Esther · chapter 7 · verse 6
Esther 7:6 in Kannada
ಅದಕ್ಕೆ ಎಸ್ತೇರಳು--ವೈರಿಯೂ ಶತ್ರುವೂ ಯಾರಂದರೆ ಈ ಕೆಟ್ಟವನಾದ ಹಾಮಾನನೇ ಅಂದಳು. ಆಗ ಹಾಮಾನನು ಅರಸನ, ರಾಣಿಯ ಸಮ್ಮುಖದಲ್ಲಿ ಹೆದರಿ ಕೊಂಡನು.
Adakke esteralu--vairiyoo shatruvoo yaarandare ee kettavanaada haamaanane andalu. Aaga haamaananu arasana, raaniya sammukhadalli hedari kondanu.
Esther 7:6 in English
- King James Version (KJV)
- And Esther said, The adversary and enemy [is] this wicked Haman. Then Haman was afraid before the king and the queen.
- World English Bible (WEB)
- Esther said, “An adversary and an enemy, even this wicked Haman!” Then Haman was afraid before the king and the queen.
- American Standard Version (ASV)
- And Esther said, An adversary and an enemy, even this wicked Haman. Then Haman was afraid before the king and the queen.
- Bible in Basic English (BBE)
- And Esther said, Our hater and attacker is this evil Haman. Then Haman was full of fear before the king and the queen.
- Darby Translation (DBY)
- And Esther said, The adversary and enemy is this wicked Haman. Then Haman was terrified before the king and the queen.
- Webster's Bible (WBS)
- And Esther said, The adversary and enemy [is] this wicked Haman. Then Haman was afraid before the king and the queen.
- Young's Literal Translation (YLT)
- And Esther saith, 'The man — adversary and enemy — [is] this wicked Haman;' and Haman hath been afraid at the presence of the king and of the queen.
Read in context
- 4ಯಾಕಂದರೆ ನಾನೂ ನನ್ನ ಜನವೂ ಸಂಹರಿಸಲ್ಪಡುವದಕ್ಕೂ ಕೊಲ್ಲಲ್ಪ ಡುವದಕ್ಕೂ ನಾಶಮಾಡಲ್ಪಡುವದಕ್ಕೂ ಮಾರಲ್ಪಟ್ಟೆವು. ನಾವು ದಾಸದಾಸಿಗಳಾಗಿ ಮಾರಲ್ಪಟ್ಟಿದ್ದರೆ ನಾನು ಸುಮ್ಮನೆ ಇರುತ್ತಿದ್ದೆನು; ಆದರೆ ವೈರಿ ಅರಸನ ನಷ್ಟಕ್ಕೆ ಸರಿಯಾಗಿ ಕೊಡಲಾರನು ಅಂದಳು.
- 5ಆಗ ಅರಸ ನಾದ ಅಹಷ್ವೇರೋಷನು--ರಾಣಿಯಾದ ಎಸ್ತೇರಳಿಗೆ ಪ್ರತ್ಯುತ್ತರವಾಗಿ ಈ ಪ್ರಕಾರ ಮಾಡಲು ತನ್ನ ಹೃದಯ ತುಂಬಿಕೊಂಡವನು ಯಾರು? ಅವನು ಎಲ್ಲಿ ಅಂದನು.
- 6ಅದಕ್ಕೆ ಎಸ್ತೇರಳು--ವೈರಿಯೂ ಶತ್ರುವೂ ಯಾರಂದರೆ ಈ ಕೆಟ್ಟವನಾದ ಹಾಮಾನನೇ ಅಂದಳು. ಆಗ ಹಾಮಾನನು ಅರಸನ, ರಾಣಿಯ ಸಮ್ಮುಖದಲ್ಲಿ ಹೆದರಿ ಕೊಂಡನು.
- 7ಅರಸನು ಕೋಪವುಳ್ಳವನಾಗಿ ದ್ರಾಕ್ಷಾ ರಸದ ಔತಣದಿಂದ ಎದ್ದು ಅರಮನೆಯ ತೋಟಕ್ಕೆ ಹೋದನು. ಆದರೆ ಹಾಮಾನನು ರಾಣಿಯಾದ ಎಸ್ತೇ ರಳ ಮುಂದೆ ತನ್ನ ಪ್ರಾಣಕ್ಕೋಸ್ಕರ ಬೇಡಿಕೊಳ್ಳುತ್ತಾ ನಿಂತನು, ಯಾಕಂದರೆ ಅರಸನಿಂದ ತನಗೆ ಕೇಡು ನಿರ್ಣಯವಾಯಿತೆಂದು ತಿಳಿದನು.
- 8ಅರಸನು ಅರ ಮನೆಯ ತೋಟದಿಂದ ದ್ರಾಕ್ಷಾರಸದ ಔತಣ ಸ್ಥಳಕ್ಕೆ ತಿರಿಗಿ ಬಂದಾಗ ಹಾಮಾನನು ಎಸ್ತೇರಳು ಕುಳಿತಿರುವ ಹಾಸಿಗೆಯ ಮೇಲೆ ಬಿದ್ದಿದ್ದನು. ಆಗ ಅರಸನು--ನನ್ನ ಮುಂದೆ ಅವನು ರಾಣಿಯನ್ನು ಬಲಾತ್ಕಾರ ಮಾಡು ವನೋ ಅಂದನು. ಆ ಮಾತು ಅರಸನ ಬಾಯಿಂದ ಹೊರಟಾಗ ಸೇವಕರು ಹಾಮಾನನ ಮುಖವನ್ನು ಮುಚ್ಚಿದರು.
Cross references
- Job 18:5–12 ಯೋಬನು 18:5–12ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿ ಹೋಗುವದು; ಅವನ ಬೆಂಕಿಯ ಜ್ವಾಲೆಯು ಪ್ರಕಾಶಿ ಸದು. ಬೆಳಕು ಅವನ ಗುಡಾರದಲ್ಲಿ ಕತ್ತಲಾಗುವದು; ಅವನ ದೀಪವು ಅವನ ಕೂಡ ಆರಿ ಹೋಗುವದು ಅವನ ಬಲದ ಹೆಜ್ಜೆಗಳು ಇಕ್ಕಟ್ಟಾಗುವವು; ಅವನ ಆಲೋಚನೆಯು ಅವನನ್ನು ದೊಬ್ಬುವದು. ತನ್ನ ಕಾಲುಗಳಿಂದ ಬಲೆಯಲ್ಲಿ ಸಿಕ್ಕಿಕೊಂಡನು; ಉರ್ಲಿನ ಮೇಲೆ ನಡೆದುಕೊಳ್ಳುತ್ತಾನೆ. ನೇಣು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವದು; ಕಳ್ಳನು ಅವನ ಮೇಲೆ ಬಲಗೊಳ್ಳುವನು. ಅವನ ಪಾಶವು ಭೂಮಿ ಯಲ್ಲಿಯೂ ಅವನ ಕೊಂಡಿಯು ಹಾದಿಯಲ್ಲಿಯೂ ಇಡಲ್ಪಟ್ಟಿದೆ. ಸುತ್ತಲೂ ದಿಗಿಲುಗಳು ಅವನನ್ನು ಹೆದರಿಸಿ ಅವನ ಕಾಲುಗಳನ್ನು ಎಬ್ಬಿಸುತ್ತವೆ. ಅವನ ಬಲವು ಕುಸಿಯುವುದು, ನಾಶನವು ಅವನ ಬಳಿಯಲ್ಲಿ ಸಿದ್ಧವಾಗಿರುವದು.
- 2 Thessalonians 2:8 2 ಥೆಸಲೊನೀಕದವರಿಗೆ 2:8ಆಗ ಆ ದುಷ್ಟನು ಪ್ರತ್ಯಕ್ಷನಾಗುವನು; ಕರ್ತನು ತನ್ನ ಬಾಯಿಯ ಉಸುರಿನಿಂದ ಅವನನ್ನು ದಹಿಸಿ ತನ್ನ ಪ್ರತ್ಯಕ್ಷತೆಯ ಪ್ರಕಾಶದಿಂದ ನಾಶಮಾಡುವನು.
- 1 Corinthians 5:13 1 ಕೊರಿಂಥದವರಿಗೆ 5:13ಹೊರಗಿನವರಿಗೆ ತೀರ್ಪುಮಾಡುವಾತನು ದೇವರು. ಆದದರಿಂದ ಆ ದುಷ್ಟನನ್ನು ನಿಮ್ಮ ಮಧ್ಯದಿಂದ ಹೊರಗೆ ಹಾಕಿರಿ.
- Psalm 27:2 ಕೀರ್ತನೆಗಳು 27:2ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು.
- Psalm 139:19–22 ಕೀರ್ತನೆಗಳು 139:19–22ಓ ದೇವರೇ, ನಿಶ್ಚಯವಾಗಿ ನೀನು ದುಷ್ಟನನ್ನು ಕೊಂದುಹಾಕುವಿ; ರಕ್ತ ಪ್ರಿಯರೇ, ನನ್ನಿಂದ ತೊಲ ಗಿರಿ. ಅವರು ನಿನಗೆ ವಿರೋಧವಾಗಿ ಕೆಟ್ಟತನದಿಂದ ಮಾತನಾಡುತ್ತಾರೆ; ನಿನ್ನ ವೈರಿಗಳು ನಿನ್ನ ಹೆಸರನ್ನು ವ್ಯರ್ಥವಾಗಿ ಎತ್ತುತ್ತಾರೆ. ಓ ಕರ್ತನೇ, ನಾನು ನಿನ್ನನ್ನು ದ್ವೇಷಿಸುವವರನ್ನು ಹಗೆಮಾಡುವದಿಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವ ದಿಲ್ಲವೋ? ಪೂರ್ಣ ದ್ವೇಷದಿಂದ ಅವರನ್ನು ನಾನು ಹಗೆಮಾಡುತ್ತೇನೆ; ಅವರು ನನ್ನ ಶತ್ರುಗಳೆಂದು ನಾನು ಎಣಿಸುತ್ತೇನೆ.
- Nehemiah 6:16 ನೆಹೆಮೀಯ 6:16ನಮ್ಮ ಶತ್ರುಗಳು ಅದನ್ನು ಕೇಳಿದಾಗಲೂ ನಮ್ಮ ಸುತ್ತಲಿದ್ದ ಜನಾಂಗಗಳು ಇದನ್ನು ನೋಡಿ ದಾಗಲೂ ಅವರು ತಮ್ಮ ದೃಷ್ಟಿಯಲ್ಲಿ ಬಹಳ ಕುಂದಿ ಹೋದರು. ಯಾಕಂದರೆ ಈ ಕಾರ್ಯವು ನಮ್ಮ ದೇವರಿಂದ ಉಂಟಾಯಿತೆಂದು ಅವರು ತಿಳಿದು ಕೊಂಡರು.
- 1 Samuel 24:13 1 ಸಮುವೇಲನು 24:13ಪೂರ್ವಿಕರು ಹೇಳಿದ ಸಾಮತಿಯ ಪ್ರಕಾರ ದುಷ್ಟರಿಂದ ದುಷ್ಟತ್ವವು ಹುಟ್ಟುವದು. ಆದರೂ ನನ್ನ ಕೈ ನಿನ್ನ ಮೇಲೆ ಇರುವದಿಲ್ಲ.
- Job 15:21–22 ಯೋಬನು 15:21–22ಭಯಂಕರವಾದ ಶಬ್ದ ಅವನ ಕಿವಿಗಳಲ್ಲಿ ಅದೆ; ವೃದ್ಧಿಯಲ್ಲಿರುವಾಗ ಹಾಳುಮಾಡುವವನು ಅವನ ಮೇಲೆ ಬರುತ್ತಾನೆ. ಕತ್ತಲೆಯೊಳಗಿಂದ ಹಿಂದಿರುಗು ತ್ತೇನೆಂದು ಅವನು ನಂಬುವದಿಲ್ಲ; ಅವನ ಕತ್ತಿಯು ಅವನಿಗಾಗಿ ಕಾದಿದೆ.
- Daniel 5:5–6 ದಾನಿಯೇಲನು 5:5–6ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಹಸ್ತವು ಬಂದು ದೀಪಸ್ತಂಭಕ್ಕೆ ಎದುರಾಗಿ ಅರಮನೆಯ ಗೋಡೆಯ ಮೇಲೆ ಸುಣ್ಣದಲ್ಲಿ ಬರೆದವು; ಅರಸನು ಆ ಬರೆಯುವ ಕೈಭಾಗವನ್ನು ನೋಡಿದನು. ಆಗ ಅರಸನ ಮುಖವು ಕಳೆಗುಂದಿತು, ಅವನ ಆಲೋಚನೆಗಳು ಅವನನ್ನು ಕಳವಳಪಡಿಸಿದವು. ಅವನ ನಡುವಿನ ಕೀಲುಗಳು ಸಡಿಲವಾದವು. ಅವನ ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.
- Esther 3:10 ಎಸ್ತೇರಳು 3:10ಆಗ ಅರಸನು ತನ್ನ ಕೈಯಲ್ಲಿದ್ದ ಉಂಗುರವನ್ನು ತೆಗೆದು ಯೆಹೂದ್ಯರ ವೈರಿಯಾದ ಅಗಾಗನಾದ ಹಮ್ಮೆದಾತನ ಮಗನಾದ ಹಾಮಾನನಿಗೆ ಕೊಟ್ಟನು.
- Psalm 73:5–9 ಕೀರ್ತನೆಗಳು 73:5–9ಬೇರೆ ಮನುಷ್ಯರಂತೆ ಅವರು ಕಷ್ಟದಲ್ಲಿಲ್ಲ. ಇಲ್ಲವೆ ಬೇರೆ ಮನುಷ್ಯರ ಹಾಗೆ ಅವರಿಗೆ ವ್ಯಾಧಿಯೂ ಇಲ್ಲ; ಆದದರಿಂದ ಗರ್ವವು ಅವರಿಗೆ ಕಂಠಮಾಲೆಯಂತೆ ಅವರನ್ನು ಸುತ್ತಿದೆ, ಬಲಾತ್ಕಾರವು ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತದೆ. ಅವರ ಕಣ್ಣುಗಳು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ಹೃದಯವು ಆಶಿಸುವದಕ್ಕಿಂತಲೂ ಹೆಚ್ಚಾಗಿ ಅವರಿಗೆ ಇವೆ. ಅವರು ಕೆಟ್ಟುಹೋದವರು. ಸಂಕಟ ಪಡುವವರ ವಿಷಯ ಕೆಟ್ಟದ್ದಾಗಿಯೂ ಗರ್ವದಿಂದಲೂ ಮಾತನಾಡುತ್ತಾರೆ. ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ; ಭೂಲೋಕದಲ್ಲೆಲ್ಲಾ ಅವರ ಮಾತೇ ನಡೆಯುವದು.
- Psalm 73:17–20 ಕೀರ್ತನೆಗಳು 73:17–20ಅದು ನನ್ನ ದೃಷ್ಟಿಗೆ ಕಷ್ಟವಾಗಿತ್ತು. ಅವರ ಅಂತ್ಯವನ್ನು ಗ್ರಹಿಸಿ ಕೊಂಡೆನು. ನಿಶ್ಚಯವಾಗಿ ನೀನು ಅವರನ್ನು ಜಾರುವ ಸ್ಥಳಗಳಲ್ಲಿ ಇಟ್ಟಿದ್ದೀ; ಅವರನ್ನು ನಾಶನಕ್ಕೆ ಕೆಳಗೆ ದೊಬ್ಬಿದ್ದೀ. ಕ್ಷಣಮಾತ್ರದಲ್ಲಿ ಹೀಗೆ ನಾಶನಕ್ಕೆ ಅವರನ್ನು ಬರಮಾಡಿದಿ. ಅವರು ದಿಗಿಲುಗಳಿಂದ ಸಂಪೂರ್ಣವಾಗಿ ನಾಶವಾಗಿದ್ದಾರೆ. ಎಚ್ಚತ್ತ ಮೇಲೆ ಕನಸು ಹೇಗೋ ಹಾಗೆಯೇ ಓ ಕರ್ತನೇ, ನೀನು ಎಚ್ಚರವಾದಾಗ ಅವರ ರೂಪವನ್ನು ತಿರಸ್ಕರಿಸುವಿ.