Exodus · chapter 3 · verse 11
Exodus 3:11 in Kannada
ಆಗ ಮೋಶೆಯು ದೇವರಿಗೆ--ಫರೋಹನ ಬಳಿಗೆ ಹೋಗುವ ಹಾಗೆಯೂ ಇಸ್ರಾಯೇಲ್ ಮಕ್ಕಳನ್ನು ಐಗುಪ್ತದೊಳಗಿಂದ ಹೊರಗೆ ಬರಮಾಡು ವಂತೆಯೂ ನಾನು ಎಷ್ಟರವನು ಅಂದನು.
Aaga mosheyu devarige--pharohana balige hoguva haageyoo israayel makkalannu aiguptadolaginda horage baramaadu vanteyoo naanu eshtaravanu andanu.
Exodus 3:11 in English
- King James Version (KJV)
- And Moses said unto God, Who [am] I, that I should go unto Pharaoh, and that I should bring forth the children of Israel out of Egypt?
- World English Bible (WEB)
- Moses said to God, “Who am I, that I should go to Pharaoh, and that I should bring the children of Israel out of Egypt?”
- American Standard Version (ASV)
- And Moses said unto God, Who am I, that I should go unto Pharaoh, and that I should bring forth the children of Israel out of Egypt?
- Bible in Basic English (BBE)
- And Moses said to God, Who am I to go to Pharaoh and take the children of Israel out of Egypt?
- Darby Translation (DBY)
- And Moses said to God, Who am I, that I should go unto Pharaoh, and that I should bring forth the children of Israel out of Egypt?
- Webster's Bible (WBS)
- And Moses said to God, Who [am] I, that I should go to Pharaoh, and that I should bring forth the children of Israel out of Egypt?
- Young's Literal Translation (YLT)
- And Moses saith unto God, 'Who [am] I, that I go unto Pharaoh, and that I bring out the sons of Israel from Egypt?'
Read in context
- 9ಆದದರಿಂದ ಈಗ ಕೇಳು, ಇಸ್ರಾಯೇಲ್ ಮಕ್ಕಳ ಕೂಗು ನನ್ನ ಬಳಿಗೆ ಬಂದಿತು; ಐಗುಪ್ತ್ಯರು ಅವರನ್ನು ಬಾಧಿಸುವ ಬಾಧೆಯನ್ನು ನಾನು ನೋಡಿದ್ದೇನೆ.
- 10ಆದದರಿಂದ ಈಗ ಬಾ, ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ. ಇಸ್ರಾಯೇಲ್ ಮಕ್ಕಳಾದ ನನ್ನ ಜನರನ್ನು ನೀನು ಐಗುಪ್ತದೊಳಗಿಂದ ಹೊರಗೆ ಬರಮಾಡಬೇಕು ಅಂದನು.
- 11ಆಗ ಮೋಶೆಯು ದೇವರಿಗೆ--ಫರೋಹನ ಬಳಿಗೆ ಹೋಗುವ ಹಾಗೆಯೂ ಇಸ್ರಾಯೇಲ್ ಮಕ್ಕಳನ್ನು ಐಗುಪ್ತದೊಳಗಿಂದ ಹೊರಗೆ ಬರಮಾಡು ವಂತೆಯೂ ನಾನು ಎಷ್ಟರವನು ಅಂದನು.
- 12ಆಗ ಆತನು--ನಿಶ್ಚಯವಾಗಿ ನಾನು ನಿನ್ನ ಸಂಗಡ ಇರುವೆನು; ನಾನು ನಿನ್ನನ್ನು ಕಳುಹಿಸುತ್ತೇನೆಂಬದಕ್ಕೆ ಇದೇ ನಿನಗೆ ಗುರುತು. ನೀನು ಜನರನ್ನು ಐಗುಪ್ತದೊಳಗಿಂದ ಹೊರಗೆ ತಂದ ತರುವಾಯ ನೀವು ಈ ಬೆಟ್ಟದಮೇಲೆ ದೇವರನ್ನು ಆರಾಧಿಸುವಿರಿ ಅಂದನು.
- 13ಅದಕ್ಕೆ ಮೋಶೆಯು ದೇವರಿಗೆ--ಇಗೋ, ಇಸ್ರಾಯೇಲ್ ಮಕ್ಕಳ ಬಳಿಗೆ ಹೋಗಿ--ನಿಮ್ಮ ಪಿತೃಗಳ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳುವಾಗ ಅವರು ನನಗೆ--ಆತನ ಹೆಸರು ಏನು ಎಂದು ಕೇಳಿದರೆ ನಾನು ಅವರಿಗೆ ಏನು ಹೇಳಬೇಕು ಅಂದನು.
Cross references
- 1 Samuel 18:18 1 ಸಮುವೇಲನು 18:18ದಾವೀದನು ಸೌಲನಿಗೆ--ಅರಸನಿಗೆ ಅಳಿಯನಾಗಿ ರುವದಕ್ಕೆ ನಾನೆಷ್ಟರವನು? ನನ್ನ ಜೀವನ ಏನು? ಇಸ್ರಾಯೇಲಿನಲ್ಲಿ ನನ್ನ ತಂದೆಯ ಗೋತ್ರವು ಎಷ್ಟು ಮಾತ್ರ ಅಂದನು.
- Exodus 6:12 ವಿಮೋಚನಕಾಂಡ 6:12ಆದರೆ ಮೋಶೆಯು ಕರ್ತನ ಸನ್ನಿಧಿಯಲ್ಲಿ--ಇಗೋ, ಇಸ್ರಾಯೇಲ್ ಮಕ್ಕಳೇ ನನ್ನ ಮಾತನ್ನು ಕೇಳದಿರುವಲ್ಲಿ ತೊದಲು ನಾಲಿಗೆಯವನಾದ ನನ್ನ ಮಾತನ್ನು ಫರೋಹನು ಕೇಳುವದು ಹೇಗೆ ಎಂದು ಹೇಳಿದನು.
- 2 Corinthians 3:5 2 ಕೊರಿಂಥದವರಿಗೆ 3:5ನಮ್ಮಿಂದಲೇ ಏನಾದರೂ ಉಂಟಾಯಿ ತೆಂದು ಆಲೋಚಿಸಿಕೊಳ್ಳುವದಕ್ಕೆ ನಮ್ಮಷ್ಟಕ್ಕೆ ನಾವೇ ಸಮರ್ಥರೆಂತಲ್ಲ; ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು;
- Jeremiah 1:6 ಯೆರೆಮೀಯ 1:6ಆಗ ನಾನು--ಹಾ! ಕರ್ತನಾದ ದೇವರೇ ಇಗೋ, ನಾನು ಮಾತನಾಡಲಾರೆನು, ನಾನು ಚಿಕ್ಕವನು ಅಂದೆನು.
- 2 Corinthians 2:16 2 ಕೊರಿಂಥದವರಿಗೆ 2:16ನಾವು ನಾಶವಾಗುವವರಿಗೆ ಮರಣದಿಂದಾದ ಮರಣದ ವಾಸನೆಯಾಗಿಯೂ ರಕ್ಷಿಸಲ್ಪಟ್ಟವರಿಗೆ ಜೀವದಿಂದಾದ ಜೀವದ ಸುವಾಸನೆ ಯಾಗಿಯೂ ಇದ್ದೇವೆ; ಹೀಗಿರುವಾಗ ಇವುಗಳಿಗೆ ಯೋಗ್ಯನು ಯಾರು?ನಾವು ದೇವರ ವಾಕ್ಯವನ್ನು ಕಲಬೆರಿಕೆ ಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಹೊಂದಿದ ವರಿಗೆ ತಕ್ಕ ಹಾಗೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತನಾಡುತ್ತೇವೆ.
- 2 Samuel 7:18 2 ಸಮುವೇಲನು 7:18ಆಗ ಅರಸ ನಾದ ದಾವೀದನು ಒಳಗೆ ಪ್ರವೇಶಿಸಿ ಕರ್ತನ ಸನ್ನಿಧಿ ಯಲ್ಲಿ ಕೂತುಕೊಂಡು--ಓ ಕರ್ತನಾದ ದೇವರೇ, ನನ್ನನ್ನು ನೀನು ಇಷ್ಟರ ಮಟ್ಟಿಗೆ ತಂದದ್ದಕ್ಕೆ ನಾನು ಎಷ್ಟರವನು? ನನ್ನ ಮನೆ ಎಷ್ಟರದು?
- 1 Kings 3:9 1 ಅರಸುಗಳು 3:9ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು.
- Isaiah 6:5–8 ಯೆಶಾಯ 6:5–8ಆಗ ನಾನು--ಅಯ್ಯೋ, ನಾನು ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು, ನಾನು ಹೊಲಸು ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು; ಆದರೂ ಸೈನ್ಯಗಳ ಕರ್ತನಾದ ಅರಸನನ್ನು ನನ್ನ ಕಣ್ಣುಗಳು ಕಂಡವಲ್ಲಾ ಅಂದೆನು. ಆಗ ಸೆರಾಫಿಯರಲ್ಲಿ ಒಬ್ಬನು ತಂಡಸದಿಂದ ಯಜ್ಞವೇದಿಯಲ್ಲಿರುವ ಕೆಂಡವನ್ನು ಕೈಯಲ್ಲಿ ಹಿಡಿದುಕೊಂಡು ಹಾರಿಬಂದು ಅದನ್ನು ನನ್ನ ಬಾಯಲ್ಲಿ ಇಟ್ಟು--ಇಗೋ, ಇದು ನಿನ್ನ ತುಟಿಗೆ ತಗಲಿತು; ನಿನ್ನ ದೋಷವು ತೊಲಗಿ ನಿನ್ನ ಪಾಪವು ನೀಗಿ ಶುದ್ಧವಾಯಿತು ಎಂದು ಹೇಳಿದನು. ಆಗ ನಾನು -- ಯಾರನ್ನು ಕಳುಹಿಸಲಿ; ಯಾವನು ನಮ ಗೋಸ್ಕರ ಹೋಗುವನು ಎಂಬ ಕರ್ತನ ನುಡಿಯನ್ನು ಸಹ ಕೇಳಿ -- ನಾನು ಇದ್ದೇನೆ; ನನ್ನನ್ನು ಕಳುಹಿಸು ಅಂದೆನು.
- Exodus 4:10–13 ವಿಮೋಚನಕಾಂಡ 4:10–13ಮೋಶೆಯು ಕರ್ತನಿಗೆ--ಓ ನನ್ನ ಕರ್ತನೇ, ನಾನು ಮೊದಲಿನಿಂದಲೂ ನೀನು ನಿನ್ನ ದಾಸನ ಸಂಗಡ ಮಾತನಾಡಿದಂದಿನಿಂದಲೂ ವಾಕ್ಚಾತುರ್ಯವಿ ಲ್ಲದವನು. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ ಅಂದನು. ಅದಕ್ಕೆ ಕರ್ತನು ಅವನಿಗೆ--ಮನುಷ್ಯನಿಗೆ ಬಾಯಿ ಕೊಟ್ಟಾತನೂ ಮೂಕರನ್ನೂ ಕಿವುಡರನ್ನೂ ದೃಷ್ಟಿಯುಳ್ಳವರನ್ನೂ ಕುರುಡರನ್ನೂ ಉಂಟುಮಾಡಿ ದಾತನೂ ಯಾರು? ಕರ್ತನಾದ ನಾನೇ ಅಲ್ಲವೋ? ಹಾಗಾದರೆ ಈಗ ಹೋಗು, ನಾನೇ ನಿನ್ನ ಬಾಯಿ ಯಾಗಿದ್ದು ನೀನು ಮಾತನಾಡತಕ್ಕದ್ದನ್ನು ನಿನಗೆ ಬೋಧಿಸುವೆನು ಅಂದನು. ಅದಕ್ಕೆ ಮೋಶೆಯು--ಓ ನನ್ನ ಕರ್ತನೇ, ನೀನು ಕಳುಹಿಸಬೇಕೆಂದಿರುವವನನ್ನು ಕಳುಹಿಸು ಎಂದು ಬೇಡುತ್ತೇನೆ ಅಂದನು.
- Acts 7:23–25 ಅಪೊಸ್ತಲರ ಕೃತ್ಯಗಳು 7:23–25ಅವನಿಗೆ ನಾಲ್ವತ್ತು ವರುಷ ವಯಸ್ಸು ತುಂಬಿದಾಗ ಹೋಗಿ ತನ್ನ ಸಹೋದರರಾದ ಇಸ್ರಾ ಯೇಲ್ಯರನ್ನು ನೋಡಬೇಕೆಂಬ ಆಶೆಯು ಅವನ ಹೃದ ಯದಲ್ಲಿ ಹುಟ್ಟಿತು. ಅವರಲ್ಲಿ ಒಬ್ಬನಿಗೆ ಅನ್ಯಾಯ ವಾಗುವದನ್ನು ಅವನು ನೋಡಿ ಅವನಿಗೆ ಆಶ್ರಯ ಕೊಟ್ಟು ಐಗುಪ್ತ್ಯನನ್ನು ಹೊಡೆದು ಹಾಕಿ ಪೀಡಿಸಲ್ಪಡು ತ್ತಿದ್ದವನಿಗಾಗಿ ಮುಯ್ಯಿ ತೀರಿಸಿದನು. ಯಾಕಂದರೆ ದೇವರು ತನ್ನ ಕೈಯಿಂದ ಬಿಡುಗಡೆಯನ್ನು ಮಾಡುತ್ತಾ ನೆಂಬದು ತನ್ನ ಸಹೋದರರಿಗೆ ತಿಳಿದು ಬರುವದೆಂದು ಭಾವಿಸಿದನು; ಆದರೆ ಅವರು ಹಾಗೆ ತಿಳುಕೊಳ್ಳಲಿಲ್ಲ.
- 1 Kings 3:7 1 ಅರಸುಗಳು 3:7ನನ್ನ ದೇವರಾದ ಕರ್ತನೇ, ನೀನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ನಿನ್ನ ಸೇವಕನನ್ನು ಅರಸನಾಗಮಾಡಿದ್ದೀ. ಆದರೆ ನಾನು ಚಿಕ್ಕ ಬಾಲಕನಾಗಿದ್ದು ಹೊರಗೆ ಹೋಗುವದಕ್ಕೂ ಒಳಗೆ ಬರುವದಕ್ಕೂ ಅರಿಯದೆ ಇದ್ದೇನೆ.