Exodus · chapter 23 · verse 1
Exodus 23:1 in Kannada
ನೀನು ಸುಳ್ಳು ಸುದ್ಧಿಯನ್ನು ಹಬ್ಬಿಸ ಬಾರದು. ಅನ್ಯಾಯದ ಸಾಕ್ಷಿಯಾಗಿರು ವದಕ್ಕೆ ದುಷ್ಟನೊಂದಿಗೆ ಸೇರಬೇಡ.
Neenu sullu suddhiyannu habbisa baaradu. Anyaayada saakshiyaagiru vadakke dushtanondige serabeda.
Exodus 23:1 in English
- King James Version (KJV)
- Thou shalt not raise a false report: put not thine hand with the wicked to be an unrighteous witness.
- World English Bible (WEB)
- “You shall not spread a false report. Don’t join your hand with the wicked to be a malicious witness.
- American Standard Version (ASV)
- Thou shalt not take up a false report: put not thy hand with the wicked to be an unrighteous witness.
- Bible in Basic English (BBE)
- Do not let a false statement go further; do not make an agreement with evil-doers to be a false witness.
- Darby Translation (DBY)
- Thou shalt not accept a false report; extend not thy hand to the wicked, to be an unrighteous witness.
- Webster's Bible (WBS)
- Thou shalt not raise a false report: put not thy hand with the wicked to be an unrighteous witness.
- Young's Literal Translation (YLT)
- 'Thou dost not lift up a vain report; thou dost not put thy hand with a wicked man to be a violent witness.
Read in context
- 1ನೀನು ಸುಳ್ಳು ಸುದ್ಧಿಯನ್ನು ಹಬ್ಬಿಸ ಬಾರದು. ಅನ್ಯಾಯದ ಸಾಕ್ಷಿಯಾಗಿರು ವದಕ್ಕೆ ದುಷ್ಟನೊಂದಿಗೆ ಸೇರಬೇಡ.
- 2ಕೆಟ್ಟದ್ದನ್ನು ಮಾಡು ವಂತೆ ಬಹುಮಂದಿಯನ್ನು ಹಿಂಬಾಲಿಸಬೇಡ; ಇಲ್ಲವೆ ಬಹುಮಂದಿಯೊಂದಿಗೆ ನ್ಯಾಯಕ್ಕೆ ಪ್ರತಿಕೂಲವಾಗಿ ವ್ಯಾಜ್ಯದಲ್ಲಿ ಉತ್ತರಕೊಡಬೇಡ.
- 3ಬಡವನಿಗೆ ವ್ಯಾಜ್ಯ ದಲ್ಲಿ ಮುಖದಾಕ್ಷಿಣ್ಯ ಮಾಡಬೇಡ.
Cross references
- Psalm 101:5 ಕೀರ್ತನೆಗಳು 101:5ಮರೆಯಾಗಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಗರ್ವದ ಕಣ್ಣೂ ಅಹಂಕಾರದ ಹೃದಯವೂ ಉಳ್ಳವನನ್ನು ತಾಳಲಾರೆನು.
- Proverbs 19:5 ಜ್ಞಾನೋಕ್ತಿಗಳು 19:5ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವದಿಲ್ಲ; ಸುಳ್ಳಾಡುವವನು ತಪ್ಪಿಸಿಕೊಳ್ಳದೆ ಇರನು.
- Deuteronomy 19:16–21 ಧರ್ಮೋಪದೇಶಕಾಂಡ 19:16–21ತಪ್ಪಾದ ಸಾಕ್ಷಿಯವನು ಒಬ್ಬ ಮನುಷ್ಯನ ಮೇಲೆ ಅವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಕೊಡುವದಕ್ಕೆ ಎದ್ದರೆ ವ್ಯಾಜ್ಯವಾಡುವ ಆ ಇಬ್ಬರು ಮನುಷ್ಯರು ಕರ್ತನ ಮುಂದೆಯೂ ಆ ದಿನಗಳಲ್ಲಿರುವ ಯಾಜಕರ ನ್ಯಾಯಾಧಿಪತಿಗಳ ಮುಂದೆಯೂ ನಿಂತುಕೊಳ್ಳಬೇಕು. ನ್ಯಾಯಾಧಿಪತಿಗಳು ಒಳ್ಳೆ ವಿಚಾರಣೆಮಾಡಬೇಕು; ಆಗ ಇಗೋ, ಆ ಸಾಕ್ಷಿ ಸುಳ್ಳುಸಾಕ್ಷಿಯಾಗಿದ್ದರೆ,ಅವನು ತನ್ನ ಸಹೋದರನ ಮೇಲೆ ಸುಳ್ಳು ಹೇಳಿದ್ದರೆ ಅವನು ತನ್ನ ಸಹೋದರನಿಗೆ ಮಾಡುವದಕ್ಕೆ ಯೋಚಿಸಿದ ಪ್ರಕಾರ ಅವನಿಗೆ ಮಾಡಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು. ಉಳಿದವರು ಕೇಳಿ ಭಯಪಟ್ಟು ಆ ಕೆಟ್ಟಕೃತ್ಯವನ್ನು ಇನ್ನು ಮೇಲೆ ನಿನ್ನ ಮಧ್ಯದಲ್ಲಿ ಮಾಡುವದಿಲ್ಲ.ನಿನ್ನ ಕಣ್ಣು ಕರುಣಿಸಬಾರದು; ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ಕೊಡಬೇಕು. ನಿನ್ನ ಕಣ್ಣು ಕರುಣಿಸಬಾರದು; ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ಕೊಡಬೇಕು.
- Matthew 26:59–61 ಮತ್ತಾಯನು 26:59–61ಆಗ ಪ್ರಧಾನಯಾಜಕರೂ ಹಿರಿಯರೂ ಆಲೋ ಚನಾ ಸಭೆಯವರೆಲ್ಲರೂ ಯೇಸುವಿಗೆ ವಿರೋಧವಾಗಿ ಆತನನ್ನು ಕೊಲ್ಲಿಸುವಂತೆ ಸುಳ್ಳು ಸಾಕ್ಷಿಗಾಗಿ ಹುಡುಕಿ ದರು. ಆದರೆ ಯಾರೂ ಸಿಕ್ಕಲಿಲ್ಲ; ಹೌದು, ಬಹುಮಂದಿ ಸುಳ್ಳು ಸಾಕ್ಷಿಗಳು ಬಂದರೂ ಅವರಿಗೆ ಏನೂ ದೊರೆಯಲಿಲ್ಲ; ಕಡೆಯಲ್ಲಿ ಇಬ್ಬರು ಸುಳ್ಳು ಸಾಕ್ಷಿಗಳು ಬಂದು-- ನಾನು ದೇವಾಲಯ ವನ್ನು ಕೆಡವಿ ಮೂರು ದಿವಸಗಳಲ್ಲಿ ಕಟ್ಟಬಲ್ಲೆನೆಂದು ಇವನು ಹೇಳಿದನು ಅಂದರು.
- Exodus 20:16 ವಿಮೋಚನಕಾಂಡ 20:16ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳು ಸಾಕ್ಷಿ ಹೇಳಬಾರದು.
- Deuteronomy 5:20 ಧರ್ಮೋಪದೇಶಕಾಂಡ 5:20ನಿನ್ನ ನೆರೆಯವನ ಮೇಲೆ ಸುಳ್ಳುಸಾಕ್ಷಿ ಹೇಳಬೇಡ.
- Leviticus 19:16 ಯಾಜಕಕಾಂಡ 19:16ನಿನ್ನ ಜನರ ಮಧ್ಯದಲ್ಲಿ ಚಾಡಿಗಾರನಾಗಿ ತಿರುಗಾಡಬೇಡ; ನಿನ್ನ ನೆರೆಯವನ ರಕ್ತಾಪರಾಧಕ್ಕೆ ಕಾರಣನಾಗಬೇಡ; ನಾನೇ ಕರ್ತನು.
- Psalm 35:11 ಕೀರ್ತನೆಗಳು 35:11ಸುಳ್ಳು ಸಾಕ್ಷಿಗಳು ಎದ್ದು ನಾನು ತಿಳಿಯದವುಗಳನ್ನು ನನ್ನ ಮೇಲೆ ಹೊರಿಸಿ ದರು.
- Romans 3:8 ರೋಮಾಪುರದವರಿಗೆ 3:8(ದೂಷಿಸಲ್ಪಡುವ ಪ್ರಕಾರವಾಗಿ ಯೂ ನಾವು ಹೇಳುತ್ತೇವೆಂದು ಕೆಲವರು ಅನ್ನುವ ಪ್ರಕಾರವಾಗಿಯೂ)--ಒಳ್ಳೆಯದು ಬರುವ ಹಾಗೆ ನಾವು ಕೆಟ್ಟದ್ದನ್ನು ಮಾಡೋಣವೇ? ಅಂಥವರ ದಂಡ ನೆಯು ನ್ಯಾಯವಾಗಿದೆ.
- Revelation 12:10 ಪ್ರಕಟನೆ 12:10ಆಗ ಪರಲೋಕದಲ್ಲಿ ಮಹಾಶಬ್ದವನ್ನು ನಾನು ಕೇಳಿದೆನು. ಅದು--ಈಗ ರಕ್ಷಣೆಯೂ ಶಕ್ತಿಯೂ ನಮ್ಮ ದೇವರ ರಾಜ್ಯವೂ ಆತನ ಕ್ರಿಸ್ತನ ಅಧಿಕಾರವೂ ಬಂದವು; ಯಾಕಂದರೆ ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರು ಗಾರನು ದೊಬ್ಬಲ್ಪಟ್ಟಿದ್ದಾನೆ.
- Acts 6:11–13 ಅಪೊಸ್ತಲರ ಕೃತ್ಯಗಳು 6:11–13ಅವರು ಸುಳ್ಳು ಸಾಕ್ಷಿ ಹೇಳುವ ಮನುಷ್ಯರನ್ನು ಸೇರಿಸಿಕೊಂಡು--ಇವನು ಮೋಶೆಗೆ ಮತ್ತು ದೇವರಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನು ಹೇಳುವದನ್ನು ನಾವು ಕೇಳಿದ್ದೇವೆ ಎಂದು ಅವರು ಹೇಳಿದರು. ಇನ್ನೂ ಅವರು ಜನರನ್ನೂ ಹಿರಿಯರನ್ನೂ ಶಾಸ್ತ್ರಿ ಗಳನ್ನೂ ರೇಗಿಸಿದ್ದಲ್ಲದೆ ಬಂದು ಅವನನ್ನು ಹಿಡಿದು ಆಲೋಚನಾಸಭೆಗೆ ತೆಗೆದುಕೊಂಡು ಹೋಗಿ ಸುಳ್ಳು ಸಾಕ್ಷಿಗಳನ್ನು ನಿಲ್ಲಿಸ ಲಾಗಿ ಅವರು--ಈ ಮನುಷ್ಯನು ಈ ಪರಿಶುದ್ಧ ಸ್ಥಳಕ್ಕೂ ನ್ಯಾಯಪ್ರಮಾಣಕ್ಕೂ ವಿರುದ್ಧವಾಗಿ ದೂಷಣೆಯ ಮಾತುಗಳನ್ನಾಡುವದನ್ನು ನಿಲ್ಲಿಸುವದೇ ಇಲ್ಲ.
- Proverbs 19:9 ಜ್ಞಾನೋಕ್ತಿಗಳು 19:9ಸುಳ್ಳು ಸಾಕ್ಷಿಯು ಶಿಕ್ಷಿಸಲ್ಪಡದೆ ಇರುವದಿಲ್ಲ; ಸುಳ್ಳಾಡುವವನು ನಾಶವಾ ಗುವನು.