Psalms · chapter 147 · verse 19
Psalm 147:19 in Kannada
ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.
Aatanu yaakobarige tanna vaakyavannoo israayelige niyamagalannoo nyaayavidhigalannoo tilisuttaane.yaava janaangakkaadaroo aatanu heege maada lilla; nyaayavidhigalannu avaru tilukolluvadilla. Neevu kartanannu stutisiri.
Psalm 147:19 in English
- King James Version (KJV)
- He sheweth his word unto Jacob, his statutes and his judgments unto Israel.
- World English Bible (WEB)
- He shows his word to Jacob, his statutes and his ordinances to Israel.
- American Standard Version (ASV)
- He showeth his word unto Jacob, His statutes and his ordinances unto Israel.
- Bible in Basic English (BBE)
- He makes his word clear to Jacob, teaching Israel his laws and his decisions.
- Darby Translation (DBY)
- He sheweth his word unto Jacob, his statutes and his judgments unto Israel.
- Webster's Bible (WBS)
- He showeth his word to Jacob, his statutes and his judgments to Israel.
- Young's Literal Translation (YLT)
- Declaring His words to Jacob, His statutes and His judgments to Israel.
Read in context
- 17ತನ್ನ ನೀರುಗಡ್ಡೆ ಯನ್ನು ತುಂಡುಗಳ ಹಾಗೆ ಹಾಕುತ್ತಾನೆ; ಆತನ ಚಳಿಯ ಮುಂದೆ ಯಾರು ನಿಲ್ಲುವರು?
- 18ಆತನು ತನ್ನ ವಾಕ್ಯವನ್ನು ಕಳುಹಿಸಿ ಅವುಗಳನ್ನು ಕರಗಿಸುತ್ತಾನೆ; ತನ್ನ ಗಾಳಿಯನ್ನು ಬೀಸಮಾಡುತ್ತಾನೆ; ನೀರು ಹರಿಯುತ್ತದೆ.
- 19ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.
- 20ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.
Cross references
- Malachi 4:4 ಮಲಾಕಿಯ 4:4ನನ್ನ ಸೇವಕನಾದ ಮೋಶೆಯ ನ್ಯಾಯಪ್ರಮಾಣ ವನ್ನೂ ನಾನು ಅವನಿಗೆ ಹೋರೇಬಿನಲ್ಲಿ ಸಮಸ್ತ ಇಸ್ರಾಯೇಲಿಗೋಸ್ಕರ ಆಜ್ಞಾಪಿಸಿದ್ದನ್ನೂ ನಿಯಮ ಗಳನ್ನೂ ನ್ಯಾಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
- Psalm 78:5 ಕೀರ್ತನೆಗಳು 78:5ಆತನು ಯಾಕೋಬನಲ್ಲಿ ಸಾಕ್ಷಿ ಯನ್ನು ಸ್ಥಾಪಿಸಿ ಇಸ್ರಾಯೇಲಿನಲ್ಲಿ ನ್ಯಾಯಪ್ರಮಾಣವನ್ನು ಇಟ್ಟು
- Deuteronomy 33:2–4 ಧರ್ಮೋಪದೇಶಕಾಂಡ 33:2–4ಕರ್ತನು ಸೀನಾಯಿ ಬೆಟ್ಟದಿಂದ ಬಂದನು, ಸೇಯಾರಿನಿಂದ ಅವರಿಗೆ ಉದಯಿಸಿದನು. ಪಾರಾನ್ ಬೆಟ್ಟದಿಂದ ಪ್ರಕಾಶಿಸಿದನು, ಹತ್ತು ಸಾವಿರ ಪರಿಶುದ್ಧರ ಸಂಗಡ ಬಂದನು. ಆತನ ಬಲಪಾರ್ಶ್ವದಿಂದ ಅವರಿಗೆ ಬೆಂಕಿಯ ನ್ಯಾಯಪ್ರಮಾಣವು ಹೊರಟಿತು. ಹೌದು, ಆತನು ಜನಗಳನ್ನು ಪ್ರೀತಿಮಾಡಿದನು. ಆತನ ಪರಿಶುದ್ಧರೆಲ್ಲರು ನಿನ್ನ ಕೈಯಲ್ಲಿ ಇದ್ದಾರೆ. ಅವರು ನಿನ್ನ ಪಾದದ ಬಳಿಯಲ್ಲಿ ಕೂತುಕೊಂಡು ನಿನ್ನ ವಾಕ್ಯಗಳನ್ನು ಹೊಂದುತ್ತಾರೆ. ಮೋಶೆ ನಮಗೆ ನ್ಯಾಯಪ್ರಮಾಣವನ್ನು ಆಜ್ಞಾಪಿ ಸಿದ್ದಾನೆ. ಅದೇ ಯಾಕೋಬನ ಸಭೆಯ ಬಾಧ್ಯತೆಯು.
- Deuteronomy 5:22 ಧರ್ಮೋಪದೇಶಕಾಂಡ 5:22ಈ ಮಾತುಗಳನ್ನು ಕರ್ತನು ಬೆಂಕಿಯ ಮೇಘದ ಕಾರ್ಗತ್ತಲೆಯ ಮಧ್ಯದಿಂದಲೂ ಮಹಾಶಬ್ದ ದಿಂದಲೂ ಬೆಟ್ಟದಲ್ಲಿ ನಿಮ್ಮ ಸಭೆಗೆಲ್ಲಾ ಹೇಳಿದನು; ಹೆಚ್ಚೇನೂ ಕೂಡಿಸಲಿಲ್ಲ. ಇವುಗಳನ್ನು ಆತನು ಕಲ್ಲಿನ ಎರಡು ಹಲಗೆಗಳಲ್ಲಿ ಬರೆದು ನನಗೆ ಕೊಟ್ಟನು.
- Deuteronomy 5:31 ಧರ್ಮೋಪದೇಶಕಾಂಡ 5:31ನೀನಾದರೋ ಇಲ್ಲಿ ನನ್ನ ಸಂಗಡ ನಿಂತು ಕೋ; ಆಗ ನೀನು ಅವರಿಗೆ ಬೋಧಿಸತಕ್ಕಂಥ ಮತ್ತು ನಾನು ಅವರಿಗೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಅವರು ಮಾಡತಕ್ಕಂಥ ಎಲ್ಲಾ ಆಜ್ಞೆ ನಿಯಮ ನ್ಯಾಯ ಗಳನ್ನು ನಿನಗೆ ಹೇಳುವೆನು ಅಂದನು.
- Deuteronomy 4:45 ಧರ್ಮೋಪದೇಶಕಾಂಡ 4:45ಇಸ್ರಾಯೇಲ್ ಮಕ್ಕಳು ಐಗುಪ್ತದೊಳಗಿಂದ ಹೊರಟ ಮೇಲೆ
- Romans 3:2 ರೋಮಾಪುರದವರಿಗೆ 3:2ಎಲ್ಲಾ ವಿಷಯಗಳಲ್ಲಿಯೂ ಬಹಳ ಉಂಟು; ಮುಖ್ಯವಾಗಿ ದೈವೋಕ್ತಿಗಳು ಅವರಿಗೆ ಒಪ್ಪಿಸಲ್ಪಟ್ಟವು.
- Romans 9:4 ರೋಮಾಪುರದವರಿಗೆ 9:4ಇವರು ಇಸ್ರಾಯೇಲ್ಯರು; ದತ್ತುಪುತ್ರ ಸ್ವಿಕಾರವೂ ಮಹಿಮೆಯೂ ಒಡಂಬಡಿ ಕೆಗಳೂ ನ್ಯಾಯಪ್ರಮಾಣ ಕೊಡೋಣವೂ ದೇವರ ಸೇವೆಯೂ ವಾಗ್ದಾನಗಳೂ ಇವರಿಗೆ ಸಂಬಂಧ ಪಟ್ಟವುಗಳು.
- Psalm 76:1 ಕೀರ್ತನೆಗಳು 76:1ದೇವರು ಯೆಹೂದದಲ್ಲಿ ಪ್ರಸಿದ್ಧವಾಗಿದ್ದಾನೆ; ಇಸ್ರಾಯೇಲಿನಲ್ಲಿ ಆತನ ಹೆಸರು ದೊಡ್ಡದಾಗಿದೆ.
- Deuteronomy 4:1 ಧರ್ಮೋಪದೇಶಕಾಂಡ 4:1ಹೀಗಿರುವದರಿಂದ ಈಗ ಇಸ್ರಾಯೇಲೇ, ನೀವು ಬದುಕಿ ನಿಮ್ಮ ಪಿತೃಗಳ ದೇವರಾದ ಕರ್ತನು ನಿಮಗೆ ಕೊಡುವ ದೇಶವನ್ನು ಪ್ರವೇಶಿಸಿ ಸ್ವತಂತ್ರಿಸಿಕೊಳ್ಳುವ ಹಾಗೆ ನಾನು ನಿಮಗೆ ಬೋಧಿಸುವ ನಿಯಮಗಳನ್ನೂ ನ್ಯಾಯಗಳನ್ನೂ ಕೇಳಿ ಅವುಗಳನ್ನು ಮಾಡಿರಿ.
- Exodus 20:1–21 ವಿಮೋಚನಕಾಂಡ 20:1–21ದೇವರು ಈ ಎಲ್ಲಾ ವಾಕ್ಯಗಳನ್ನು ಹೇಳಿದನು. ಅವು ಯಾವವಂದರೆ-- ನಿನ್ನನ್ನು ಐಗುಪ್ತದೇಶದಿಂದಲೂ ದಾಸತ್ವದ ಮನೆಯೊಳ ಗಿಂದಲೂ ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ. ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು. ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು. ನೀನು ಅವುಗಳಿಗೆ ಅಡ್ಡಬೀಳಬಾರದು, ಸೇವಿಸಲೂ ಬಾರದು. ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆಗಳ ಅಪರಾಧವನ್ನು ಮಕ್ಕಳ ಮೇಲೆ ಯೂ ಮೂರನೆಯ ನಾಲ್ಕನೆಯ ತಲೆಗಳ ವರೆಗೂ ಬರಮಾಡುವೆನು. ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆ ಗಳನ್ನು ಕೈಕೊಳ್ಳುವವರಿಗೆ ಸಾವಿರ ತಲೆಗಳ ವರೆಗೆ ದಯೆತೋರಿಸುವೆನು. ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬಾರದು. ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದು ಎಣಿಸುವದಿಲ್ಲ. ಸಬ್ಬತ್ ದಿನವನ್ನು ಪರಿಶುದ್ಧವಾಗಿ ಇರುವಂತೆ ಜ್ಞಾಪಕದಲ್ಲಿಟ್ಟುಕೋ. ನೀನು ಆರು ದಿನಗಳು ದುಡಿದು ನಿನ್ನ ಕೆಲಸಗಳನ್ನೆಲ್ಲಾ ಮಾಡಿಕೋ. ಆದರೆ ಏಳನೆಯ ದಿನವು ನಿನ್ನ ದೇವರಾದ ಕರ್ತನ ಸಬ್ಬತ್ ಆಗಿದೆ. ಅದರಲ್ಲಿ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲ ಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು. ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು. ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು. ಕೊಲೆ ಮಾಡಬಾರದು. ವ್ಯಭಿಚಾರ ಮಾಡಬಾರದು. ಕದಿಯಬಾರದು. ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳು ಸಾಕ್ಷಿ ಹೇಳಬಾರದು. ನೀನು ನಿನ್ನ ನೆರೆಯವನ ಮನೆಯನ್ನು ಆಶಿಸ ಬಾರದು, ನಿನ್ನ ನೆರೆಯವನ ಹೆಂಡತಿಯನ್ನೂ ಆಶಿಸ ಬಾರದು; ಅವನ ದಾಸನನ್ನಾಗಲಿ ದಾಸಿಯನ್ನಾಗಲಿ ಎತ್ತನ್ನಾಗಲಿ ಕತ್ತೆಯನ್ನಾಗಲಿ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬಾರದು ಎಂದು ಹೇಳಿದನು. ಜನರೆಲ್ಲಾ ಗುಡುಗುಗಳನ್ನೂ ಮಿಂಚುಗಳನ್ನೂ ತುತೂರಿಯ ಶಬ್ದವನ್ನೂ ಬೆಟ್ಟವು ಹೊಗೆ ಹಾಯು ವದನ್ನೂ ನೋಡಿದರು; ಜನರು ಅದನ್ನು ನೋಡಿ ದೂರ ಹೋಗಿ ನಿಂತುಕೊಂಡರು. ಅವರು ಮೋಶೆಗೆ--ನೀನೇ ನಮ್ಮ ಸಂಗಡ ಮಾತನಾಡು, ಆಗ ನಾವು ಕೇಳುವೆವು. ನಾವು ಸಾಯದ ಹಾಗೆ ದೇವರು ನಮ್ಮ ಸಂಗಡ ಮಾತನಾಡದಿರಲಿ ಅಂದರು. ಆಗ ಮೋಶೆಯು ಜನರಿಗೆ--ನೀವು ಭಯಪಡ ಬೇಡಿರಿ, ನಿಮ್ಮನ್ನು ಪರೀಕ್ಷಿಸುವದಕ್ಕೂ ನೀವು ಪಾಪ ಮಾಡದಂತೆ ಆತನ ಭಯವು ನಿಮಗಿರುವದಕ್ಕೂ ದೇವರು ಬಂದಿದ್ದಾನೆ ಅಂದನು. ಆಗ ಜನರು ದೂರದಲ್ಲಿ ನಿಂತರು. ಮೋಶೆಯು ದೇವರಿದ್ದ ಕಾರ್ಗತ್ತಲೆಯ ಹತ್ತಿರ ಬಂದನು.
- Psalm 103:7 ಕೀರ್ತನೆಗಳು 103:7ಆತನು ತನ್ನ ಮಾರ್ಗಗಳನ್ನು ಮೋಶೆಗೂ ತನ್ನ ಕ್ರಿಯೆಗಳನ್ನು ಇಸ್ರಾಯೇಲಿನ ಮಕ್ಕಳಿಗೂ ತಿಳಿಯಮಾಡಿದನು.