Exodus · chapter 29 · verse 28
Exodus 29:28 in Kannada
ಅದು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಮಕ್ಕಳಿಗೆ ನಿತ್ಯ ಕಟ್ಟಳೆಯಾಗಿರತಕ್ಕದ್ದು. ಯಾಕಂದರೆ ಅದು ಎತ್ತುವ ಅರ್ಪಣೆಯಾಗಿದೆ. ಇಸ್ರಾಯೇಲ್ ಮಕ್ಕಳಿಂದ ಎತ್ತುವ ಅರ್ಪಣೆಯೂ ಅವರ ಸಮಾ ಧಾನದ ಬಲಿಗಳ ಅರ್ಪಣೆಗಳಿಂದ ಅವರು ಕರ್ತನಿಗೆ ಎತ್ತುವ ಅರ್ಪಣೆಯೂ ಆಗಿರಬೇಕು.
Adu aaronanigoo avana kumaararigoo israayel makkalige nitya kattaleyaagiratakkaddu. Yaakandare adu ettuva arpaneyaagide. Israayel makkalinda ettuva arpaneyoo avara samaa dhaanada baligala arpanegalinda avaru kartanige ettuva arpaneyoo aagirabeku.
Exodus 29:28 in English
- King James Version (KJV)
- And it shall be Aaron’s and his sons’ by a statute for ever from the children of Israel: for it [is] an heave offering: and it shall be an heave offering from the children of Israel of the sacrifice of their peace offerings, [even] their heave offering unto the LORD.
- World English Bible (WEB)
- It shall be for Aaron and his sons as their portion forever from the children of Israel; for it is a wave offering. It shall be a wave offering from the children of Israel of the sacrifices of their peace offerings, even their wave offering to the LORD.
- American Standard Version (ASV)
- and it shall be for Aaron and his sons as [their] portion for ever from the children of Israel; for it is a heave-offering: and it shall be a heave-offering from the children of Israel of the sacrifices of their peace-offerings, even their heave-offering unto Jehovah.
- Bible in Basic English (BBE)
- And it will be their part as a right for ever from the children of Israel, it is a special offering from the children of Israel, made from their peace-offerings, a special offering lifted up to the Lord.
- Darby Translation (DBY)
- And they shall be for Aaron and his sons, as an everlasting statute, on the part of the children of Israel; for it is a heave-offering; and it shall be a heave-offering on the part of the children of Israel of the sacrifices of their peace-offerings, [as] their heave-offering to Jehovah.
- Webster's Bible (WBS)
- And it shall be Aaron's and his sons' by a statute for ever, from the children of Israel: for it [is] a heave-offering: and it shall be a heave-offering from the children of Israel of the sacrifice of their peace-offerings, [even] their heave-offering to the LORD.
- Young's Literal Translation (YLT)
- and it hath been for Aaron and for his sons, by a statute age-during from the sons of Israel, for it [is] a heave-offering; and it is a heave offering from the sons of Israel, from the sacrifices of their peace-offerings — their heave-offering to Jehovah.
Read in context
- 26ಇದಲ್ಲದೆ ಆರೋನನು ಪ್ರತಿಷ್ಠೆಯ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ಕರ್ತನ ಮುಂದೆ ತೂಗು ಅರ್ಪಣೆಗಾಗಿ ತೂಗಬೇಕು. ಅದು ನಿನ್ನ ಪಾಲಾಗಿರುವದು.
- 27ನೀನು ಟಗರಿನ ಎದೆಯ ಭಾಗದ ಆಡಿಸುವ ಅರ್ಪಣೆಯನ್ನು ಎತ್ತಿದ ಬಲದ ಮುಂದೊ ಡೆಯನ್ನು ಆರೋನನ ಮತ್ತು ಅವನ ಕುಮಾರರ ಪ್ರತಿಷ್ಠೆಗಾಗಿ ಎತ್ತಿದ್ದನ್ನೂ ಪರಿಶುದ್ಧ ಮಾಡು.
- 28ಅದು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಮಕ್ಕಳಿಗೆ ನಿತ್ಯ ಕಟ್ಟಳೆಯಾಗಿರತಕ್ಕದ್ದು. ಯಾಕಂದರೆ ಅದು ಎತ್ತುವ ಅರ್ಪಣೆಯಾಗಿದೆ. ಇಸ್ರಾಯೇಲ್ ಮಕ್ಕಳಿಂದ ಎತ್ತುವ ಅರ್ಪಣೆಯೂ ಅವರ ಸಮಾ ಧಾನದ ಬಲಿಗಳ ಅರ್ಪಣೆಗಳಿಂದ ಅವರು ಕರ್ತನಿಗೆ ಎತ್ತುವ ಅರ್ಪಣೆಯೂ ಆಗಿರಬೇಕು.
- 29ಇದಲ್ಲದೆ ಆರೋನನಿಗೆ ಇದ್ದ ಪರಿಶುದ್ಧ ವಸ್ತ್ರಗಳು ಅವನ ತರುವಾಯ ಅವನ ಕುಮಾರರಿಗೆ ಆಗಬೇಕು. ಅವರು ಅವುಗಳನ್ನು ತೊಟ್ಟುಕೊಂಡು ಅಭಿಷೇಕಿಸಲ್ಪಟ್ಟು ಪ್ರತಿಷ್ಠಿಸಲ್ಪಡಬೇಕು.
- 30ಅವನ ಬದಲಾಗಿ ಅವನ ಮಗನು ಯಾಜಕತ್ವವನ್ನು ನಡಿಸಿ ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವಂತೆ ಬರುವದಕ್ಕಿರುವವನು ಅವುಗಳನ್ನು ಏಳು ದಿನಗಳ ವರೆಗೆ ತೊಟ್ಟುಕೊಳ್ಳಬೇಕು.
Cross references
- Leviticus 10:14–15 ಯಾಜಕಕಾಂಡ 10:14–15ನೀನೂ ನಿನ್ನೊಂದಿಗೆ ನಿನ್ನ ಕುಮಾರರೂ ಕುಮಾರ್ತೆಯರೂ ಆಡಿಸುವ ಎದೆಯ ಭಾಗವನ್ನೂ ಪ್ರತ್ಯೇಕಿಸಿದ ಭುಜವನ್ನೂ ಶುದ್ಧ ಸ್ಥಳದಲ್ಲಿ ತಿನ್ನಬೇಕು; ಅವು ಇಸ್ರಾಯೇಲ್ ಮಕ್ಕಳ ಸಮಾಧಾನದ ಬಲಿಯ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಸಲ್ಲುವವುಗಳಾಗಿವೆ. ಅವರು ಪ್ರತ್ಯೇ ಕಿಸಿದ ಭುಜವನ್ನೂ ಆಡಿಸುವ ಎದೆಯ ಭಾಗವನ್ನೂ ಬೆಂಕಿಯಿಂದ ಮಾಡಿದ ಕೊಬ್ಬಿನ ಸಮರ್ಪಣೆಗಳನ್ನೂ ಆಡಿಸುವದಕ್ಕೆ ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಯಾಗಿ ತರಬೇಕು; ಕರ್ತನು ಆಜ್ಞಾಪಿಸಿದ ಹಾಗೆ ಅದು ನಿನಗೂ ನಿನ್ನೊಂದಿಗೆ ನಿನ್ನ ಕುಮಾರರಿಗೂ ಸಲ್ಲತಕ್ಕದ್ದು; ಇದು ನಿತ್ಯ ಕಟ್ಟಳೆಯಾಗಿದೆ.
- Deuteronomy 18:3 ಧರ್ಮೋಪದೇಶಕಾಂಡ 18:3ಎತ್ತಾಗಲಿ ಕುರಿಯಾಗಲಿ ಒಂದು ಬಲಿಯನ್ನು ಅರ್ಪಿಸುವವರ ಕಡೆಯಿಂದಲೂ ಜನರ ಕಡೆಯಿಂದ ಲೂ ಯಾಜಕರಿಗೆ ಬರತಕ್ಕದ್ದು ಇದೇ: ಮುಂದೊಡೆ ಯನ್ನೂ ಎರಡು ದವಡೆಗಳನ್ನೂ ಕೋಷ್ಟವನ್ನೂ ಯಾಜ ಕನಿಗೆ ಕೊಡಬೇಕು.
- Numbers 31:41 ಅರಣ್ಯಕಾಂಡ 31:41ಆದರೆ ಮೋಶೆಯು ಕರ್ತನಿಗೆ ಎತ್ತುವ ಅರ್ಪಣೆಯಾಗಿರುವ ಕಪ್ಪವನ್ನು ಯಾಜಕನಾದ ಎಲ್ಲಾಜಾರನಿಗೆ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಕೊಟ್ಟನು.
- Leviticus 7:11–38 ಯಾಜಕಕಾಂಡ 7:11–38ಅವನು ಕರ್ತನಿಗೆ ಸಮರ್ಪಿಸಬೇಕಾದ ಸಮಾ ಧಾನ ಯಜ್ಞಸಮರ್ಪಣೆಗಳ ನಿಯಮವು ಇದೇ: ಅವನು ಉಪಕಾರಸ್ತುತಿಗಾಗಿ ಅರ್ಪಿಸುವದಾದರೆ, ಉಪಕಾರಸ್ತುತಿ ಬಲಿಯನ್ನು ಹುಳಿಯಿಲ್ಲದ ಎಣ್ಣೆ ಬೆರೆ ಸಿದ ರೊಟ್ಟಿಗಳೊಂದಿಗೆ ಹುಳಿಯಿಲ್ಲದ ಎಣ್ಣೆಹೊಯ್ದ ದೋಸೆಗಳೊಂದಿಗೂ ಮತ್ತು ನಯವಾದ ಹಿಟ್ಟಿನ ಎಣ್ಣೆ ಬೆರೆಸಿದ ಹುರಿದರೊಟ್ಟಿಗಳೊಂದಿಗೂ ಸಮರ್ಪಿಸ ಬೇಕು. ರೊಟ್ಟಿಗಳಲ್ಲದೆ ಅವನು ಸಮಾಧಾನದ ಬಲಿಗಳನ್ನು ಉಪಕಾರಸ್ತುತಿ ಯಜ್ಞದೊಂದಿಗೆ ತನ್ನ ಸಮರ್ಪಣೆಗಾಗಿ ಹುಳಿರೊಟ್ಟಿಗಳನ್ನು ಸಮರ್ಪಿಸ ಬೇಕು. ಅವನು ಇಡೀ ಕಾಣಿಕೆಯಲ್ಲಿ ಒಂದನ್ನು ಎತ್ತುವ ಕಾಣಿಕೆಯನ್ನಾಗಿ ಕರ್ತನಿಗೆ ಅರ್ಪಿಸಬೇಕು. ಅದು ಸಮಾಧಾನ ಬಲಿಗಳ ರಕ್ತವನ್ನು ಚಿಮುಕಿಸುವ ಯಾಜಕನದಾಗಬೇಕು. ಉಪಕಾರಸ್ತುತಿಗಾಗಿ ಅವನ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ಅರ್ಪಿ ಸಲ್ಪಟ್ಟ ದಿನವೇ ತಿನ್ನಬೇಕು; ಅವನು ಅದರಲ್ಲಿ ಬೆಳಗಿನ ವರೆಗೆ ಯಾವದನ್ನೂ ಉಳಿಸಬಾರದು. ಆದರೆ ಅವನ ಯಜ್ಞ ಸಮರ್ಪಣೆಯು ಒಂದು ಹರಕೆಯಾಗಿದ್ದರೆ ಇಲ್ಲವೆ ಸ್ವಇಚ್ಛೆಯಾದ ಸಮರ್ಪಣೆ ಯಾಗಿದ್ದರೆ ಅವನು ತನ್ನ ಯಜ್ಞವನ್ನು ಅರ್ಪಿಸಿದ ದಿನದಲ್ಲಿಯೇ ತಿನ್ನಬೇಕು; ಅದರಲ್ಲಿ ಉಳಿದದ್ದನ್ನು ಮಾರನೆಯ ದಿನದಲ್ಲಿ ಸಹ ತಿನ್ನಬೇಕು. ಉಳಿದಿರುವ ಯಜ್ಞದ ಮಾಂಸವನ್ನು ಮೂರನೆಯ ದಿನದಲ್ಲಿ ಬೆಂಕಿ ಯಿಂದ ಸುಡಬೇಕು. ತನ್ನ ಸಮಾಧಾನ ಬಲಿ ಯಜ್ಞದ ಮಾಂಸದಲ್ಲಿ ಯಾವ ಭಾಗವನ್ನಾದರೂ ಮೂರನೆಯ ದಿನದಲ್ಲಿ ತಿಂದರೆ ಅದು ಸಮರ್ಪಣೆಯಾಗುವದಿಲ್ಲ ಇಲ್ಲವೆ ಅರ್ಪಿಸುವವನ ಲೆಕ್ಕಕ್ಕೆ ಸೇರಿಸಲ್ಪಡುವದಿಲ್ಲ. ಅದು ಹೊಲೆಯಾಗಿರುವದು, ಅದನ್ನು ತಿನ್ನುವವನು ತನ್ನ ಅಪರಾಧವನ್ನು ಹೊರುವನು. ಅಶುದ್ಧವಾದ ವಸ್ತುವನ್ನು ಮುಟ್ಟಿದ ಮಾಂಸವನ್ನು ತಿನ್ನಬಾರದು; ಅದು ಬೆಂಕಿಯಿಂದ ಸುಡಲ್ಪಡಬೇಕು. ಮಾಂಸದ ವಿಷಯದಲ್ಲಿ ಶುದ್ಧವಾಗಿರುವವರೆಲ್ಲರೂ ಅದನ್ನು ತಿನ್ನ ಬಹುದು. ಯಾವನಾದರೂ ಅಶುದ್ಧನಾಗಿದ್ದು ಕರ್ತ ನಿಗೆ ಸಂಬಂಧಪಟ್ಟ ಸಮಾಧಾನ ಬಲಿಗಳ ಯಜ್ಞದ ಮಾಂಸವನ್ನು ತಿನ್ನುವನೋ ಅವನು ತನ್ನ ಜನರಿಂದ ತೆಗೆಯಲ್ಪಡಬೇಕು. ಇದಲ್ಲದೆ ಯಾವನಾದರೂ ಮನುಷ್ಯನ ಅಶುದ್ಧತ್ವವನ್ನಾಗಲಿ ಯಾವುದೇ ಅಶುದ್ಧ ವಾದದ್ದನ್ನಾಗಲಿ ಇಲ್ಲವೆ ಯಾವುದೇ ಹೊಲೆಯಾದ ಅಶುದ್ಧ ವಸ್ತುವನ್ನಾಗಲಿ ಯಾವುದೇ ಅಶುದ್ಧ ಪ್ರಾಣಿ ಯನ್ನಾಗಲಿ ಮುಟ್ಟಿದರೂ ಮತ್ತು ಕರ್ತನಿಗೆ ಸಂಬಂಧಿ ಸಿದ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ತಿಂದರೂ ಅವನು ತನ್ನ ಜನರಿಂದ ತೆಗೆದುಹಾಕಲ್ಪಡ ಬೇಕು ಅಂದನು. ಕರ್ತನು ಮೋಶೆಯೊಂದಿಗೆ ಮಾತನಾಡಿ-- ಇಸ್ರಾಯೇಲನ ಮಕ್ಕಳೊಂದಿಗೆ ಮಾತನಾಡಿ ಹೇಳ ಬೇಕಾದದ್ದೇನಂದರೆ--ನೀವು ಎತ್ತು ಕುರಿ ಆಡು ಇವು ಗಳ ಕೊಬ್ಬನ್ನು ತಿನ್ನಬಾರದು. ತಾನಾಗಿಯೇ ಸತ್ತ ಪ್ರಾಣಿಯ ಕೊಬ್ಬನ್ನೂ ಮೃಗಗಳು ಸೀಳಿದ್ದರ ಕೊಬ್ಬನ್ನೂ ಬೇರೆ ಯಾವದಕ್ಕಾದರೂ ಉಪಯೋಗಿಸ ಬಹುದು; ಆದರೆ ನೀವು ಅದನ್ನು ಎಷ್ಟು ಮಾತ್ರವೂ ತಿನ್ನಬಾರದು. ಮನುಷ್ಯರು ಕರ್ತನಿಗೆ ಬೆಂಕಿಯಿಂದ ಸಮರ್ಪಿಸಿದ ಪ್ರಾಣಿಯ ಕೊಬ್ಬನ್ನು ಯಾವನಾದರೂ ತಿಂದರೆ ಅವನು ತನ್ನ ಜನರಿಂದ ತೆಗೆಯಲ್ಪಡಬೇಕು. ಇದಲ್ಲದೆ ನೀವು ಯಾವತರದ ರಕ್ತವನ್ನೂ ಅಂದರೆ ಅದು ಪಕ್ಷಿಯದಾ ಗಲಿ, ಪ್ರಾಣಿಯದಾಗಲಿ, ನಿಮ್ಮ ಯಾವ ನಿವಾಸಗಳ ಲ್ಲಿಯೂ ತಿನ್ನಬಾರದು. ಯಾವುದೇ ತರದ ರಕ್ತವನ್ನು ತಿಂದವನು ಯಾವನೇ ಆಗಿರಲಿ ಅವನು ತನ್ನ ಜನರಿಂದ ತೆಗೆದು ಹಾಕಲ್ಪಡಬೇಕು ಎಂಬದೇ. ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ-- ಇಸ್ರಾಯೇಲ್ ಮಕ್ಕಳೊಂದಿಗೆ ಮಾತ ನಾಡಿ ಹೀಗೆ ಹೇಳು--ಕರ್ತನಿಗೆ ತನ್ನ ಯಜ್ಞದ ಸಮಾಧಾನ ಬಲಿಯನ್ನು ಅರ್ಪಿಸುವವನು ಯಜ್ಞದ ಸಮಾಧಾನ ಬಲಿಯ ತನ್ನ ಕಾಣಿಕೆಯನ್ನು ಕರ್ತನಿಗೆ ತರಬೇಕು. ಬೆಂಕಿಯಿಂದ ಮಾಡಿದ ಕರ್ತನ ಅರ್ಪಣೆ ಗಳನ್ನು ತನ್ನ ಸ್ವಂತ ಕೈಗಳಿಂದಲೇ ತರಬೇಕು. ಕರ್ತನ ಮುಂದೆ ಅಲ್ಲಾಡುವ ಸಮರ್ಪಣೆಗಾಗಿ ಎದೆಯು ಅಲ್ಲಾಡಿಸಲ್ಪಡುವಂತೆ ಕೊಬ್ಬಿನೊಂದಿಗೆ ಎದೆಯನ್ನು ತರಬೇಕು. ಯಾಜಕನು ಆ ಕೊಬ್ಬನ್ನು ಯಜ್ಞವೇದಿಯ ಮೇಲೆ ಸುಡಬೇಕು; ಆದರೆ ಎದೆಯು ಆರೋನನ ಮತ್ತು ಅವನ ಮಕ್ಕಳದ್ದಾಗಿರುವದು. ಬಲಭುಜವನ್ನು ನೀವು ಯಾಜಕನಿಗೆ ನಿಮ್ಮ ಸಮಾಧಾನದ ಯಜ್ಞಗಳ ಎತ್ತುವ ಸಮರ್ಪಣೆಗಾಗಿ ಕೊಡಬೇಕು. ಸಮಾ ಧಾನದ ಸಮರ್ಪಣೆಗಳ ರಕ್ತವನ್ನೂ ಕೊಬ್ಬನ್ನೂ ಸಮ ರ್ಪಿಸುವ ಆರೋನನ ಕುಮಾರರಲ್ಲಿ ಒಬ್ಬನು ಭುಜದ ಬಲಭಾಗವನ್ನು ತನ್ನ ಪಾಲಾಗಿ ತೆಗೆದುಕೊಳ್ಳಲಿ. ಆಡಿಸುವ ಎದೆಭಾಗವನ್ನು ಪ್ರತ್ಯೇಕವಾದ ಭುಜ ಭಾಗವನ್ನು ಇಸ್ರಾಯೇಲಿನ ಮಕ್ಕಳ ಸಮಾಧಾನದ ಸಮರ್ಪಣೆಗಳ ಯಜ್ಞಗಳಿಂದ ನಾನು ತೆಗೆದುಕೊಂಡು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲಿನ ಮಕ್ಕಳಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿ ಕೊಟ್ಟಿ ದ್ದೇನೆ. ಆರೋನನ ಅಭಿಷೇಕವೂ ಅವನ ಮಕ್ಕಳ ಅಭಿಷೇಕವೂ ಆಗುವ ದಿನದಲ್ಲಿ ಅವರು ತಮ್ಮನ್ನು ಯಾಜಕನ ಉದ್ಯೋಗದ ಸೇವೆಗಾಗಿ ಕರ್ತನಿಗೆ ಒಪ್ಪಿಸಿ ಕೊಳ್ಳುವಾಗ ಕರ್ತನಿಗೆ ಬೆಂಕಿಯಿಂದ ಮಾಡಲ್ಪಡುವ ಸಮರ್ಪಣೆಗಳಲ್ಲಿ ಇರುವ ಪಾಲು ಇದೇ. ಅವರನ್ನು ಅಭಿಷೇಕಿಸಿದ ದಿನದಲ್ಲಿ ಇದನ್ನು ಕರ್ತನು ಇಸ್ರಾ ಯೇಲನ ಮಕ್ಕಳಿಗೆ ಅವರ ಎಲ್ಲಾ ಸಂತತಿಗಳಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿರುವಂತೆ ಅವರಿಗೆ ಆಜ್ಞಾಪಿಸಿದ್ದಾನೆ. ದಹನಬಲಿ ಆಹಾರದಬಲಿ ಪಾಪದಬಲಿ ಅತಿಕ್ರಮದಬಲಿ ಪ್ರತಿಷ್ಠೆಗಳ ಮತ್ತು ಸಮಾಧಾನದ ಯಜ್ಞಾರ್ಪಣೆಗಳು ಇವೇ.ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಸಮರ್ಪಿಸುವಂತೆ ಆಜ್ಞಾಪಿಸಿದ ದಿನದಲ್ಲಿ ಇವುಗಳನ್ನು ಕರ್ತನು ಮೋಶೆಗೆ ಸೀನಾಯಿ ಬೆಟ್ಟದಲ್ಲಿ ಆಜ್ಞಾಪಿಸಿದನು. ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಸಮರ್ಪಿಸುವಂತೆ ಆಜ್ಞಾಪಿಸಿದ ದಿನದಲ್ಲಿ ಇವುಗಳನ್ನು ಕರ್ತನು ಮೋಶೆಗೆ ಸೀನಾಯಿ ಬೆಟ್ಟದಲ್ಲಿ ಆಜ್ಞಾಪಿಸಿದನು.
- Numbers 18:29 ಅರಣ್ಯಕಾಂಡ 18:29ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉತ್ತಮವಾದದ್ದನ್ನು ಅದರೊಳಗಿನ ಪರಿಶುದ್ಧವಾದ ಭಾಗವನ್ನೇ ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.
- Exodus 29:27 ವಿಮೋಚನಕಾಂಡ 29:27ನೀನು ಟಗರಿನ ಎದೆಯ ಭಾಗದ ಆಡಿಸುವ ಅರ್ಪಣೆಯನ್ನು ಎತ್ತಿದ ಬಲದ ಮುಂದೊ ಡೆಯನ್ನು ಆರೋನನ ಮತ್ತು ಅವನ ಕುಮಾರರ ಪ್ರತಿಷ್ಠೆಗಾಗಿ ಎತ್ತಿದ್ದನ್ನೂ ಪರಿಶುದ್ಧ ಮಾಡು.
- Leviticus 3:1 ಯಾಜಕಕಾಂಡ 3:1ಅವನ ಕಾಣಿಕೆಯು ಸಮಾಧಾನದ ಬಲಿಯ ಅರ್ಪಣೆಯಾಗಿದ್ದು ಅದನ್ನು ಮಂದೆಯಿಂದ ಅರ್ಪಿಸುವದಾದರೆ ಅದು ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ಅದನ್ನು ಅವನು ಕರ್ತನ ಮುಂದೆ ದೋಷವಿಲ್ಲದ್ದಾಗಿ ಸಮರ್ಪಿಸಲಿ.
- Numbers 18:24 ಅರಣ್ಯಕಾಂಡ 18:24ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸುವ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದೇನೆ; ಆದಕಾರಣ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವಿರಬಾರದೆಂದು ನಾನು ಅವರಿಗೆ ಹೇಳಿದ್ದೇನೆ ಅಂದನು.
- Numbers 31:29 ಅರಣ್ಯಕಾಂಡ 31:29ಅವರ ಅರ್ಧ ಪಾಲಿನಿಂದ ಅದನ್ನು ತಕ್ಕೊಂಡು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಯಾಜಕನಾದ ಎಲ್ಲಾಜಾರನಿಗೆ ಕೊಡ ಬೇಕು.
- Numbers 15:19–20 ಅರಣ್ಯಕಾಂಡ 15:19–20ಆ ದೇಶದ ರೊಟ್ಟಿಯನ್ನು ತಿನ್ನುವಾಗ ನೀವು ಕರ್ತನಿಗೆ ಎತ್ತುವ ಅರ್ಪಣೆಯನ್ನು ಅರ್ಪಿಸಬೇಕು. ನಿಮ್ಮ ಪ್ರಥಮ ಹಿಟ್ಟಿನ ರೊಟ್ಟಿಯನ್ನೂ ಎತ್ತುವ ಅರ್ಪಣೆ ಯನ್ನೂ ಅರ್ಪಿಸಬೇಕು. ನಿಮ್ಮ ಕಣದಿಂದ ಎತ್ತುವ ಅರ್ಪಣೆಯಂತೆ ಅದನ್ನು ಎತ್ತಬೇಕು.
Original words (Hebrew)
- Aaron’s · H175אַהֲרוֹן ʼAhărôwn
- sons’ · H1121בֵּן bên
- statute · H2706חֹק chôq
- ever · H5769עוֹלָם ʻôwlâm
- children · H1121בֵּן bên
- Israel · H3478יִשְׂרָאֵל Yisrâʼêl
- offering · H8641תְּרוּמָה tᵉrûwmâh
- offering · H8641תְּרוּמָה tᵉrûwmâh
- children · H1121בֵּן bên
- Israel · H3478יִשְׂרָאֵל Yisrâʼêl
- sacrifice · H2077זֶבַח zebach
- offerings · H8002שֶׁלֶם shelem
- offering · H8641תְּרוּמָה tᵉrûwmâh