Exodus · chapter 10 · verse 25
Exodus 10:25 in Kannada
ಅದಕ್ಕೆ ಮೋಶೆಯು ಅವನಿಗೆ--ನಮ್ಮ ದೇವರಾದ ಕರ್ತನಿಗೆ ಅರ್ಪಿಸುವದಕ್ಕೆ ನೀನು ನಮ್ಮ ಕೈಯಲ್ಲಿ ಬಲಿಗಳನ್ನೂ ದಹನಬಲಿಗಳನ್ನೂ ಕೊಡಬೇಕು.
Adakke mosheyu avanige--namma devaraada kartanige arpisuvadakke neenu namma kaiyalli baligalannoo dahanabaligalannoo kodabeku.
Exodus 10:25 in English
- King James Version (KJV)
- And Moses said, Thou must give us also sacrifices and burnt offerings, that we may sacrifice unto the LORD our God.
- World English Bible (WEB)
- Moses said, “You must also give into our hand sacrifices and burnt offerings, that we may sacrifice to the LORD our God.
- American Standard Version (ASV)
- And Moses said, Thou must also give into our hand sacrifices and burnt-offerings, that we may sacrifice unto Jehovah our God.
- Bible in Basic English (BBE)
- But Moses said, You will have to let us take burned offerings to put before the Lord our God.
- Darby Translation (DBY)
- And Moses said, Thou must give also sacrifices and burnt-offerings into our hands, that we may sacrifice to Jehovah our God.
- Webster's Bible (WBS)
- And Moses said, Thou must give us also sacrifices, and burnt-offerings, that we may sacrifice to the LORD our God.
- Young's Literal Translation (YLT)
- and Moses saith, 'Thou also dost give in our hand sacrifices and burnt-offerings, and we have prepared for Jehovah our God;
Read in context
- 23ಮೂರು ದಿನಗಳ ವರೆಗೆ ಅವರು ಒಬ್ಬರನ್ನೊಬ್ಬರು ನೋಡಲಿಲ್ಲ, ಯಾರೂ ತಮ್ಮ ಸ್ಥಳ ವನ್ನು ಬಿಟ್ಟು ಏಳಲೂ ಇಲ್ಲ. ಆದರೆ ಇಸ್ರಾಯೇಲ್ ಮಕ್ಕಳಿಗೆಲ್ಲಾ ಅವರು ವಾಸಿಸುವ ಸ್ಥಳದಲ್ಲಿ ಅವರಿಗೆ ಬೆಳಕಿತ್ತು.
- 24ಆಗ ಫರೋಹನು ಮೋಶೆಯನ್ನು ಕರೆ ಯಿಸಿ ಅವನಿಗೆ--ನೀವು ಹೋಗಿ ಕರ್ತನಿಗೆ ಸೇವೆ ಮಾಡಿರಿ, ನಿಮ್ಮ ಕುರಿದನಗಳು ಮಾತ್ರ ಇಲ್ಲಿರಲಿ. ನಿಮ್ಮ ಮಕ್ಕಳೂ ನಿಮ್ಮ ಸಂಗಡ ಹೋಗಲಿ ಅಂದನು.
- 25ಅದಕ್ಕೆ ಮೋಶೆಯು ಅವನಿಗೆ--ನಮ್ಮ ದೇವರಾದ ಕರ್ತನಿಗೆ ಅರ್ಪಿಸುವದಕ್ಕೆ ನೀನು ನಮ್ಮ ಕೈಯಲ್ಲಿ ಬಲಿಗಳನ್ನೂ ದಹನಬಲಿಗಳನ್ನೂ ಕೊಡಬೇಕು.
- 26ನಮ್ಮ ಪಶುಗಳನ್ನೂ ನಾವು ನಮ್ಮ ಸಂಗಡ ತೆಗೆದು ಕೊಂಡು ಹೋಗುವೆವು. ಒಂದು ಗೊರಸೆಯಾದರೂ ಬಿಡುವದಿಲ್ಲ. ಯಾಕಂದರೆ ನಮ್ಮ ದೇವರಾದ ಕರ್ತನಿಗೆ ಆರಾಧನೆ ಮಾಡುವದಕ್ಕೆ ಅವುಗಳಿಂದಲೇ ಆರಿಸ ಬೇಕು. ಕರ್ತನಿಗೆ ಯಾವ ಸೇವೆಮಾಡಬೇಕೆಂಬದು ಅಲ್ಲಿಗೆ ಹೋಗುವವರೆಗೂ ನಮಗೆ ತಿಳಿಯುವದಿಲ್ಲ ಅಂದನು.
- 27ಆದರೆ ಕರ್ತನು ಫರೋಹನ ಹೃದಯ ವನ್ನು ಕಠಿಣ ಮಾಡಿದ್ದರಿಂದ ಅವನು ಅವರನ್ನು ಕಳುಹಿಸಲಾರದೆ ಹೋದನು.
Cross references
- Exodus 29:1–46 ವಿಮೋಚನಕಾಂಡ 29:1–46ಅವರು ನನಗೆ ಯಾಜಕ ಸೇವೆಮಾಡು ವಂತೆ ಅವರನ್ನು ಶುದ್ಧಮಾಡುವ ಹಾಗೆ ನೀನು ಅವರಿಗೆ ಮಾಡಬೇಕಾದದ್ದೇನಂದರೆ--ಒಂದು ಹೋರಿಯನ್ನೂ ದೋಷವಿಲ್ಲದ ಎರಡು ಟಗರುಗಳನೂ ವಂತೆ ಅವರನ್ನು ಶುದ್ಧಮಾಡುವ ಹಾಗೆ ನೀನು ಅವರಿಗೆ ಮಾಡಬೇಕಾದದ್ದೇನಂದರೆ--ಒಂದು ಹೋರಿಯನ್ನೂ ದೋಷವಿಲ್ಲದ ಎರಡು ಟಗರುಗಳನೂ ಇವುಗಳನ್ನು ಒಂದೇ ಪುಟ್ಟಿಯಲ್ಲಿ ಇಟ್ಟು ಕೊಂಡು ಹೋರಿ ಮತ್ತು ಎರಡು ಟಗರುಗಳ ಸಂಗಡ ತಕ್ಕೊಂಡು ಬರಬೇಕು. ಆರೋನನನ್ನೂ ಅವನ ಕುಮಾರರನ್ನೂ ಸಭೆಯ ಗುಡಾರದ ಬಾಗಲಿನ ಬಳಿಗೆ ತಂದು ನೀರಿನಲ್ಲಿ ಅವರನ್ನು ತೊಳೆಯಬೇಕು. ತರು ವಾಯ ಆ ವಸ್ತ್ರಗಳನ್ನು ತಕ್ಕೊಂಡು ಆರೋನನಿಗೆ ಅಂಗಿಯನ್ನೂ ಎಫೋದಿನ ನಿಲುವಂಗಿಯನ್ನೂ ಎಫೋ ದನ್ನೂ ಎದೆಪದಕವನ್ನೂ ತೊಡಿಸಿ ಎಫೋದಿನ ವಿಚಿತ್ರ ವಾದ ನಡುಕಟ್ಟನ್ನು ಅವನಿಗೆ ಕಟ್ಟಿ ಅವನ ತಲೆಗೆ ಮುಂಡಾಸವನ್ನು ಇಟ್ಟು ಮುಂಡಾಸದ ಮೇಲೆ ಪರಿಶುದ್ಧ ಕಿರೀಟವನ್ನು ಇಟ್ಟು ಅಭಿಷೇಕಿಸುವ ಎಣ್ಣೆಯನ್ನು ತೆಗೆದು ಕೊಂಡು ಅವನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಬೇಕು. ನೀನು ಅವನ ಕುಮಾರರನ್ನು ಕರಕೊಂಡು ಬಂದು ಅವರಿಗೆ ಮೇಲಂಗಿಗಳನ್ನು ತೊಡಿಸಿ ಆರೋನನಿಗೂ ಅವನ ಕುಮಾರರಿಗೂ ನಡುಕಟ್ಟುಗಳನ್ನು ಕಟ್ಟಿ ಅವರಿಗೆ ಕುಲಾಯಿಗಳನ್ನು ಇಡಬೇಕು. ಹೀಗೆ ಅವರಿಗೆ ಯಾಜಕ ಸೇವೆಯು ಶಾಶ್ವತ ಕಟ್ಟಳೆಯಾಗಿರುವದು. ಆರೋನ ನನ್ನೂ ಅವನ ಕುಮಾರರನ್ನೂ ನೀನು ಪ್ರತಿಷ್ಠೆ ಮಾಡಬೇಕು. ಇದಲ್ಲದೆ ಆ ಹೋರಿಯನ್ನು ಸಭೆಯ ಗುಡಾರದ ಮುಂದೆ ತರಬೇಕು. ಆರೋನನೂ ಅವನ ಕುಮಾರರೂ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. ತರುವಾಯ ನೀನು ಆ ಹೋರಿಯನ್ನು ಕರ್ತನ ಮುಂದೆ ಸಭೆಯ ಗುಡಾರದ ಬಾಗಲಲ್ಲಿ ವಧಿಸಬೇಕು. ನೀನು ಹೋರಿಯ ರಕ್ತವನ್ನು ತೆಗೆದುಕೊಂಡು ನಿನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ರಕ್ತವನ್ನೆಲ್ಲಾ ಯಜ್ಞವೇದಿಯ ಅಡಿಯಲ್ಲಿ ಸುರಿಯಬೇಕು. ನೀನು ಕರುಳುಗಳನ್ನೂ ಅವುಗಳ ಮೇಲೆ ಇರುವ ಎಲ್ಲಾ ಕೊಬ್ಬನ್ನೂ ಕಲಿಜದ ಮೇಲೆ ಬರುವ ಕೊಬ್ಬನ್ನೂ ಎರಡು ಮೂತ್ರಜನಕಾಂಗಗಳನ್ನೂ ಅವುಗಳ ಮೇಲೆ ಇರುವ ಕೊಬ್ಬನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಡಬೇಕು. ಇದಲ್ಲದೆ ಹೋರಿಯ ಮಾಂಸ ವನ್ನೂ ಅದರ ಚರ್ಮವನ್ನೂ ಸಗಣಿಯನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಡಬೇಕು. ಅದು ಪಾಪದ ಬಲಿಯಾಗಿದೆ. ನೀನು ಒಂದು ಟಗರನ್ನು ಸಹ ತೆಗೆದುಕೊಳ್ಳ ಬೇಕು. ಆರೋನನೂ ಅವನ ಕುಮಾರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. ತರು ವಾಯ ಆ ಟಗರನ್ನು ನೀನು ವಧಿಸಿ ಅದರ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಬೇಕು. ಇದಲ್ಲದೆ ಆ ಟಗರನ್ನು ತುಂಡು ತುಂಡಾಗಿ ಕಡಿದು ಅದರ ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅದರ ತುಂಡುಗಳನ್ನು ತಲೆಯ ಸಂಗಡ ಇಡಬೇಕು. ಆ ಟಗರನ್ನು ಯಜ್ಞವೇದಿಯ ಮೇಲೆ ಸುಡಬೇಕು, ಅದು ಕರ್ತನಿಗೆ ದಹನಬಲಿಯಾಗಿದೆ. ಅದು ಕರ್ತನಿಗೆ ಸುವಾಸನೆಯ ದಹನಬಲಿಯಾಗಿದೆ. ಇನ್ನೊಂದು ಟಗರನ್ನು ನೀನು ತಂದಾಗ ಆರೋ ನನೂ ಅವನ ಕುಮಾರರೂ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. ತರುವಾಯ ನೀನು ಅದನ್ನು ವಧಿಸಿ ಅದರ ರಕ್ತವನ್ನು ಆರೋನನ ಮತ್ತು ಅವನ ಕುಮಾರರ ಬಲ ಕಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೂ ಹಚ್ಚಿ ಮಿಕ್ಕ ರಕ್ತವನ್ನು ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು. ಆರೋನನೂ ಅವನ ವಸ್ತ್ರಗಳೂ ಅವನೊಂದಿಗೆ ಅವನ ಕುಮಾರರೂ ಅವರ ವಸ್ತ್ರಗಳೂ ಪರಿಶುದ್ಧ ವಾಗುವ ಹಾಗೆ ಯಜ್ಞವೇದಿಯ ಮೇಲಿರುವ ರಕ್ತವನ್ನೂ ಅಭಿಷೇಕ ತೈಲವನ್ನೂ ತೆಗೆದುಕೊಂಡು ಆರೋನನ ಮೇಲೆಯೂ ಅವನ ವಸ್ತ್ರಗಳ ಮೇಲೆಯೂ ಅವನ ಕುಮಾರರ ಮೇಲೆಯೂ ಅವರ ವಸ್ತ್ರಗಳ ಮೇಲೆಯೂ ನೀನು ಚಿಮುಕಿಸಬೇಕು. ಇದಲ್ಲದೆ ಆ ಟಗರಿನ ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಕೊಬ್ಬನ್ನೂ ಕಲಿಜದ ಮೇಲಿ ರುವ ಪರೆಯನ್ನೂ ಮೂತ್ರಜನಕಾಂಗಗಳನ್ನೂ ಅವು ಗಳ ಮೇಲಿರುವ ಕೊಬ್ಬನ್ನೂ ಬಲ ತೊಡೆಯನ್ನೂ ತೆಗೆದುಕೊಳ್ಳಬೇಕು. ಯಾಕಂದರೆ ಅದು ಪ್ರತಿಷ್ಠೆಯ ಟಗರು. ಕರ್ತನ ಮುಂದಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಒಂದು ರೊಟ್ಟಿಯನ್ನೂ ಎಣ್ಣೆಯ ಒಂದು ಹೋಳಿಗೆಯನ್ನೂ ಒಂದು ಪೂರಿ ಯನ್ನೂ ನೀನು ತೆಗೆದುಕೊಂಡು ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಕುಮಾರರ ಕೈಗಳಿಗೆ ಕೊಟ್ಟು ಅವರು ಕರ್ತನ ಮುಂದೆ ಅದನ್ನು ತೂಗು ಅರ್ಪಣೆಗಾಗಿ ತೂಗಬೇಕು. ನೀನು ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಯಜ್ಞವೇದಿಯ ಮೇಲೆ ದಹನಬಲಿ ಯಾಗಿ ಕರ್ತನ ಮುಂದೆ ಸುವಾಸನೆಗೋಸ್ಕರ ದಹಿಸ ಬೇಕು. ಅದು ಕರ್ತನಿಗೆ ಬೆಂಕಿಯಿಂದ ಮಾಡಿದ ಅರ್ಪಣೆ. ಇದಲ್ಲದೆ ಆರೋನನು ಪ್ರತಿಷ್ಠೆಯ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ಕರ್ತನ ಮುಂದೆ ತೂಗು ಅರ್ಪಣೆಗಾಗಿ ತೂಗಬೇಕು. ಅದು ನಿನ್ನ ಪಾಲಾಗಿರುವದು. ನೀನು ಟಗರಿನ ಎದೆಯ ಭಾಗದ ಆಡಿಸುವ ಅರ್ಪಣೆಯನ್ನು ಎತ್ತಿದ ಬಲದ ಮುಂದೊ ಡೆಯನ್ನು ಆರೋನನ ಮತ್ತು ಅವನ ಕುಮಾರರ ಪ್ರತಿಷ್ಠೆಗಾಗಿ ಎತ್ತಿದ್ದನ್ನೂ ಪರಿಶುದ್ಧ ಮಾಡು. ಅದು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಮಕ್ಕಳಿಗೆ ನಿತ್ಯ ಕಟ್ಟಳೆಯಾಗಿರತಕ್ಕದ್ದು. ಯಾಕಂದರೆ ಅದು ಎತ್ತುವ ಅರ್ಪಣೆಯಾಗಿದೆ. ಇಸ್ರಾಯೇಲ್ ಮಕ್ಕಳಿಂದ ಎತ್ತುವ ಅರ್ಪಣೆಯೂ ಅವರ ಸಮಾ ಧಾನದ ಬಲಿಗಳ ಅರ್ಪಣೆಗಳಿಂದ ಅವರು ಕರ್ತನಿಗೆ ಎತ್ತುವ ಅರ್ಪಣೆಯೂ ಆಗಿರಬೇಕು. ಇದಲ್ಲದೆ ಆರೋನನಿಗೆ ಇದ್ದ ಪರಿಶುದ್ಧ ವಸ್ತ್ರಗಳು ಅವನ ತರುವಾಯ ಅವನ ಕುಮಾರರಿಗೆ ಆಗಬೇಕು. ಅವರು ಅವುಗಳನ್ನು ತೊಟ್ಟುಕೊಂಡು ಅಭಿಷೇಕಿಸಲ್ಪಟ್ಟು ಪ್ರತಿಷ್ಠಿಸಲ್ಪಡಬೇಕು. ಅವನ ಬದಲಾಗಿ ಅವನ ಮಗನು ಯಾಜಕತ್ವವನ್ನು ನಡಿಸಿ ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವಂತೆ ಬರುವದಕ್ಕಿರುವವನು ಅವುಗಳನ್ನು ಏಳು ದಿನಗಳ ವರೆಗೆ ತೊಟ್ಟುಕೊಳ್ಳಬೇಕು. ಪ್ರತಿಷ್ಠೆಯ ಟಗರನ್ನು ತೆಗೆದುಕೊಂಡು ನೀನು ಅದರ ಮಾಂಸವನ್ನು ಪರಿಶುದ್ಧ ಸ್ಥಳದಲ್ಲಿ ಬೇಯಿಸು. ಆರೋನನೂ ಅವನ ಕುಮಾರರೂ ಟಗರಿನ ಮಾಂಸ ವನ್ನೂ ಪುಟ್ಟಿಯಲ್ಲಿರುವ ರೊಟ್ಟಿಯನ್ನೂ ಸಭೆಯ ಗುಡಾ ರದ ಬಾಗಲಿನ ಬಳಿಯಲ್ಲಿ ಊಟಮಾಡಬೇಕು. ಅವ ರನ್ನು ಪ್ರತಿಷ್ಠೆಮಾಡುವದಕ್ಕೋಸ್ಕರ ಮತ್ತು ಪರಿಶುದ್ಧ ಮಾಡುವದಕ್ಕೋಸ್ಕರ ಅವರಿಗಾಗಿ ಪ್ರಾಯಶ್ಚಿತ್ತ ಮಾಡಿ ದವುಗಳನ್ನು ಅವರೇ ಊಟಮಾಡಬೇಕು. ಅನ್ಯರು ಅವುಗಳನ್ನು ಉಣ್ಣಬಾರದು, ಯಾಕಂದರೆ ಅವುಗಳು ಪರಿಶುದ್ಧವಾದವುಗಳು. ಪ್ರತಿಷ್ಠೆಯ ಮಾಂಸದ ಲ್ಲಿಯೂ ರೊಟ್ಟಿಯಲ್ಲಿಯೂ ಮರುದಿನದ ವರೆಗೆ ಏನಾದರೂ ಮಿಕ್ಕಿದ್ದರೆ ಅದನ್ನು ಬೆಂಕಿಯಿಂದ ಸುಡ ಬೇಕು. ಅದು ಪರಿಶುದ್ಧವಾಗಿರುವದರಿಂದ ಅದನ್ನು ಊಟ ಮಾಡಬಾರದು. ಹೀಗೆ ಆರೋನನಿಗೂ ಅವನ ಕುಮಾರರಿಗೂ ನಾನು ನಿನಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರ ನಡಿಸಿ ಏಳು ದಿವಸ ಅವರನ್ನು ಪ್ರತಿಷ್ಠೆಮಾಡಬೇಕು. ಪಾಪದ ಯಜ್ಞವಾದ ಹೋರಿಯನ್ನು ಪ್ರತಿದಿನ ಪ್ರಾಯಶ್ಚಿತ್ತಕ್ಕಾಗಿ ತಂದು ಯಜ್ಞವೇದಿಗಾಗಿ ಪ್ರಾಯ ಶ್ಚಿತ್ತ ಮಾಡಿದ ಮೇಲೆ ಅದರ ದೋಷವನ್ನು ಪರಿ ಹರಿಸಿ ಅದನ್ನು ಪವಿತ್ರಮಾಡುವದಕ್ಕೆ ಅದನ್ನು ಅಭಿಷೇಕಿಸಬೇಕು. ಏಳು ದಿವಸ ಯಜ್ಞವೇದಿಗೋಸ್ಕರ ಪ್ರಾಯಶ್ಚಿತ್ತ ಮಾಡಿ ಅದನ್ನು ಪವಿತ್ರಮಾಡಬೇಕು. ಆಗ ಯಜ್ಞ ವೇದಿಯು ಅತಿಪರಿಶುದ್ಧವಾಗಿರುವದು. ಯಜ್ಞವೇದಿ ಯನ್ನು ಮುಟ್ಟುವದೆಲ್ಲಾ ಪವಿತ್ರವಾಗಿರಬೇಕು. ಇದಲ್ಲದೆ ಯಜ್ಞವೇದಿಯ ಮೇಲೆ ನೀನು ಅರ್ಪಿಸ ಬೇಕಾದದ್ದು ಇದೇ; ಒಂದು ವರುಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಡದೆ ಅರ್ಪಿಸಬೇಕು. ಒಂದು ಕುರಿಮರಿಯನ್ನು ಬೆಳಿಗ್ಗೆ ಅರ್ಪಿಸಬೇಕು, ಮತ್ತೊಂದನ್ನು ಸಾಯಂಕಾಲ ಅರ್ಪಿಸಬೇಕು. ಹಿನ್ನಿನ ನಾಲ್ಕನೆಯ ಒಂದು ಪಾಲಿನಷ್ಟು ಹಿಂಡಿದ ಎಣ್ಣೆ ಹೊಯಿದ ನಯವಾದ ಹಿಟ್ಟಿನ ಹತ್ತನೆಯ ಪಾಲೂ ಹಿನ್ನಿನ ನಾಲ್ಕನೆಯ ಪಾಲಿನಷ್ಟು ದ್ರಾಕ್ಷಾರಸದ ಪಾನ ದರ್ಪಣೆಯೂ ಒಂದು ಕುರಿಮರಿಯೊಂದಿಗೆ ಅರ್ಪಿಸ ಬೇಕು. ಇನ್ನೊಂದು ಕುರಿಮರಿಯನ್ನು ಸಾಯಂಕಾಲ ದಲ್ಲಿ ಅರ್ಪಿಸಬೇಕು. ಉದಯದ ಆಹಾರ ಕಾಣಿಕೆ ಯಂತೆಯೂ ಅದರ ಪಾನದರ್ಪಣೆಯಂತೆಯೂ ಇದಕ್ಕೂ ಮಾಡಿ ಕರ್ತನಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಅರ್ಪಿಸಬೇಕು. ಇದು ತಲತಲಾಂತರಗಳಲ್ಲಿಯೂ ನಿತ್ಯಕ್ಕೂ ಸಭೆಯ ಗುಡಾರದ ಮುಂದೆ ಕರ್ತನ ಸನ್ನಿಧಿಯಲ್ಲಿ ನಾನು ನಿಮ್ಮ ಸಂಗಡ ಮಾತನಾಡುವದಕ್ಕೆ ಸಂಧಿಸುವಲ್ಲಿ ಇದೇ ನಿತ್ಯವಾದ ದಹನಬಲಿಯಾಗಿರುವದು. ಅಲ್ಲಿ ನಾನು ಇಸ್ರಾಯೇಲ್ ಮಕ್ಕಳನ್ನು ಸಂಧಿಸುವೆನು. ಗುಡಾರವು ನನ್ನ ಮಹಿಮೆಯಿಂದ ಪವಿತ್ರವಾಗುವದು. ಸಭೆಯ ಗುಡಾರವನ್ನೂ ಯಜ್ಞವೇದಿಯನ್ನೂ ಪರಿಶುದ್ಧಮಾಡುವೆನು. ಆರೋನನನ್ನೂ ಅವನ ಕುಮಾರರನ್ನೂ ನನಗೆ ಯಾಜಕ ಸೇವೆಮಾಡುವಂತೆ ಪವಿತ್ರಮಾಡುವೆನು. ಇಸ್ರಾಯೇಲ್ ಮಕ್ಕಳ ಮಧ್ಯ ದಲ್ಲಿ ನಾನು ವಾಸಮಾಡಿ ಅವರಿಗೆ ದೇವರಾಗಿರುವೆನು.ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ ಅವರ ದೇವರಾದ ಕರ್ತನು ನಾನೇ ಎಂದು ಅವರಿಗೆ ತಿಳಿಯುವದು. ನಾನೇ ಅವರ ದೇವರಾದ ಕರ್ತನು. ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ ಅವರ ದೇವರಾದ ಕರ್ತನು ನಾನೇ ಎಂದು ಅವರಿಗೆ ತಿಳಿಯುವದು. ನಾನೇ ಅವರ ದೇವರಾದ ಕರ್ತನು.
- Leviticus 16:9 ಯಾಜಕಕಾಂಡ 16:9ಆರೋನನು ಕರ್ತನ ಚೀಟು ಬಿದ್ದ ಆಡನ್ನು ತಂದು ಅದನ್ನು ಪಾಪಬಲಿಗಾಗಿ ಸಮರ್ಪಿಸ ಬೇಕು.
- Leviticus 9:22 ಯಾಜಕಕಾಂಡ 9:22ಆರೋನನು ಜನರ ಕಡೆಗೆ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿ ಪಾಪದ ಬಲಿಯನ್ನೂ ದಹನಬಲಿಯನ್ನೂ ಸಮಾಧಾನದ ಬಲಿಗಳನ್ನೂ ಸಮರ್ಪಿಸಿದ ಮೇಲೆ ಇಳಿದು ಬಂದನು.
- Exodus 36:1–38 ವಿಮೋಚನಕಾಂಡ 36:1–38ತರುವಾಯ ಬೆಚಲೇಲನೂ ಒಹೋಲಿ ಯಾಬನೂ ಪರಿಶುದ್ಧ ಸ್ಥಳದ ಸೇವೆ ಗೋಸ್ಕರ ಎಲ್ಲಾ ವಿಧವಾದ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿಯುವ ಹಾಗೆ ಕರ್ತನಿಂದ ಜ್ಞಾನ ವಿವೇಕಗಳನ್ನು ಹೊಂದಿದ ಹೃದಯದವರೆಲ್ಲರೂ ಕರ್ತನು ಆಜ್ಞಾಪಿಸಿದಂತೆಯೇ ಎಲ್ಲವುಗಳನ್ನು ಮಾಡಿ ದರು. ತರುವಾಯ ಪರಿಶುದ್ಧ ಸ್ಥಳದ ಸೇವೆಗೋಸ್ಕರ ಪ್ರತಿ ವಿಧವಾದ ಕೆಲಸ ಮಾಡುವದನ್ನು ತಿಳುಕೊಳ್ಳುವ ದಕ್ಕಾಗಿ ಆತನು ಜ್ಞಾನ ವಿವೇಕಗಳನ್ನು ಅನುಗ್ರಹಿಸಿದ ಬೆಚಲೇಲನೂ ಒಹೋಲಿಯಾಬನೂ ಜ್ಞಾನ ವಿವೇಕ ವಿದ್ದವರೆಲ್ಲರೂ ಎಲ್ಲವನ್ನೂ ಕರ್ತನು ಆಜ್ಞಾಪಿಸಿದಂತೆ ಮಾಡಿದರು. ಬೆಚಲೇಲನನ್ನೂ ಒಹೋಲಿಯಾಬನನ್ನೂ ಕರ್ತನು ಯಾರ ಹೃದಯಗಳಲ್ಲಿ ಜ್ಞಾನವಿಟ್ಟನೋ ಆ ಜ್ಞಾನ ಹೃದಯವಿದ್ದ ಪ್ರತಿಯೊಬ್ಬನನ್ನೂ ಆ ಕೆಲಸ ಮಾಡುವದಕ್ಕೆ ಹೃದಯವು ಪ್ರೇರೇಪಿಸಲ್ಪಟ್ಟ ಪ್ರತಿ ಯೊಬ್ಬನನ್ನೂ ಮೋಶೆಯು ಕರೆದನು. ಆಗ ಇಸ್ರಾ ಯೇಲ್ ಮಕ್ಕಳು ಪರಿಶುದ್ಧ ಆಲಯದ ಸೇವೆಯ ಕೆಲಸಕ್ಕೋಸ್ಕರವೂ ಅದನ್ನು ಮಾಡಿಸುವದಕ್ಕೋಸ್ಕ ರವೂ ತಂದ ಕಾಣಿಕೆಗಳನ್ನೆಲ್ಲಾ ಮೋಶೆಯ ಬಳಿಯಿಂದ ಅವರು ತಕ್ಕೊಂಡರು. ಇದಲ್ಲದೆ ಅವರು ಪ್ರತಿ ಉದಯ ದಲ್ಲಿ ಅವನಿಗೆ ಇನ್ನೂ ಉಚಿತವಾದ ಕಾಣಿಕೆಗಳನ್ನು ತರುತ್ತಿದ್ದರು. ಆಗ ಪರಿಶುದ್ಧ ಸ್ಥಳದ ಕೆಲಸವನ್ನು ಮಾಡುವ ಜ್ಞಾನಿಗಳೆಲ್ಲರೂ ತಾವು ಮಾಡುತ್ತಿದ್ದ ಕೆಲಸದಿಂದ ಬಂದು ಮೋಶೆಯ ಸಂಗಡ ಮಾತನಾಡಿ ಕರ್ತನು ಮಾಡಬೇಕೆಂದು ಆಜ್ಞಾಪಿಸಿದ ಸೇವೆಯ ಕೆಲಸಕ್ಕೆ ಬೇಕಾಗಿರುವದಕ್ಕಿಂತಲೂ ಹೆಚ್ಚಾದದ್ದನ್ನು ಈ ಜನರು ತರುತ್ತಿದ್ದಾರೆ ಎಂದು ಹೇಳಿದರು. ಆಗ ಮೋಶೆಯು ಇನ್ನು ಮೇಲೆ ಪರಿಶುದ್ಧ ಸ್ಥಳದ ಕಾಣಿಕೆ ಗೋಸ್ಕರ ಯಾವ ಗಂಡಸಾಗಲಿ ಹೆಂಗಸಾಗಲಿ ಕೆಲಸ ಮಾಡಬಾರದೆಂದು ಪಾಳೆಯದಲ್ಲೆಲ್ಲಾ ಪ್ರಕಟಿಸ ಬೇಕೆಂಬದಾಗಿ ಆಜ್ಞಾಪಿಸಬೇಕು ಎಂದು ಹೇಳಿದನು. ಹೀಗೆ ಜನರು ತರುವದನ್ನು ನಿಲ್ಲಿಸಿಬಿಟ್ಟರು. ಅವರಿಗೆ ಎಲ್ಲಾ ಕೆಲಸವನ್ನು ಮಾಡುವದಕ್ಕೆ ಸಾಕಾಗಿ ಮಿಕ್ಕುವಷ್ಟು ಸಾಮಾನು ಇತ್ತು. ಹೀಗಿರಲಾಗಿ ಕೆಲಸದವರಲ್ಲಿ ಜ್ಞಾನ ಹೃದಯವುಳ್ಳ ಪ್ರತಿಯೊಬ್ಬನೂ ಗುಡಾರವನ್ನು ಹತ್ತು ತೆರೆಗಳಿಂದ ಮಾಡಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನೂಲಿನಿಂದಲೂ ಕೌಶಲ್ಯದ ಕೆಲಸದಿಂದಲೂ ಕೆರೂಬಿಗಳನ್ನು ಮಾಡಿ ದನು. ಒಂದು ತೆರೆಯು ಇಪ್ಪತ್ತೆಂಟು ಮೊಳ ಉದ್ದ ವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. ತೆರೆಗಳೆಲ್ಲಾ ಒಂದೇ ಅಳತೆಯವುಗಳಾಗಿದ್ದವು. ಅವನು ಐದು ತೆರೆಗಳನ್ನು ಒಂದಕ್ಕೊಂದು ಜೋಡಿ ಸಿದನು, ಬೇರೆ ಐದು ತೆರೆಗಳನ್ನೂ ಒಂದಕ್ಕೊಂದು ಜೋಡಿಸಿದನು. ಈ ಎರಡು ಜೋಡನೆಗಳಲ್ಲಿ ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿದರು; ಒಂದು ತೆರೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಿ ಇನ್ನೊಂದು ತೆರೆಯ ಅಂಚನ್ನು ಜೋಡಿಸುವ ಸ್ಥಳದಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದನು. ಆ ಕುಣಿಕೆಗಳು ಒಂದು ತೆರೆಯನ್ನು ಮತ್ತೊಂದು ತೆರೆಯು ಹಿಡಿದುಕೊಳ್ಳುವಂತೆ ಮಾಡಿದನು. ಅವನು ಚಿನ್ನದ ಐವತ್ತು ಕೊಂಡಿಗಳನ್ನು ಮಾಡಿ ಆ ಕೊಂಡಿಗಳಿಂದ ತೆರೆಗಳನ್ನು ಒಂದ ಕ್ಕೊಂದಾಗಿ ಜೋಡಿಸಿದನು. ಹೀಗೆ ಅದು ಒಂದೇ ಗುಡಾರವಾಯಿತು. ಈ ಗುಡಾರದ ಮೇಲಿನ ಡೇರೆಗೋಸ್ಕರ ಅವನು ಮೇಕೆಯ ಕೂದಲಿನ ಹನ್ನೊಂದು ತೆರೆಗಳನ್ನು ಮಾಡಿ ಸಿದನು. ಒಂದು ತೆರೆಯು ಮೂವತ್ತು ಮೊಳ ಉದ್ದ ವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. ಹನ್ನೊಂದು ತೆರೆಗಳೂ ಒಂದೇ ಅಳತೆಯಾಗಿದ್ದವು. ಅವನು ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿದನು. ಅವನು ತೆರೆಯ ಕೊನೇ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಎರಡನೆಯ ತೆರೆಯನ್ನು ಜೋಡಿಸುವ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಮಾಡಿದನು. ಅದು ಒಂದೇ ಡೇರೆ ಆಗುವಂತೆ ಅವುಗಳ ಜೋಡ ಣೆಗೆ ಅವನು ಐವತ್ತು ಹಿತ್ತಾಳೆಯ ಕೊಂಡಿಗಳನ್ನು ಮಾಡಿದನು. ಅವನು ಆ ಡೇರೆಗಾಗಿ ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದ ಹೊದಿಕೆಯನ್ನು ಮಾಡಿದನು. ಅದರ ಮೇಲೆ ಕಡಲ ಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಿದನು. ಗುಡಾರವು ನಿಂತುಕೊಂಡಿರುವದಕ್ಕೆ ಅವನು ಜಾಲೀ ಮರದಿಂದ ಹಲಗೆಗಳನ್ನು ಮಾಡಿದನು. ಒಂದು ಹಲಗೆಯ ಉದ್ದಳತೆ ಹತ್ತು ಮೊಳದ್ದಾಗಿಯೂಆ ಹಲಗೆಯ ಅಗಲಳತೆ ಒಂದುವರೆ ಮೊಳದ್ದಾಗಿಯೂ ಇತ್ತು. ಒಂದು ಹಲಗೆಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಿದನು; ಅದೇ ಪ್ರಕಾರ ಅವನು ಗುಡಾರದ ಎಲ್ಲಾ ಹಲಗೆಗಳಿಗೆ ಮಾಡಿದನು. ಅವನು ಗುಡಾರಕ್ಕೋಸ್ಕರ ಹಲಗೆ ಗಳನ್ನು ಮಾಡಿದನು. ದಕ್ಷಿಣ ದಿಕ್ಕಿಗೆ ದಕ್ಷಿಣಭಾಗಕ್ಕೆ ಇಪ್ಪತ್ತು ಹಲಗೆಗಳನ್ನು ಮಾಡಿದನು. ಅವನು ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು; ಒಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ ಇನ್ನೊಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ ಗುಡಾರದ ಉತ್ತರ ದಿಕ್ಕಿನ ಮೂಲೆಯ ಇನ್ನೊಂದು ಭಾಗಕ್ಕೆ ಅವನು ಇಪ್ಪತ್ತು ಹಲಗೆಗಳನ್ನೂ ಮಾಡಿದನು. ಒಂದೊಂದು ಹಲಗೆಯ ಕೆಳಗೆ ಎರಡೆರಡಾಗಿ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು. ಗುಡಾರದ ಪಶ್ಚಿಮ ಭಾಗದ ಮಗ್ಗಲುಗಳಿಗೆ ಆರು ಹಲಗೆಗಳನ್ನು ಮಾಡಿ ದನು. ಅವನು ಗುಡಾರದ ಎರಡು ಪಾರ್ಶ್ವಗಳಲ್ಲಿ ರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡಿದನು. ಅವುಗಳು ಅಡಿಯಲ್ಲಿಯೂ ಮೇಲ್ಗಡೆಯಲ್ಲಿಯೂ ಒಂದೇ ಉಂಗುರದಿಂದ ಜೋಡಿಸಲ್ಪಟ್ಟವು. ಇದೇ ರೀತಿಯಲ್ಲಿ ಅವನು ಎರಡೂ ಮೂಲೆಗಳಲ್ಲಿರುವ ಎರಡಕ್ಕೂ ಮಾಡಿದನು. ಇಂಥ ಎಂಟು ಹಲಗೆ ಗಳಿದ್ದವು; ಪ್ರತಿಯೊಂದು ಹಲಗೆಯ ಕೆಳಗೆ ಎರಡೆರಡು ಕಾಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕಾಲು ಗಳಿದ್ದವು. ಅವನು ಜಾಲೀ ಮರದ ಅಗುಳಿಗಳನ್ನು ಮಾಡಿದನು; ಗುಡಾರದ ಒಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು, ಗುಡಾರದ ಇನ್ನೊಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು, ಗುಡಾರದ ಪಶ್ಚಿಮ ಭಾಗಗಳಲ್ಲಿರುವ ಹಲಗೆಗಳಿಗೆ ಐದು ಅಗುಳಿಗಳನ್ನು ಮಾಡಿದನು. ಮಧ್ಯದ ಅಗುಳಿಯು ಹಲಗೆಗಳ ನಡುವೆ ಒಂದು ಬದಿಯಿಂದ ಇನ್ನೊಂದು ಬದಿಯ ವರೆಗೆ ಹಾದು ಹೋಗುವ ಹಾಗೆ ಮಾಡಿದನು. ಆ ಹಲಗೆಗಳನ್ನು ಚಿನ್ನದಿಂದ ಹೊದಿಸಿ ಅಗುಳಿಗಳಿಗೆ ಬಳೆಗಳಾಗಿರುವ ಉಂಗುರಗಳನ್ನು ಚಿನ್ನದಿಂದ ಮಾಡಿ ಅಗುಳಿಗಳನ್ನು ಚಿನ್ನದಿಂದ ಹೊದಿಸಿದನು. ನೀಲಿ, ಧೂಮ್ರ, ರಕ್ತವರ್ಣ, ನಯವಾಗಿ ಹೊಸೆದ ನಾರುಗಳಿಂದ ತೆರೆಯನ್ನು ಮಾಡಿದನು. ಅದರ ಮೇಲೆ ಕುಶಲ ಕೆಲಸದಿಂದ ಕೆರೂಬಿಗಳನ್ನು ಮಾಡಿದನು. ಇದಲ್ಲದೆ ಜಾಲೀ ಮರದ ನಾಲ್ಕು ಸ್ತಂಭಗಳನ್ನು ಮಾಡಿ ಚಿನ್ನದಿಂದ ಅವುಗಳನ್ನು ಹೊದಿಸಿ ದನು. ಅವುಗಳ ಮೊಳೆಗಳು ಚಿನ್ನದವುಗಳಾಗಿದ್ದವು; ಅವನು ಅವುಗಳಿಗೆ ಬೆಳ್ಳಿಯ ನಾಲ್ಕು ಕಾಲುಗಳನ್ನು ಎರಕಹೊಯ್ದನು. ಬಾಗಲಿಗೆ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನಾರುಗಳಿಂದ ಕಸೂತಿ ಹಾಕಿ ತೆರೆಯನ್ನು ಮಾಡಿದನು;ಕೊಂಡಿ ಇರುವ ಐದು ಕಂಬಗಳನ್ನು ಮಾಡಿ ಅವುಗಳ ತಲೆಗಳನ್ನೂ ಕಂಬ ಗಳನ್ನೂ ಚಿನ್ನದಿಂದ ಹೊದಿಸಿದನು. ಆದರೆ ಅವುಗಳ ಐದು ಕಾಲುಗಳು ಹಿತ್ತಾಳೆಯದ್ದಾಗಿದ್ದವು. ಕೊಂಡಿ ಇರುವ ಐದು ಕಂಬಗಳನ್ನು ಮಾಡಿ ಅವುಗಳ ತಲೆಗಳನ್ನೂ ಕಂಬ ಗಳನ್ನೂ ಚಿನ್ನದಿಂದ ಹೊದಿಸಿದನು. ಆದರೆ ಅವುಗಳ ಐದು ಕಾಲುಗಳು ಹಿತ್ತಾಳೆಯದ್ದಾಗಿದ್ದವು.