Exodus · chapter 2 · verse 18
Exodus 2:18 in Kannada
ಅವರು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಬಂದಾಗ ಅವನು ಅವರಿಗೆ--ಯಾಕೆ ಈ ಹೊತ್ತು ಬೇಗ ಬಂದಿರಿ ಅಂದನು.
Avaru tamma tandeyaada regoovelana balige bandaaga avanu avarige--yaake ee hottu bega bandiri andanu.
Exodus 2:18 in English
- King James Version (KJV)
- And when they came to Reuel their father, he said, How [is it that] ye are come so soon to day?
- World English Bible (WEB)
- When they came to Reuel, their father, he said, “How is it that you have returned so early today?”
- American Standard Version (ASV)
- And when they came to Reuel their father, he said, How is it that ye are come so soon to-day?
- Bible in Basic English (BBE)
- And when they came to Reuel their father, he said, How is it that you have come back so quickly today?
- Darby Translation (DBY)
- And when they came to Reuel their father, he said, Why are ye come so soon to-day?
- Webster's Bible (WBS)
- And when they came to Reuel their father, he said, How [is it that] you are come so soon to day?
- Young's Literal Translation (YLT)
- And they come in to Reuel their father, and he saith, 'Wherefore have ye hastened to come in to-day?'
Read in context
- 16ಮಿದ್ಯಾನಿನ ವೈದಿಕನಿಗೆ ಏಳು ಮಂದಿ ಕುಮಾರ್ತೆಯರಿದ್ದರು. ಇವರು ಬಂದು ತಮ್ಮ ತಂದೆಯ ಮಂದೆಗಳಿಗೆ ನೀರು ಸೇದಿ ದೋಣಿಗಳನ್ನು ತುಂಬಿಸು ತ್ತಿದ್ದರು.
- 17ಕುರುಬರು ಬಂದು ಅವರನ್ನು ಓಡಿಸುತ್ತಿ ದ್ದಾಗ ಮೋಶೆಯು ಎದ್ದು ಅವರಿಗೆ ಸಹಾಯ ಮಾಡಿ ಅವರ ಕುರಿಗಳಿಗೆ ನೀರು ಕುಡಿಸಿದನು.
- 18ಅವರು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಬಂದಾಗ ಅವನು ಅವರಿಗೆ--ಯಾಕೆ ಈ ಹೊತ್ತು ಬೇಗ ಬಂದಿರಿ ಅಂದನು.
- 19ಅದಕ್ಕೆ ಅವರು--ಐಗುಪ್ತ್ಯನಾದ ಒಬ್ಬ ಮನುಷ್ಯನು ಕುರುಬರ ಕೈಗೆ ನಮ್ಮನ್ನು ತಪ್ಪಿಸಿ ನಮಗೋಸ್ಕರ ಸಾಕಾಗುವಷ್ಟು ನೀರು ಸೇದಿ ಮಂದೆಗೆ ಕುಡಿಸಿದನು ಅಂದರು.
- 20ಆಗ ಅವನು ತನ್ನ ಕುಮಾರ್ತೆಯರಿಗೆ--ಅವನು ಎಲ್ಲಿದ್ದಾನೆ? ಆ ಮನುಷ್ಯ ನನ್ನು ಯಾಕೆ ಬಿಟ್ಟು ಬಂದಿರಿ? ಅವನನ್ನು ಕರೆಯಿರಿ, ಅವನು ಊಟ ಮಾಡಲಿ ಅಂದನು.
Cross references
- Exodus 3:1 ವಿಮೋಚನಕಾಂಡ 3:1ಮೋಶೆಯು ತನ್ನ ಮಾವನಾಗಿರುವ ಮಿದ್ಯಾನಿನ ವೈದಿಕನಾದ ಇತ್ರೋವನ ಮಂದೆಯನ್ನು ಮೇಯಿಸುತ್ತಿರಲಾಗಿ ಅರಣ್ಯದ ಹಿಂಭಾ ಗಕ್ಕೆ ನಡಿಸಿಕೊಂಡುಹೋಗಿ ಹೋರೇಬ್ ಎಂಬ ದೇವರ ಬೆಟ್ಟಕ್ಕೆ ಬಂದನು.
- Numbers 10:29 ಅರಣ್ಯಕಾಂಡ 10:29ಮೋಶೆ ತನ್ನ ಮಾವನಾದ ಮಿದ್ಯಾನಿನ ರೆಗೂ ವೇಲನ ಮಗನಾದ ಹೋಬಾಬನಿಗೆ--ನಿಮಗೆ ಕೊಡು ತ್ತೇನೆಂದು ಕರ್ತನು ಹೇಳಿದ ದೇಶಕ್ಕೆ ಪ್ರಯಾಣ ಮಾಡುತ್ತಿದ್ದೇವೆ; ನಮ್ಮ ಸಂಗಡ ನೀನು ಬಾ; ನಾವು ನಿನಗೆ ಒಳ್ಳೇದನ್ನು ಮಾಡುವೆವು; ಕರ್ತನು ಇಸ್ರಾಯೇ ಲ್ಯರನ್ನು ಕುರಿತು ಒಳ್ಳೇದನ್ನು ಹೇಳಿದ್ದಾನೆ ಎಂದು ಹೇಳಿದನು.
- Exodus 4:18 ವಿಮೋಚನಕಾಂಡ 4:18ಆಗ ಮೋಶೆಯು ಹೋಗಿ ತನ್ನ ಮಾವನಾದ ಇತ್ರೋನನ ಬಳಿಗೆ ಬಂದು ಅವನಿಗೆ--ಐಗುಪ್ತ ದಲ್ಲಿರುವ ನನ್ನ ಸಹೋದರರ ಬಳಿಗೆ ಹಿಂತಿರುಗಿ ಹೋಗಿ ಅವರು ಇನ್ನೂ ಜೀವದಿಂದಿರುವರೋ ಎಂದು ನೋಡುವೆನು ಅಂದನು. ಇತ್ರೋನನು ಮೋಶೆಗೆ--ಸಮಾಧಾನದಿಂದ ಹೋಗು ಅಂದನು.
- Exodus 18:1–12 ವಿಮೋಚನಕಾಂಡ 18:1–12ದೇವರು ಮೋಶೆಗೆ ಮಾಡಿದವುಗಳೆಲ್ಲವನ್ನೂ ಕರ್ತನು ಇಸ್ರಾಯೇಲ್ಯರನ್ನು ಐಗುಪ್ತದೊಳಗಿಂದ ಹೊರಗೆ ತಂದದ್ದನ್ನೂ ಮಿದ್ಯಾ ನಿನ ವೈದಿಕನೂ ಮೋಶೆಯ ಮಾವನೂ ಆಗಿದ್ದ ಇತ್ರೋವನು ಕೇಳಿ ತನ್ನ ಬಳಿಗೆ ಕಳುಹಿಸಲ್ಪಟ್ಟಿದ್ದ ಮೋಶೆಯ ಹೆಂಡತಿ ಚಿಪ್ಪೋರಳನ್ನೂ ಆಕೆಯ ಇಬ್ಬರು ಕುಮಾರರನ್ನೂ ಕರೆದುಕೊಂಡು ಬಂದನು. ಆ ಕುಮಾರರಲ್ಲಿ ಒಬ್ಬನಿಗೆ ಗೇರ್ಷೋಮ್ ಎಂದು ಹೆಸರಿತ್ತು; ಅವನು--ನಾನು ಪರದೇಶದಲ್ಲಿ ಅನ್ಯನಾಗಿ ದ್ದೆನು ಅಂದನು. ಇನ್ನೊಬ್ಬನ ಹೆಸರು ಎಲೀಯೆಜರ್ ಎಂದಿತ್ತು; ಅವನು ನನ್ನ ತಂದೆಯ ದೇವರು ನನ್ನ ಸಹಾಯಕನಾಗಿದ್ದು ಫರೋಹನ ಕತ್ತಿಯಿಂದ ಬಿಡುಗಡೆ ಮಾಡಿದನು ಎಂದು ಹೇಳಿದನು. ಮೋಶೆಯ ಮಾವ ನಾದ ಇತ್ರೋವನ ಸಂಗಡ ಮೋಶೆಯ ಕುಮಾರರೂ ಅವನ ಹೆಂಡತಿಯೂ ಮೋಶೆಯ ಬಳಿಗೆ ಅರಣ್ಯಕ್ಕೆ ಅವನು ತಂಗಿದ್ದ ಸ್ಥಳವಾದ ದೇವರ ಬೆಟ್ಟದ ಬಳಿ ಬಂದರು. ಆಗ ಅವನು ಮೋಶೆಗೆ--ನಿನ್ನ ಮಾವ ನಾದ ಇತ್ರೋವನೆಂಬ ನಾನು ನಿನ್ನ ಹೆಂಡತಿಯನ್ನೂ ಅವಳ ಇಬ್ಬರು ಮಕ್ಕಳನ್ನೂ ಕರೆದುಕೊಂಡು ನಿನ್ನ ಬಳಿಗೆ ಬಂದಿದ್ದೇನೆಂದು ಹೇಳಿ ಕಳುಹಿಸಿದಾಗ ಮೋಶೆಯು ತನ್ನ ಮಾವನನ್ನು ಎದುರುಗೊಂಡು ಅವನನ್ನು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು ಗುಡಾರಕ್ಕೆ ಬಂದರು. ಇಸ್ರಾಯೇಲ್ಯರಿಗೋಸ್ಕರ ಕರ್ತನು ಫರೋಹ ನಿಗೂ ಐಗುಪ್ತ್ಯರಿಗೂ ಮಾಡಿದ್ದೆಲ್ಲವನ್ನೂ ಅವರಿಗೆ ಒದಗಿದ ಎಲ್ಲಾ ಸಂಕಟವನ್ನೂ ಕರ್ತನು ತಮ್ಮನ್ನು ಹೇಗೆ ತಪ್ಪಿಸಿದನೆಂಬದನ್ನೂ ಮೋಶೆಯು ತನ್ನ ಮಾವ ನಿಗೆ ತಿಳಿಯಪಡಿಸಿದನು. ಇದಲ್ಲದೆ ಕರ್ತನು ಇಸ್ರಾ ಯೇಲ್ಯರಿಗೆ ಮಾಡಿದ ಎಲ್ಲಾ ಉಪಕಾರಕ್ಕಾಗಿಯೂ ಆತನು ಅವರನ್ನು ಐಗುಪ್ತ್ಯರ ಕೈಗಳಿಂದ ತಪ್ಪಿಸಿದ್ದ ಕ್ಕಾಗಿಯೂ ಇತ್ರೋವನು ಸಂತೋಷಪಟ್ಟನು. ಇತ್ರೋವನು--ಐಗುಪ್ತ್ಯರ ಕೈಗೂ ಫರೋಹನ ಕೈಗೂ ಐಗುಪ್ತ್ಯರ ಅಧಿಕಾರದೊಳಗಿಂದಲೂ ಜನರನ್ನು ತಪ್ಪಿಸಿದ ಕರ್ತನಿಗೆ ಸ್ತೋತ್ರವಾಗಲಿ. ಎಲ್ಲಾ ದೇವರು ಗಳಿಗಿಂತ ಕರ್ತನೇ ದೊಡ್ಡವನೆಂದು ಈಗ ನಾನು ತಿಳಿದುಕೊಂಡಿದ್ದೇನೆ. ಐಗುಪ್ತ್ಯರು ಗರ್ವಪಟ್ಟಿದ್ದರಿಂದ ಆತನು ಅವರನ್ನು ತಗ್ಗಿಸಿದನು ಅಂದನು. ಮೋಶೆಯ ಮಾವನಾದ ಇತ್ರೋವನು ದಹನಬಲಿಯನ್ನೂ ಯಜ್ಞ ಗಳನ್ನೂ ತೆಗೆದುಕೊಂಡು ದೇವರಿಗೆ ಅರ್ಪಿಸಿದನು. ಆಗ ಆರೋನನೂ ಇಸ್ರಾಯೇಲಿನ ಹಿರಿಯರೆಲ್ಲರೂ ದೇವರ ಸನ್ನಿಧಿಯಲ್ಲಿ ಮೋಶೆಯ ಮಾವನ ಸಂಗಡ ಭೋಜನ ಮಾಡುವದಕ್ಕಾಗಿ ಬಂದರು.
- Numbers 19:20 ಅರಣ್ಯಕಾಂಡ 19:20ಆದರೆ ಅಪವಿತ್ರನಾಗಿದ್ದು ತನ್ನನ್ನು ಶುದ್ಧಪಡಿಸಿ ಕೊಳ್ಳದವನು ಸಭೆಯ ಮಧ್ಯದಿಂದ ತೆಗೆದು ಹಾಕಲ್ಪ ಡಲಿ; ಅವನು ಕರ್ತನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚಿಮುಕಿಸಲ್ಪಡಲಿಲ್ಲ; ಅವನು ಅಪವಿತ್ರನೇ.