Ephesians · chapter 4 · verse 6
Ephesians 4:6 in Kannada
ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲೆಯೂ ಎಲ್ಲರ ಮುಖಾಂತರವೂ ಎಲ್ಲರಲ್ಲಿಯೂ ಇರುವಾತನಾಗಿದ್ದಾನೆ.
Ellarigoo tandeyaagiruva devaru obbane; aatanu ellara meleyoo ellara mukhaantaravoo ellaralliyoo iruvaatanaagiddaane.
Ephesians 4:6 in English
- King James Version (KJV)
- One God and Father of all, who [is] above all, and through all, and in you all.
- World English Bible (WEB)
- one God and Father of all, who is over all and through all and in us all.
- American Standard Version (ASV)
- one God and Father of all, who is over all, and through all, and in all.
- Bible in Basic English (BBE)
- One God and Father of all, who is over all, and through all, and in all.
- Darby Translation (DBY)
- one God and Father of all, who is over all, and through all, and in us all.
- Webster's Bible (WBS)
- One God and Father of all, who [is] above all, and through all, and in you all.
- Young's Literal Translation (YLT)
- one God and Father of all, who [is] over all, and through all, and in you all,
Read in context
- 4ನಿಮ್ಮ ಕರೆಯುವಿಕೆಯ ಒಂದೇ ನಿರೀಕ್ಷೆಯಲ್ಲಿ ನೀವು ಕರೆಯಲ್ಪಟ್ಟಂತೆಯೇ ದೇಹವು ಒಂದೇ, ಆತ್ಮನು ಒಬ್ಬನೇ,
- 5ಒಬ್ಬನೇ ಕರ್ತನು, ಒಂದೇ ನಂಬಿಕೆ, ಒಂದೇ ಬಾಪ್ತಿಸ್ಮ.
- 6ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲೆಯೂ ಎಲ್ಲರ ಮುಖಾಂತರವೂ ಎಲ್ಲರಲ್ಲಿಯೂ ಇರುವಾತನಾಗಿದ್ದಾನೆ.
- 7ಆದರೆ ಕ್ರಿಸ್ತನು ಅನುಗ್ರಹಿಸಿದ ದಾನದ ಅಳತೆ ಗನುಸಾರವಾಗಿ ನಮ್ಮಲ್ಲಿ ಪ್ರತಿಯೊಬ್ಬನಿಗೆ ಕೃಪೆಯು ಕೊಡಲ್ಪಟ್ಟಿತು.
- 8ಆದದರಿಂದ--ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ ಸೆರೆಯನ್ನು ಸೆರೆಹಿಡಿದುಕೊಂಡು ಹೋಗಿ ಮನುಷ್ಯರಿಗೆ ದಾನಗಳನ್ನು ಕೊಟ್ಟನು ಎಂದು ಆತನು ಹೇಳುತ್ತಾನೆ.
Cross references
- Romans 11:36 ರೋಮಾಪುರದವರಿಗೆ 11:36ಸಮಸ್ತವು ಆತನಿಂದಲೂ ಆತನ ಮುಖಾಂತರವೂ ಆತನಿಗಾಗಿಯೂ ಇರುತ್ತದೆ; ಆತನಿಗೆ ಸದಾಕಾಲವೂ ಮಹಿಮೆಯಾಗಲಿ. ಆಮೆನ್.
- 1 Corinthians 8:6 1 ಕೊರಿಂಥದವರಿಗೆ 8:6ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ; ಆತನು ಸಮಸ್ತಕ್ಕೂ ಮೂಲ ಕಾರಣನು; ನಾವು ಆತನಲ್ಲಿ ಇದ್ದೇವೆ. ಕರ್ತನಾದ ಯೇಸು ಕ್ರಿಸ್ತನು ಒಬ್ಬನೇ; ಆತನ ಮುಖಾಂತರ ಸಮಸ್ತವೂ ಉಂಟಾಯಿತು; ನಾವು ಆತನ ಮುಖಾಂತರ ಉಂಟಾದೆವು.
- Malachi 2:10 ಮಲಾಕಿಯ 2:10ನಮ್ಮೆಲ್ಲರಿಗೆ ಒಬ್ಬನೇ ತಂದೆಯಲ್ಲವೋ? ನಮ್ಮನ್ನು ಒಬ್ಬನೇ ದೇವರು ಸೃಷ್ಟಿಸಿದನಲ್ಲವೋ? ಯಾಕೆ ಪ್ರತಿ ಯೊಬ್ಬನು ತನ್ನ ಸಹೋದರನಿಗೆ ವಿರೋಧವಾಗಿ ವಂಚನೆಯಿಂದ ನಡೆದು ನಮ್ಮ ತಂದೆಗಳ ಒಡಂಬಡಿಕೆ ಯನ್ನು ಅಪವಿತ್ರ ಮಾಡುತ್ತೇವೆ?
- Galatians 3:26–28 ಗಲಾತ್ಯದವರಿಗೆ 3:26–28ನೀವೆಲ್ಲರು ಕ್ರಿಸ್ತ ಯೇಸು ವಿನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಮಕ್ಕಳಾಗಿ ದ್ದೀರಿ. ಹೇಗಂದರೆ ಕ್ರಿಸ್ತನಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡಿರುವ ನೀವೆಲ್ಲರು ಕ್ರಿಸ್ತನನ್ನು ಧರಿಸಿ ಕೊಂಡಿರಿ. ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ ದಾಸನು ಸ್ವತಂತ್ರನು ಎಂದೂ ಗಂಡು ಹೆಣ್ಣು ಎಂದೂ ಭೇದವಿಲ್ಲ.ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.
- Revelation 4:8–11 ಪ್ರಕಟನೆ 4:8–11ಆ ನಾಲ್ಕು ಜೀವಿಗಳೊಳಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು; ಅವುಗಳಿಗೆ ತುಂಬಾ ಕಣ್ಣುಗಳಿದ್ದವು; ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ-- ಇದ್ದಾತನು ಇರುವಾತನೂ ಬರುವಾತನೂ ಸರ್ವಶಕ್ತ ನಾಗಿರುವ ದೇವರಾದ ಕರ್ತನು ಪರಿಶುದ್ಧನು ಪರಿ ಶುದ್ಧನು ಪರಿಶುದ್ಧನು ಎಂದು ಹೇ ಯುಗ ಯುಗಾಂತರಗಳಲ್ಲಿಯೂ ಜೀವಿಸುವಾತನಾಗಿ ಸಿಂಹಾ ಸನದ ಮೇಲೆ ಕೂತಿರುವಾತನಿಗೆ ಆ ಜೀವಿಗಳು ಪ್ರಭಾವಮಾನ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದವು. ಆಗ ಆ ಇಪ್ಪತ್ತನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕೂತಿದ್ದಾತನ ಮುಂದೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ ಯುಗಯುಗಾಂತರ ಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಾ--ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು. ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು.
- Galatians 4:3–7 ಗಲಾತ್ಯದವರಿಗೆ 4:3–7ಹಾಗೆಯೇ ನಾವು ಸಹ ಬಾಲಕರಾಗಿದ್ದಾಗ ಲೋಕದ ಮೂಲ ಪಾಠಗಳಿಗೆ ಅಧೀನರಾಗಿದ್ದೆವು. ಆದರೆ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಸ್ತ್ರೀಯಿಂದ ಹುಟ್ಟಿದವನನ್ನಾಗಿಯೂ ನ್ಯಾಯ ಪ್ರಮಾಣಕ್ಕೆ ಒಳಗಾದವನನ್ನಾಗಿಯೂ ಮಾಡಿ ಕಳುಹಿಸಿದ್ದಲ್ಲದೆ ನ್ಯಾಯಪ್ರಮಾಣಾಧೀನರನ್ನು ವಿಮೋಚಿಸುವದಕ್ಕೂ ನಾವು ದತ್ತುಪುತ್ರರ ಸ್ವೀಕಾರವನ್ನು ಹೊಂದುವಂತೆಯೂ ಕಳುಹಿಸಿಕೊಟ್ಟನು. ನೀವು ಪುತ್ರ ರಾಗಿರುವದರಿಂದ--ಅಪ್ಪಾ, ತಂದೆಯೇ ಎಂದು ಕೂಗುವ ತನ್ನ ಮಗನ ಆತ್ಮನನ್ನು ದೇವರು ನಿಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು. ಹೀಗಿರುವಲ್ಲಿ ಇನ್ನು ನೀನು ದಾಸನಲ್ಲ, ಮಗನಾಗಿದ್ದೀ; ಮಗನೆಂದ ಮೇಲೆ ಕ್ರಿಸ್ತನ ಮೂಲಕ ದೇವರಿಗೆ ಬಾಧ್ಯನೂ ಆಗಿದ್ದೀ.
- John 20:17 ಯೋಹಾನನು 20:17ಯೇಸು ಆಕೆಗೆ--ನನ್ನನ್ನು ಮುಟ್ಟಬೇಡ; ಯಾಕಂದರೆ ನಾನು ಇನ್ನೂ ನನ್ನ ತಂದೆಯ ಬಳಿಗೆ ಏರಿಹೋಗಲಿಲ್ಲ; ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವ ರಿಗೆ--ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ಹೇಳು
- 1 John 3:24 1 ಯೋಹಾನನು 3:24ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ವಾಸಮಾಡುತ್ತಾನೆ. ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿದ ಆತ್ಮನಿಂದಲೇ ನಾವು ಬಲ್ಲೆವು.
- Matthew 6:9 ಮತ್ತಾಯನು 6:9ಆದದರಿಂದ ನೀವು ಈ ರೀತಿಯಲ್ಲಿ ಪ್ರಾರ್ಥನೆ ಮಾಡಿರಿ--ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಿರಲಿ. ನಿನ್ನ ರಾಜ್ಯವು ಬರಲಿ.
- 1 John 4:12–15 1 ಯೋಹಾನನು 4:12–15ದೇವರನ್ನು ಯಾರೂ ಎಂದೂ ನೋಡಿಲ್ಲ; ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ ಮತ್ತು ಆತನ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುತ್ತದೆ. ಆತನು ನಮಗೆ ತನ್ನ ಆತ್ಮದಲ್ಲಿ ಪಾಲನ್ನು ಅನುಗ್ರಹಿಸದ್ದರಿಂದಲೇ ನಾವು ಆತನಲ್ಲಿ ನೆಲೆಗೊಂಡಿದ್ದೇವೆಂತಲೂ ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂತಲೂ ತಿಳಿದುಕೊಳ್ಳು ತ್ತೇವೆ. ತಂದೆಯು ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವದನ್ನು ನಾವು ನೋಡಿದ್ದೇವೆ ಮತ್ತು ಸಾಕ್ಷಿ ಹೇಳುತ್ತೇವೆ. ಯೇಸು ದೇವರ ಮಗನಾಗಿ ದ್ದಾನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನಲ್ಲಿ ದೇವರು ನೆಲೆಗೊಂಡಿದ್ದಾನೆ, ಅವನು ದೇವರಲ್ಲಿ ನೆಲೆಗೊಂಡಿದ್ದಾನೆ.
- 1 Corinthians 12:6 1 ಕೊರಿಂಥದವರಿಗೆ 12:6ಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು, ಆದರೆ ಸರ್ವರಲ್ಲಿಯೂ ಸರ್ವಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ.
- 2 Corinthians 6:16 2 ಕೊರಿಂಥದವರಿಗೆ 6:16ವಿಗ್ರಹಗಳ ಕೂಡ ದೇವರ ಮಂದಿರಕ್ಕೆ ಒಪ್ಪಿಗೆ ಏನು? ಯಾಕಂದರೆ ನೀವು ಜೀವವುಳ್ಳ ದೇವರ ಮಂದಿರವಾಗಿದ್ದೀರಲ್ಲಾ, ಇದರ ಸಂಬಂಧವಾಗಿ ದೇವರು--ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ.