Exodus · chapter 22 · verse 20
Exodus 22:20 in Kannada
ಕರ್ತನಿಗೆ ಹೊರತಾಗಿ ಮತ್ತೊಬ್ಬ ದೇವರಿಗೆ ಯಜ್ಞ ಮಾಡುವವನು ಸಂಪೂರ್ಣವಾಗಿ ನಾಶವಾಗಬೇಕು.
Kartanige horataagi mattobba devarige yajnya maaduvavanu sampoornavaagi naashavaagabeku.
Exodus 22:20 in English
- King James Version (KJV)
- He that sacrificeth unto [any] god, save unto the LORD only, he shall be utterly destroyed.
- World English Bible (WEB)
- “He who sacrifices to any god, except to the LORD only, shall be utterly destroyed.
- American Standard Version (ASV)
- He that sacrificeth unto any god, save unto Jehovah only, shall be utterly destroyed.
- Bible in Basic English (BBE)
- Complete destruction will come on any man who makes offerings to any other god but the Lord.
- Darby Translation (DBY)
- — He that sacrificeth to [any] god, save to Jehovah only, shall be devoted to destruction.
- Webster's Bible (WBS)
- He that sacrificeth to [any] god, save to the LORD only, he shall be utterly destroyed.
- Young's Literal Translation (YLT)
- 'He who is sacrificing to a god, save to Jehovah alone, is devoted.
Read in context
- 18ಮಾಟಗಾರ್ತಿಯನ್ನು ಬದುಕ ಗೊಡಿಸಬಾರದು.
- 19ಮೃಗದ ಸಂಗಡ ಮಲಗುವ ಯಾರಾದರೂ ಸರಿಯೇ ಅವರು ಖಂಡಿತವಾಗಿ ಕೊಲ್ಲಲ್ಪಡಬೇಕು.
- 20ಕರ್ತನಿಗೆ ಹೊರತಾಗಿ ಮತ್ತೊಬ್ಬ ದೇವರಿಗೆ ಯಜ್ಞ ಮಾಡುವವನು ಸಂಪೂರ್ಣವಾಗಿ ನಾಶವಾಗಬೇಕು.
- 21ಪರದೇಶಸ್ಥನನ್ನು ಉಪದ್ರವಪಡಿಸಬೇಡ, ಬಾಧೆ ಪಡಿಸಲೂಬೇಡ; ಯಾಕಂದರೆ ನೀವು ಐಗುಪ್ತದೇಶ ದಲ್ಲಿ ಪರದೇಶಿಗಳಾಗಿದ್ದಿರಿ.
- 22ಯಾವ ವಿಧವೆಯನ್ನೂ ದಿಕ್ಕಿಲ್ಲದ ಮಗುವನ್ನೂ ಬಾಧಿಸಬಾರದು.
Cross references
- Deuteronomy 17:2–5 ಧರ್ಮೋಪದೇಶಕಾಂಡ 17:2–5ನಿನ್ನ ದೇವರಾದ ಕರ್ತನ ಮುಂದೆ ಕೆಟ್ಟದ್ದನ್ನು ಮಾಡಿ ಆತನ ಒಡಂಬಡಿಕೆಯನ್ನು ವಿಾರಿ ಬಿಟ್ಟು ಸೂರ್ಯನನ್ನಾಗಲಿ, ಚಂದ್ರನನ್ನಾಗಲಿ, ಆಕಾಶದ ಎಲ್ಲಾ ಸೈನ್ಯವನ್ನಾಗಲಿ, ಬೇರೆ ದೇವರುಗಳನ್ನಾಗಲಿ ನನ್ನ ಆಜ್ಞೆಗೆ ವಿರೋಧವಾಗಿ ಸೇವಿಸಿ ಅವುಗಳಿಗೆ ಅಡ್ಡಬಿದ್ದ ಗಂಡಸಾದರೂ ಹೆಂಗಸಾದರೂ ನಿನ್ನ ದೇವ ರಾದ ಕರ್ತನು ನಿನಗೆ ಕೊಡುವ ನಿನ್ನ ಬಾಗಲುಗಳ ಒಂದರಲ್ಲಿ ನಿನ್ನ ಬಳಿಯಲ್ಲಿ ಸಿಕ್ಕಿದರೆ ಅದು ನಿನಗೆ ತಿಳಿಯಬಂದದರಿಂದ ನೀನು ಕೇಳಿ ಚೆನ್ನಾಗಿ ವಿಚಾರಿಸಿದ ಮೇಲೆ ಇಗೋ, ಈ ಕಾರ್ಯವು ನಿಶ್ಚಯವಾಗಿ ಸತ್ಯ ವಾದರೆ ಈ ಅಸಹ್ಯ ಕಾರ್ಯವು ಇಸ್ರಾಯೇಲಿನಲ್ಲಿ ನಡೆದದ್ದಾದರೆ ನೀನು ಆ ಗಂಡಸನ್ನಾದರೂ ಹೆಂಗಸ ನ್ನಾದರೂ ಆ ಕೆಟ್ಟ ಕಾರ್ಯವನ್ನು ಮಾಡಿದ ಗಂಡಸನ್ನೂ ಮತ್ತು ಹೆಂಗಸನ್ನೂ ನಿನ್ನ ಬಾಗಲುಗಳ ಬಳಿಗೆ ಹೊರಗೆ ತಂದು ಅವರು ಸಾಯುವ ಹಾಗೆ ಕಲ್ಲೆಸೆಯಬೇಕು.
- Deuteronomy 18:20 ಧರ್ಮೋಪದೇಶಕಾಂಡ 18:20ಆದರೆ ನಾನು ಮಾತನಾಡಲು ಆಜ್ಞಾಪಿಸದೆ ಇರುವದನ್ನು ನನ್ನ ಹೆಸರಿನಿಂದ ಮಾತನಾಡುವದಕ್ಕೆ ಅಹಂಕಾರ ತೋರಿ ಸುವ ಪ್ರವಾದಿಯೂ ಬೇರೆ ದೇವರುಗಳ ಹೆಸರಿ ನಿಂದ ಮಾತನಾಡುವವನೂ ಆದ ಆ ಪ್ರವಾದಿಯೂ ಸಾಯಬೇಕು.
- Numbers 25:7–8 ಅರಣ್ಯಕಾಂಡ 25:7–8ಆರೋನನ ಮಗನಾಗಿದ್ದ ಎಲೀಯಾಜರನ ಮಗನಾದ ಫೀನೆಹಾಸನೆಂಬ ಯಾಜಕನು ಅದನ್ನು ನೋಡಿ ಸಭೆಯ ಮಧ್ಯದಿಂದ ಎದ್ದು ತನ್ನ ಕೈಯಲ್ಲಿ ಭಲ್ಲೆಯನ್ನು ಹಿಡುಕೊಂಡು ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ ಇಸ್ರಾಯೇಲಿನವನನ್ನೂ ಆ ಸ್ತ್ರೀಯನ್ನೂ ಇಬ್ಬರ ಹೊಟ್ಟೆಯನ್ನು ತಿವಿದನು; ಹೀಗೆ ಇಸ್ರಾಯೇಲ್ ಮಕ್ಕಳಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು.
- Deuteronomy 13:1–15 ಧರ್ಮೋಪದೇಶಕಾಂಡ 13:1–15ಪ್ರವಾದಿಯಾಗಲಿ ಕನಸುಗಳನ್ನು ಕಾಣುವವನಾಗಲಿ ನಿಮ್ಮ ಮಧ್ಯದಲ್ಲಿ ಎದ್ದು ನಿನಗೆ ಸೂಚನೆಯನ್ನಾದರೂ ಅದ್ಭುತವನ್ನಾದರೂ ತೋರಿಸಿ ದರೆ ನೀನು ತಿಳಿಯದ ಬೇರೆ ದೇವರುಗಳನ್ನು ಅನುಸರಿಸಿ--ಅವರಿಗೆ ನಾವು ಸೇವೆಮಾಡೋಣ ಎಂದು ಹೇಳಿ ಅವನು ನಿನಗೆ ಹೇಳಿದ ಸೂಚನೆಯೂ ಅದ್ಭುತವೂ ಸಂಭವಿಸಿದರೆ ಆ ಪ್ರವಾದಿಯ ಇಲ್ಲವೆ ಕನಸು ಕಾಣುವವನ ಮಾತುಗಳನ್ನು ಕೇಳಬಾರದು. ನಿಮ್ಮ ದೇವರಾದ ಕರ್ತನು ನಿಮ್ಮನ್ನು ಶೋಧಿಸಿ ನೀವು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣ ಪ್ರಾಣದಿಂದಲೂ ನಿಮ್ಮ ದೇವರಾದ ಕರ್ತನನ್ನು ಪ್ರೀತಿ ಮಾಡುತ್ತೀರೇನೋ ಎಂದು ಪರೀಕ್ಷಿಸುತ್ತಾನೆ. ನಿಮ್ಮ ದೇವರಾದ ಕರ್ತನನ್ನೇ ಅನುಸರಿಸಿ ಆತನಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಂಡು ಆತನ ಸ್ವರವನ್ನು ಕೇಳಿ ಆತನಿಗೆ ಸೇವೆಮಾಡಿ ಆತನಿಗೆ ಅಂಟಿಕೊಳ್ಳಬೇಕು. ಅಂಥ ಪ್ರವಾದಿಯನ್ನಾದರೂ ಕನಸು ಕಾಣುವವನ ನ್ನಾದರೂ ಕೊಂದುಹಾಕಬೇಕು; ಐಗುಪ್ತದೇಶದೊಳ ಗಿಂದ ನಿನ್ನನ್ನು ಹೊರಗೆ ಬರಮಾಡಿ, ದಾಸತ್ವದ ಮನೆ ಯೊಳಗಿಂದ ನಿನ್ನನ್ನು ವಿಮೋಚಿಸಿದ ನಿನ್ನ ಕರ್ತನಾದ ದೇವರಿಂದ ತಿರುಗುವಂತೆ ಮತ್ತು ನಿನ್ನ ದೇವರಾದ ಕರ್ತನು ನಿನಗೆ ನಡೆಯಲು ಆಜ್ಞಾಪಿಸಿದ ಮಾರ್ಗ ದಿಂದ ನಿನ್ನನ್ನು ದೂಡುವಂತೆ ಮಾತನಾಡಿದ್ದಾನೆ. ಹೀಗೆ ನೀನು ಕೆಟ್ಟದ್ದನ್ನು ನಿನ್ನ ಮಧ್ಯದಿಂದ ತೆಗೆದುಹಾಕಬೇಕು. ನಿನ್ನ ತಾಯಿಯ ಮಗನಾದ ನಿನ್ನ ಸಹೋದರ ನಾಗಲಿ ಮಗನಾಗಲಿ ಮಗಳಾಗಲಿ ಮಗ್ಗುಲಲ್ಲಿರುವ ಹೆಂಡತಿಯಾಗಲಿ ನಿನ್ನ ಪ್ರಾಣದಂತೆ ನಿನಗಿರುವ ಸ್ನೇಹಿತ ನಾಗಲಿ ನೀನೂ ನಿನ್ನ ಪಿತೃಗಳೂ ತಿಳಿಯದ ಬೇರೆ ದೇವರುಗಳನ್ನು ನಿನಗೆ ಸವಿಾಪವಾಗಲಿ ನಿನಗೆ ದೂರವಾಗಲಿ ಭೂಮಿಯ ಒಂದು ಕಡೆಯಿಂದ ಅದರ ಮತ್ತೊಂದು ಕಡೆಯ ವರೆಗೆ ನಿನ್ನ ಸುತ್ತಲಿರುವ ಜನಗಳ ದೇವರುಗಳನ್ನು ಹೋಗಿ ಸೇವಿಸೋಣ ಎಂದು ನಿನ್ನನ್ನು ಅಂತರಂಗದಲ್ಲಿ ಪ್ರೇರೇಪಿಸಿದರೆ ನೀನು ಅವನಿಗೆ ಸಮ್ಮತಿಸಬಾರದು; ಅವನ ಮಾತನ್ನು ಕೇಳಬಾರದು; ನಿನ್ನ ಕಣ್ಣು ಅವನನ್ನು ಕರುಣಿಸಬಾರದು; ನೀನು ಅವ ನನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು. ಅವನನ್ನು ಖಂಡಿತವಾಗಿ ಕೊಲ್ಲಬೇಕು. ಅವನನ್ನು ಕೊಲ್ಲುವ ಹಾಗೆ ಮೊದಲು ನಿನ್ನ ಕೈ, ಆ ಮೇಲೆ ಎಲ್ಲಾ ಜನರ ಕೈ ಅವನ ಮೇಲೆ ಇರಬೇಕು. ಐಗುಪ್ತ ದೇಶದೊಳಗಿಂದಲೂ ದಾಸತ್ವದ ಮನೆಯೊ ಳಗಿಂದಲೂ ನಿನ್ನನ್ನು ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನ ಬಳಿಯಿಂದ ನಿನ್ನನ್ನು ದೂಡುವದಕ್ಕೆ ಅವನು ಪ್ರಯತ್ನಮಾಡಿದ್ದರಿಂದ ಅವನು ಸಾಯುವಹಾಗೆ ಕಲ್ಲೆಸೆಯಬೇಕು. ಆಗ ಇಸ್ರಾಯೇ ಲೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ನಿನ್ನ ಮಧ್ಯದಲ್ಲಿ ಇಂಥಾ ಕೆಟ್ಟಕಾರ್ಯವನ್ನು ಮಾಡುವದಿಲ್ಲ. ನಿನ್ನ ದೇವರಾದ ಕರ್ತನು ನಿನಗೆ ವಾಸಮಾಡು ವದಕ್ಕೆ ಕೊಡುವ ನಿನ್ನ ಪಟ್ಟಣಗಳೊಳಗೆ ಒಂದರಲ್ಲಿ ಬೆಲಿಯಾಳನ ಮಕ್ಕಳು ನಿನ್ನ ಮಧ್ಯದಿಂದ ಹೊರಟು ಹೋಗಿ ನೀವು ತಿಳಿಯದ ಬೇರೆ ದೇವರುಗಳನ್ನು--ನಾವು ಸೇವಿಸೋಣ ಎಂದು ಹೇಳಿ ತಮ್ಮ ಪಟ್ಟಣದ ನಿವಾಸಿಗಳನ್ನು ಹಿಂದೆ ಎಳೆದಿದ್ದಾರೆಂದು ಕೇಳಿದರೆ ನೀನು ಹುಡುಕಿ ಶೋಧಿಸಿ ಚೆನ್ನಾಗಿ ವಿಚಾರಣೆ ಮಾಡಬೇಕು; ಆ ಕಾರ್ಯವು ನಿಶ್ಚಯವಾಗಿ ಸತ್ಯ ವಾದರೆ, ಅಂಥ ಅಸಹ್ಯವು ನಿಮ್ಮಲ್ಲಿ ನಡೆದದ್ದಾದರೆ, ಆ ಪಟ್ಟಣದ ನಿವಾಸಿಗಳನ್ನು ಕತ್ತಿಯಿಂದ ಸಂಪೂರ್ಣ ವಾಗಿ ನಾಶಮಾಡಿ ಅದನ್ನೂ ಅದರಲ್ಲಿರುವ ಎಲ್ಲವನ್ನೂ ಸಮಸ್ತ ಪಶುಗಳನ್ನೂ ಸಹ ಕತ್ತಿಯಿಂದ ನಿರ್ಮೂಲ ಮಾಡಬೇಕು.
- Numbers 25:2–4 ಅರಣ್ಯಕಾಂಡ 25:2–4ಇವರು ಜನರನ್ನು ತಮ್ಮ ದೇವರುಗಳ ಬಲಿಗಳಿಗೆ ಕರೆದರು; ಜನರು ತಿಂದು ಅವರ ದೇವರು ಗಳಿಗೆ ಅಡ್ಡಬಿದ್ದರು. ಇಸ್ರಾಯೇಲ್ ಬಾಳ್ಪೆಯೋರಿಗೆ ತಾನೇ ಕೂಡಿಕೊಂಡದ್ದರಿಂದ ಕರ್ತನ ಕೋಪವು ಇಸ್ರಾಯೇಲಿನ ಮೇಲೆ ಉರಿಯಿತು. ಆಗ ಕರ್ತನು ಮೋಶೆಗೆ--ಕರ್ತನ ಕೋಪಾಗ್ನಿಯು ಇಸ್ರಾಯೇಲಿ ನಿಂದ ತಿರುಗಿಕೊಳ್ಳುವ ಹಾಗೆ ನೀನು ಜನರ ಮುಖ್ಯಸ್ಥ ರೆಲ್ಲರನ್ನು ತಕ್ಕೊಂಡು ಅವರನ್ನು ಸೂರ್ಯನಿಗೆದುರಾಗಿ ಕರ್ತನ ಮುಂದೆ ತೂಗಹಾಕು.
- Numbers 21:3 ಅರಣ್ಯಕಾಂಡ 21:3ಆಗ ಕರ್ತನು ಇಸ್ರಾಯೇಲ್ಯರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಕೊಟ್ಟುಬಿಟ್ಟನು; ಇಸ್ರಾಯೇಲ್ಯರು ಅವರನ್ನೂ ಅವರ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದರು. ಅವರು ಆ ಸ್ಥಳಕ್ಕೆ ಹೊರ್ಮಾ ಎಂದು ಹೆಸರಿಟ್ಟರು.
- Joshua 23:15–16 ಯೆಹೋಶುವ 23:15–16ಈಗ ನಿಮ್ಮ ದೇವರಾದ ಕರ್ತನು ನಿಮಗೆ ವಾಗ್ದಾನಮಾಡಿದ ಒಳ್ಳೇ ಕಾರ್ಯಗಳೆಲ್ಲಾ ನಿಮಗೆ ಹೇಗೆ ಸಂಭವಿಸಿದವೋ ಹಾಗೆಯೇ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದ ತನ್ನ ಆಜ್ಞೆ ಗಳನ್ನು ನೀವು ವಿಾರಿ, ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಿಮ್ಮ ದೇವರಾದ ಕರ್ತನು ನಿಮಗೆ ಕೊಟ್ಟ ಈ ಒಳ್ಳೇ ದೇಶದಿಂದ ನಿಮ್ಮನ್ನು ನಾಶಮಾಡುವ ಮಟ್ಟಿಗೂ ಕರ್ತನು ನಿಮ್ಮ ಮೇಲೆ ಸಕಲ ಕೇಡುಗಳನ್ನು ಬರಮಾಡುವನು.ಕರ್ತನ ಕೋಪವು ನಿಮ್ಮ ಮೇಲೆ ಉರಿಯುವದು; ಆತನು ನಿಮಗೆ ಕೊಟ್ಟ ಒಳ್ಳೇ ದೇಶದಿಂದ ನೀವು ಬೇಗನೆ ನಾಶವಾಗಿ ಹೋಗುವಿರಿ ಅಂದನು. ಕರ್ತನ ಕೋಪವು ನಿಮ್ಮ ಮೇಲೆ ಉರಿಯುವದು; ಆತನು ನಿಮಗೆ ಕೊಟ್ಟ ಒಳ್ಳೇ ದೇಶದಿಂದ ನೀವು ಬೇಗನೆ ನಾಶವಾಗಿ ಹೋಗುವಿರಿ ಅಂದನು.