Jeremiah · chapter 1 · verse 6
Jeremiah 1:6 in Kannada
ಆಗ ನಾನು--ಹಾ! ಕರ್ತನಾದ ದೇವರೇ ಇಗೋ, ನಾನು ಮಾತನಾಡಲಾರೆನು, ನಾನು ಚಿಕ್ಕವನು ಅಂದೆನು.
Aaga naanu--haa! Kartanaada devare igo, naanu maatanaadalaarenu, naanu chikkavanu andenu.
Jeremiah 1:6 in English
- King James Version (KJV)
- Then said I, Ah, Lord GOD! behold, I cannot speak: for I [am] a child.
- World English Bible (WEB)
- Then I said, “Ah, Lord GOD! Behold, I don’t know how to speak; for I am a child.”
- American Standard Version (ASV)
- Then said I, Ah, Lord Jehovah! behold, I know not how to speak; for I am a child.
- Bible in Basic English (BBE)
- Then said I, O Lord God! see, I have no power of words, for I am a child.
- Darby Translation (DBY)
- And I said, Alas, Lord Jehovah! behold, I cannot speak; for I am a child.
- Webster's Bible (WBS)
- Then said I, Ah, Lord GOD! behold, I cannot speak: for I [am] a child.
- Young's Literal Translation (YLT)
- And I say, 'Ah, Lord Jehovah! lo, I have not known — to speak, for I [am] a youth.'
Read in context
- 4ಕರ್ತನ ವಾಕ್ಯವು ನನಗೆ ಉಂಟಾಗಿ ಆತನು ನನಗೆ ಹೇಳಿದ್ದೇನಂದರೆ
- 5ನಾನು ನಿನ್ನನ್ನು ಹೊಟ್ಟೆಯಲ್ಲಿ ನಿರ್ಮಿಸುವದಕ್ಕಿಂತ ಮುಂಚೆ ನಿನ್ನನ್ನು ತಿಳಿದಿದ್ದೆನು. ನೀನು ಗರ್ಭದಿಂದ ಹೊರಗೆ ಬರುವದಕ್ಕಿಂತ ಮುಂಚೆ ನಿನ್ನನ್ನು ಪರಿಶುದ್ಧ ಮಾಡಿದೆನು; ನಿನ್ನನ್ನು ಜನಾಂಗಗಳಿಗೆ ಪ್ರವಾದಿಯನ್ನಾಗಿ ನೇಮಿಸಿದೆನು ಅಂದನು.
- 6ಆಗ ನಾನು--ಹಾ! ಕರ್ತನಾದ ದೇವರೇ ಇಗೋ, ನಾನು ಮಾತನಾಡಲಾರೆನು, ನಾನು ಚಿಕ್ಕವನು ಅಂದೆನು.
- 7ಆಗ ಕರ್ತನು ನನಗೆ--ನಾನು ಚಿಕ್ಕವನೆಂದು ಹೇಳಬೇಡ; ನಾನು ನಿನ್ನನ್ನು ಕಳುಹಿಸುವವರೆಲ್ಲರ ಬಳಿಗೆ ಹೋಗಬೇಕು; ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ಮಾತನಾಡಬೇಕು.
- 8ಅವರಿಗೆ ಭಯಪಡಬೇಡ; ನಿನ್ನನ್ನು ತಪ್ಪಿಸುವದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅಂದನು.
Cross references
- Exodus 4:10–16 ವಿಮೋಚನಕಾಂಡ 4:10–16ಮೋಶೆಯು ಕರ್ತನಿಗೆ--ಓ ನನ್ನ ಕರ್ತನೇ, ನಾನು ಮೊದಲಿನಿಂದಲೂ ನೀನು ನಿನ್ನ ದಾಸನ ಸಂಗಡ ಮಾತನಾಡಿದಂದಿನಿಂದಲೂ ವಾಕ್ಚಾತುರ್ಯವಿ ಲ್ಲದವನು. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ ಅಂದನು. ಅದಕ್ಕೆ ಕರ್ತನು ಅವನಿಗೆ--ಮನುಷ್ಯನಿಗೆ ಬಾಯಿ ಕೊಟ್ಟಾತನೂ ಮೂಕರನ್ನೂ ಕಿವುಡರನ್ನೂ ದೃಷ್ಟಿಯುಳ್ಳವರನ್ನೂ ಕುರುಡರನ್ನೂ ಉಂಟುಮಾಡಿ ದಾತನೂ ಯಾರು? ಕರ್ತನಾದ ನಾನೇ ಅಲ್ಲವೋ? ಹಾಗಾದರೆ ಈಗ ಹೋಗು, ನಾನೇ ನಿನ್ನ ಬಾಯಿ ಯಾಗಿದ್ದು ನೀನು ಮಾತನಾಡತಕ್ಕದ್ದನ್ನು ನಿನಗೆ ಬೋಧಿಸುವೆನು ಅಂದನು. ಅದಕ್ಕೆ ಮೋಶೆಯು--ಓ ನನ್ನ ಕರ್ತನೇ, ನೀನು ಕಳುಹಿಸಬೇಕೆಂದಿರುವವನನ್ನು ಕಳುಹಿಸು ಎಂದು ಬೇಡುತ್ತೇನೆ ಅಂದನು. ಕರ್ತನು ಮೋಶೆಯ ಮೇಲೆ ಕೋಪಗೊಂಡು--ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡ ಬಲ್ಲನೆಂದು ನಾನು ಬಲ್ಲೆನು. ಇಗೋ, ಅವನು ನಿನ್ನನ್ನು ಎದುರು ಗೊಳ್ಳುವದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿ ತನ್ನ ಹೃದಯದಲ್ಲಿ ಆನಂದಿಸುವನು. ಅವನ ಸಂಗಡ ನೀನು ಮಾತನಾಡಿ ಹೇಳಬೇಕಾದ ಮಾತು ಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀನು ಮಾಡತಕ್ಕದ್ದನ್ನು ಕಲಿಸುವೆನು. ಅವನು ನಿನಗಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಿಯಾಗಿ ರುವನು; ನೀನು ಅವನಿಗೆ ದೇವರಂತಿರುವಿ.
- Exodus 6:12 ವಿಮೋಚನಕಾಂಡ 6:12ಆದರೆ ಮೋಶೆಯು ಕರ್ತನ ಸನ್ನಿಧಿಯಲ್ಲಿ--ಇಗೋ, ಇಸ್ರಾಯೇಲ್ ಮಕ್ಕಳೇ ನನ್ನ ಮಾತನ್ನು ಕೇಳದಿರುವಲ್ಲಿ ತೊದಲು ನಾಲಿಗೆಯವನಾದ ನನ್ನ ಮಾತನ್ನು ಫರೋಹನು ಕೇಳುವದು ಹೇಗೆ ಎಂದು ಹೇಳಿದನು.
- 1 Kings 3:7–9 1 ಅರಸುಗಳು 3:7–9ನನ್ನ ದೇವರಾದ ಕರ್ತನೇ, ನೀನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ನಿನ್ನ ಸೇವಕನನ್ನು ಅರಸನಾಗಮಾಡಿದ್ದೀ. ಆದರೆ ನಾನು ಚಿಕ್ಕ ಬಾಲಕನಾಗಿದ್ದು ಹೊರಗೆ ಹೋಗುವದಕ್ಕೂ ಒಳಗೆ ಬರುವದಕ್ಕೂ ಅರಿಯದೆ ಇದ್ದೇನೆ. ಇದಲ್ಲದೆ ನಿನ್ನ ಸೇವಕನು ನೀನು ಆದುಕೊಂಡ ನಿನ್ನ ಮಹಾಜನರ ಮಧ್ಯದಲ್ಲಿ ಇದ್ದಾನೆ. ಆ ಜನರು ಬಹಳವಾಗಿರುವ ದರಿಂದ ಅವರನ್ನು ಎಣಿಸಲೂ ಲೆಕ್ಕ ಬರೆಯಲೂ ಆಗದು. ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು.
- Jeremiah 32:17 ಯೆರೆಮೀಯ 32:17ಓ ಕರ್ತನಾದ ದೇವರೇ, ಇಗೋ, ನೀನು ನಿನ್ನ ಮಹಾಬಲದಿಂದ ನಿನ್ನ ಕೈಚಾಚಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ್ದೀ; ನಿನಗೆ ಕಠಿಣವಾದ ಕಾರ್ಯ ಒಂದೂ ಇಲ್ಲ.
- Exodus 6:30 ವಿಮೋಚನಕಾಂಡ 6:30ಅದಕ್ಕೆ ಮೋಶೆಯು ಕರ್ತನ ಮುಂದೆ--ಇಗೋ, ನಾನು ತೊದಲು ನಾಲಿಗೆಯುಳ್ಳವನು. ಫರೋಹನು ನನ್ನ ಮಾತನ್ನು ಹೇಗೆ ಕೇಳಾನು ಅಂದನು.
- Jeremiah 14:13 ಯೆರೆಮೀಯ 14:13ಆಗ ನಾನು--ಹಾ, ದೇವರಾದ ಕರ್ತನೇ, ಇಗೋ, ಪ್ರವಾದಿಗಳು ಅವರಿಗೆ--ನೀವು ಕತ್ತಿಯನ್ನು ನೋಡುವದಿಲ್ಲ, ನಿಮಗೆ ಕ್ಷಾಮವು ಬಾರದು, ಆದರೆ ಕರ್ತನು ನಿಮಗೆ ಈ ಸ್ಥಳದಲ್ಲಿ ಸ್ಥಿರ ಸಮಾಧಾನ ಕೊಡುತ್ತಾನೆಂದು ಹೇಳುತ್ತಾರೆ ಅಂದೆನು.
- Exodus 4:1 ವಿಮೋಚನಕಾಂಡ 4:1ಮೋಶೆಯು ಪ್ರತ್ಯುತ್ತರವಾಗಿ--ಆದರೆ ಇಗೋ, ಅವರು ನನ್ನನ್ನು ನಂಬುವದಿಲ್ಲ, ನನ್ನ ಮಾತನ್ನು ಕೇಳುವದೂ ಇಲ್ಲ. ಅವರು--ಕರ್ತನು ನಿನಗೆ ಕಾಣಿಸಿಕೊಳ್ಳಲಿಲ್ಲ ಎಂದು ಹೇಳುವರು ಅಂದನು.
- Jeremiah 4:10 ಯೆರೆಮೀಯ 4:10ಆಗ ನಾನು ಹೇಳಿದ್ದೇನಂದರೆ--ಹಾ! ಕರ್ತನೇ, ದೇವರೇ, ನಿಶ್ಚಯ ವಾಗಿ ನೀನು ಈ ಜನರಿಗೂ ಯೆರೂಸಲೇಮಿಗೂ-- ನಿಮಗೆ ಸಮಾಧಾನವಾಗುವದೆಂದು ಹೇಳಿ ಬಹಳ ಮೋಸಮಾಡಿದ್ದೀ; ಕತ್ತಿಯು ಪ್ರಾಣದ ವರೆಗೂ ತಾಕುತ್ತ ದಲ್ಲವೋ?
- Isaiah 6:5 ಯೆಶಾಯ 6:5ಆಗ ನಾನು--ಅಯ್ಯೋ, ನಾನು ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು, ನಾನು ಹೊಲಸು ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು; ಆದರೂ ಸೈನ್ಯಗಳ ಕರ್ತನಾದ ಅರಸನನ್ನು ನನ್ನ ಕಣ್ಣುಗಳು ಕಂಡವಲ್ಲಾ ಅಂದೆನು.