Ephesians · chapter 6 · verse 1
Ephesians 6:1 in Kannada
ಮಕ್ಕಳೇ, ನೀವು ಕರ್ತನಲ್ಲಿ ನಿಮ್ಮ ತಂದೆ ತಾಯಿಗಳಿಗೆ ವಿಧೇಯರಾಗಿರ್ರಿ; ಇದು ನ್ಯಾಯವಾದದ್ದು.
Makkale, neevu kartanalli nimma tande taayigalige vidheyaraagirri; idu nyaayavaadaddu.
Ephesians 6:1 in English
- King James Version (KJV)
- Children, obey your parents in the Lord: for this is right.
- World English Bible (WEB)
- Children, obey your parents in the Lord, for this is right.
- American Standard Version (ASV)
- Children, obey your parents in the Lord: for this is right.
- Bible in Basic English (BBE)
- Children, do what is ordered by your fathers and mothers in the Lord: for this is right.
- Darby Translation (DBY)
- Children, obey your parents in [the] Lord, for this is just.
- Webster's Bible (WBS)
- Children, obey your parents in the Lord: for this is right.
- Young's Literal Translation (YLT)
- The children! obey your parents in the Lord, for this is righteous;
Read in context
- 1ಮಕ್ಕಳೇ, ನೀವು ಕರ್ತನಲ್ಲಿ ನಿಮ್ಮ ತಂದೆ ತಾಯಿಗಳಿಗೆ ವಿಧೇಯರಾಗಿರ್ರಿ; ಇದು ನ್ಯಾಯವಾದದ್ದು.
- 2ನಿನ್ನ ತಂದೆಯನ್ನೂ ತಾಯಿಯನ್ನೂ ಸನ್ಮಾನಿಸಬೇಕು, ಇದು ವಾಗ್ದಾನಸಹಿತವಾದ ಮೊದಲನೇ ಆಜ್ಞೆಯಾಗಿದೆ.
- 3ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹು ಕಾಲ ಬದುಕುವಿ.
Cross references
- Colossians 3:20–25 ಕೊಲೊಸ್ಸೆಯವರಿಗೆ 3:20–25ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯ ರಾಗಿರ್ರಿ; ಯಾಕಂದರೆ ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ. ತಂದೆಗಳೇ, ನಿಮ್ಮ ಮಕ್ಕಳು ಮನಗುಂದದಂತೆ ಅವರನ್ನು ಕೆಣಕಿ ಕೋಪವನ್ನೆಬ್ಬಿಸ ಬೇಡಿರಿ. ಸೇವಕರೇ, ಶಾರೀರಕವಾದ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯ ರಾಗಿರ್ರಿ; ಮನುಷ್ಯರನ್ನು ಮೆಚ್ಚುಸುವವರು ಮಾಡುವ ಪ್ರಕಾರ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆ ಮಾಡದೆ ದೇವರಿಗೆ ಭಯಪಡುವ ವರಾಗಿ ಸರಳ ಹೃದಯದಿಂದ ಕೆಲಸಮಾಡಿರಿ. ನೀವು ಯಾವದನ್ನು ಮಾಡಿದರೂ ಅದನ್ನು ಮನುಷ್ಯರಿ ಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ; ಕರ್ತನಿಂದ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವರೆಂದು ತಿಳಿದಿದ್ದೀರಲ್ಲಾ. ಯಾಕಂದರೆ ನೀವು ಕರ್ತನಾದ ಕ್ರಿಸ್ತನನ್ನು ಸೇವಿಸುವವರಾಗಿದ್ದೀರಿ.ಆದರೆ ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕದ್ದನ್ನು ಹೊಂದುವನು ಮತ್ತು ಅದರಲ್ಲಿ ಪಕ್ಷಪಾತವಿಲ್ಲ. ಆದರೆ ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕದ್ದನ್ನು ಹೊಂದುವನು ಮತ್ತು ಅದರಲ್ಲಿ ಪಕ್ಷಪಾತವಿಲ್ಲ.
- Proverbs 23:22 ಜ್ಞಾನೋಕ್ತಿಗಳು 23:22ನಿನ್ನನ್ನು ಪಡೆದ ತಂದೆಯ ಮಾತಿಗೆ ಕಿವಿಗೊಡು; ನಿನ್ನ ತಾಯಿ ಮುಪ್ಪಿನವಳಾದಾಗ ಆಕೆಯನ್ನು ಅಸಡ್ಡೆಮಾಡಬೇಡ.
- Proverbs 6:20 ಜ್ಞಾನೋಕ್ತಿಗಳು 6:20ನನ್ನ ಮಗನೇ, ನಿನ್ನ ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಕಟ್ಟಳೆಯನ್ನು ತ್ಯಜಿಸಬೇಡ.
- Colossians 3:16–17 ಕೊಲೊಸ್ಸೆಯವರಿಗೆ 3:16–17ಸಕಲ ಜ್ಞಾನದಲ್ಲಿ ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಒಬ್ಬರಿಗೊಬ್ಬರು ಉಪದೇಶಿಸುತ್ತಾ ಬುದ್ದಿ ಹೇಳುತ್ತಾ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮ ಸಂಬಂಧವಾದ ಹಾಡುಗಳಿಂದಲೂ ಕೃಪೆಯಿಂದ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಹಾಡುತ್ತಾ ಇರ್ರಿ. ನೀವು ಮಾತಿನಿಂದಾಗಲಿ ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆ ಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
- Proverbs 1:8 ಜ್ಞಾನೋಕ್ತಿಗಳು 1:8ನನ್ನ ಮಗನೇ, ನಿನ್ನ ತಂದೆಯ ಶಿಕ್ಷಣವನ್ನು ಕೇಳು, ನಿನ್ನ ತಾಯಿಯ ಕಟ್ಟಳೆಯನ್ನು ತೊರೆಯಬೇಡ;
- Deuteronomy 21:18 ಧರ್ಮೋಪದೇಶಕಾಂಡ 21:18ಒಬ್ಬ ಮನುಷ್ಯನಿಗೆ ಮೊಂಡನೂ ತಿರುಗಿ ಬೀಳುವ ವನೂ ಆಗಿರುವ ಮಗನಿದ್ದರೆ ಅವನು ತಂದೆಯ ಮಾತನ್ನು ತಾಯಿಯ ಮಾತನ್ನು ಕೇಳದೆಯೂ, ಅವರು ಅವನನ್ನು ಶಿಕ್ಷಿಸಿ ಹೇಳುವ ಮಾತನ್ನೂ ಕೇಳದೆಯೂ ಹೋದರೆ
- Leviticus 19:3 ಯಾಜಕಕಾಂಡ 19:3ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತಾಯಿಗೂ ತಂದೆಗೂ ಭಯಪಟ್ಟು ನನ್ನ ಸಬ್ಬತ್ತುಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
- Romans 12:2 ರೋಮಾಪುರದವರಿಗೆ 12:2ಇಹಲೋಕವನ್ನು ಅನುಸರಿಸದೆ ಉತ್ತಮ ವಾದದ್ದೂ ಮೆಚ್ಚಿಕೆಯಾದದ್ದೂ ಪರಿಪೂರ್ಣ ವಾದದ್ದೂ ಆಗಿರುವ ದೇವರ ಚಿತ್ತವೇನೆಂದು ನೀವು ವಿವೇಚಿಸಿ ತಿಳಿದುಕೊಳ್ಳುವಂತೆ ನೂತನ ಮನಸ್ಸನ್ನು ಹೊಂದಿಕೊಂಡು ರೂಪಾಂತರಗೊಂಡವರಾಗಿರ್ರಿ.
- 1 Timothy 5:4 1 ತಿಮೊಥೆಯನಿಗೆ 5:4ಆದರೆ ಯಾವ ವಿಧವೆಗಾದರೂ ಮಕ್ಕಳಾಗಲಿ, ಮೊಮ್ಮಕ್ಕಳಾ ಗಲಿ, ಇದ್ದರೆ ಅವರೇ ಮೊದಲು ತಮ್ಮ ಮನೆಯಲ್ಲಿ ಭಕ್ತಿ ತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪ ಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಯೋಗ್ಯವಾದದ್ದೂ ಮೆಚ್ಚಿಕೆಯಾದದ್ದೂ ಆಗಿದೆ.
- Ephesians 6:5–6 ಎಫೆಸದವರಿಗೆ 6:5–6ಸೇವಕರೇ, ಶಾರೀರಕ್ಕನುಸಾರವಾಗಿ ನಿಮ್ಮ ಯಜ ಮಾನರಾಗಿರುವವರಿಗೆ ಕ್ರಿಸ್ತನಿಗೆಂದು ಹೃದಯ ಪೂರ್ವಕವಾಗಿ ನಡುಗುತ್ತಾ ವಿಧೇಯರಾಗಿರ್ರಿ. ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ಕಣ್ಣಿಗೆ ಕಾಣುವಾಗ ಮಾತ್ರ ಸೇವೆ ಮಾಡದೆ ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಹೃದಯ ಪೂರ್ವಕವಾಗಿ ನಡಿಸಿರಿ.
- Romans 7:12 ರೋಮಾಪುರದವರಿಗೆ 7:12ಹೀಗಿರಲಾಗಿ ನ್ಯಾಯಪ್ರಮಾಣವು ಪರಿ ಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ ನ್ಯಾಯವೂ ಹಿತವೂ ಆಗಿರುವಂಥದ್ದು ಸರಿ.
- Proverbs 30:17 ಜ್ಞಾನೋಕ್ತಿಗಳು 30:17ತನ್ನ ತಂದೆಯನ್ನು ಹಾಸ್ಯಮಾಡಿ ತನ್ನ ತಾಯಿಯನ್ನು ಧಿಕ್ಕರಿಸುವವನ ಕಣ್ಣನ್ನು ಕಣಿವೆಯ ಕಾಗೆಗಳು ಕಿತ್ತು ಹಾಕುವವು, ಪ್ರಾಯದ ಹದ್ದುಗಳು ಅದನ್ನು ತಿನ್ನು ವವು.