Exodus · chapter 2 · verse 20
Exodus 2:20 in Kannada
ಆಗ ಅವನು ತನ್ನ ಕುಮಾರ್ತೆಯರಿಗೆ--ಅವನು ಎಲ್ಲಿದ್ದಾನೆ? ಆ ಮನುಷ್ಯ ನನ್ನು ಯಾಕೆ ಬಿಟ್ಟು ಬಂದಿರಿ? ಅವನನ್ನು ಕರೆಯಿರಿ, ಅವನು ಊಟ ಮಾಡಲಿ ಅಂದನು.
Aaga avanu tanna kumaarteyarige--avanu elliddaane? Aa manushya nannu yaake bittu bandiri? Avanannu kareyiri, avanu oota maadali andanu.
Exodus 2:20 in English
- King James Version (KJV)
- And he said unto his daughters, And where [is] he? why [is] it [that] ye have left the man? call him, that he may eat bread.
- World English Bible (WEB)
- He said to his daughters, “Where is he? Why is it that you have left the man? Call him, that he may eat bread.”
- American Standard Version (ASV)
- And he said unto his daughters, And where is he? why is it that ye have left the man? call him, that he may eat bread.
- Bible in Basic English (BBE)
- And he said to his daughters, Where is he? why have you let the man go? make him come in and give him a meal.
- Darby Translation (DBY)
- And he said to his daughters, And where is he? why then have ye left the man behind? Call him, that he may eat bread.
- Webster's Bible (WBS)
- And he said to his daughters, And where [is] he? why [is] it [that] ye have left the man? call him, that he may eat bread.
- Young's Literal Translation (YLT)
- and he saith unto his daughters, 'And where [is] he? why [is] this? — ye left the man! call for him, and he doth eat bread.'
Read in context
- 18ಅವರು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಬಂದಾಗ ಅವನು ಅವರಿಗೆ--ಯಾಕೆ ಈ ಹೊತ್ತು ಬೇಗ ಬಂದಿರಿ ಅಂದನು.
- 19ಅದಕ್ಕೆ ಅವರು--ಐಗುಪ್ತ್ಯನಾದ ಒಬ್ಬ ಮನುಷ್ಯನು ಕುರುಬರ ಕೈಗೆ ನಮ್ಮನ್ನು ತಪ್ಪಿಸಿ ನಮಗೋಸ್ಕರ ಸಾಕಾಗುವಷ್ಟು ನೀರು ಸೇದಿ ಮಂದೆಗೆ ಕುಡಿಸಿದನು ಅಂದರು.
- 20ಆಗ ಅವನು ತನ್ನ ಕುಮಾರ್ತೆಯರಿಗೆ--ಅವನು ಎಲ್ಲಿದ್ದಾನೆ? ಆ ಮನುಷ್ಯ ನನ್ನು ಯಾಕೆ ಬಿಟ್ಟು ಬಂದಿರಿ? ಅವನನ್ನು ಕರೆಯಿರಿ, ಅವನು ಊಟ ಮಾಡಲಿ ಅಂದನು.
- 21ಮೋಶೆಯು ಆ ಮನುಷ್ಯನ ಸಂಗಡ ವಾಸಮಾಡುವದಕ್ಕೆ ಸಮ್ಮತಿ ಸಿದನು. ಅವನು ಮೋಶೆಗೆ ತನ್ನ ಮಗಳಾದ ಚಿಪ್ಪೋರ ಳನ್ನು ಕೊಟ್ಟನು.
- 22ಆಕೆಯು ಮಗನನ್ನು ಹೆತ್ತಾಗ ಮೋಶೆಯು ಅವನಿಗೆ ಗೇರ್ಷೋಮ್ ಎಂದು ಹೆಸರಿ ಟ್ಟನು. ಯಾಕಂದರೆ ಅವನು--ನಾನು ಪರದೇಶದಲ್ಲಿ ಅನ್ಯನಾಗಿದ್ದೇನೆ ಅಂದನು.
Cross references
- Genesis 31:54 ಆದಿಕಾಂಡ 31:54ಯಾಕೋ ಬನು ಆ ಬೆಟ್ಟದಲ್ಲಿ ಬಲಿಯನ್ನು ಅರ್ಪಿಸಿ ರೊಟ್ಟಿ ಯನ್ನು ತಿನ್ನುವದಕ್ಕೆ ತನ್ನ ಸಹೋದರರನ್ನು ಕರೇ ಕಳುಹಿಸಿದನು. ಅವರು ರೊಟ್ಟಿಯನ್ನು ತಿಂದು ಬೆಟ್ಟದಲ್ಲಿಯೇ ರಾತ್ರಿ ಇಳುಕೊಂಡರು.ಹೊತ್ತಾರೆ ಲಾಬಾನನು ಎದ್ದು ತನ್ನ ಕುಮಾರರಿಗೂ ಕುಮಾರ್ತೆ ಯರಿಗೂ ಮುದ್ದಿಟ್ಟು ಅವರನ್ನು ಆಶೀರ್ವದಿಸಿದನು. ಲಾಬಾನನು ಹೊರಟು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು.
- Genesis 43:25 ಆದಿಕಾಂಡ 43:25ಅವರು ಅಲ್ಲಿ ಊಟಮಾಡಬೇಕೆಂದು ಕೇಳಿದ್ದರಿಂದ ಯೋಸೇಫನು ಮಧ್ಯಾಹ್ನದಲ್ಲಿ ಮನೆಗೆ ಬರುವಷ್ಟರಲ್ಲಿ ಕಾಣಿಕೆಯನ್ನು ಸಿದ್ಧಮಾಡಿಕೊಂಡರು.
- Job 31:32 ಯೋಬನು 31:32ಪರದೇಶಸ್ಥನು ಬೀದಿ ಯಲ್ಲಿ ಇಳುಕೊಳ್ಳಲಿಲ್ಲ; ಆದರೆ ನನ್ನ ಬಾಗಲನ್ನು ಮಾರ್ಗಸ್ಥರಿಗೆ ತೆರೆಯುತ್ತಾ ಇದ್ದೆನು.
- Genesis 24:31–33 ಆದಿಕಾಂಡ 24:31–33ಲಾಬಾನನು ಅವನಿಗೆ--ಕರ್ತನಿಂದ ಆಶೀರ್ವದಿಸಲ್ಪಟ್ಟವನೇ, ಒಳಗೆ ಬಾ, ಯಾಕೆ ಹೊರಗೆ ನಿಂತಿರುತ್ತೀ? ನಾನು ಮನೆ ಯನ್ನೂ ಒಂಟೆಗಳಿಗೆ ಸ್ಥಳವನ್ನೂ ಸಿದ್ಧಮಾಡಿದ್ದೇನೆ ಅಂದನು. ಆಗ ಆ ಮನುಷ್ಯನು ಮನೆಯೊಳಗೆ ಬಂದನು. ಅವನು ಒಂಟೆಗಳನ್ನು ಬಿಚ್ಚಿ ಅವುಗಳಿಗೆ ಹುಲ್ಲನ್ನೂ ಮೇವನ್ನೂ ಕೊಟ್ಟನು. ಅವನಿಗೆ ಅವನ ಸಂಗಡವಿದ್ದವರಿಗೆ ಕಾಲುಗಳನ್ನು ತೊಳೆಯುವದಕ್ಕೆ ನೀರು ಕೊಟ್ಟನು. ಅವನಿಗೆ ಊಟ ಬಡಿಸಿದಾಗ ಅವನು--ನಾನು ಬಂದ ಕೆಲಸದ ವಿಷಯ ಹೇಳದೆ ಊಟಮಾಡುವದಿಲ್ಲ ಅಂದನು. ಅದಕ್ಕೆ ಲಾಬಾ ನನು--ಹೇಳು ಅಂದನು.
- Genesis 18:5 ಆದಿಕಾಂಡ 18:5ನಾನು ಒಂದಿಷ್ಟು ರೊಟ್ಟಿಯನ್ನು ತರುವೆನು; ನೀವು ನಿಮ್ಮ ಹೃದಯಗಳನ್ನು ಆದರಿಸಿಕೊಳ್ಳಿರಿ; ತರುವಾಯ ನೀವು ಮುಂದೆ ಹೊರಟು ಹೋಗಬಹುದು. ಅದಕ್ಕೋಸ್ಕರವೇ ನೀವು ನಿಮ್ಮ ದಾಸನ ಬಳಿಗೆ ಬಂದಿದ್ದೀರಿ ಎಂದು ಬೇಡಿಕೊಂಡನು. ಅದಕ್ಕೆ ಅವರು--ನೀನು ಹೇಳಿದಂತೆಯೇ ಮಾಡು ಅಂದರು.
- Hebrews 13:2 ಇಬ್ರಿಯರಿಗೆ 13:2ಪರರಿಗೆ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೂತರನ್ನು ಸತ್ಕರಿಸಿದ್ದಾರೆ.
- Job 42:11 ಯೋಬನು 42:11ಆಗ ಅವನ ಸಹೋದರರೆಲ್ಲರೂ ಅವನ ಸಹೋದರಿಯರೆಲ್ಲರೂ ಮುಂಚಿನ ಅವನ ಪರಿಚಿತಿಯವರೆಲ್ಲರೂ ಅವನ ಬಳಿಗೆ ಬಂದು ಅವನ ಸಂಗಡ ಅವನ ಮನೆಯಲ್ಲಿ ರೊಟ್ಟಿ ತಿಂದು, ಕರ್ತನು ಅವನ ಮೇಲೆ ಬರಮಾಡಿದ ಎಲ್ಲಾ ಕೇಡಿಗೋಸ್ಕರ ಅವನ ಸಂಗಡ ದುಃಖಪಟ್ಟು ಅವನನ್ನು ಸಂತೈಸಿದರು. ಅವರು ಅವನಿಗೆ ಪ್ರತಿ ಮನುಷ್ಯನು ಒಂದು ಹಣವನ್ನೂ ಬಂಗಾರದ ಒಂದು ಉಂಗುರವನ್ನೂ ಕೊಟ್ಟರು.
- Genesis 19:2–3 ಆದಿಕಾಂಡ 19:2–3ಇಗೋ, ಪ್ರಭುಗಳೇ, ನೀವು ನಿಮ್ಮ ದಾಸನ ಮನೆಯಲ್ಲಿ ಇಳುಕೊಂಡು ರಾತ್ರಿ ಕಳೆಯಿರಿ; ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಬೆಳಿಗ್ಗೆ ಎದ್ದು ನಿಮ್ಮ ಮಾರ್ಗವನ್ನು ಹಿಡಿದು ಹೋಗಬಹುದು ಎಂದು ಬೇಡಿಕೊಂಡನು. ಅದಕ್ಕೆ ಅವರು--ಹಾಗಲ್ಲ; ನಾವು ರಾತ್ರಿಯೆಲ್ಲಾ ಬೀದಿಯಲ್ಲಿ ಇರುತ್ತೇವೆ ಅಂದರು. ಅದಕ್ಕವನು ಅವರನ್ನು ಬಹಳವಾಗಿ ಬಲವಂತ ಮಾಡಿದ್ದರಿಂದ ಅವರು ತಿರುಗಿಕೊಂಡು ಅವನ ಮನೆಯೊಳಕ್ಕೆ ಪ್ರವೇಶಿಸಿದರು. ಅವನು ಅವರಿಗಾಗಿ ಔತಣಮಾಡಿಸಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟನು. ಅವರು ಊಟಮಾಡಿದರು.
- 1 Timothy 5:10 1 ತಿಮೊಥೆಯನಿಗೆ 5:10ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡ ವಳೂ ಆಗಿರಬೇಕು; ಆಕೆಯು ಮಕ್ಕಳನ್ನು ಸಾಕಿದವಳಾ ಗಲಿ ಅತಿಥಿಸತ್ಕಾರವನ್ನು ಮಾಡಿದವಳಾಗಲಿ ಪರಿಶುದ್ಧರ ಪಾದಗಳನ್ನು ತೊಳೆದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯ ಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲಿ ಆಸಕ್ತಿಯುಳ್ಳವಳಾಗಲಿ ಆಗಿರ
- Genesis 29:13 ಆದಿಕಾಂಡ 29:13ಲಾಬಾನನು ತನ್ನ ಸಹೋದರಿಯ ಮಗನಾದ ಯಾಕೋಬನ ಸುದ್ದಿಯನ್ನು ಕೇಳಿದಾಗ ಅವನನ್ನು ಸಂಧಿಸುವದಕ್ಕೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವನನ್ನು ಮನೆಗೆ ಕರೆದುಕೊಂಡು ಬಂದನು. ಅವನು ಲಾಬಾನನಿಗೆ ಎಲ್ಲಾ ವಿಷಯಗಳನ್ನು ತಿಳಿಸಿದನು.