Exodus · chapter 1 · verse 19
Exodus 1:19 in Kannada
ಅದಕ್ಕೆ ಅವರು--ಇಬ್ರಿಯರ ಸ್ತ್ರೀಯರು ಐಗುಪ್ತದ ಸ್ತ್ರೀಯರಂತೆ ಅಲ್ಲ, ಅವರು ಚುರುಕಾಗಿದ್ದಾರೆ. ಸೂಲಗಿತ್ತಿಯು ಅವರ ಹತ್ತಿರ ಬರುವದಕ್ಕೆ ಮುಂಚೆಯೇ ಹೆರುತ್ತಾರೆ ಅಂದರು.
Adakke avaru--ibriyara streeyaru aiguptada streeyarante alla, avaru churukaagiddaare. Soolagittiyu avara hattira baruvadakke muncheye heruttaare andaru.
Exodus 1:19 in English
- King James Version (KJV)
- And the midwives said unto Pharaoh, Because the Hebrew women [are] not as the Egyptian women; for they [are] lively, and are delivered ere the midwives come in unto them.
- World English Bible (WEB)
- The midwives said to Pharaoh, “Because the Hebrew women aren’t like the Egyptian women; for they are vigorous and give birth before the midwife comes to them.”
- American Standard Version (ASV)
- And the midwives said unto Pharaoh, Because the Hebrew women are not as the Egyptian women; for they are lively, and are delivered ere the midwife come unto them.
- Bible in Basic English (BBE)
- And they said to Pharaoh, Because the Hebrew women are not like the Egyptian women, for they are strong, and the birth takes place before we come to them.
- Darby Translation (DBY)
- And the midwives said to Pharaoh, Because the Hebrew women are not as the Egyptian; for they are strong, and they have borne before the midwife comes to them.
- Webster's Bible (WBS)
- And the midwives said to Pharaoh, Because the Hebrew women [are] not as the Egyptian women: for they [are] lively, and are delivered ere the midwives come in to them.
- Young's Literal Translation (YLT)
- And the midwives say unto Pharaoh, 'Because the Hebrew women [are] not as the Egyptian women, for they [are] lively; before the midwife cometh in unto them — they have borne!'
Read in context
- 17ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತದ ಅರಸನು ತಮಗೆ ಹೇಳಿದಂತೆ ಮಾಡದೆ ಗಂಡು ಮಕ್ಕಳನ್ನು ಬದುಕಿಸಿದರು.
- 18ಆಗ ಐಗು ಪ್ತದ ಅರಸನು ಸೂಲಗಿತ್ತಿಯರನ್ನು ಕರೆಯಿಸಿಯಾಕೆ ಇಂಥ ಕೆಲಸವನ್ನು ಮಾಡಿ ಗಂಡು ಮಕ್ಕಳನ್ನು ಬದುಕಿ ಸಿದ್ದೀರಿ ಅಂದನು.
- 19ಅದಕ್ಕೆ ಅವರು--ಇಬ್ರಿಯರ ಸ್ತ್ರೀಯರು ಐಗುಪ್ತದ ಸ್ತ್ರೀಯರಂತೆ ಅಲ್ಲ, ಅವರು ಚುರುಕಾಗಿದ್ದಾರೆ. ಸೂಲಗಿತ್ತಿಯು ಅವರ ಹತ್ತಿರ ಬರುವದಕ್ಕೆ ಮುಂಚೆಯೇ ಹೆರುತ್ತಾರೆ ಅಂದರು.
- 20ಆದದರಿಂದ ದೇವರು ಸೂಲಗಿತ್ತಿಯರಿಗೆ ಒಳ್ಳೇದನ್ನು ಮಾಡಿದನು. ಇದಲ್ಲದೆ ಜನರು ಹೆಚ್ಚಾಗಿ ಬಹು ಬಲಗೊಂಡರು.
- 21ಸೂಲಗಿತ್ತಿಯರು ದೇವರಿಗೆ ಭಯ ಪಟ್ಟದ್ದರಿಂದ ಆತನು ಅವರಿಗೆ ವಂಶಾಭಿವೃದ್ಧಿಯ ನ್ನುಂಟುಮಾಡಿದನು.ಆದರೆ ಫರೋಹನು ತನ್ನ ಜನರಿಗೆಲ್ಲಾ--(ಇಬ್ರಿಯರಿಗೆ) ಹುಟ್ಟುವ ಗಂಡು ಮಕ್ಕಳನ್ನೆಲ್ಲಾ ನದಿಯಲ್ಲಿ ಹಾಕಬೇಕು. ಹೆಣ್ಣು ಮಕ್ಕಳ ನ್ನೆಲ್ಲಾ ಜೀವದಿಂದ ಉಳಿಸಬೇಕು ಎಂದು ಅಪ್ಪಣೆ ಕೊಟ್ಟನು.
Cross references
- Joshua 2:4–24 ಯೆಹೋಶುವ 2:4–24ಸ್ತ್ರೀಯು ಆ ಇಬ್ಬರನ್ನು ಅಡಗಿ ಸಿಟ್ಟು--ನನ್ನ ಬಳಿಗೆ ಮನುಷ್ಯರು ಬಂದಿದ್ದರು; ಆದರೆ ನಾನು ಅವರನ್ನು ಯಾವ ಕಡೆಯವರೆಂದು ತಿಳಿಯದೆ ಇದ್ದೆನು. ಬಾಗಲನ್ನು ಮುಚ್ಚುವ ವೇಳೆಯಲ್ಲಿ ಆ ಮನುಷ್ಯರು ಕತ್ತಲೆಯಲ್ಲಿ ಹೊರಟುಹೋದರು. ಅವರು ಎಲ್ಲಿ ಹೋದರೋ ನಾನು ಅರಿಯೆ; ಅವರನ್ನು ಬೇಗ ಹಿಂದಟ್ಟಿರಿ; ನಿಮಗೆ ಸಿಕ್ಕುವರು ಅಂದಳು. ಆದರೆ ಆಕೆಯು ಅವರನ್ನು ಮೇಲೆ ಏರಿಸಿ ಮಾಳಿಗೆಯ ಮೇಲೆ ಸಾಲಾಗಿ ಇಟ್ಟಿದ್ದ ಸಣಬಿನೊಳಗೆ ಬಚ್ಚಿಟ್ಟಳು. ಆ ಮನುಷ್ಯರು ಯೊರ್ದನಿಗೆ ಹೋಗುವ ಹಾದಿಯಲ್ಲಿ ನದಿಯ ರೇವುಗಳ ವರೆಗೂ ಅವರನ್ನು ಹಿಂದಟ್ಟಿದರು. ಅವರನ್ನು ಹಿಂದಟ್ಟುವವರು ಹೊರಟುಹೋದ ಕೂಡಲೆ ಹೆಬ್ಬಾಗಲನ್ನು ಮುಚ್ಚಿದರು. ಆದರೆ ಈ ಮನುಷ್ಯರು ಮಲಗುವದಕ್ಕಿಂತ ಮುಂಚೆ ಆಕೆಯು ಮಾಳಿಗೆಯ ಮೇಲಕ್ಕೇರಿ ಅವರ ಬಳಿಗೆ ಬಂದು ಅವರಿಗೆ-- ಕರ್ತನು ನಿಮಗೆ ದೇಶವನ್ನು ಕೊಟ್ಟಿದ್ದಾನೆಂದೂ ನಿಮ್ಮ ನಿಮಿತ್ತ ನಮಗೆ ಮಹಾಭೀತಿ ಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿ ಗಳೆಲ್ಲರು ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು. ನೀವು ಐಗುಪ್ತದಿಂದ ಹೊರಡುವಾಗ ಕರ್ತನು ನಿಮಗೋಸ್ಕರ ಕೆಂಪು ಸಮುದ್ರದ ನೀರನ್ನು ಬತ್ತಿಹೋಗ ಮಾಡಿದ್ದನ್ನೂ ಯೊರ್ದನಿಗೆ ಆಚೆಯಲ್ಲಿದ್ದ ಅಮೋರಿ ಯರ ಇಬ್ಬರು ಅರಸುಗಳಾದ ಸೀಹೋನನನ್ನು ಓಗನನ್ನು ನೀವು ಸಂಪೂರ್ಣ ನಿರ್ಮೂಲ ಮಾಡಿದ್ದನ್ನೂ ನಾವು ಕೇಳಿದ್ದೇವೆ. ಇವುಗಳನ್ನು ನಾವು ಕೇಳಿದಾಗಲೇ ನಮ್ಮ ಹೃದಯವು ಕರಗಿಹೋಯಿತು. ಇನ್ನು ನಿಮ್ಮ ನಿಮಿತ್ತ ಯಾವನಲ್ಲಿಯೂ ಧೈರ್ಯವಿಲ್ಲದೆ ಹೋಯಿತು. ಯಾಕಂದರೆ ನಿಮ್ಮ ದೇವರಾದ ಕರ್ತನೇ ಮೇಲಿರುವ ಆಕಾಶದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾನೆ. ಈಗ ನಾನು ನಿಮಗೆ ದಯ ತೋರಿಸಿದ್ದರಿಂದ ನೀವು ನನಗೆ ಮತ್ತು ನನ್ನ ತಂದೆಯ ಮನೆಗೆ ದಯತೋರಿಸಬೇಕು. ನನಗೆ ಸತ್ಯವಾದ ಗುರುತನ್ನು ಕೊಡಬೇಕು. ನನ್ನ ತಂದೆತಾಯಿಯನ್ನೂ ಸಹೋದರ ಸಹೋದರಿಯರನ್ನೂ ಅವರಿಗೆ ಇರುವದೆ ಲ್ಲವನ್ನೂ ಜೀವದಿಂದಿರಿಸಿ ನಮ್ಮ ಪ್ರಾಣಗಳನ್ನು ಸಾವಿ ನಿಂದ ಉಳಿಸುವದಾಗಿ ಕರ್ತನ ಮೇಲೆ ಪ್ರಮಾಣ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ ಅಂದಳು. ಆ ಮನುಷ್ಯರು ಆಕೆಗೆ--ನೀನು ಈ ನಮ್ಮ ಕಾರ್ಯವನ್ನು ಬಹಿರಂಗಮಾಡದೆ ಇದ್ದರೆ ನಮ್ಮ ಪ್ರಾಣವು ನಿಮಗೋಸ್ಕರ ಇರುವದು. ಕರ್ತನು ನಮಗೆ ಈ ದೇಶವನ್ನು ಕೊಟ್ಟಾಗ ಸತ್ಯದಿಂದಲೂ ದಯ ದಿಂದಲೂ ನಡೆದುಕೊಳ್ಳುವೆವು ಅಂದರು. ಆಗ ಅವರನ್ನು ಹಗ್ಗದಿಂದ ಕಿಟಿಕಿಯ ಮೂಲಕ ಇಳಿಸಿ ಬಿಟ್ಟಳು. ಯಾಕಂದರೆ ಆಕೆಯ ಮನೆಯು ಪಟ್ಟಣದ ಗೋಡೆಯ ಮೇಲೆ ಇತ್ತು. ಗೋಡೆಯ ಮೇಲೆ ಆಕೆಯು ವಾಸವಾಗಿದ್ದಳು. ನಿಮ್ಮನ್ನು ಹಿಂದಟ್ಟುವವರು ನಿಮಗೆ ಅಡ್ಡಬಾರದ ಹಾಗೆ ನೀವು ಬೆಟ್ಟಕ್ಕೆ ಹೋಗಿ ಅವರು ತಿರಿಗಿ ಬರುವ ವರೆಗೂ ಅಲ್ಲಿ ಮೂರು ದಿವಸ ಅಡಗಿ ಕೊಂಡಿದ್ದು ತರುವಾಯ ನಿಮ್ಮ ಮಾರ್ಗವಾಗಿ ಹೋಗಿರಿ ಅಂದಳು. ಆಗ ಆ ಮನುಷ್ಯರು ಆಕೆಗೆನೀನು ನಮಗೆ ಇಟ್ಟ ನಿನ್ನ ಆಣೆಯ ನಿಮಿತ್ತ ನಾವು ನಿರಪರಾಧಿಗಳಾಗಿರಬೇಕು. ಇಗೋ, ನಾವು ದೇಶ ದಲ್ಲಿ ಪ್ರವೇಶಿಸುವಾಗ ನೀನು ನಮ್ಮನ್ನು ಕಿಟಿಕಿಯಿಂದ ಇಳಿಯಬಿಟ್ಟ ಈ ಕೆಂಪು ನೂಲಿನ ದಾರವನ್ನು ಕಟ್ಟಿ ನಿನ್ನ ತಂದೆತಾಯಿಯನ್ನೂ ಸಹೋದರರನ್ನೂ ನಿನ್ನ ತಂದೆಯ ಮನೆಯವರೆಲ್ಲರನ್ನೂ ನಿನ್ನ ಮನೆಯಲ್ಲಿ ಕೂಡಿಸಿಕೊಳ್ಳಬೇಕು. ಯಾವನಾದರೂ ನಿನ್ನ ಮನೆಯ ಬಾಗಲಿಂದ ಹೊರಟು ಬೀದಿಗೆ ಬಂದರೆ ಅವನ ರಕ್ತವು ಅವನ ತಲೆಯಮೇಲೆ ಇರುವದು. ನಾವು ನಿರಪರಾಧಿಗಳಾಗಿರುವೆವು. ಆದರೆ ನಿನ್ನ ಸಂಗಡ ಮನೆಯಲ್ಲಿ ಇರುವ ಯಾವನ ಮೇಲಾದರೂ ಕೈ ಹಾಕಲ್ಪಟ್ಟರೆ ಅವನ ರಕ್ತದ ಅಪರಾಧವು ನಮ್ಮ ತಲೆಯ ಮೇಲೆ ಇರುವದು. ಇದಲ್ಲದೆ ಈ ನಮ್ಮ ಕಾರ್ಯ ವನ್ನು ತಿಳಿಸಿದರೆ ನೀನು ನಮಗೆ ಇಟ್ಟ ಆಣೆಗೆ ನಾವು ಬಿಡುಗಡೆಯಾಗಿರುವೆವು ಅಂದರು. ಅದಕ್ಕೆ ಆಕೆಯು--ನಿಮ್ಮ ಮಾತುಗಳ ಪ್ರಕಾರವೇ ಆಗಲಿ ಎಂದು ಹೇಳಿ ಅವರನ್ನು ಕಳುಹಿಸಿಬಿಟ್ಟಳು; ಅವರು ಹೋದಾಗ ಆ ಕೆಂಪು ನೂಲಿನ ದಾರವನ್ನು ಕಿಟಿಕಿಯಲ್ಲಿ ಕಟ್ಟಿದಳು. ಅವರು ಹೋಗಿ ಬೆಟ್ಟಕ್ಕೆ ಸೇರಿ ಹಿಂದಟ್ಟುವವರು ತಿರಿಗಿ ಬರುವ ಪರಿಯಂತರ ಮೂರು ದಿವಸ ಅಲ್ಲೇ ಇದ್ದರು. ಹಿಂದಟ್ಟುವವರು ಮಾರ್ಗದಲ್ಲೆಲ್ಲಾ ಅವ ರನ್ನು ಹುಡುಕಿ ಕಾಣದೆ ಹೋದರು. ಆ ಇಬ್ಬರು ಮನುಷ್ಯರು ಹಿಂತಿರುಗಿಕೊಂಡು ಬೆಟ್ಟದಿಂದ ಇಳಿದು ನದಿಯನ್ನು ದಾಟಿ ನೂನನ ಮಗನಾದ ಯೆಹೋಶು ವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ಅವನಿಗೆ ವಿವರಿಸಿದರು.ಅವರು ಯೆಹೋಶುವನಿಗೆ--ನಿಶ್ಚಯ ವಾಗಿ ಕರ್ತನು ಆ ದೇಶವನ್ನೆಲ್ಲಾ ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು. ದೇಶದ ನಿವಾಸಿಗಳೆಲ್ಲರು ನಮ್ಮ ನಿಮಿತ್ತ ಕಂಗೆಟ್ಟು ಹೋಗಿದ್ದಾರೆ ಎಂದು ಹೇಳಿದರು. ಅವರು ಯೆಹೋಶುವನಿಗೆ--ನಿಶ್ಚಯ ವಾಗಿ ಕರ್ತನು ಆ ದೇಶವನ್ನೆಲ್ಲಾ ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು. ದೇಶದ ನಿವಾಸಿಗಳೆಲ್ಲರು ನಮ್ಮ ನಿಮಿತ್ತ ಕಂಗೆಟ್ಟು ಹೋಗಿದ್ದಾರೆ ಎಂದು ಹೇಳಿದರು.
- 2 Samuel 17:19–20 2 ಸಮುವೇಲನು 17:19–20ಆಗ ಆ ಮನೆ ಯವಳು ಬಾವಿಯ ಮೇಲೆ ಒಂದು ವಸ್ತ್ರವನ್ನು ಹಾಸಿ ನುಚ್ಚನ್ನು ಹರವಿಬಿಟ್ಟಳು. ಆದದರಿಂದ ಕಾರ್ಯ ತಿಳಿ ಯದೆ ಹೋಯಿತು. ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು--ಅಹೀಮಾ ಚನೂ ಯೋನಾತಾನನೂ ಎಲ್ಲಿ ಎಂದು ಕೇಳಿದಾಗ ಅವಳು ಅವರಿಗೆ--ಹಳ್ಳವನ್ನು ದಾಟಿಹೋದರು ಅಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂತಿರುಗಿದರು.
- 1 Samuel 21:2 1 ಸಮುವೇಲನು 21:2ದಾವೀದನು ಯಾಜಕನಾದ ಅಹೀಮೆಲೆಕನಿಗೆ--ಅರಸನು ನನಗೆ ಒಂದು ಕಾರ್ಯವನ್ನು ಆಜ್ಞಾಪಿಸಿ--ನಾನು ಕಳುಹಿಸಿದ ಕಾರ್ಯವು ನಿನಗೆ ಆಜ್ಞಾಪಿಸಿದ್ದು ಇಂಥಾದ್ದೆಂದು ಒಬ್ಬರಿಗೂ ತಿಳಿಯ ಬಾರದೆಂದು ನನಗೆ ಹೇಳಿದನು. ಇಂಥಿಂಥ ಸ್ಥಳಗಳಿಗೆ ಹೋಗಬೇಕೆಂದು ನಾನು ನನ್ನ ಕೆಲಸದವರಿಗೆ ನೇಮಿಸಿದ್ದೇನೆ.