ಅವರಿಗಿಂತ ಮುಂಚೆ ಇದ್ದ ಎಲ್ಲವುಗಳಿಗೂ ಅಂತ್ಯವಿಲ್ಲ; ಅವನ ತರುವಾಯ ಬರುವವನು ಸಹ ಅವನಲ್ಲಿ ಆನಂದಿಸುವದಿಲ್ಲ. ಖಂಡಿತವಾಗಿಯೂ ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ.
- 16ಎಲ್ಲಾ ಜನರಿಗೂ ಅವರಿಗಿಂತ ಮುಂಚೆ ಇದ್ದ ಎಲ್ಲವುಗಳಿಗೂ ಅಂತ್ಯವಿಲ್ಲ; ಅವನ ತರುವಾಯ ಬರುವವನು ಸಹ ಅವನಲ್ಲಿ ಆನಂದಿಸುವದಿಲ್ಲ. ಖಂಡಿತವಾಗಿಯೂ ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ.
Cross references
- Ecclesiastes 1:14 ಪ್ರಸಂಗಿ 1:14ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ; ಇಗೋ, ಎಲ್ಲವು ವ್ಯರ್ಥವೂ ಮನಸ್ಸಿಗೆ ಆಯಾಸವೂ ಆಗಿವೆ.
- Ecclesiastes 2:17 ಪ್ರಸಂಗಿ 2:17ಆದಕಾರಣ ಜೀವವನ್ನು ನಾನು ಹಗೆಮಾಡಿದೆನು; ಸೂರ್ಯನ ಕೆಳಗೆ ನಡೆಯುವ ಕಾರ್ಯವು ವ್ಯಥೆಯಾಗಿ ನನಗೆ ತೋರಿತು; ಎಲ್ಲಾ ವ್ಯರ್ಥವೂ ಪ್ರಾಣಕ್ಕೆ ಆಯಾಸಕ ರವೂ ಆಗಿವೆ.
- 1 Kings 1:40 1 ಅರಸುಗಳು 1:40ಇದಲ್ಲದೆ ಜನರೆಲ್ಲರು ಅವನ ಹಿಂದೆ ಬಂದರು. ಜನರು ಪಿಳ್ಳಂಗೋವಿಗಳನ್ನು ಊದಿ ಮಹಾ ಆನಂದದಿಂದ ಸಂತೋಷಿಸಿದರು. ಅವರ ಶಬ್ದದಿಂದ ಭೂಮಿಯು ಕಂಪಿಸಿತು.
- 2 Samuel 15:12–13 2 ಸಮುವೇಲನು 15:12–13ಅಬ್ಷಾ ಲೋಮನು ಬಲಿಗಳನ್ನು ಅರ್ಪಿಸುತ್ತಿರುವಾಗ ದಾವೀ ದನ ಆಲೋಚನಾ ಕರ್ತನಾಗಿರುವ ಗೀಲೋವಿಯ ನಾದ ಅಹೀತೋಫೆಲನನ್ನು ಗೀಲೋವೆಂಬ ಅವನ ಪಟ್ಟಣದಿಂದ ಕರೇಕಳುಹಿಸಿದನು. ಅಬ್ಷಾಲೋಮನ ಸಂಗಡ ಕೂಡುವ ಜನರು ಆಗಾಗ್ಗೆ ಹೆಚ್ಚಿದ್ದರಿಂದ ಒಳಸಂಚಿನ ಗುಂಪು ಬಲವಾಯಿತು. ದಾವೀದನ ಬಳಿಗೆ ಒಬ್ಬ ದೂತನು ಬಂದು --ಇಸ್ರಾಯೇಲ್ ಜನರ ಹೃದಯಗಳು ಅಬ್ಷಾ ಲೋಮನ ಕಡೆಗಾದವು ಅಂದನು.
- Ecclesiastes 2:11 ಪ್ರಸಂಗಿ 2:11ಆಗ ನನ್ನ ಕೈಗಳು ನಡಿಸಿದವುಗಳೆಲ್ಲವನ್ನು ನಾನು ಪ್ರಯಾಸ ಪಟ್ಟ ಪ್ರಯಾಸವನ್ನು ದೃಷ್ಟಿಸಿದೆನು; ಇಗೋ, ಎಲ್ಲವೂ ವ್ಯರ್ಥ ಮತ್ತು ಮನಸ್ಸಿಗೆ ಆಯಾಸಕರ. ಸೂರ್ಯನ ಕೆಳಗೆ ಯಾವ ಲಾಭವಿಲ್ಲ.
- Ecclesiastes 2:26 ಪ್ರಸಂಗಿ 2:26ದೇವರು ತನ್ನ ದೃಷ್ಟಿಯಲ್ಲಿ ಒಳ್ಳೆಯ ವನಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ದಯಪಾಲಿಸುತ್ತಾನೆ; ದೇವರ ದೃಷ್ಟಿಯಲ್ಲಿ ಒಳ್ಳೆಯವನಿಗೆ ಕೊಡುವದಕ್ಕಾಗಿ ಕೂಡಿಸಿ ಒದಗಿಸು ವಂತೆ ಪಾಪಿಗೆ ಪ್ರಯಾಸವನ್ನು ಕೊಡುತ್ತಾನೆ. ಎಲ್ಲಾ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ.
- Judges 9:19–20 ನ್ಯಾಯಸ್ಥಾಪಕರು 9:19–20ಯೆರುಬ್ಬಾಳನ ಯೋಗ್ಯ ತೆಗೆ ತಕ್ಕದ್ದಾಗಿದ್ದರೆ ಮತ್ತು ಈಹೊತ್ತು ಅವನಿಗೂ ಅವನ ಮಗನಿಗೂ ನೀವು ಸತ್ಯದಲ್ಲಿಯೂ ಯಥಾರ್ಥ ತೆಯಲ್ಲಿಯೂ ಕಾರ್ಯಮಾಡಿದ್ದರೆ, ಅಬೀಮೆಲೆಕನಲ್ಲಿ ನೀವು ಸಂತೋಷಪಡಿರಿ, ಅವನು ಸಹ ನಿಮ್ಮಲ್ಲಿ ಸಂತೋಷಪಡಲಿ. ಇಲ್ಲದಿದ್ದರೆ ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನ ಜನರನ್ನೂ ಮಿಲ್ಲೋನಿನ ಮನೆಯವರನ್ನೂ ದಹಿಸಿಬಿಡಲಿ. ಶೆಕೆಮಿನ ಜನ ರಿಂದಲೂ ಮಿಲ್ಲೋನಿನ ಮನೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ ಅಂದನು.
- 2 Samuel 19:9 2 ಸಮುವೇಲನು 19:9ಆದರೆ ಇಸ್ರಾಯೇಲಿನ ಎಲ್ಲಾ ಕುಲಗಳಲ್ಲಿರುವ ಎಲ್ಲಾ ಜನರು ತಮ್ಮೊಳಗೆ ವ್ಯಾಜ್ಯವಾಡಿ--ನಮ್ಮ ಶತ್ರು ಗಳ ಕೈಯಿಂದ ನಮ್ಮನ್ನು ವಿಮೋಚನೆ ಮಾಡಿದವನು ಅರಸನೇ; ಫಿಲಿಷ್ಟಿಯರ ಕೈಯಿಂದ ನಮ್ಮನ್ನು ತಪ್ಪಿಸಿ ದವನೂ ಅವನೇ.
- 2 Samuel 18:7–8 2 ಸಮುವೇಲನು 18:7–8ಯುದ್ಧವು ಎಫ್ರಾ ಯಾಮ್ ಅಡವಿಯಲ್ಲಿತ್ತು. ಅಲ್ಲಿ ಇಸ್ರಾಯೇಲ್ಯರು ದಾವೀದನ ಸೇವಕರ ಮುಂದೆ ಸಂಹಾರವಾದರು. ಆ ಹೊತ್ತು ಅಲ್ಲಿ ದೊಡ್ಡ ಸಂಹಾರವಾಯಿತು; ಇಪ್ಪತ್ತು ಸಾವಿರ ಜನರು ಬಿದ್ದರು. ಅಲ್ಲಿನ ಯುದ್ಧವು ದೇಶವೆ ಲ್ಲಾದರ ಮೇಲೆ ವಿಸ್ತರಿಸಲ್ಪಟ್ಟಿತು. ಆ ಹೊತ್ತು ಜನರಲ್ಲಿ ಕತ್ತಿಗಿಂತ ಅಡವಿಯು ಹೆಚ್ಚಾದವರನ್ನು ನುಂಗಿಬಿಟ್ಟಿತು.
- 1 Kings 1:5–7 1 ಅರಸುಗಳು 1:5–7ಆಗ ಹಗ್ಗೀತಳ ಮಗನಾದ ಅದೋನೀಯನು ತನ್ನನ್ನು ಹೆಚ್ಚಿಸಿಕೊಂಡು--ನಾನೇ ಅರಸನಾಗಿರಬೇಕು ಅಂದುಕೊಂಡು ತನಗೋಸ್ಕರ ರಥಗಳನ್ನೂ ರಾಹುತ ರನ್ನೂ ತನ್ನ ಮುಂದೆ ಓಡುವದಕ್ಕೆ ಐವತ್ತು ಮಂದಿ ಮನುಷ್ಯರನ್ನೂ ಸಿದ್ಧಮಾಡಿದನು. ಅವನ ತಂದೆಯು ಎಂದಾದರೂ--ನೀನು ಯಾಕೆ ಹೀಗೆ ಮಾಡಿದಿ ಎಂದು ಹೇಳಿ ಅವನನ್ನು ಗದರಿಸಲಿಲ್ಲ. ಇದಲ್ಲದೆ ಅವನು ಬಹು ರೂಪವಂತನಾಗಿದ್ದನು. ಅಬ್ಷಾಲೋಮನ ತರು ವಾಯ ಅವನ ತಾಯಿ ಅವನನ್ನು ಹೆತ್ತಳು. ಅವನು ಚೆರೂಯಳ ಮಗನಾದ ಯೋವಾಬನ ಸಂಗಡಲೂ ಯಾಜಕನಾದ ಎಬ್ಯಾತಾರನ ಸಂಗಡಲೂ ಮಾತನಾ ಡಿದನು; ಅವರು ಅದೋನೀಯನನ್ನು ಹಿಂಬಾಲಿಸಿ ಅವನಿಗೆ ಸಹಾಯಕರಾಗಿದ್ದರು.
- 1 Kings 12:10–16 1 ಅರಸುಗಳು 12:10–16ಆಗ ಅವನ ಸಂಗಡ ಬೆಳೆದ ಯೌವನಸ್ಥರು ಅವ ನಿಗೆ--ನಿನ್ನ ತಂದೆ ನಮ್ಮ ನೊಗವನ್ನು ಭಾರ ಮಾಡಿದನು; ಆದರೆ ನೀನು ಅದನ್ನು ನಮಗೆ ಹಗುರ ಮಾಡೆಂದು ನಿನ್ನ ಸಂಗಡ ಮಾತನಾಡಿದ ಈ ಜನರಿಗೆ-- ನನ್ನ ಕಿರುಬೆರಳು ನನ್ನ ತಂದೆಯ ನಡುವಿಗಿಂತ ದಪ್ಪವಾಗಿ ರುವದು. ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೊರಿಸಿದನು; ಆದರೆ ಇಗೋ, ನಾನು ನಿಮ್ಮ ನೊಗಕ್ಕೆ ಕೂಡಿಸುವೆನು; ನನ್ನ ತಂದೆಯು ನಿಮ್ಮನ್ನು ಕೊರಡೆಗಳಿಂದ ಶಿಕ್ಷಿಸಿದನು; ಆದರೆ ನಾನು ನಿಮ್ಮನ್ನು ಚೇಳುಗಳಿಂದ ಶಿಕ್ಷಿಸುವೆನು ಎಂಬದಾಗಿ ನೀನು ಅವರಿಗೆ ಹೇಳು ಅಂದರು. ಆಗ ಮೂರನೇ ದಿವಸದಲ್ಲಿ ನನ್ನ ಬಳಿಗೆ ಬನ್ನಿರೆಂದು ಅರಸನು ಹೇಳಿದ ಪ್ರಕಾರ ಮೂರನೇ ದಿವಸದಲ್ಲಿ ಯಾರೊಬ್ಬಾಮನೂ ಸಮಸ್ತ ಜನರೂ ರೆಹಬ್ಬಾಮನ ಬಳಿಗೆ ಬಂದರು. ಆದರೆ ಅರಸನು ಜನರಿಗೆ ಕಠಿಣವಾದ ಪ್ರತ್ಯುತ್ತರವನ್ನು ಹೇಳಿ ಹಿರಿಯರು ಅವನಿಗೆ ಹೇಳಿದ ಆಲೋಚನೆಯನ್ನು ಬಿಟ್ಟು ಯುವಕರ ಆಲೋಚನೆಯ ಪ್ರಕಾರ ಅವರ ಸಂಗಡ ಮಾತನಾಡಿ-- ನನ್ನ ತಂದೆಯು ನಿಮ್ಮ ನೊಗವನ್ನು ಭಾರವಾಗ ಮಾಡಿದನು; ನಾನು ಅದಕ್ಕೆ ಕೂಡಿಸುವೆನು; ನನ್ನ ತಂದೆಯು ನಿಮ್ಮನ್ನು ಕೊರಡೆಗಳಿಂದ ಶಿಕ್ಷಿಸಿದನು; ನಾನು ನಿಮ್ಮನ್ನು ಚೇಳುಗಳಿಂದ ಶಿಕ್ಷಿಸುವೆನು ಅಂದನು. ಹೀಗೆಯೇ ಅರಸನು ಜನರ ಮಾತು ಕೇಳದೆ ಹೋದನು. ಯಾಕಂದರೆ ಕರ್ತನು ನೆಬಾಟನ ಮಗ ನಾದ ಯೆರೊಬ್ಬಾಮನಿಗೆ ಶಿಲೋನ್ಯನಾದ ಅಹೀಯನ ಮುಖಾಂತರವಾಗಿ ಹೇಳಿದ ಮಾತು ಈಡೇರುವದಕ್ಕೆ ಕಾರಣವು ಕರ್ತನಿಂದ ಉಂಟಾಯಿತು. ಅರಸನು ಅವರ ಮಾತನ್ನು ಕೇಳದೆ ಹೋದನೆಂದು ಸಮಸ್ತ ಇಸ್ರಾಯೇಲ್ಯರು ನೋಡಿದಾಗ ಜನರು ಅರಸನಿಗೆ ಪ್ರತ್ಯುತ್ತರವಾಗಿ ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಏನು? ಇಸ್ರಾ ಯೇಲ್ಯರೇ, ನಿಮ್ಮ ಡೇರೆಗಳಿಗೆ ಹೋಗಿರಿ; ದಾವೀ ದನೇ, ಈಗ ನಿನ್ನ ಮನೆಯನ್ನು ನೋಡಿಕೋ ಎಂದು ಹೇಳಿ ಇಸ್ರಾಯೇಲ್ಯರು ತಮ್ಮ ತಮ್ಮ ಡೇರೆಗಳಿಗೆ ಹೋದರು.