Ephesians · chapter 4 · verse 3
Ephesians 4:3 in Kannada
ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿ ಕೊಳ್ಳುವದಕ್ಕೆ ಆಸಕ್ತರಾಗಿರ್ರಿ.
Samaadhaanavemba bandhanadinda kattalpattavaraagiddu pavitraatmaninduntaaguva aikyavannu kaapaadi kolluvadakke aasaktaraagirri.
Ephesians 4:3 in English
- King James Version (KJV)
- Endeavouring to keep the unity of the Spirit in the bond of peace.
- World English Bible (WEB)
- being eager to keep the unity of the Spirit in the bond of peace.
- American Standard Version (ASV)
- giving diligence to keep the unity of the Spirit in the bond of peace.
- Bible in Basic English (BBE)
- Taking care to keep the harmony of the Spirit in the yoke of peace.
- Darby Translation (DBY)
- using diligence to keep the unity of the Spirit in the uniting bond of peace.
- Webster's Bible (WBS)
- Endeavoring to keep the unity of the Spirit in the bond of peace.
- Young's Literal Translation (YLT)
- being diligent to keep the unity of the Spirit in the bond of the peace;
Read in context
- 1ಆದದರಿಂದ ನೀವು ಕರೆಯಲ್ಪಟ್ಟ ಕರೆಯುವಿಕೆಗೆ ಯೋಗ್ಯರಾಗಿ ನಡೆದುಕೊಳ್ಳ ಬೇಕೆಂದು ಕರ್ತನ ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
- 2ನೀವು ಪೂರ್ಣ ವಿನಯ ಸಾತ್ವಿಕತ್ವ ಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವ ರಾಗಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ.
- 3ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿ ಕೊಳ್ಳುವದಕ್ಕೆ ಆಸಕ್ತರಾಗಿರ್ರಿ.
- 4ನಿಮ್ಮ ಕರೆಯುವಿಕೆಯ ಒಂದೇ ನಿರೀಕ್ಷೆಯಲ್ಲಿ ನೀವು ಕರೆಯಲ್ಪಟ್ಟಂತೆಯೇ ದೇಹವು ಒಂದೇ, ಆತ್ಮನು ಒಬ್ಬನೇ,
- 5ಒಬ್ಬನೇ ಕರ್ತನು, ಒಂದೇ ನಂಬಿಕೆ, ಒಂದೇ ಬಾಪ್ತಿಸ್ಮ.
Cross references
- 1 Corinthians 1:10 1 ಕೊರಿಂಥದವರಿಗೆ 1:10ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವ ರಾಗಿದ್ದು ಹೊಂದಿಕೆಯಿಂದಿರಬೇಕು ಎಂಬದಾಗಿ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.
- Colossians 3:13–15 ಕೊಲೊಸ್ಸೆಯವರಿಗೆ 3:13–15ಯಾವನಿ ಗಾದರೂ ಒಬ್ಬನಿಗೆ ಇನ್ನೊಬ್ಬನ ಮೇಲೆ ವಿರೋಧವಾಗಿ ವ್ಯಾಜ್ಯವಿದ್ದರೂ ಒಬ್ಬರಿಗೊಬ್ಬರು ತಾಳಿಕೊಂಡು ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಂಪೂರ್ಣ ಮಾಡುವ ಬಂಧವಾಗಿದೆ. ದೇವರ ಸಮಾಧಾನವು ನಿಮ್ಮ ಹೃದಯಗಳಲ್ಲಿ ಆಳಲಿ; ಅದಕ್ಕಾಗಿಯೇ ನೀವು ಸಹ ಒಂದೇ ದೇಹವಾಗಿರುವಂತೆ ಕರೆಯಲ್ಪಟ್ಟಿದ್ದೀರಿ; ಇದಲ್ಲದೆ ನೀವು ಕೃತಜ್ಞತೆಯುಳ್ಳವರಾಗಿರ್ರಿ.
- 1 Corinthians 12:12–13 1 ಕೊರಿಂಥದವರಿಗೆ 12:12–13ಹೇಗೆ ದೇಹವು ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ಆ ದೇಹದ ಅಂಗಗಳೆಲ್ಲವು ಅನೇಕವಾಗಿದ್ದು ಒಂದೇ ದೇಹವಾಗಿ ರುವದೋ, ಹಾಗೆಯೇ ಕ್ರಿಸ್ತನು ಇದ್ದಾನೆ. ಯೆಹೂದ್ಯರಾಗಲಿ ಅನ್ಯರಾಗಲಿ ದಾಸರಾಗಲಿ ಸ್ವತಂತ್ರರಾಗಲಿ ನಾವೆಲ್ಲರು ಒಂದೇ ದೇಹವಾಗು ವದಕ್ಕಾಗಿ ಒಬ್ಬನೇ ಆತ್ಮನಿಂದ ಬಾಪ್ತಿಸ್ಮ ಮಾಡಿಸಿ ಕೊಂಡೆವು; ಆ ಒಬ್ಬನೇ ಆತ್ಮನು ನಮ್ಮೆಲ್ಲರಿಗೂ ಪಾನವಾಗಿ ಕೊಡಲ್ಪಟ್ಟಿದ್ದಾನೆ.
- John 13:34 ಯೋಹಾನನು 13:34ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಒಂದು ಹೊಸ ಆಜ್ಞೆಯನ್ನು ನಾನು ನಿಮಗೆ ಕೊಡುತ್ತೇನೆ--ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು.
- Romans 14:17–19 ರೋಮಾಪುರದವರಿಗೆ 14:17–19ಯಾಕಂದರೆ ತಿನ್ನುವದೂ ಕುಡಿಯುವದೂ ದೇವರ ರಾಜ್ಯವಲ್ಲ; ಆದರೆ ನೀತಿಯೂ ಸಮಾಧಾನವೂ ಪವಿತ್ರಾತ್ಮನಲ್ಲಿರುವ ಆನಂದವೂ ಆಗಿದೆ. ಕ್ರಿಸ್ತನ ಸೇವೆಯನ್ನು ಮಾಡುವವನು ಈ ವಿಷಯಗಳಲ್ಲಿ ದೇವರಿಗೆ ಮೆಚ್ಚಿಕೆಯಾದವನಾಗಿಯೂ ಮನುಷ್ಯರಿಗೆ ಸಂಭಾವಿತನಾಗಿಯೂ ಇರುವನಷ್ಟೆ. ಆದದರಿಂದ ನಾವು ಸಮಾಧಾನವನ್ನುಂಟು ಮಾಡುವವುಗಳನೂ ಪರಸ್ಪರ ಭಕ್ತಿವೃದ್ಧಿಯನ್ನುಂಟು ಮಾಡುವವುಗಳನ್ನೂ ಅನುಸರಿಸೋಣ.
- Hebrews 12:14 ಇಬ್ರಿಯರಿಗೆ 12:14ಎಲ್ಲರ ಸಂಗಡ ಸಮಾಧಾನದಿಂದಿರುವದನ್ನೂ ಪರಿಶುದ್ಧತೆಯನ್ನೂ ಅನುಸರಿಸಿರಿ; ಪರಿಶುದ್ಧತೆಯಿಲ್ಲದೆ ಯಾವನೂ ಕರ್ತನನ್ನು ಕಾಣುವದಿಲ್ಲ.
- 2 Corinthians 13:11 2 ಕೊರಿಂಥದವರಿಗೆ 13:11ಕಡೇ ಮಾತೇನಂದರೆ ಸಹೋದರರೇ, ನಿಮಗೆ ಶುಭವಾಗಲಿ. ಸಂಪೂರ್ಣರಾಗಿರ್ರಿ; ಆದರಣೆ ಹೊಂದಿದವರಾಗಿರ್ರಿ, ಒಂದೇ ಮನಸ್ಸುಳ್ಳವರಾಗಿರ್ರಿ, ಸಮಾಧಾನದಲ್ಲಿ ಜೀವಿಸಿರಿ; ಆಗ ಪ್ರೀತಿಯುಳ್ಳ ಶಾಂತಿಯ ದೇವರು ನಿಮ್ಮ ಸಂಗಡ ಇರುವನು.
- John 17:21–23 ಯೋಹಾನನು 17:21–23ಇದಲ್ಲದೆ ಅವರೆಲ್ಲರೂ ನಮ್ಮಲ್ಲಿ ಒಂದಾಗಿರಬೇಕೆಂತಲೂ ನೀನು ನನ್ನನ್ನು ಕಳುಹಿಸಿದ್ದೀ ಎಂದು ಲೋಕವು ನಂಬುವಂತೆಯೂ ತಂದೆಯಾದ ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಹಾಗೆ ಇವರು ಸಹ ನಮ್ಮಲ್ಲಿ ಒಂದಾಗಿರ ಬೇಕೆಂತಲೂ ಕೇಳಿಕೊಳ್ಳುತ್ತೇನೆ. ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರುವಂತೆ ನೀನು ನನಗೆ ಕೊಟ್ಟ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ. ನಾನು ಇವರಲ್ಲಿಯೂ ನೀನು ನನ್ನಲ್ಲಿಯೂ (ಇರುವಂತೆ) ಅವರೂ ಒಂದಾಗಿ ಪರಿಪೂರ್ಣರಾಗಿ ರುವರು; ನೀನು ನನ್ನನ್ನು ಕಳುಹಿಸಿದ್ದೀ ಎಂತಲೂ ನನ್ನನ್ನು ಪ್ರೀತಿ ಮಾಡಿದಂತೆ ಅವರನ್ನು ನೀನು ಪ್ರೀತಿಮಾಡಿದ್ದೀ ಎಂತಲೂ ಲೋಕವು ತಿಳಿದುಕೊಳ್ಳುವದು.
- James 3:17–18 ಯಾಕೋಬನು 3:17–18ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸುಲಭವಾಗಿ ಒಪ್ಪಿಕೊಳ್ಳುವಂಥದು, ಕರುಣೆಯಿಂದಲೂ ಒಳ್ಳೇ ಫಲಗಳಿಂದಲೂ ತುಂಬಿರುವಂಥದ್ದು ಆಗಿದೆ; ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ. ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.
- 1 Thessalonians 5:13 1 ಥೆಸಲೊನೀಕದವರಿಗೆ 5:13ಇದಲ್ಲದೆ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿ ಯಿಂದ ಬಹಳವಾಗಿ ಸನ್ಮಾನ ಮಾಡಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ; ನಿಮ್ಮ ನಿಮ್ಮೊಳಗೆ ಸಮಾಧಾನವಾಗಿರ್ರಿ.
- Ephesians 4:4 ಎಫೆಸದವರಿಗೆ 4:4ನಿಮ್ಮ ಕರೆಯುವಿಕೆಯ ಒಂದೇ ನಿರೀಕ್ಷೆಯಲ್ಲಿ ನೀವು ಕರೆಯಲ್ಪಟ್ಟಂತೆಯೇ ದೇಹವು ಒಂದೇ, ಆತ್ಮನು ಒಬ್ಬನೇ,