Exodus · chapter 10 · verse 26
Exodus 10:26 in Kannada
ನಮ್ಮ ಪಶುಗಳನ್ನೂ ನಾವು ನಮ್ಮ ಸಂಗಡ ತೆಗೆದು ಕೊಂಡು ಹೋಗುವೆವು. ಒಂದು ಗೊರಸೆಯಾದರೂ ಬಿಡುವದಿಲ್ಲ. ಯಾಕಂದರೆ ನಮ್ಮ ದೇವರಾದ ಕರ್ತನಿಗೆ ಆರಾಧನೆ ಮಾಡುವದಕ್ಕೆ ಅವುಗಳಿಂದಲೇ ಆರಿಸ ಬೇಕು. ಕರ್ತನಿಗೆ ಯಾವ ಸೇವೆಮಾಡಬೇಕೆಂಬದು ಅಲ್ಲಿಗೆ ಹೋಗುವವರೆಗೂ ನಮಗೆ ತಿಳಿಯುವದಿಲ್ಲ ಅಂದನು.
Namma pashugalannoo naavu namma sangada tegedu kondu hoguvevu. Ondu goraseyaadaroo biduvadilla. Yaakandare namma devaraada kartanige aaraadhane maaduvadakke avugalindale aarisa beku. Kartanige yaava sevemaadabekembadu allige hoguvavaregoo namage tiliyuvadilla andanu.
Exodus 10:26 in English
- King James Version (KJV)
- Our cattle also shall go with us; there shall not an hoof be left behind; for thereof must we take to serve the LORD our God; and we know not with what we must serve the LORD, until we come thither.
- World English Bible (WEB)
- Our livestock also shall go with us. Not a hoof shall be left behind, for of it we must take to serve the LORD our God; and we don’t know with what we must serve the LORD, until we come there.”
- American Standard Version (ASV)
- Our cattle also shall go with us; there shall not a hoof be left behind: for thereof must we take to serve Jehovah our God; and we know not with what we must serve Jehovah, until we come thither.
- Bible in Basic English (BBE)
- So our cattle will have to go with us, not one may be kept back; for they are needed for the worship of the Lord our God; we have no knowledge what offering we have to give till we come to the place.
- Darby Translation (DBY)
- Our cattle also must go with us: there shall not a hoof be left behind; for we must take thereof to serve Jehovah our God; and we do not know with what we must serve Jehovah, until we come there.
- Webster's Bible (WBS)
- Our cattle also shall go with us; there shall not a hoof be left behind; for of them must we take to serve the LORD our God; and we know not with what we must serve the LORD, until we come thither.
- Young's Literal Translation (YLT)
- and also our cattle doth go with us, there is not left a hoof, for from it we do take to serve Jehovah our God; and we — we know not how we do serve Jehovah till our going thither.'
Read in context
- 24ಆಗ ಫರೋಹನು ಮೋಶೆಯನ್ನು ಕರೆ ಯಿಸಿ ಅವನಿಗೆ--ನೀವು ಹೋಗಿ ಕರ್ತನಿಗೆ ಸೇವೆ ಮಾಡಿರಿ, ನಿಮ್ಮ ಕುರಿದನಗಳು ಮಾತ್ರ ಇಲ್ಲಿರಲಿ. ನಿಮ್ಮ ಮಕ್ಕಳೂ ನಿಮ್ಮ ಸಂಗಡ ಹೋಗಲಿ ಅಂದನು.
- 25ಅದಕ್ಕೆ ಮೋಶೆಯು ಅವನಿಗೆ--ನಮ್ಮ ದೇವರಾದ ಕರ್ತನಿಗೆ ಅರ್ಪಿಸುವದಕ್ಕೆ ನೀನು ನಮ್ಮ ಕೈಯಲ್ಲಿ ಬಲಿಗಳನ್ನೂ ದಹನಬಲಿಗಳನ್ನೂ ಕೊಡಬೇಕು.
- 26ನಮ್ಮ ಪಶುಗಳನ್ನೂ ನಾವು ನಮ್ಮ ಸಂಗಡ ತೆಗೆದು ಕೊಂಡು ಹೋಗುವೆವು. ಒಂದು ಗೊರಸೆಯಾದರೂ ಬಿಡುವದಿಲ್ಲ. ಯಾಕಂದರೆ ನಮ್ಮ ದೇವರಾದ ಕರ್ತನಿಗೆ ಆರಾಧನೆ ಮಾಡುವದಕ್ಕೆ ಅವುಗಳಿಂದಲೇ ಆರಿಸ ಬೇಕು. ಕರ್ತನಿಗೆ ಯಾವ ಸೇವೆಮಾಡಬೇಕೆಂಬದು ಅಲ್ಲಿಗೆ ಹೋಗುವವರೆಗೂ ನಮಗೆ ತಿಳಿಯುವದಿಲ್ಲ ಅಂದನು.
- 27ಆದರೆ ಕರ್ತನು ಫರೋಹನ ಹೃದಯ ವನ್ನು ಕಠಿಣ ಮಾಡಿದ್ದರಿಂದ ಅವನು ಅವರನ್ನು ಕಳುಹಿಸಲಾರದೆ ಹೋದನು.
- 28ಆಗ ಫರೋಹನು ಅವನಿಗೆ--ನನ್ನನ್ನು ಬಿಟ್ಟು ಹೋಗು, ಇನ್ನು ನನ್ನ ಮುಖವನ್ನು ನೋಡದಂತೆ ಎಚ್ಚರಿಕೆಯಾಗಿರು; ಯಾಕಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ನೀನು ಸಾಯುವಿ ಅಂದನು.ಮೋಶೆಯು ಅವನಿಗೆ--ನೀನು ಸರಿಯಾಗಿ ಹೇಳಿದ್ದೀ. ಇನ್ನು ಮೇಲೆ ನಾನು ನಿನ್ನ ಮುಖವನ್ನು ನೋಡುವದಿಲ್ಲ ಅಂದನು.
Cross references
- Zechariah 14:20 ಜೆಕರ್ಯ 14:20ಆ ದಿನದಲ್ಲಿ ಕುದುರೆಗಳ ಗೆಜ್ಜೆಗಳ ಮೇಲೆ ಕರ್ತನಿಗೆ ಪರಿಶುದ್ಧವು ಎಂದಿರುವದು; ಕರ್ತನ ಆಲಯದ ಪಾತ್ರೆಗಳು ಬಲಿಪೀಠದ ಮುಂದಿನ ಪಾತ್ರೆಗಳ ಹಾಗಿರುವವು.ಹೌದು, ಯೆರೂಸಲೇಮಿ ನಲ್ಲಿಯೂ ಯೆಹೂದದಲ್ಲಿಯೂ ಇರುವ ಪ್ರತಿ ಯೊಂದು ಪಾತ್ರೆಯು ಸೈನ್ಯಗಳ ಕರ್ತನಿಗೆ ಪರಿಶುದ್ಧ ವಾಗಿರುವವು; ಯಜ್ಞಗಳನ್ನು ಅರ್ಪಿಸುವವರೆಲ್ಲರು ಬಂದು ಅವುಗಳಲ್ಲಿ ತಕ್ಕೊಂಡು ಬೇಯಿಸುವರು; ಆ ದಿನದಲ್ಲಿ ಕಾನಾನ್ಯನು ಸೈನ್ಯಗಳ ಕರ್ತನ ಆಲಯದಲ್ಲಿ ಇನ್ನು ಮೇಲೆ ಇರುವದೇ ಇಲ್ಲ.
- Isaiah 60:5–10 ಯೆಶಾಯ 60:5–10ಆಗ ನೀನು ಅದನ್ನು ನೋಡುವಿ, ನೀವು ಗುಂಪು ಗುಂಪಾಗಿ ಹೋಗುವಿರಿ. ನಿನ್ನ ಹೃದಯವು ಹೆದರಿ ವಿಶಾಲವಾಗು ವದು; ಸಮುದ್ರದ (ವ್ಯಾಪಾರದ) ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವದು; ಅನ್ಯಜನಾಂಗದ ಸೇನಾ ಬಲವು ನಿನ್ನ ಬಳಿಗೆ ಬರುವದು. ಒಂಟೆಗಳ ಸಮೂಹವು ನಿನ್ನನ್ನು ಮುಚ್ಚುವದು; ಮಿದ್ಯಾನಿನ, ಏಫದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೇಬದಿಂದಲೂ ಬರುವವು; ಅವು ಬಂಗಾರವನ್ನೂ ಧೂಪವನ್ನೂ ತರುವವು; ಅವು ಕರ್ತನ ಸ್ತೋತ್ರ ಗಳನ್ನು ಸಾರುವವು. ಕೇದಾರಿನ ಮಂದೆಗಳೆಲ್ಲಾ ನಿನ್ನ ಬಳಿಗೆ ಕೂಡಿಸಲ್ಪಡುವವು; ನೆಬಾಯೋತಿನ ಟಗರು ಗಳು ನಿನ್ನನ್ನು ಸೇವಿಸುವವು; ಅವು ನನ್ನ ಬಲಿಪೀಠದ ಮೇಲೆ ಅಂಗೀಕಾರವಾಗುವವು, ನಾನು ನನ್ನ ಮಹಿ ಮೆಯ ಆಲಯವನ್ನು ಘನಪಡಿಸುವೆನು. ಮೇಘದಂತೆಯೂ ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು? ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ. ಇದಲ್ಲದೆ ಅನ್ಯರ ಮಕ್ಕಳು ನಿನ್ನ ಗೋಡೆಗಳನ್ನು ಕಟ್ಟುವರು; ಅವರ ಅರಸರು ಸಹ ನಿನಗೆ ಸೇವೆ ಮಾಡುವರು; ನನ್ನ ರೌದ್ರದಲ್ಲಿ ನಿನ್ನನ್ನು ಹೊಡೆದೆನು; ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು.
- 2 Corinthians 8:5 2 ಕೊರಿಂಥದವರಿಗೆ 8:5ನಾವು ನಿರೀಕ್ಷಿಸಿದ ಪ್ರಕಾರವಾಗಿ ಅವರು ಕೊಡದೆ ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು.
- Exodus 12:32 ವಿಮೋಚನಕಾಂಡ 12:32ನೀವು ಹೇಳಿದಂತೆ ನಿಮ್ಮ ಕುರಿದನಗಳನ್ನು ತೆಗೆದುಕೊಳ್ಳಿರಿ. ನನ್ನನ್ನು ಸಹ ಆಶೀರ್ವದಿಸಿರಿ ಅಂದನು.
- Proverbs 3:9 ಜ್ಞಾನೋಕ್ತಿಗಳು 3:9ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು.
- Hebrews 11:8 ಇಬ್ರಿಯರಿಗೆ 11:8ನಂಬಿಕೆಯಿಂದಲೇ ಅಬ್ರಹಾಮನು ಕರೆಯ ಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದ ಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು.
- Acts 2:44–45 ಅಪೊಸ್ತಲರ ಕೃತ್ಯಗಳು 2:44–45ನಂಬಿದ ವರೆಲ್ಲರೂ ಒಂದಾಗಿದ್ದು ತಮಗಿದ್ದದ್ದನ್ನು ಹುದುವಾಗಿ ಅನುಭವಿಸುತ್ತಿದ್ದರು. ಅವರು ಚರಸ್ಥಿರಾಸ್ತಿಗಳನ್ನು ಮಾರಿ ಪ್ರತಿಯೊಬ್ಬನಿಗೆ ಅಗತ್ಯವಿದ್ದ ಹಾಗೆ ಹಂಚಿ ಕೊಟ್ಟರು.
- Isaiah 23:18 ಯೆಶಾಯ 23:18(ಆದರೆ) ಅವಳ ವ್ಯಾಪಾರವೂ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಕರ್ತನಿಗೆ ಪರಿಶುದ್ಧವಾಗು ವದು. ಅವಳ ವ್ಯಾಪಾರವು ಕರ್ತನ ಸನ್ನಿಧಾನದಲ್ಲಿ ವಾಸಿಸುವ ವರೆಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನು ಕೂಲವಾಗುವದು.
- Hosea 5:6 ಹೋಶೇಯ 5:6ಅವರು ಕರ್ತನನ್ನು ಹುಡುಕುವದಕ್ಕೆ ಅವರ ಮಂದೆಗಳೊಂದಿಗೂ ಹಿಂಡುಗಳೊಂದಿಗೂ ಹೋಗುವರು. ಆದರೆ ಆತನು ಅವರಿಂದ ತನ್ನನ್ನು ಹಿಂದೆಗೆದುಕೊಂಡ ಕಾರಣ ಅವರು ಆತನನ್ನು ಕಾಣುವದೇ ಇಲ್ಲ.