Exodus · chapter 26 · verse 3
Exodus 26:3 in Kannada
ಐದು ತೆರೆಗಳು ಒಂದಕ್ಕೊಂದು ಜೋಡಿಸಲ್ಪಟ್ಟಿರಬೇಕು, ಬೇರೆ ಐದು ತೆರೆಗಳು ಒಂದ ಕ್ಕೊಂದು ಜೋಡಿಸಲ್ಪಟ್ಟಿರಬೇಕು.
Aidu teregalu ondakkondu jodisalpattirabeku, bere aidu teregalu onda kkondu jodisalpattirabeku.
Exodus 26:3 in English
- King James Version (KJV)
- The five curtains shall be coupled together one to another; and [other] five curtains [shall be] coupled one to another.
- World English Bible (WEB)
- Five curtains shall be coupled together to one another, and the other five curtains shall be coupled to one another.
- American Standard Version (ASV)
- Five curtains shall be coupled together one to another; and [the other] five curtains shall be coupled one to another.
- Bible in Basic English (BBE)
- Five curtains are to be joined together, and the other five are to be joined together.
- Darby Translation (DBY)
- Five of the curtains shall be coupled one to another, and [the other] five curtains coupled one to another.
- Webster's Bible (WBS)
- The five curtains shall be coupled together one to another; and [other] five curtains [shall be] coupled one to another.
- Young's Literal Translation (YLT)
- five of the curtains are joining one unto another, and five curtains are joining one to another.
Read in context
- 1ಗುಡಾರವನ್ನು ಹತ್ತು ತೆರೆಗಳಿಂದ ಮಾಡ ಬೇಕು. ಅವು ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣಗ ಳಿಂದಲೂ ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳವು ಗಳಾಗಿಯೂ ಇರಬೇಕು.
- 2ಒಂದು ತೆರೆಯ ಉದ್ದವು ಇಪ್ಪತ್ತೆಂಟು ಮೊಳ, ಅದರ ಅಗಲವು ನಾಲ್ಕು ಮೊಳ ವಾಗಿರಬೇಕು ಪ್ರತಿಯೊಂದು ತೆರೆಯು ಒಂದೇ ಅಳತೆ ಯುಳ್ಳದ್ದಾಗಿರಬೇಕು.
- 3ಐದು ತೆರೆಗಳು ಒಂದಕ್ಕೊಂದು ಜೋಡಿಸಲ್ಪಟ್ಟಿರಬೇಕು, ಬೇರೆ ಐದು ತೆರೆಗಳು ಒಂದ ಕ್ಕೊಂದು ಜೋಡಿಸಲ್ಪಟ್ಟಿರಬೇಕು.
- 4ಒಂದು ತೆರೆಯ ಅಂಚಿನ ಕೊನೆಗೆ ಜೋಡಿಸುವ ಸ್ಥಳದಲ್ಲಿ ನೀಲಿ ನೂಲಿನ ಕುಣಿಕೆಗಳನ್ನು ಮಾಡಿ ಎರಡನೇ ಜೋಡನೆಯ ಕಡೇ ತೆರೆಯ ಕೊನೆಯಲ್ಲಿಯೂ ಹಾಗೆಯೇ ಮಾಡಬೇಕು.
- 5ಒಂದು ತೆರೆಯನ್ನು ಜೋಡಿಸುವ ಸ್ಥಳದಲ್ಲಿ ಇರುವ ಇನ್ನೊಂದು ತೆರೆಯ ಕೊನೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು. ಆ ಕುಣಿಕೆಗಳು ಒಂದಕ್ಕೊಂದು ಸರಿ ಯಾಗಿ ಹಿಡುಕೊಳ್ಳುವವುಗಳಾಗಿರಬೇಕು.
Cross references
- Colossians 2:19 ಕೊಲೊಸ್ಸೆಯವರಿಗೆ 2:19ಇಂಥವನು (ಕ್ರಿಸ್ತನೆಂಬ) ಶಿರಸ್ಸಿನ ಹೊಂದಿಕೆಯನ್ನು ಬಿಟ್ಟವ ನಾಗಿದ್ದಾನೆ. ಆ ಶಿರಸ್ಸಿನಿಂದಲೇ ದೇಹವೆಲ್ಲಾ ಕೀಲು ನರಗಳ ಮೂಲಕ ಬೇಕಾದ ಸಹಾಯವನ್ನು ಹೊಂದಿ ಒಂದಾಗಿ ಜೋಡಿಸಲ್ಪಟ್ಟು ದೇವರು ಕೊಡುವ ವೃದ್ಧಿ ಯಿಂದ ಅಭಿವೃದ್ದಿಯಾಗುತ್ತಾ ಬರುತ್ತದೆ.
- John 17:21 ಯೋಹಾನನು 17:21ಇದಲ್ಲದೆ ಅವರೆಲ್ಲರೂ ನಮ್ಮಲ್ಲಿ ಒಂದಾಗಿರಬೇಕೆಂತಲೂ ನೀನು ನನ್ನನ್ನು ಕಳುಹಿಸಿದ್ದೀ ಎಂದು ಲೋಕವು ನಂಬುವಂತೆಯೂ ತಂದೆಯಾದ ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಹಾಗೆ ಇವರು ಸಹ ನಮ್ಮಲ್ಲಿ ಒಂದಾಗಿರ ಬೇಕೆಂತಲೂ ಕೇಳಿಕೊಳ್ಳುತ್ತೇನೆ.
- Exodus 26:9 ವಿಮೋಚನಕಾಂಡ 26:9ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿ ಆರನೆಯ ತೆರೆಯನ್ನು ಗುಡಾರದ ಮುಂಭಾಗ ದಲ್ಲಿ ಇಮ್ಮಡಿ ಮಾಡಬೇಕು.
- Ephesians 2:21–22 ಎಫೆಸದವರಿಗೆ 2:21–22ಆತನಲ್ಲಿ ಕಟ್ಟಡವು ಹೊಂದಿಕೆ ಯಾಗಿ ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ದ ದೇವಾ ಲಯವಾಗುತ್ತದೆ.ಆತನಲ್ಲಿ ನೀವು ಸಹ ಆತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ಕಟ್ಟಲ್ಪಡುತ್ತಾ ಇದ್ದೀರಿ. ಆತನಲ್ಲಿ ನೀವು ಸಹ ಆತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ಕಟ್ಟಲ್ಪಡುತ್ತಾ ಇದ್ದೀರಿ.
- Exodus 36:10 ವಿಮೋಚನಕಾಂಡ 36:10ಅವನು ಐದು ತೆರೆಗಳನ್ನು ಒಂದಕ್ಕೊಂದು ಜೋಡಿ ಸಿದನು, ಬೇರೆ ಐದು ತೆರೆಗಳನ್ನೂ ಒಂದಕ್ಕೊಂದು ಜೋಡಿಸಿದನು.
- Ephesians 4:3–6 ಎಫೆಸದವರಿಗೆ 4:3–6ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿ ಕೊಳ್ಳುವದಕ್ಕೆ ಆಸಕ್ತರಾಗಿರ್ರಿ. ನಿಮ್ಮ ಕರೆಯುವಿಕೆಯ ಒಂದೇ ನಿರೀಕ್ಷೆಯಲ್ಲಿ ನೀವು ಕರೆಯಲ್ಪಟ್ಟಂತೆಯೇ ದೇಹವು ಒಂದೇ, ಆತ್ಮನು ಒಬ್ಬನೇ, ಒಬ್ಬನೇ ಕರ್ತನು, ಒಂದೇ ನಂಬಿಕೆ, ಒಂದೇ ಬಾಪ್ತಿಸ್ಮ. ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲೆಯೂ ಎಲ್ಲರ ಮುಖಾಂತರವೂ ಎಲ್ಲರಲ್ಲಿಯೂ ಇರುವಾತನಾಗಿದ್ದಾನೆ.
- 1 Corinthians 12:12–27 1 ಕೊರಿಂಥದವರಿಗೆ 12:12–27ಹೇಗೆ ದೇಹವು ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ಆ ದೇಹದ ಅಂಗಗಳೆಲ್ಲವು ಅನೇಕವಾಗಿದ್ದು ಒಂದೇ ದೇಹವಾಗಿ ರುವದೋ, ಹಾಗೆಯೇ ಕ್ರಿಸ್ತನು ಇದ್ದಾನೆ. ಯೆಹೂದ್ಯರಾಗಲಿ ಅನ್ಯರಾಗಲಿ ದಾಸರಾಗಲಿ ಸ್ವತಂತ್ರರಾಗಲಿ ನಾವೆಲ್ಲರು ಒಂದೇ ದೇಹವಾಗು ವದಕ್ಕಾಗಿ ಒಬ್ಬನೇ ಆತ್ಮನಿಂದ ಬಾಪ್ತಿಸ್ಮ ಮಾಡಿಸಿ ಕೊಂಡೆವು; ಆ ಒಬ್ಬನೇ ಆತ್ಮನು ನಮ್ಮೆಲ್ಲರಿಗೂ ಪಾನವಾಗಿ ಕೊಡಲ್ಪಟ್ಟಿದ್ದಾನೆ. ದೇಹವು ಒಂದೇ ಅಂಗವಲ್ಲ, ಆದರೆ ಅದು ಅನೇಕ ಅಂಗಗಳುಳ್ಳದ್ದಾಗಿದೆ. ಕಾಲು--ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಲಿಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವದೋ? ಕಿವಿ--ನಾನು ಕಣ್ಣಲ್ಲದ ಕಾರಣ ದೇಹಕ್ಕೆ ಸೇರಲಿಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವದೋ? ದೇಹವೆಲ್ಲಾ ಕಣ್ಣಾದರೆ ಕೇಳುವದೆಲ್ಲಿ? ಅದೆಲ್ಲಾ ಕೇಳುವದಾದರೆ ಮೂಸಿ ನೋಡುವದೆಲ್ಲಿ? ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನ್ನ ಇಷ್ಟಾನುಸಾರವಾಗಿ ದೇಹದಲ್ಲಿ ಇಟ್ಟಿದ್ದಾನೆ. ಅವೆಲ್ಲವೂ ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವದು? ಆದರೆ ಅಂಗಗಳೇನೋ ಅನೇಕ, ದೇಹವು ಒಂದೇ. ಕಣ್ಣು ಕೈಗೆ--ನೀನು ನನಗೆ ಅವಶ್ಯವಿಲ್ಲವೆಂದೂ ತಲೆಯು ಕಾಲು ಗಳಿಗೆ--ನೀವು ನನಗೆ ಅವಶ್ಯವಿಲ್ಲವೆಂದೂ ಹೇಳುವದ ಕ್ಕಾಗುವದಿಲ್ಲ. ಹೌದು, ಶರೀರದ ಅಂಗಗಳು ಬಹಳ ಬಲಹೀನವಾದವುಗಳೆಂದು ಕಂಡರೂ ಹೆಚ್ಚಾಗಿ ಅವಶ್ಯ ವಾಗಿವೆ. ಇದಲ್ಲದೆ ಅಲ್ಪ ಮಾನವುಳ್ಳವುಗಳೆಂದು ನಾವು ಎಣಿಸುವ ದೇಹದ ಅಂಗಗಳಿಗೆ ಹೆಚ್ಚಾದ ಗೌರವವನ್ನು ಕೊಡುತ್ತೇವೆ. ಆಗ ಅಂದವಿಲ್ಲದ ನಮ್ಮ ಅಂಗಗಳು ಹೆಚ್ಚು ಅಂದವಾಗಿರುತ್ತವೆ. ಅಂದವುಳ್ಳ ನಮ್ಮ ಅಂಗಗಳಿಗೆ ಯಾವ ಅವಶ್ಯಕತೆಯೂ ಇರುವದಿಲ್ಲ; ಆದರೆ ದೇವರು ಕೊರತೆಯುಳ್ಳ ಅಂಗ ವನ್ನು ಹೆಚ್ಚಾಗಿ ಗೌರವಿಸಿ ದೇಹವನ್ನು ಹದವಾಗಿ ಜೋಡಿಸಿದ್ದಾನೆ. ಹೀಗೆ ದೇಹದಲ್ಲಿ ಭೇದವಿರದೆ ಅಂಗಗಳು ಒಂದಕ್ಕೊಂದು ಚಿಂತಿಸುವವುಗಳಾಗಿ ರುತ್ತವೆ. ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ; ಇಲ್ಲವೆ ಒಂದು ಅಂಗಕ್ಕೆ ಮರ್ಯಾದೆ ಬಂದರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ. ಈಗ ನೀವು ಕ್ರಿಸ್ತನ ದೇಹವಾಗಿದ್ದು ವಿಶೇಷ ವಾಗಿ ಅಂಗಗಳಾಗಿದ್ದೀರಿ.
- 1 Corinthians 12:4 1 ಕೊರಿಂಥದವರಿಗೆ 12:4ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ ಆತ್ಮನು ಒಬ್ಬನೇ;
- Ephesians 4:16 ಎಫೆಸದವರಿಗೆ 4:16ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲು ಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯಹೊಂದಿ ಪ್ರೀತಿ ಯಿಂದ ತನ್ನಲ್ಲಿ ಐಕ್ಯವಾಗಿದ್ದು ಭಕ್ತಿವೃದ್ಧಿಯನ್ನು ಹೊಂದುತ್ತದೆ.
- Colossians 2:2 ಕೊಲೊಸ್ಸೆಯವರಿಗೆ 2:2ಹೇಗಂದರೆ, ಅವರ ಹೃದಯಗಳು ಪ್ರೀತಿಯಲ್ಲಿ ಹೊಂದಿಕೊಂಡು ಆದರಣೆ ಹೊಂದಿ ಸಂಪೂರ್ಣ ನಿಶ್ಚಯವೆಂಬ ಭಾಗ್ಯವನ್ನು ಪಡೆದು ತಂದೆಯಾದ ದೇವರ ಮತ್ತು ಕ್ರಿಸ್ತನ ಮರ್ಮವನ್ನು ತಿಳಿಯುವದೇ;