Ecclesiastes · chapter 9 · verse 16
Ecclesiastes 9:16 in Kannada
ಆ ಮೇಲೆ ನಾನು--ಜ್ಞಾನವು ಬಲಕ್ಕಿಂತ ಉತ್ತಮವಾದದ್ದಾಗಿ ದ್ದಾಗ್ಯೂ ಬಡವನ ಜ್ಞಾನವು ತಿರಸ್ಕರಿಸಲ್ಪಟ್ಟದ್ದಾಗಿದ್ದು ಅವನ ಮಾತುಗಳನ್ನು ಯಾರೂ ಲಕ್ಷಿಸುವದಿಲ್ಲ ಎಂದು ಅಂದುಕೊಂಡೆನು.
Aa mele naanu--jnyaanavu balakkinta uttamavaadaddaagi ddaagyoo badavana jnyaanavu tiraskarisalpattaddaagiddu avana maatugalannu yaaroo lakshisuvadilla endu andukondenu.
Ecclesiastes 9:16 in English
- King James Version (KJV)
- Then said I, Wisdom [is] better than strength: nevertheless the poor man’s wisdom [is] despised, and his words are not heard.
- World English Bible (WEB)
- Then I said, “Wisdom is better than strength.” Nevertheless the poor man’s wisdom is despised, and his words are not heard.
- American Standard Version (ASV)
- Then said I, Wisdom is better than strength: nevertheless the poor man’s wisdom is despised, and his words are not heard.
- Bible in Basic English (BBE)
- Then I said, Wisdom is better than strength, but the poor man's wisdom is not respected, and his words are not given a hearing.
- Darby Translation (DBY)
- Then said I, Wisdom is better than strength; but the poor man's wisdom is despised, and his words are not heard.
- Webster's Bible (WBS)
- Then said I, wisdom [is] better than strength: nevertheless the poor man's wisdom [is] despised, and his words are not heard.
- Young's Literal Translation (YLT)
- And I said, 'Better [is] wisdom than might, and the wisdom of the poor is despised, and his words are not heard.' —
Read in context
- 14ಅಲ್ಲಿ ಒಂದು ಸಣ್ಣ ನಗರವಿತ್ತು; ಅದರಲ್ಲಿ ಕೆಲವು ಮನುಷ್ಯರಿದ್ದರು; ಆಗ ಅಲ್ಲಿಗೆ ಒಬ್ಬ ಮಹಾಅರಸನು ಬಂದು ಅದನ್ನು ಮುತ್ತಿಗೆಹಾಕಿ ಅದಕ್ಕೆ ಎದುರಾಗಿ ದೊಡ್ಡ ಕೊತ್ತಲುಗಳನ್ನು ಕಟ್ಟಿಸಿದನು.
- 15ಆಗ ಅದ ರಲ್ಲಿ ಒಬ್ಬ ಜ್ಞಾನಿಯಾದ ಬಡಮನುಷ್ಯನು ಕಾಣಿಸಿ ಕೊಂಡು ಅವನು ತನ್ನ ಜ್ಞಾನದಿಂದ ಆ ಪಟ್ಟಣವನ್ನು ತಪ್ಪಿಸಿದನು. ಆದರೂ ಆ ಬಡಮನುಷ್ಯನನ್ನು ಯಾವನೂ ಜ್ಞಾಪಕಮಾಡಿಕೊಳ್ಳಲಿಲ್ಲ.
- 16ಆ ಮೇಲೆ ನಾನು--ಜ್ಞಾನವು ಬಲಕ್ಕಿಂತ ಉತ್ತಮವಾದದ್ದಾಗಿ ದ್ದಾಗ್ಯೂ ಬಡವನ ಜ್ಞಾನವು ತಿರಸ್ಕರಿಸಲ್ಪಟ್ಟದ್ದಾಗಿದ್ದು ಅವನ ಮಾತುಗಳನ್ನು ಯಾರೂ ಲಕ್ಷಿಸುವದಿಲ್ಲ ಎಂದು ಅಂದುಕೊಂಡೆನು.
- 17ಜ್ಞಾನಿಗಳ ಮಾತುಗಳು ಹುಚ್ಚರನ್ನು ಆಳುವವನ ಕೂಗಿಗಿಂತಲೂ ಸಮಾಧಾನವಾಗಿ ಕೇಳಲ್ಪಡುತ್ತವೆ.ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಹೆಚ್ಚು ಒಳ್ಳೆಯದನ್ನು ನಾಶಪಡಿಸುತ್ತಾನೆ.
- 18ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಹೆಚ್ಚು ಒಳ್ಳೆಯದನ್ನು ನಾಶಪಡಿಸುತ್ತಾನೆ.
Cross references
- Ecclesiastes 7:19 ಪ್ರಸಂಗಿ 7:19ಪಟ್ಟಣದಲ್ಲಿರುವ ಹತ್ತು ಮಂದಿ ಬಲಿಷ್ಠರಿಗಿಂತ ಜ್ಞಾನವು ಜ್ಞಾನಿಗಳನ್ನು ಬಲಪಡಿಸುತ್ತದೆ.
- Proverbs 24:5 ಜ್ಞಾನೋಕ್ತಿಗಳು 24:5ಜ್ಞಾನಿಯು ಬಲವುಳ್ಳವನು; ಹೌದು, ತಿಳುವಳಿಕೆಯು ಳ್ಳವನು ಬಲವನ್ನು ಹೆಚ್ಚಿಸಿಕೊಳ್ಳುತ್ತಾನೆ.
- Proverbs 21:22 ಜ್ಞಾನೋಕ್ತಿಗಳು 21:22ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಹತ್ತಿ ಅದರಲ್ಲಿ ಭರವಸವಿಟ್ಟು ಬಲವನ್ನು ಕೆಡವಿ ಹಾಕು ತ್ತಾನೆ.
- Mark 6:2–3 ಮಾರ್ಕನು 6:2–3ಸಬ್ಬತ್ ದಿನ ಬಂದಾಗ ಆತನು ಸಭಾಮಂದಿರದಲ್ಲಿ ಬೋಧಿಸುವದಕ್ಕೆ ಪ್ರಾರಂಭಿ ಸಿದನು; ಇದನ್ನು ಅನೇಕರು ಕೇಳುತ್ತಾ ಆಶ್ಚರ್ಯ ಪಟ್ಟು--ಇವುಗಳು ಈತನಿಗೆ ಎಲ್ಲಿಂದ ಬಂದಿದ್ದಾವು? ಮತ್ತು ಈತನ ಕೈಗಳಿಂದ ಇಂಥ ಮಹತ್ಕಾರ್ಯಗಳು ಸಹ ಆಗುವಂತೆ ಈತನಿಗೆ ಕೊಡಲ್ಪಟ್ಟ ಜ್ಞಾನವು ಎಂಥದ್ದು? ಮರಿಯಳ ಮಗನೂ ಯಾಕೋಬ, ಯೋಸೆ ಯೂದ ಸೀಮೋನ ಇವರ ಸಹೋದರನೂ ಆದ ಈತನು ಬಡಗಿಯಲ್ಲವೇ? ಈತನ ಸಹೋದರಿ ಯರು ಇಲ್ಲಿಯೇ ನಮ್ಮ ಜೊತೆಯಲ್ಲಿ ಇದ್ದಾರಲ್ಲವೇ ಎಂದು ಹೇಳಿ ಆತನ ವಿಷಯದಲ್ಲಿ ಅಭ್ಯಂತರಪಟ್ಟರು.
- 1 Corinthians 1:26–29 1 ಕೊರಿಂಥದವರಿಗೆ 1:26–29ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ; ನಿಮ್ಮೊಳಗೆ ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಬಲಿಷ್ಠರೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; ಇದಲ್ಲದೆ ದೇವರು ಇರುವವುಗಳನ್ನು ಇಲ್ಲದಂತಾಗಿ ಮಾಡುವ ಹಾಗೆ ಈ ಲೋಕದ ಹೀನವಾದವರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣನೆಗೆ ಬಾರದವರನ್ನೂ ಆರಿಸಿಕೊಂಡಿದ್ದಾನೆ. ಹೀಗಿರಲು ಆತನ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.
- James 2:2–6 ಯಾಕೋಬನು 2:2–6ಹೇಗಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರವನ್ನೂ ಅಂದವಾದ ವಸ್ತ್ರವನ್ನೂ ಹಾಕಿಕೊಂಡು ನಿಮ್ಮ ಸಭೆ ಯೊಳಗೆ ಬರಲು ಮತ್ತು ಒಬ್ಬ ಬಡ ಮನುಷ್ಯನು ಸಹ ಹೀನವಾದ ಬಟ್ಟೆ ಹಾಕಿಕೊಂಡು ಬರಲು ನೀವು ಹೊಳೆಯುವ ವಸ್ತ್ರಗಳನ್ನು ಧರಿಸಿಕೊಂಡಿರುವವನನ್ನು ಗೌರವಿಸಿ ಅವನಿಗೆ--ನೀನು ಇಲ್ಲಿ ಈ ಒಳ್ಳೇ ಸ್ಥಳದಲ್ಲಿ ಕೂತುಕೋ ಎಂತಲೂ ಆ ಬಡವನಿಗೆ--ನೀನು ಅಲ್ಲಿ ನಿಂತುಕೋ ಇಲ್ಲವೆ ಇಲ್ಲಿ ನನ್ನ ಕಾಲ್ಮಣೆಯ ಹತ್ತಿರ ಕೂತುಕೋ ಎಂತಲೂ ಹೇಳಿದರೆ ನೀವು ನಿಮ್ಮಲ್ಲಿ ಪಕ್ಷಪಾತಿಗಳಾಗಿ ಕೆಟ್ಟ ಆಲೋಚನೆಗಳ ನ್ಯಾಯಾಧಿಪತಿ ಗಳಾಗಿದ್ದೀರಲ್ಲವೇ? ನನ್ನ ಪ್ರಿಯ ಸಹೋದರರೇ, ಕೇಳಿರಿ; ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ ತನ್ನನ್ನು ಪ್ರೀತಿಸುವವ ರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯ ರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ? ನೀವಾದರೋ ಬಡವರನ್ನು ಅವಮಾನಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನಗಳ ಮುಂದೆ ಎಳೆದು ಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ?
- Ecclesiastes 9:18 ಪ್ರಸಂಗಿ 9:18ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಹೆಚ್ಚು ಒಳ್ಳೆಯದನ್ನು ನಾಶಪಡಿಸುತ್ತಾನೆ.
- John 7:47–49 ಯೋಹಾನನು 7:47–49ಆಗ ಫರಿಸಾಯರೂ ಅವರಿಗೆ--ನೀವು ಸಹ ಮೋಸ ಹೋದಿರೋ? ಅಧಿಕಾರಿಗಳಲ್ಲಿಯೂ ಫರಿಸಾಯರಲ್ಲಿಯೂ ಯಾರಾದರೂ ಅವನ ಮೇಲೆ ವಿಶ್ವಾಸವಿಟ್ಟಿದ್ದಾರೋ? ಆದರೆ ನ್ಯಾಯಪ್ರಮಾಣ ವನ್ನರಿಯದ ಈ ಜನರು ಶಾಪಗ್ರಸ್ತರೇ ಎಂದು ಹೇಳಿದರು.
- Proverbs 10:15 ಜ್ಞಾನೋಕ್ತಿಗಳು 10:15ಐಶ್ವರ್ಯವಂತನ ಸಂಪತ್ತು ಅವನ ಬಲವಾದ ಪಟ್ಟಣ; ಬಡವರ ನಾಶನವು ಅವರ ಬಡತನವೇ.
- John 9:24–34 ಯೋಹಾನನು 9:24–34ತರುವಾಯ ಅವರು ಆ ಕುರುಡನಾಗಿದ್ದ ಮನುಷ್ಯನನ್ನು ಕರೆದು ಅವನಿಗೆ--ದೇವರಿಗೆ ಸ್ತೋತ್ರ ಸಲ್ಲಿಸು; ಈ ಮನುಷ್ಯನು ಪಾಪಿಯೆಂದು ನಾವು ಬಲ್ಲೆವು ಅಂದರು. ಅವನು ಪ್ರತ್ಯುತ್ತರವಾಗಿ--ಆತನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ; ಒಂದು ಮಾತ್ರ ಬಲ್ಲೆನು; ಅದೇನಂದರೆ ನಾನು ಕುರುಡನಾಗಿದ್ದೆನು; ಈಗ ನಾನು ನೋಡುತ್ತೇನೆ ಅಂದನು. ಅವರು ತಿರಿಗಿ ಅವನಿಗೆ--ಆತನು ನಿನಗೆ ಏನು ಮಾಡಿದನು? ಆತನು ನಿನ್ನ ಕಣ್ಣುಗಳನ್ನು ಹೇಗೆ ತೆರೆದನು ಎಂದು ಹೇಳಿದ್ದಕ್ಕೆ ಅವನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ಆಗಲೇ ಹೇಳಿದ್ದೇನಲ್ಲಾ; ಆದರೆ ನೀವು ಕೇಳಲಿಲ್ಲ; ನೀವು ಅದನ್ನು ತಿರಿಗಿ ಯಾಕೆ ಕೇಳಬೇಕೆಂದಿದ್ದೀರಿ? ಆತನ ಶಿಷ್ಯರಾಗುವದಕ್ಕೆ ನಿಮಗೂ ಮನಸ್ಸಿದೆಯೋ ಅಂದನು. ಆಗ ಅವರು ಅವನನ್ನು ದೂಷಿಸಿ--ನೀನು ಅವನ ಶಿಷ್ಯನು; ಆದರೆ ನಾವು ಮೋಶೆಯ ಶಿಷ್ಯರು. ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು; ಆದರೆ ಇವನು ಎಲ್ಲಿಯವನೋ ನಮಗೆ ಗೊತ್ತಿಲ್ಲ ಅಂದರು. ಆಗ ಆ ಮನುಷ್ಯನು ಪ್ರತ್ಯುತ್ತರವಾಗಿ ಅವರಿಗೆ--ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯ ವನೆಂದು ನಿಮಗೆ ತಿಳಿಯದೆ ಇರುವದು ಆಶ್ಚರ್ಯವಾದ ವಿಷಯವಲ್ಲವೇ? ದೇವರು ಪಾಪಿಗಳ ಪ್ರಾರ್ಥನೆ ಯನ್ನು ಕೇಳುವದಿಲ್ಲ; ಆದರೆ ಯಾವನಾದರೂ ದೇವ ರನ್ನು ಆರಾಧಿಸುವವನಾಗಿದ್ದು ಆತನ ಚಿತ್ತದಂತೆ ನಡೆದರೆ ಅವನ ಪ್ರಾರ್ಥನೆಯನ್ನು ಆತನು ಕೇಳು ತ್ತಾನೆಂದು ನಾವು ಬಲ್ಲೆವು. ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿ ದ್ದದ್ದನ್ನು ಲೋಕಾದಿಯಿಂದ ಕೇಳಿರಲಿಲ್ಲ. ಈ ಮನುಷ್ಯನು ದೇವರ ಕಡೆಯಿಂದ ಬಂದವನಲ್ಲ ದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು ಅಂದನು. ಅದಕ್ಕೆ ಅವರು ಅವನಿಗೆ--ನೀನು ಕೇವಲ ಪಾಪ ದಲ್ಲಿಯೇ ಹುಟ್ಟಿದವನು; ನೀನು ನಮಗೆ ಬೋಧಿಸು ತ್ತೀಯೋ ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.