Exodus · chapter 15 · verse 14
Exodus 15:14 in Kannada
ಜನರು ಇದನ್ನು ಕೇಳಿ ಭಯಪಡುವರು; ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವದು.
Janaru idannu keli bhayapaduvaru; duhkhavu philishtiyadalli vaasisuvavarannu hidiyuvadu.
Exodus 15:14 in English
- King James Version (KJV)
- The people shall hear, [and] be afraid: sorrow shall take hold on the inhabitants of Palestina.
- World English Bible (WEB)
- The peoples have heard. They tremble. Pangs have taken hold of the inhabitants of Philistia.
- American Standard Version (ASV)
- The peoples have heard, they tremble: Pangs have taken hold on the inhabitants of Philistia.
- Bible in Basic English (BBE)
- Hearing of you the peoples were shaking in fear: the people of Philistia were gripped with pain.
- Darby Translation (DBY)
- The peoples heard it, they were afraid: A thrill seized the inhabitants of Philistia.
- Webster's Bible (WBS)
- The people shall hear, [and] be afraid: sorrow shall take hold on the inhabitants of Palestina.
- Young's Literal Translation (YLT)
- Peoples have heard, they are troubled; Pain hath seized inhabitants of Philistia.
Read in context
- 12ನೀನು ನಿನ್ನ ಬಲಗೈಯನ್ನು ಚಾಚಲು ಭೂಮಿಯು ಅವರನ್ನು ನುಂಗಿತು.
- 13ನೀನು ವಿಮೋಚಿ ಸಿದ ಜನರನ್ನು ಕರುಣೆಯಿಂದ ನಡಿಸಿದಿ; ನೀನು ಅವ ರನ್ನು ನಿನ್ನ ಬಲದಿಂದ ನಿನ್ನ ಪರಿಶುದ್ಧ ನಿವಾಸಕ್ಕೆ ನಡಿಸಿದಿ.
- 14ಜನರು ಇದನ್ನು ಕೇಳಿ ಭಯಪಡುವರು; ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವದು.
- 15ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳು ವರು; ಮೋವಾಬಿನ ಬಲಿಷ್ಠರನ್ನು ಕಂಪನವು ಹಿಡಿಯು ವದು. ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು.
- 16ಭಯವೂ ಹೆದರಿಕೆಯೂ ಅವರ ಮೇಲೆ ಬೀಳು ವದು; ನಿನ್ನ ಜನರು ದಾಟಿ ಹೋಗುವ ವರೆಗೆ ಓ ಕರ್ತನೇ, ನೀನು ಕೊಂಡುಕೊಂಡ ಜನರು ದಾಟಿ ಹೋಗುವ ವರೆಗೆ ನಿನ್ನ ಬಾಹುವಿನ ದೊಡ್ಡಸ್ತಿಕೆಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗುವರು.
Cross references
- Deuteronomy 2:25 ಧರ್ಮೋಪದೇಶಕಾಂಡ 2:25ಇದೇ ದಿವಸ ಆಕಾಶವೆಲ್ಲಾದರ ಕೆಳಗಿರುವ ಜನಾಂಗಗಳ ಮೇಲೆ ನಿನ್ನ ಹೆದರಿಕೆಯನ್ನೂ ನಿನ್ನ ಭಯವನ್ನೂ ಉಂಟು ಮಾಡಲಾರಂಭಿಸುತ್ತೇನೆ. ಅವರು ನಿನ್ನ ಸುದ್ದಿಯನ್ನು ಕೇಳಿ ನಿನಗೋಸ್ಕರ ನಡುಗಿ ಅಂಜುವರು.
- Joshua 2:9–10 ಯೆಹೋಶುವ 2:9–10ಕರ್ತನು ನಿಮಗೆ ದೇಶವನ್ನು ಕೊಟ್ಟಿದ್ದಾನೆಂದೂ ನಿಮ್ಮ ನಿಮಿತ್ತ ನಮಗೆ ಮಹಾಭೀತಿ ಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿ ಗಳೆಲ್ಲರು ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು. ನೀವು ಐಗುಪ್ತದಿಂದ ಹೊರಡುವಾಗ ಕರ್ತನು ನಿಮಗೋಸ್ಕರ ಕೆಂಪು ಸಮುದ್ರದ ನೀರನ್ನು ಬತ್ತಿಹೋಗ ಮಾಡಿದ್ದನ್ನೂ ಯೊರ್ದನಿಗೆ ಆಚೆಯಲ್ಲಿದ್ದ ಅಮೋರಿ ಯರ ಇಬ್ಬರು ಅರಸುಗಳಾದ ಸೀಹೋನನನ್ನು ಓಗನನ್ನು ನೀವು ಸಂಪೂರ್ಣ ನಿರ್ಮೂಲ ಮಾಡಿದ್ದನ್ನೂ ನಾವು ಕೇಳಿದ್ದೇವೆ.
- Psalm 48:6 ಕೀರ್ತನೆಗಳು 48:6ಭೀತಿಯೂ ಹೆರುವವಳ ಹಾಗೆ ನೋವೂ ಅಲ್ಲಿ ಅವರನ್ನು ಹಿಡಿಯಿತು.
- Numbers 14:14 ಅರಣ್ಯಕಾಂಡ 14:14ಅವರು ಈ ದೇಶದ ನಿವಾಸಿ ಗಳಿಗೆ ಅದನ್ನು ಹೇಳುವರು; ಯಾಕಂದರೆ ಕರ್ತನಾದ ನೀನೇ ಈ ಜನರ ಸಂಗಡ ಇದ್ದೀಯೆಂದೂ ಕರ್ತ ನಾದ ನೀನೇ ಮುಖಾಮುಖಿಯಾಗಿ ಕಾಣಿಸಿಕೊಳ್ಳುತ್ತೀ ಯೆಂದೂ ನಿನ್ನ ಮೇಘವು ಅವರ ಮೇಲೆ ನಿಂತಿದೆ ಯೆಂದೂ ನೀನು ಹಗಲು ಹೊತ್ತಿನಲ್ಲಿ ಮೇಘ ಸ್ತಂಭದಲ್ಲಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ನಡೆಯುತ್ತೀಯೆಂದೂ ಅವರು ಕೇಳಿದ್ದಾರೆ.
- Isaiah 14:31 ಯೆಶಾಯ 14:31ಓ ದ್ವಾರವೇ, ಗೋಳಾಡು; ಓ ಪಟ್ಟಣವೇ, ಕೂಗು; ನಿನ್ನ ಫಿಲಿಷ್ಟಿ ಯರೆಲ್ಲಾ ಕುಂದಿ ಹೋಗಿದ್ದಾರೆ; ಅವರ ಹೊಗೆಯು ಉತ್ತರದಿಂದ ಬರುತ್ತದೆ. ಆತನ ನೇಮಕವಾದ ಕಾಲ ಗಳಲ್ಲಿ ಯಾವನೂ ಒಂಟಿಯಾಗಿರುವದಿಲ್ಲ.ಆಗ ಜನಾಂಗಗಳ ದೂತರಿಗೆ ಯಾವ ಉತ್ತರವನ್ನು ಕೊಡ ಬೇಕೆಂದರೆ? ಕರ್ತನು ಚೀಯೋನನ್ನು ಸ್ಥಾಪಿಸಿದ್ದಾನೆ, ಆತನ ಜನರಲ್ಲಿನ ಬಡವರು ಅದನ್ನು ಆಶ್ರಯಿಸಿ ಕೊಳ್ಳುವರು ಎಂಬದೇ.
- Joshua 9:24 ಯೆಹೋಶುವ 9:24ಅದಕ್ಕವರು ಯೆಹೋಶುವ ನಿಗೆ--ನಿಮಗೆ ದೇಶವನ್ನೆಲ್ಲಾ ಒಪ್ಪಿಸಿಕೊಡುವದಕ್ಕೂ ದೇಶದ ನಿವಾಸಿಗಳನ್ನೆಲ್ಲಾ ನಿಮ್ಮ ಮುಂದೆ ನಾಶಮಾಡು ವದಕ್ಕೂ ನಿಮ್ಮ ದೇವರಾದ ಕರ್ತನು ತನ್ನ ಸೇವಕನಾದ ಮೋಶೆಗೆ ಆಜ್ಞಾಪಿಸಿದ್ದು ನಿಮ್ಮ ಸೇವಕರಿಗೆ ನಿಶ್ಚಯವಾಗಿ ತಿಳಿಸಲ್ಪಟ್ಟದ್ದರಿಂದ ನಾವು ನಮ್ಮ ಪ್ರಾಣಗಳಿಗೋಸ್ಕರ ನಿಮಗೆ ಬಹಳ ಭಯಪಟ್ಟು ಈ ಕಾರ್ಯವನ್ನು ಮಾಡಿದೆವು.
- Isaiah 14:29 ಯೆಶಾಯ 14:29ಸಮಸ್ತ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಆತನ ಕೋಲು ಮುರಿದುಹೋಯಿ ತೆಂದು ನೀವು ಉಲ್ಲಾಸಿಸಬೇಡಿರಿ; ಹಾವಿನ ಸಂತಾನ ದಿಂದ ವಿಷಸರ್ಪವು ಉಂಟಾಗುವದು; ಅದರ ಫಲವು ಹಾರುವ ಅಗ್ನಿಮಯ ಸರ್ಪವೇ.
- Deuteronomy 2:4–5 ಧರ್ಮೋಪದೇಶಕಾಂಡ 2:4–5ನೀನು ಜನರಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ನೀವು ಸೇಯಾರಿನಲ್ಲಿ ವಾಸಮಾಡುವ ನಿಮ್ಮ ಸಹೋದರರಾದ ಏಸಾವನ ಕುಮಾರರ ಮೇರೆಯನ್ನು ದಾಟಬೇಕು; ಅವರು ನಿಮಗೆ ಭಯಪಡುವರು; ಆದದರಿಂದ ನೀವು ಬಹಳ ಜಾಗ್ರತೆಯಿಂದಿರಬೇಕು. ಅವರ ಸಂಗಡ ಜಗಳವಾಡಬೇಡಿರಿ. ನಾನು ನಿಮಗೆ ಅವರ ದೇಶದಲ್ಲಿ ಪಾದದಷ್ಟೂ ಸ್ಥಳ ಕೊಡುವದಿಲ್ಲ; ಸೇಯಾರ್ ಬೆಟ್ಟವನ್ನು ಏಸಾವನಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ.
- Numbers 22:5 ಅರಣ್ಯಕಾಂಡ 22:5ಇವನು ತನ್ನ ಜನರ ಮಕ್ಕಳ ದೇಶದ ನದಿತೀರದಲ್ಲಿರುವ ಪೆತೋರಿಗೆ ದೂತರನ್ನು ಕಳುಹಿಸಿ ಬೆಯೋರನ ಮಗನಾದ ಬಿಳಾಮನನ್ನು ಕರೆಯಿಸಿ ಹೇಳಿದ್ದೇನಂದರೆ--ಇಗೋ, ಒಂದು ಜನಾಂಗವು ಐಗುಪ್ತದಿಂದ ಹೊರಟಿತು; ಇಗೋ, ಅದು ಭೂಮುಖವನ್ನು ಮುಚ್ಚಿ ನನಗೆದುರಾಗಿ ವಾಸಿಸುತ್ತದೆ.