Ephesians · chapter 2 · verse 17
Ephesians 2:17 in Kannada
ಇದಲ್ಲದೆ ಆತನು ಬಂದು ದೂರ ವಾಗಿದ್ದ ನಿಮಗೂ ಸವಿಾಪವಾಗಿದ್ದ ಅವರಿಗೂ ಸಮಾಧಾನವನ್ನು ಸಾರಿದನು.
Idallade aatanu bandu doora vaagidda nimagoo saviాpavaagidda avarigoo samaadhaanavannu saaridanu.
Ephesians 2:17 in English
- King James Version (KJV)
- And came and preached peace to you which were afar off, and to them that were nigh.
- World English Bible (WEB)
- He came and preached peace to you who were far off and to those who were near.
- American Standard Version (ASV)
- and he came and preached peace to you that were far off, and peace to them that were nigh:
- Bible in Basic English (BBE)
- And he came preaching peace to you who were far off, and to those who were near;
- Darby Translation (DBY)
- and, coming, he has preached the glad tidings of peace to you who [were] afar off, and [the glad tidings of] peace to those [who were] nigh.
- Webster's Bible (WBS)
- And came and preached peace to you who were afar off, and to them that were nigh.
- Young's Literal Translation (YLT)
- and having come, he did proclaim good news — peace to you — the far-off and the nigh,
Read in context
- 15ಆತನು ಇದ್ದ ದ್ವೇಷವನ್ನು ಅಂದರೆ ಶಾಸನಗಳ ಆಜ್ಞೆಗಳುಳ್ಳ ನ್ಯಾಯಪ್ರಮಾಣವನ್ನು ತನ್ನ ಶರೀರದ ಮೂಲಕ ರದ್ದುಗೊಳಿಸಿ ಸಮಾಧಾನ ಮಾಡುವವನಾಗಿ ಉಭಯರನ್ನು ತನ್ನಲ್ಲಿ ಒಬ್ಬ ನೂತನ ಪುರಷನನ್ನಾಗಿ ಮಾಡಿದನು.
- 16ಇದ್ದ ದ್ವೇಷವನ್ನು ತನ್ನ ಶಿಲುಬೆಯ ಮೇಲೆ ಕೊಂದು ಅದರಿಂದ ಉಭಯರನ್ನು ಒಂದೇ ದೇಹದಂತಾಗ ಮಾಡಿ ದೇವರೊಂದಿಗೆ ಸಮಾಧಾನ ಪಡಿಸಿದ್ದಾನೆ.
- 17ಇದಲ್ಲದೆ ಆತನು ಬಂದು ದೂರ ವಾಗಿದ್ದ ನಿಮಗೂ ಸವಿಾಪವಾಗಿದ್ದ ಅವರಿಗೂ ಸಮಾಧಾನವನ್ನು ಸಾರಿದನು.
- 18ಆತನ ಮೂಲಕ ನಾವೂ ನೀವೂ ಒಬ್ಬ ಆತ್ಮನನ್ನೇ ಹೊಂದಿದವರಾಗಿ ತಂದೆಯ ಬಳಿಗೆ ಪ್ರವೇಶಿಸುವದಕ್ಕೆ ಮಾರ್ಗವಾಯಿತು.
- 19ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ಪರಿಶುದ್ಧರೊಂದಿಗೆ ಒಂದೇ ಪಟ್ಟಣದವರೂ ದೇವರ ಮನೆಯವರೂ ಆಗಿದ್ದೀರಿ.
Cross references
- Isaiah 57:19–21 ಯೆಶಾಯ 57:19–21ನಾನು ತುಟಿಗಳಿಗೆ ಫಲವನ್ನುಂಟು ಮಾಡುವ ವನಾಗಿ ಅವನಿಗೆ ದೂರವಾದವನಿಗೂ ಅವನಿಗೆ ಸವಿಾಪವಾದವನಿಗೂ ಸಮಾಧಾನವಿರಲಿ. ನಾನು ಅವನನ್ನು ಸ್ವಸ್ಥಮಾಡುವೆ ನೆಂದು ಕರ್ತನು ಹೇಳು ತ್ತಾನೆ. ಆದರೆ ದುಷ್ಟರು ಸುಮ್ಮನಿರಲಾರದಂಥ, ಅದರ ನೀರುಗಳು ಕೆಸರನ್ನೂ ಮೈಲಿಗೆಯನ್ನೂ ಕಾರು ವಂಥ, ಅಲ್ಲಕಲ್ಲೋಲವಾಗಿರುವ ಸಮುದ್ರದ ಹಾಗಿ ದ್ದಾರೆ.ದುಷ್ಟರಿಗೆ ಸಮಾಧಾನವೇ ಇಲ್ಲವೆಂದು ನನ್ನ ದೇವರು ಹೇಳುತ್ತಾನೆ. ದುಷ್ಟರಿಗೆ ಸಮಾಧಾನವೇ ಇಲ್ಲವೆಂದು ನನ್ನ ದೇವರು ಹೇಳುತ್ತಾನೆ.
- Acts 10:36 ಅಪೊಸ್ತಲರ ಕೃತ್ಯಗಳು 10:36ಯೇಸು ಕ್ರಿಸ್ತನ ಮೂಲಕ ದೇವರು ಸಮಾಧಾನವನ್ನು ಪ್ರಕಟಿಸುತ್ತಾ ಇಸ್ರಾಯೇಲ್ ಜನರಿಗೆ ವಾಕ್ಯವನ್ನು ಅನುಗ್ರಹಿಸಿದ್ದಾನೆ; (ಆತನು ಎಲ್ಲರಿಗೂ ಕರ್ತನಾಗಿದ್ದಾನೆ.)
- Romans 5:1 ರೋಮಾಪುರದವರಿಗೆ 5:1ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನ ಉಂಟಾಗಿದೆ.
- Acts 2:39 ಅಪೊಸ್ತಲರ ಕೃತ್ಯಗಳು 2:39ಯಾಕಂದರೆ ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾದ ಕರ್ತನು ಕರೆಯುವವರೆಲ್ಲರಿಗೂ ಮಾಡಿಯದೆ ಎಂದು ಹೇಳಿದನು.
- Psalm 148:14 ಕೀರ್ತನೆಗಳು 148:14ಆತನು ತನ್ನ ಜನರ ಕೊಂಬನ್ನು ಮೇಲಕ್ಕೆತ್ತಿದ್ದಾನೆ; ಆತನ ಪರಿ ಶುದ್ಧರೆಲ್ಲರೂ ಇಸ್ರಾಯೇಲಿನ ಮಕ್ಕಳು, ಅಂದರೆ ಆತನಿಗೆ ಸವಿಾಪವಾದ ಜನರ ಸ್ತೋತ್ರವನ್ನು ಗೌರವಿ ಸುತ್ತಾನೆ; ಕರ್ತನನ್ನು ಸ್ತುತಿಸಿರಿ.
- Deuteronomy 4:7 ಧರ್ಮೋಪದೇಶಕಾಂಡ 4:7ನಾವು ಆತನಿಗೆ ಮೊರೆ ಯಿಡುವ ಎಲ್ಲಾ ವಿಷಯಗಳಲ್ಲಿ ನಮ್ಮ ದೇವರಾದ ಕರ್ತನು ನಮಗೆ ಸವಿಾಪವಿರುವ ಪ್ರಕಾರ ಬೇರೆ ಸವಿಾಪವಾದ ದೇವರುಳ್ಳ ದೊಡ್ಡ ಜನಾಂಗ ಯಾವದು?
- Ephesians 2:13–14 ಎಫೆಸದವರಿಗೆ 2:13–14ಈಗಲಾ ದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ ಆತನ ರಕ್ತದ ಮೂಲಕ ಸವಿಾಪಸ್ಥ ರಾದಿರಿ. ನಿಮ್ಮನ್ನೂ ನಮ್ಮನ್ನೂ ಒಂದು ಮಾಡಿದ ಆತನೇ ನಮ್ಮ ಸಮಾಧಾನವಾಗಿ ನಮ್ಮಿಬ್ಬರನ್ನು ಅಗಲಿ ಸಿದ ಅಡ್ಡಗೋಡೆಯನ್ನು ಆತನು ಕೆಡವಿಹಾಕಿದನು.
- Isaiah 52:7 ಯೆಶಾಯ 52:7ಒಳ್ಳೆಯ ಶುಭಸಮಾಚಾರವನ್ನು ತರುವವನ, ರಕ್ಷಣೆಯನ್ನು ಪ್ರಕಟಿಸುವವನ, ಚೀಯೋನಿಗೆ ನಿನ್ನ ದೇವರು ದೊರೆತನ ಮಾಡುತ್ತಾನೆ ಎಂದು ಹೇಳಿ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪ್ರಕಟಿಸಿ ಹೇಳುವಾತನ ಪಾದಗಳು ಪರ್ವತಗಳ ಮೇಲೆ ಎಷ್ಟೋ ಅಂದವಾಗಿವೆ!
- Zechariah 9:10 ಜೆಕರ್ಯ 9:10ಇದಲ್ಲದೆ ಎಫ್ರಾಯಾಮಿನೊಳಗಿಂದ ರಥ ಗಳನ್ನೂ ಯೆರೂಸಲೇಮಿನೊಳಗಿಂದ ಕುದುರೆಗಳನ್ನೂ ತೆಗೆದುಬಿಡುವೆನು; ಯುದ್ಧದ ಬಿಲ್ಲು ಸಹ ತೆಗೆದು ಹಾಕಲ್ಪಡುವದು; ಆತನು ಅನ್ಯ ಜನಾಂಗಗಳಿಗೆ ಸಮಾ ಧಾನವನ್ನು ಹೇಳುವನು; ಆತನ ದೊರೆತನವು ಸಮುದ್ರ ದಿಂದ ಸಮುದ್ರಕ್ಕೂ ನದಿಯಿಂದ ಭೂಮಿಯ ಅಂತ್ಯಗಳ ವರೆಗೂ ಇರುವದು.
- Psalm 147:19–20 ಕೀರ್ತನೆಗಳು 147:19–20ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ. ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.
- 2 Corinthians 5:20 2 ಕೊರಿಂಥದವರಿಗೆ 5:20ದೇವರೇ ನಮ್ಮ ಮೂಲಕ ನಿಮ್ಮನ್ನು ಬೇಡಿ ಕೊಳ್ಳುತ್ತಾನೋ ಎಂಬಂತೆ ನಾವು ಈಗ ಕ್ರಿಸ್ತನ ರಾಯಭಾರಿಗಳಾಗಿದ್ದೇವೆ. ದೇವರೊಂದಿಗೆ ಸಮಾ ಧಾನವಾಗಿರೆಂದು ಕ್ರಿಸ್ತನಿಗೆ ಬದಲಾಗಿ ನಾವು ನಿಮ್ಮನ್ನು ಬೇಡಿಕೊಳ್ಳುತ್ತೇವೆ.ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.
- Psalm 85:10 ಕೀರ್ತನೆಗಳು 85:10ಕೃಪೆಯೂ ಸತ್ಯವೂ ಸಂಧಿಸಿ ಕೊಳ್ಳುತ್ತವೆ; ನೀತಿಯೂ ಸಮಾಧಾನವೂ ಮುದ್ದಿಟ್ಟು ಕೊಳ್ಳುತ್ತವೆ.