Esther · chapter 2 · verse 1
Esther 2:1 in Kannada
ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನ ಕೋಪವು ಶಾಂತ ವಾದಾಗ ಅವನು ವಷ್ಟಿಯನ್ನೂ ಅವಳು ಮಾಡಿದ್ದನ್ನೂ ಅವಳಿಗೆ ವಿರೋಧವಾಗಿ ನೇಮಿಸಿದ್ದನ್ನೂ ಜ್ಞಾಪಕ ಮಾಡಿಕೊಂಡನು.
Ee kaaryagalaada taruvaaya arasanaada ahashveroshana kopavu shaanta vaadaaga avanu vashtiyannoo avalu maadiddannoo avalige virodhavaagi nemisiddannoo jnyaapaka maadikondanu.
Esther 2:1 in English
- King James Version (KJV)
- After these things, when the wrath of king Ahasuerus was appeased, he remembered Vashti, and what she had done, and what was decreed against her.
- World English Bible (WEB)
- After these things, when the wrath of King Ahasuerus was pacified, he remembered Vashti, and what she had done, and what was decreed against her.
- American Standard Version (ASV)
- After these things, when the wrath of king Ahasuerus was pacified, he remembered Vashti, and what she had done, and what was decreed against her.
- Bible in Basic English (BBE)
- After these things, when the king's feelings were calmer, the thought of Vashti and what she had done and the order he had made against her, came back to his mind.
- Darby Translation (DBY)
- After these things, when the fury of king Ahasuerus was appeased, he remembered Vashti, and what she had done, and what was decreed against her.
- Webster's Bible (WBS)
- After these things, when the wrath of king Ahasuerus was appeased, he remembered Vashti, and what she had done, and what was decreed against her.
- Young's Literal Translation (YLT)
- After these things, at the ceasing of the fury of the king Ahasuerus, he hath remembered Vashti, and that which she did, and that which hath been decreed concerning her;
Read in context
- 1ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನ ಕೋಪವು ಶಾಂತ ವಾದಾಗ ಅವನು ವಷ್ಟಿಯನ್ನೂ ಅವಳು ಮಾಡಿದ್ದನ್ನೂ ಅವಳಿಗೆ ವಿರೋಧವಾಗಿ ನೇಮಿಸಿದ್ದನ್ನೂ ಜ್ಞಾಪಕ ಮಾಡಿಕೊಂಡನು.
- 2ಆಗ ಅರಸನನ್ನು ಸೇವಿಸುವ ದಾಸರು ಅವನಿಗೆ ಹೇಳಿದ್ದೇನಂದರೆ--ಅರಸನಿಗೋಸ್ಕರ ರೂಪವತಿಯಾದ ಕನ್ಯಾಸ್ತ್ರೀಯರು ಹುಡುಕಲ್ಪಡಲಿ.
- 3ರೂಪವತಿಯಾದ ಸಮಸ್ತ ಕನ್ಯಾಸ್ತ್ರೀಯರು ರಾಜ ಧಾನಿಯಾದ ಶೂಷನಿಗೆ ಸ್ತ್ರೀಯರು ಇರುವ ಅರಮ ನೆಗೆ, ಸ್ತ್ರೀಯರ ಮೇಲೆ ಕಾವಲಾಗಿ ಇರುವ ಅರಸನ ಅಧಿ ಕಾರಿಗಳಾದ ಹೇಗ್ಯನೆಂಬವನ ಕೈಗೆ ಒಪ್ಪಿಸಲ್ಪಡುವ ಹಾಗೆ ಅರಸನು ತನ್ನ ರಾಜ್ಯದ ಸಮಸ್ತ ಪ್ರಾಂತಗಳಲ್ಲಿ ಅಧಿಕಾರವನ್ನು ನೇಮಿಸಲಿ; ಅವರಿಗೆ ಶುಚಿ ಮಾಡಿ ಕೊಳ್ಳುವ ವಸ್ತುಗಳು ಕೊಡಲ್ಪಡಲಿ.
Cross references
- Esther 7:10 ಎಸ್ತೇರಳು 7:10ಅವರು ಮೊರ್ದೆಕೈ ಗೋಸ್ಕರ ಹಾಮಾನನು ಸಿದ್ಧ ಮಾಡಿಸಿದ್ದ ಗಲ್ಲಿನ ಮರದಲ್ಲಿ ಅವನನ್ನು ಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು.
- Daniel 6:14–18 ದಾನಿಯೇಲನು 6:14–18ಅರಸನು ಯಾವಾಗ ಈ ಮಾತುಗಳನ್ನು ಕೇಳಿದನೋ ಆಗ ತನ್ನಲ್ಲಿಯೇ ಬಹಳವಾಗಿ ಬೇಸರ ಗೊಂಡನು ಮತ್ತು ಅವನನ್ನು ಅದರಿಂದ ತಪ್ಪಿಸ ಬೇಕೆಂದು ತನ್ನ ಹೃದಯದಲ್ಲಿ ತಿಳಿದು ಸೂರ್ಯಾಸ್ತ ಮಾನದ ವರೆಗೂ ಪ್ರಯತ್ನಪಟ್ಟನು. ಆಗ ಆ ಮನುಷ್ಯರು ಅರಸನ ಬಳಿಗೆ ಕೂಡಿ ಬಂದು ಅರಸ ನಿಗೆ--ಓ ಅರಸನೇ, ನೀನು ಜಾರಿಗೆ ತಂದಿರುವ ಯಾವ ನಿರ್ಣಯವಾದರೂ ಆಜ್ಞೆಯಾದರೂ ಬದಲಾಯಿಸ ಬಾರದೆಂದು ಮೇದ್ಯಯರ ಮತ್ತು ಪಾರಸೀಯರ ನ್ಯಾಯ ಪ್ರಮಾಣದಲ್ಲಿದೆ ಎಂದು ನಿನಗೆ ತಿಳಿದರಲಿ ಅಂದನು. ಆಗ ರಾಜನು ಆಜ್ಞಾಪಿಸಲು ಅವರು ದಾನಿಯೇಲ ನನ್ನು ತಂದು ಸಿಂಹದ ಗವಿಯಲ್ಲಿ ಹಾಕಿದರು. ಅರಸನು ದಾನಿಯೇಲನಿಗೆ--ನೀನು ಯಾವಾಗಲೂ ಪ್ರಾರ್ಥಿ ಸುವ ನಿನ್ನ ದೇವರು ನಿನ್ನನ್ನು ಬಿಡಿಸುವನು ಎಂದು ಹೇಳಿದನು. ಬಂಡೆ ತರಿಸಲ್ಪಟ್ಟು ಗುಹೆಯ ಬಾಯಿಯು ಮುಚ್ಚಲ್ಪಟ್ಟಿತು. ಇದಲ್ಲದೆ ದಾನಿಯೇಲನ ವಿಷಯದಲ್ಲಿ ತನ್ನ ಆಲೋಚನೆಯು ಬದಲಾಗದ ಹಾಗೆ ಅರಸನು ತನ್ನ ಮುದ್ರೆಯನ್ನು ಮತ್ತು ತನ್ನ ಪ್ರಭುಗಳ ಮುದ್ರೆಯನ್ನೂ ಅದಕ್ಕೆ ಹಾಕಿದನು. ಆ ಮೇಲೆ ಅರಸನು ತನ್ನ ಅರಮನೆಗೆ ಹಿಂತಿರುಗಿ ಉಪವಾಸ ದಿಂದಲೇ ರಾತ್ರಿಯನ್ನು ಕಳೆದನು. ಗಾನ, ವಾದ್ಯಗಳು ಅವನ ಮುಂದೆ ತರಲ್ಪಡಲಿಲ್ಲ; ನಿದ್ರೆಯು ಅವನನ್ನು ಬಿಟ್ಟು ಹೋಯಿತು.
- Esther 1:12–21 ಎಸ್ತೇರಳು 1:12–21ಆದರೆ ಅರಸನು ಅಧಿಕಾರಿ ಗಳಿಂದ ಹೇಳಿ ಕಳುಹಿಸಿದ ಮಾತಿಗೆ ರಾಣಿಯಾದ ವಷ್ಟಿಯು -- ನಾನು ಬರುವದಿಲ್ಲವೆಂದು ಹೇಳಿದಳು. ಆದದರಿಂದ ಅರಸನು ಬಹು ಕೋಪಗೊಂಡು ಉಗ್ರತೆಯಿಂದ ಉರಿದನು. ಆಗ ನೀತಿ ನ್ಯಾಯಗಳನ್ನು ತಿಳಿದವರೆಲ್ಲರಿಗೂ ಅರಸನ ರೀತಿಯ ಪ್ರಕಾರವಾಗಿ ಅರಸನು ಕಾಲ ಜ್ಞಾನಿಗಳ ಸಂಗಡಲೂ ರಾಜ್ಯದಲ್ಲಿ ಶ್ರೇಷ್ಠರಾಗಿ ಕುಳಿತುಕೊಂಡು ಅರಸನ ಮುಖವನ್ನು ನೋಡುತ್ತಿರುವ ಪಾರಸಿಯ ಮೇಧ್ಯಗಳ ಏಳುಮಂದಿ ಪ್ರಧಾನರಾದ ಕರ್ಷೆನಾ, ಶೇತಾರ್, ಆದ್ಮಾತನು, ತರ್ಷೀಷನು. ಮೆರೆಸನು, ಮರ್ಸೆನಾ, ಮೆಮೂಕಾನನು ಇವರ ಸಂಗಡಲೂ ಅಹಷ್ವೇರೋಷನು ತನ್ನ ಅಧಿಕಾರಿಗಳ ಕೈಯಿಂದ ಹೇಳಿ ಕಳುಹಿಸಿದ ಮಾತಿನ ಪ್ರಕಾರ ರಾಣಿಯು ಮಾಡದೆ ಇರುವದರಿಂದ ನಾವು ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕಾದದ್ದೇನು ಎಂದು ಕೇಳಿದನು. ಮೆಮುಕಾನನು ಅರಸನ ಮುಂದೆಯೂ ಪ್ರಧಾ ನರ ಮುಂದೆಯೂ ಹೇಳಿದ್ದೇನಂದರೆ -- ರಾಣಿಯಾದ ವಷ್ಟಿಯು ಅರಸನಿಗೆ ಮಾತ್ರವಲ್ಲ ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತ್ಯಗಳಲ್ಲಿರುವ ಸಮಸ್ತ ಪ್ರಧಾನರಿಗೂ ಸಮಸ್ತ ಜನರಿಗೂ ಅಪರಾಧ ಮಾಡಿ ದ್ದಾಳೆ. ಯಾಕಂದರೆ ರಾಣಿಯ ನಡತೆಯೂ ಸಮಸ್ತ ಸ್ತ್ರೀಯರಿಗೆ ಗೊತ್ತಾಗುವದು, ಅರಸನಾದ ಅಹಷ್ವೇ ರೋಷನು ರಾಣಿಯಾದ ವಷ್ಟಿಯನ್ನು ತನ್ನ ಮುಂದೆ ಕರಕೊಂಡು ಬರ ಹೇಳಿದನು; ಆದರೆ ಅವಳು ಬಾರದೆ ಹೋದಳೆಂದು ಹೇಳಲ್ಪಟ್ಟಾಗ ಅವರು ತಮ್ಮ ಯಜ ಮಾನರನ್ನು ತಮ್ಮ ಕಣ್ಣುಗಳ ಮುಂದೆ ತಿರಸ್ಕರಿಸುವರು. ಇದಲ್ಲದೆ ರಾಣಿಯ ಮಾತನ್ನು ಕೇಳಿದ ಪಾರಸಿಯ ಮೇದ್ಯಗಳ ರಾಣಿಯರೆಲ್ಲರೂ ಈಹೊತ್ತು, ಅರಸನ ಪ್ರಧಾನರಿಗೆ ಹಾಗೆಯೇ ಹೇಳುವರು. ಹೀಗೆಯೇ ತಿರಸ್ಕಾರವೂ ರೌದ್ರವೂ ಬಹಳ ಉಂಟಾಗುವದು. ಅರಸನಿಗೆ ಸಮ್ಮತಿಯಾದರೆ ವಷ್ಟಿಯು ಅರಸನಾದ ಅಹಷ್ವೇರೋಷನ ಮುಂದೆ ಇನ್ನು ಮೇಲೆ ಬರ ಬಾರದೆಂದೂ ಅರಸನು ಅವಳ ರಾಜಸ್ಥಿತಿಯನ್ನು ಅವಳಿಗಿಂತ ಉತ್ತಮಳಾದ ಮತ್ತೊಬ್ಬಳಿಗೆ ಕೊಡಲಿ ಎಂದೂ ರಾಜಾಜ್ಞೆಯು ಹೊರಟು ಅದು ರದ್ದಾಗದ ಹಾಗೆ ಪಾರಸಿಯ ಮೇದ್ಯರ ಕಾನೂನುಗಳಲ್ಲಿ ಬರೆ ಯಲ್ಪಡಲಿ. ಈ ಪ್ರಕಾರ ಅರಸನು ಮಾಡಿದ ಆಜ್ಞೆಯು ತನ್ನ ವಿಸ್ತಾರವಾದ ರಾಜ್ಯವೆಲ್ಲಾದರಲ್ಲಿ ಕೇಳಲ್ಪಟ್ಟಾಗ ಸ್ತ್ರೀಯರೆಲ್ಲರೂ ಹಿರಿಯರಿಂದ ಚಿಕ್ಕವರ ವರೆಗೂ ತಮ್ಮ ಯಜಮಾನರಿಗೆ ಮಾನಕೊಡುವ ರೆಂದು ಹೇಳಿದನು. ಈ ಮಾತು ಪ್ರತಿ ಅರಸ ನಿಗೂ ಪ್ರಧಾನರಿಗೂ ಚೆನ್ನಾಗಿ ಕಾಣಿಸಿದ್ದರಿಂದಅರಸನು ಮೆಮುಕಾನನ ಮಾತಿನ ಪ್ರಕಾರಮಾಡಿ ಪ್ರತಿ ಮನುಷ್ಯನು ತನ್ನ ಮನೆಯಲ್ಲಿ ಅಧಿಕಾರ ನಡಿಸಬೇಕೆಂದೂ ತನ್ನ ಜನರ ಭಾಷೆಯ ಪ್ರಕಾರ ಮಾತನಾಡಬೇಕೆಂದೂ ಪ್ರಾಂತ್ಯ ಪ್ರಾಂತ್ಯದಲ್ಲಿ ಅದರ ಬರಹದ ಪ್ರಕಾರವೂ ಜನ ಜನಗಳಲ್ಲಿ ಅವರ ಭಾಷೆಯ ಪ್ರಕಾರವೂ ಅರಸನ ಸಮಸ್ತ ಪ್ರಾಂತ್ಯಗಳಿಗೆ ಪತ್ರಗಳನ್ನು ಕಳುಹಿಸಿದನು.