Leviticus · chapter 19 · verse 16
Leviticus 19:16 in Kannada
ನಿನ್ನ ಜನರ ಮಧ್ಯದಲ್ಲಿ ಚಾಡಿಗಾರನಾಗಿ ತಿರುಗಾಡಬೇಡ; ನಿನ್ನ ನೆರೆಯವನ ರಕ್ತಾಪರಾಧಕ್ಕೆ ಕಾರಣನಾಗಬೇಡ; ನಾನೇ ಕರ್ತನು.
Ninna janara madhyadalli chaadigaaranaagi tirugaadabeda; ninna nereyavana raktaaparaadhakke kaarananaagabeda; naane kartanu.
Leviticus 19:16 in English
- King James Version (KJV)
- Thou shalt not go up and down [as] a talebearer among thy people: neither shalt thou stand against the blood of thy neighbour: I [am] the LORD.
- World English Bible (WEB)
- “‘You shall not go around as a slanderer among your people. “‘You shall not endanger the life of your neighbor. I am the LORD.
- American Standard Version (ASV)
- Thou shalt not go up and down as a talebearer among thy people: neither shalt thou stand against the blood of thy neighbor: I am Jehovah.
- Bible in Basic English (BBE)
- Do not go about saying untrue things among your people, or take away the life of your neighbour by false witness: I am the Lord.
- Darby Translation (DBY)
- Thou shalt not go about as a talebearer among thy people; thou shalt not stand up against the life of thy neighbour: I am Jehovah.
- Webster's Bible (WBS)
- Thou shalt not go up and down [as] a tale-bearer among thy people; neither shalt thou stand against the blood of thy neighbor; I [am] the LORD.
- Young's Literal Translation (YLT)
- 'Thou dost not go slandering among thy people; thou dost not stand against the blood of thy neighbour; I [am] Jehovah.
Read in context
- 14ಕಿವುಡನನ್ನು ಶಪಿಸಬಾರದು; ಕುರು ಡನು ಮುಗ್ಗರಿಸುವಂತೆ ಅವನ ಮುಂದೆ ಕಲ್ಲನ್ನು ಇಡ ಬಾರದು, ಆದರೆ ನಿನ್ನ ದೇವರಿಗೆ ಭಯಪಡಬೇಕು; ನಾನೇ ಕರ್ತನು.
- 15ನ್ಯಾಯತೀರ್ಪಿನಲ್ಲಿ ನೀನು ಅನ್ಯಾಯಮಾಡದಿರು; ಬಡವನ ಮುಖದಾಕ್ಷಿಣ್ಯ ನೋಡಬೇಡ, ಬಲಿಷ್ಠನ ವ್ಯಕ್ತಿತ್ವವನ್ನು ಗೌರವಿಸದಿರು. ಆದರೆ ನಿನ್ನ ನೆರೆಯವನಿಗೆ ನೀತಿಯಲ್ಲಿ ನ್ಯಾಯತೀರ್ಪು ಮಾಡು.
- 16ನಿನ್ನ ಜನರ ಮಧ್ಯದಲ್ಲಿ ಚಾಡಿಗಾರನಾಗಿ ತಿರುಗಾಡಬೇಡ; ನಿನ್ನ ನೆರೆಯವನ ರಕ್ತಾಪರಾಧಕ್ಕೆ ಕಾರಣನಾಗಬೇಡ; ನಾನೇ ಕರ್ತನು.
- 17ನಿನ್ನ ಹೃದಯ ದಲ್ಲಿ ನಿನ್ನ ಸಹೋದರನನ್ನು ದ್ವೇಷಿಸಬೇಡ; ಹೇಗಾ ದರೂ ನಿನ್ನ ನೆರೆಯವನ ಪಾಪವು ನಿನ್ನ ಮೇಲೆ ಬಾರದಂತೆ ಅವನನ್ನು ತಪ್ಪದೆ ಗದರಿಸು.
- 18ನಿನ್ನ ಜನರ ಮಕ್ಕಳ ಮೇಲೆ ಮುಯ್ಯಿಗೆಮುಯ್ಯಿ ತೀರಿಸದವ ನಾಗಿಯೂ ಸೇಡು ತೀರಿಸದೆಯೂ ಇರು. ಆದರೆ ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು; ನಾನೇ ಕರ್ತನು.
Cross references
- Exodus 23:1 ವಿಮೋಚನಕಾಂಡ 23:1ನೀನು ಸುಳ್ಳು ಸುದ್ಧಿಯನ್ನು ಹಬ್ಬಿಸ ಬಾರದು. ಅನ್ಯಾಯದ ಸಾಕ್ಷಿಯಾಗಿರು ವದಕ್ಕೆ ದುಷ್ಟನೊಂದಿಗೆ ಸೇರಬೇಡ.
- Exodus 23:7 ವಿಮೋಚನಕಾಂಡ 23:7ಸುಳ್ಳಿನ ವಿಷಯಗಳಿಂದ ನೀನು ದೂರ ವಿರು; ನಿರಪರಾಧಿಯನ್ನೂ ನೀತಿವಂತನನ್ನೂ ಕೊಲ್ಲ ಬೇಡ, ಯಾಕಂದರೆ ನಾನು ದುಷ್ಟನನ್ನು ನೀತಿವಂತ ನೆಂದು ನಿರ್ಣಯಿಸುವದಿಲ್ಲ.
- Proverbs 20:19 ಜ್ಞಾನೋಕ್ತಿಗಳು 20:19ತಿರುಗುವ ಚಾಡಿ ಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ. ಆದ ಕಾರಣ ತನ್ನ ತುಟಿಗಳಿಂದ ಮುಖಸ್ತುತಿ ಮಾಡುವವನ ಗೊಡವೆಗೆ ಹೋಗಬೇಡ.
- Proverbs 11:13 ಜ್ಞಾನೋಕ್ತಿಗಳು 11:13ಚಾಡಿಕೋರನು ರಹಸ್ಯಗಳನ್ನು ಬಹಿರಂಗ ಪಡಿಸುತ್ತಾನೆ. ನಂಬಿಕೆಯ ಆತ್ಮವುಳ್ಳವನು ಸಂಗತಿಯನ್ನು ಮುಚ್ಚುತ್ತಾನೆ.
- Ezekiel 22:9 ಯೆಹೆಜ್ಕೇಲನು 22:9ನಿನ್ನಲ್ಲಿ ರಕ್ತಚೆಲ್ಲುವ ಹಾಗೆ ಚಾಡಿ ಹೇಳುವ ಜನ ಇದ್ದಾರೆ; ಬೆಟ್ಟಗಳ ಮೇಲೆ ತಿನ್ನುವವರಿದ್ದಾರೆ; ದುರಾ ಚಾರಿಗಳು ನಿನ್ನ ಮಧ್ಯದಲ್ಲಿದ್ದಾರೆ.
- Jeremiah 6:28 ಯೆರೆಮೀಯ 6:28ಅವರೆಲ್ಲರು ಘೋರವಾಗಿ ತಿರುಗಿ ಬೀಳುವವರೇ; ಚಾಡಿಕೋರರಾಗಿ ನಡೆಯುತ್ತಾರೆ; ಹಿತ್ತಾಳೆಯೂ ಕಬ್ಬಿಣವೂ ಆಗಿದ್ದಾರೆ; ಅವರೆಲ್ಲರೂ ಕೆಡಿಸುವವರೇ.
- Jeremiah 9:4 ಯೆರೆಮೀಯ 9:4ನಿಮ್ಮ ನಿಮ್ಮ ನೆರೆಯವರಿಗೆ ಎಚ್ಚರಿಕೆಯಾಗಿರಿ; ಯಾವ ಸಹೋದರ ನಲ್ಲಾದರೂ ನಂಬಿಕೆ ಇಡಬೇಡಿರಿ; ಸಹೋದರರೆಲ್ಲರೂ ಸಂಪೂರ್ಣವಾಗಿ ಮೋಸಮಾಡುವರು, ನೆರೆಯವ ರೆಲ್ಲರು ಚಾಡಿಹೇಳುತ್ತಾ ತಿರುಗಾಡುವರು.
- Exodus 20:16 ವಿಮೋಚನಕಾಂಡ 20:16ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳು ಸಾಕ್ಷಿ ಹೇಳಬಾರದು.
- Psalm 15:3 ಕೀರ್ತನೆಗಳು 15:3ಅವನು ತನ್ನ ನಾಲಿಗೆಯಿಂದ ಚಾಡಿ ಹೇಳುವದಿಲ್ಲ; ತನ್ನ ನೆರೆಯವನನ್ನು ನಿಂದಿಸು ವದಿಲ್ಲ;
- 1 Kings 21:10–13 1 ಅರಸುಗಳು 21:10–13ನೀನು ದೇವರನ್ನೂ ಅರಸನನ್ನೂ ದೂಷಿ ಸಿದಿ ಎಂದು ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಲು ಅವನ ಮುಂದೆ ಬೆಲಿಯಾಳನ ಮಕ್ಕಳಾದ ಇಬ್ಬರು ಮನುಷ್ಯರನ್ನು ನಿಲ್ಲಿಸಿರಿ; ತರುವಾಯ ಅವನನ್ನು ಹೊರಗೆ ತಕ್ಕೊಂಡು ಹೋಗಿ ಅವನು ಸಾಯುವ ಹಾಗೆ ಕಲ್ಲೆಸೆಯಿರಿ ಎಂದು ಬರೆದಿತ್ತು. ಆಗ ಅವನ ಪಟ್ಟಣದಲ್ಲಿರುವ ಹಿರಿಯರೂ ಗೌರವಸ್ಥರೂ ತಮಗೆ ಈಜೆಬೆಲಳು ಕಳುಹಿಸಿದ ಪತ್ರದ ಪ್ರಕಾರವೇ ಮಾಡಿ ದರು. ಅವರು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರ ಸ್ಥಳದಲ್ಲಿ ನಿಲ್ಲಿಸಿ ದರು. ಆಗ ಬೆಲಿಯಾಳನ ಮಕ್ಕಳಾದ ಇಬ್ಬರು ಮನುಷ್ಯರು ಬಂದು ಅವನಿಗೆದುರಾಗಿ ಕುಳಿತು ಕೊಂಡರು; ಈ ಬೆಲಿಯಾಳನ ಮನುಷ್ಯರು ಜನರ ಸಮ್ಮುಖದಲ್ಲಿ ನಾಬೋತನಿಗೆ ವಿರೋಧವಾಗಿ--ಈ ನಾಬೋತನು ದೇವರನ್ನೂ ಅರಸನನ್ನೂ ದೂಷಿಸಿದ ನೆಂದು ಸಾಕ್ಷಿ ಹೇಳಿದರು. ಆಗ ಅವನನ್ನು ಪಟ್ಟಣದ ಹೊರಗೆ ತಕ್ಕೊಂಡು ಹೋಗಿ ಅವನು ಸಾಯುವ ಹಾಗೆ ಅವರು ಅವನಿಗೆ ಕಲ್ಲೆಸೆದರು. ಅವನು ಸತ್ತನು.
- Acts 6:11–13 ಅಪೊಸ್ತಲರ ಕೃತ್ಯಗಳು 6:11–13ಅವರು ಸುಳ್ಳು ಸಾಕ್ಷಿ ಹೇಳುವ ಮನುಷ್ಯರನ್ನು ಸೇರಿಸಿಕೊಂಡು--ಇವನು ಮೋಶೆಗೆ ಮತ್ತು ದೇವರಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನು ಹೇಳುವದನ್ನು ನಾವು ಕೇಳಿದ್ದೇವೆ ಎಂದು ಅವರು ಹೇಳಿದರು. ಇನ್ನೂ ಅವರು ಜನರನ್ನೂ ಹಿರಿಯರನ್ನೂ ಶಾಸ್ತ್ರಿ ಗಳನ್ನೂ ರೇಗಿಸಿದ್ದಲ್ಲದೆ ಬಂದು ಅವನನ್ನು ಹಿಡಿದು ಆಲೋಚನಾಸಭೆಗೆ ತೆಗೆದುಕೊಂಡು ಹೋಗಿ ಸುಳ್ಳು ಸಾಕ್ಷಿಗಳನ್ನು ನಿಲ್ಲಿಸ ಲಾಗಿ ಅವರು--ಈ ಮನುಷ್ಯನು ಈ ಪರಿಶುದ್ಧ ಸ್ಥಳಕ್ಕೂ ನ್ಯಾಯಪ್ರಮಾಣಕ್ಕೂ ವಿರುದ್ಧವಾಗಿ ದೂಷಣೆಯ ಮಾತುಗಳನ್ನಾಡುವದನ್ನು ನಿಲ್ಲಿಸುವದೇ ಇಲ್ಲ.
- 1 Peter 2:1 1 ಪೇತ್ರನು 2:1ಆದಕಾರಣ ಎಲ್ಲಾ ಕೆಟ್ಟತನವನ್ನೂ ಎಲ್ಲಾ ವಂಚನೆಯನ್ನೂ ಕಪಟವನ್ನೂ ಹೊಟ್ಟೇ ಕಿಚ್ಚನ್ನೂ ಎಲ್ಲಾ ಕೆಟ್ಟ ಮಾತುಗಳನ್ನೂ ವಿಸರ್ಜಿಸಿರಿ.