Luke · chapter 20 · verse 37
Luke 20:37 in Kannada
ಮೋಶೆಯು ಸಹ ಪೊದೆಯ ಹತ್ತಿರ ಕರ್ತನು ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಎಂದು ಕರೆದಾಗ ಸತ್ತವರು ಎಬ್ಬಿಸಲ್ಪಡು ತ್ತಾರೆಂಬದನ್ನು ವ್ಯಕ್ತಪಡಿಸಿದನು.
Mosheyu saha podeya hattira kartanu abrahaamana devaroo isaakana devaroo yaakobana devaroo endu karedaaga sattavaru ebbisalpadu ttaarembadannu vyaktapadisidanu.
Luke 20:37 in English
- King James Version (KJV)
- Now that the dead are raised, even Moses shewed at the bush, when he calleth the Lord the God of Abraham, and the God of Isaac, and the God of Jacob.
- World English Bible (WEB)
- But that the dead are raised, even Moses showed at the bush, when he called the Lord ‘The God of Abraham, the God of Isaac, and the God of Jacob.’
- American Standard Version (ASV)
- But that the dead are raised, even Moses showed, in [the place concerning] the Bush, when he calleth the Lord the God of Abraham, and the God of Isaac, and the God of Jacob.
- Bible in Basic English (BBE)
- But even Moses made it clear that the dead come back to life, saying, in the story of the burning thorn-tree, The Lord, the God of Abraham, the God of Isaac, and the God of Jacob.
- Darby Translation (DBY)
- But that the dead rise, even Moses shewed in [the section of] the bush, when he called [the] Lord the God of Abraham and the God of Isaac and the God of Jacob;
- Webster's Bible (WBS)
- Now that the dead are raised, even Moses showed at the bush, when he calleth the Lord the God of Abraham, and the God of Isaac, and the God of Jacob.
- Young's Literal Translation (YLT)
- 'And that the dead are raised, even Moses shewed at the Bush, since he doth call the Lord, the God of Abraham, and the God of Isaac, and the God of Jacob;
Read in context
- 35ಆದರೆ ಆ ಲೋಕವನ್ನೂ ಸತ್ತವರೊಳಗಿಂದ ಪುನರುತ್ಥಾನವನ್ನೂ ಹೊಂದುವದಕ್ಕೆ ಯೋಗ್ಯರೆಂದು ಎಣಿಸಲ್ಪಡುವವರು ಮದುವೆ ಮಾಡಿ ಕೊಳ್ಳುವದೂ ಇಲ್ಲ ಇಲ್ಲವೆ ಮದುವೆ ಮಾಡಿಕೊಡು ವದೂ ಇಲ್ಲ.
- 36ಇದಲ್ಲದೆ ಅವರು ಇನ್ನೆಂದಿಗೂ ಸಾಯುವದಿಲ್ಲ; ಯಾಕಂದರೆ ಅವರು ದೂತರಿಗೆ ಸರಿಸಮಾನರೂ ಪುನರುತ್ಥಾನದ ಮಕ್ಕಳೂ ಆಗಿರುವದ ರಿಂದ ಅವರು ದೇವರ ಮಕ್ಕಳಾಗಿದ್ದಾರೆ.
- 37ಮೋಶೆಯು ಸಹ ಪೊದೆಯ ಹತ್ತಿರ ಕರ್ತನು ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಎಂದು ಕರೆದಾಗ ಸತ್ತವರು ಎಬ್ಬಿಸಲ್ಪಡು ತ್ತಾರೆಂಬದನ್ನು ವ್ಯಕ್ತಪಡಿಸಿದನು.
- 38ಯಾಕಂದರೆ ಆತನು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿ ಗಲ್ಲ; ಯಾಕಂದರೆ ಎಲ್ಲರೂ ಆತನಿಗಾಗಿ ಜೀವಿಸುತ್ತಾರೆ ಅಂದನು.
- 39ಆಗ ಶಾಸ್ತ್ರಿಗಳಲ್ಲಿ ಕೆಲವರು ಪ್ರತ್ಯುತ್ತರ ವಾಗಿ--ಬೋಧಕನೇ, ನೀನು ಸರಿಯಾಗಿ ಹೇಳಿದ್ದೀ ಅಂದರು.
Cross references
- Exodus 3:2–6 ವಿಮೋಚನಕಾಂಡ 3:2–6ಆಗ ಕರ್ತನ ದೂತನು ಪೊದೆಯೊಳಗಿಂದ ಅಗ್ನಿಜ್ವಾಲೆಯಲ್ಲಿ ಅವನಿಗೆ ಕಾಣಿಸಿ ಕೊಂಡನು. ಅವನು ನೋಡಿದಾಗ ಇಗೋ, ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು. ಆದಾಗ್ಯೂ ಪೊದೆಯು ಸುಡಲಿಲ್ಲ. ಆಗ ಮೋಶೆಯು--ನಾನು ಹೋಗಿ ಆ ಪೊದೆಯು ಯಾಕೆ ಸುಡದೆ ಇರುವದೆಂಬ ಆಶ್ಚರ್ಯ ವನ್ನು ನೋಡುವೆನು ಅಂದನು. ಅವನು ನೋಡು ವದಕ್ಕೆ ಹತ್ತಿರ ಬರುವದನ್ನು ಕರ್ತನು ನೋಡಿದಾಗ ದೇವರು ಪೊದೆಯೊಳಗಿಂದ ಅವನಿಗೆ--ಮೋಶೆಯೇ, ಮೋಶೆಯೇ ಎಂದು ಕರೆದನು; ಆಗ ಅವನು--ನಾನು ಇಲ್ಲಿ ಇದ್ದೇನೆ ಅಂದನು. ಆಗ ಆತನು--ಇಲ್ಲಿ ಸವಿಾಪಕ್ಕೆ ಬರಬೇಡ, ನಿನ್ನ ಪಾದಗಳಿಂದ ಕೆರ ಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿಯಾಗಿದೆ ಅಂದನು. ಇದಲ್ಲದೆ ಆತನು ಅವನಿಗೆ--ನಾನು ನಿನ್ನ ತಂದೆಯ ದೇವರು ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಆಗಿದ್ದೇನೆ ಎಂದು ಹೇಳಿದನು. ಆಗ ಮೋಶೆಯು ದೇವರನ್ನು ನೋಡುವದಕ್ಕೆ ಭಯ ಪಟ್ಟು ತನ್ನ ಮುಖವನ್ನು ಮುಚ್ಚಿಕೊಂಡನು.
- Mark 12:26–27 ಮಾರ್ಕನು 12:26–27ಸತ್ತವರು ಎದ್ದು ಬರುವದರ ವಿಷಯವಾಗಿ--ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಹೇಗೆ ಮಾತನಾಡಿದನೆಂದು ಮೋಶೆಯ ಗ್ರಂಥದಲ್ಲಿ ನೀವು ಓದಲಿಲ್ಲವೋ? ಯಾಕಂದರೆ ಆತನು ಸತ್ತವರಿಗಲ್ಲ, ಆದರೆ ಜೀವಿತರಿಗೆ ದೇವರಾಗಿದ್ದಾನೆ; ಆದದರಿಂದ ಈ ವಿಷಯದಲ್ಲಿ ನೀವು ಬಹಳವಾಗಿ ತಪ್ಪು ಮಾಡುತ್ತೀರಿ ಎಂದು ಹೇಳಿದನು.
- Acts 7:30–32 ಅಪೊಸ್ತಲರ ಕೃತ್ಯಗಳು 7:30–32ನಾಲ್ವತ್ತು ವರುಷ ತುಂಬಿದ ಮೇಲೆ ಸೀನಾಯಿ ಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಕರ್ತನ ದೂತನು ಅವನಿಗೆ ಕಾಣಿಸಿಕೊಂಡನು. ಮೋಶೆಯು ಅದನ್ನು ಕಂಡು ಆ ನೋಟಕ್ಕೆ ಆಶ್ಚರ್ಯಪಟ್ಟು ನೋಡಬೇಕೆಂದು ಹತ್ತಿರಕ್ಕೆ ಬಂದನು. ಆಗ--ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ಹೇಳುವ ಕರ್ತನ ಧ್ವನಿಯು ಅವನಿಗಾಯಿತು. ಆಗ ಮೋಶೆಯು ನಡುಗುತ್ತಾ ಅದನ್ನು ನೋಡುವದಕ್ಕೆ ಧೈರ್ಯವಿಲ್ಲ ದವನಾದನು.
- Genesis 17:7 ಆದಿಕಾಂಡ 17:7ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ.
- Deuteronomy 33:16 ಧರ್ಮೋಪದೇಶಕಾಂಡ 33:16ಭೂಮಿಯ ಅಮೂಲ್ಯವಾದವುಗಳಿಂದಲೂ ಅದರ ಸಂಪೂರ್ಣತೆಯಿಂದಲೂ ಕರ್ತನ ಕಡೆಯಿಂದ ಆಶೀರ್ವಾದ ಹೊಂದಲಿ; ಪೊದೆಯಲ್ಲಿ ವಾಸವಾಗಿ ದ್ದಾತನ ದಯೆಯು ಯೋಸೇಫನ ತಲೆಯ ಮೇಲೆಯೂ ತನ್ನ ಸಹೋದರರಿಂದ ಪ್ರತ್ಯೇಕವಾದವನ ತಲೆಯ ಮೇಲೆಯೂ ಬರಲಿ.
- Matthew 22:3–33 ಮತ್ತಾಯನು 22:3–33ಅವನು ಮದುವೆಗೆ ಬರ ಹೇಳಿದವರನ್ನು ಕರೆಯು ವದಕ್ಕೆ ತನ್ನ ಸೇವಕರನ್ನು ಕಳುಹಿಸಿದನು; ಆದರೆ ಅವರು ಬರಲೊಲ್ಲದೆ ಇದ್ದರು. ಅವನು ತಿರಿಗಿ ಬೇರೆ ಸೇವಕರನ್ನು ಕಳುಹಿಸಿ ಅವರಿಗೆ--ಇಗೋ, ನಾನು ಔತಣವನ್ನು ಸಿದ್ಧಮಾಡಿದ್ದೇನೆ, ನನ್ನ ಎತ್ತುಗಳೂ ಕೊಬ್ಬಿದ ಪಶುಗಳೂ ಕೊಯ್ಯಲ್ಪಟ್ಟಿವೆ ಮತ್ತು ಎಲ್ಲವು ಗಳು ಸಿದ್ಧವಾಗಿವೆ; ಮದುವೆಗೆ ಬನ್ನಿರಿ ಎಂದು ಕರೆಯಲ್ಪಟ್ಟವರಿಗೆ ಹೇಳಿರಿ ಅಂದನು. ಕರೆಯಲ್ಪಟ್ಟವರು ಅದನ್ನು ಅಲಕ್ಷ್ಯಮಾಡಿ ಒಬ್ಬನು ತನ್ನ ಹೊಲಕ್ಕೂ ಇನ್ನೊಬ್ಬನು ತನ್ನ ವ್ಯಾಪಾರಕ್ಕೂ ಹೊರಟುಹೋದರು. ಉಳಿದವರು ಅವನ ಸೇವಕರನ್ನು ಹಿಡಿದು ಅವಮಾನ ಪಡಿಸಿ ಅವರನ್ನು ಕೊಂದುಹಾಕಿದರು. ಆದರೆ ಅರಸನು ಅದನ್ನು ಕೇಳಿ ಕೋಪೋದ್ರೇಕವುಳ್ಳವನಾಗಿ ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹ ರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು. ತರುವಾಯ ಅವನು ತನ್ನ ಸೇವಕರಿಗೆ--ಮದುವೆಯು ಸಿದ್ಧವಾಗಿದೆ ಸರಿ, ಆದರೆ ಕರೆಯಲ್ಪಟ್ಟವರು ಯೋಗ್ಯರಾಗಿರಲಿಲ್ಲ. ಆದದರಿಂದ ನೀವು ಹೆದ್ದಾರಿಗಳಿಗೆ ಹೊರಟುಹೋಗಿ ಕಂಡವರನ್ನೆಲ್ಲಾ ಮದುವೆಗೆ ಕರೆಯಿರಿ ಅಂದನು. ಆಗ ಆ ಸೇವಕರು ಹೆದ್ದಾರಿಗಳಿಗೆ ಹೋಗಿ ತಾವು ಕಂಡವರ ನ್ನೆಲ್ಲಾ ಅಂದರೆ ಕೆಟ್ಟವರನ್ನೂ ಒಳ್ಳೆಯವರನ್ನೂ ಒಟ್ಟು ಗೂಡಿಸಿದರು; ಹೀಗೆ ಮದುವೆಗೆ ಅತಿಥಿಗಳು ತುಂಬಿ ಕೊಂಡರು. ತರುವಾಯ ಅರಸನು ಅತಿಥಿಗಳನ್ನು ನೋಡುವದಕ್ಕಾಗಿ ಒಳಗೆ ಬಂದು ಮದುವೆಯ ಉಡು ಪಿಲ್ಲದೆ ಇದ್ದ ಒಬ್ಬ ಮನುಷ್ಯನನ್ನು ಅಲ್ಲಿ ಕಂಡನು. ಅವನು ಆ ಮನುಷ್ಯನಿಗೆ--ಸ್ನೇಹಿತನೇ, ಮದುವೆಯ ಉಡುಪಿಲ್ಲದೆ ನೀನು ಒಳಗೆ ಹೇಗೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು. ತರುವಾಯ ಅರಸನು ಸೇವಕರಿಗೆ--ಅವನ ಕೈ ಕಾಲುಗಳನ್ನು ಕಟ್ಟಿ ತಕ್ಕೊಂಡು ಹೋಗಿ ಹೊರಗೆ ಕತ್ತಲೆಯಲ್ಲಿ ಹಾಕಿರಿ; ಅಲ್ಲಿ ಗೋಳಾಟವೂ ಹಲ್ಲುಕಡಿಯೋಣವೂ ಇರುವವು. ಯಾಕಂದರೆ ಕರೆಯಲ್ಪಟ್ಟವರು ಅನೇಕರು; ಆದರೆ ಆಯಲ್ಪಟ್ಟವರು ಸ್ವಲ್ಪ ಜನ ಅಂದನು. ಆಗ ಫರಿಸಾಯರು ಹೊರಟುಹೋಗಿ ಆತನನ್ನು ಮಾತಿನಲ್ಲಿ ಹೇಗೆ ಸಿಕ್ಕಿಸಬೇಕೆಂದು ಆಲೋಚನೆ ಮಾಡಿಕೊಂಡರು. ಮತ್ತು ತಮ್ಮ ಶಿಷ್ಯರನ್ನು ಹೆರೋದಿಯರೊಂದಿಗೆ ಆತನ ಬಳಿಗೆ ಕಳುಹಿಸಿ--ಬೋಧಕನೇ, ನೀನು ಸತ್ಯವಂತನು ಮತ್ತು ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುವಾತನು; ಇದಲ್ಲದೆ ನೀನು ಯಾರನ್ನೂ ಲಕ್ಷ್ಯಮಾಡುವಾತನಲ್ಲ; ಯಾಕಂದರೆ ನೀನು ಮುಖದಾಕ್ಷಿಣ್ಯ ಮಾಡುವದಿಲ್ಲ ಎಂದು ಆದದರಿಂದ-- ಕೈಸರನಿಗೆ ಕಪ್ಪವನ್ನು ಕೊಡುವದು ನ್ಯಾಯವೋ ನ್ಯಾಯವಲ್ಲವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು ಅಂದರು. ಯೇಸು ಅವರ ಕೆಟ್ಟತನವನ್ನು ತಿಳಿದು ಕೊಂಡವನಾಗಿ--ಕಪಟಿಗಳೇ, ನೀವು ನನ್ನನ್ನು ಯಾಕೆ ಶೋಧಿಸುತ್ತೀರಿ? ತೆರಿಗೆಯ ನಾಣ್ಯವನ್ನು ನನಗೆ ತೋರಿಸಿರಿ ಅಂದನು. ಆಗ ಅವರು ಒಂದು ಪಾವಲಿ ಯನ್ನು ತಂದುಕೊಟ್ಟರು. ಆತನು ಅವರಿಗೆ--ಈ ರೂಪವೂ ಮೇಲ್ಬರಹವೂ ಯಾರದು ಎಂದು ಕೇಳಿ ದನು. ಅದಕ್ಕೆ ಅವರು ಆತನಿಗೆ--ಕೈಸರನದು ಅಂದರು. ಆಗ ಆತನು ಅವರಿಗೆ-ಕೈಸರನದವುಗಳನ್ನು ಕೈಸರನಿಗೆ ಕೊಡಿರಿ; ದೇವರವುಗಳನ್ನು ದೇವರಿಗೆ ಕೊಡಿರಿ ಅಂದನು. ಇವುಗಳನ್ನು ಅವರು ಕೇಳಿದಾಗ ಆಶ್ಚರ್ಯಪಟ್ಟರು; ಮತ್ತು ಆತನನ್ನು ಬಿಟ್ಟು ಹೊರಟುಹೋದರು. ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಆತನ ಬಳಿಗೆ ಬಂದು-- ಬೋಧ ಕನೇ, ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋದರನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ. ಹೀಗಿರಲಾಗಿ ನಮ್ಮ ಕೂಡ ಏಳು ಮಂದಿ ಸಹೋದರರಿದ್ದರು; ಮೊದಲನೆ ಯವನು ಮದುವೆ ಮಾಡಿಕೊಂಡು ಸತ್ತನು; ಮತ್ತು ಸಂತಾನವಿಲ್ಲದ ಕಾರಣ ತನ್ನ ಹೆಂಡತಿಯನ್ನು ತನ್ನ ಸಹೋದರನಿಗೆ ಬಿಟ್ಟನು. ಅದರಂತೆಯೇ ಎರಡ ನೆಯವನು ಮತ್ತು ಮೂರನೆಯವನು ಹೀಗೆ ಏಳನೆಯ ವನವರೆಗೂ ಮಾಡಿದರು. ಕಡೆಯದಾಗಿ ಆ ಸ್ತ್ರೀಯೂ ಸತ್ತಳು. ಆದದರಿಂದ ಪುನರುತ್ಥಾನದಲ್ಲಿ ಆ ಏಳು ಮಂದಿಯಲ್ಲಿ ಆಕೆಯು ಯಾರಿಗೆ ಹೆಂಡತಿ ಯಾಗಿರುವಳು? ಯಾಕಂದರೆ ಅವರೆಲ್ಲರೂ ಆಕೆಯನ್ನು ಮದುವೆಮಾಡಿಕೊಂಡಿದ್ದರಲ್ಲಾ ಎಂದು ಕೇಳಿದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ಬರಹಗಳನ್ನಾಗಲೀ ದೇವರ ಶಕ್ತಿಯನ್ನಾಗಲೀ ತಿಳಿಯದೆ ತಪ್ಪುವವರಾಗಿದ್ದೀರಿ. ಯಾಕಂದರೆ ಪುನರುತ್ಥಾನದಲ್ಲಿ ಅವರು ಮದುವೆಯಾಗುವದಿಲ್ಲ ಮತ್ತು ಮದುವೆ ಮಾಡಿಕೊಡುವದೂ ಇಲ್ಲ; ಆದರೆ ಅವರು ಪರಲೋಕ ದಲ್ಲಿರುವ ದೇವದೂತರಂತೆ ಇರುತ್ತಾರೆ. ಆದರೆ ಸತ್ತವರ ಪುನರುತ್ಥಾನದ ವಿಷಯವಾಗಿ-- ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿಗಲ್ಲ ಎಂದು ಹೇಳಿದನು. ಜನ ಸಮೂಹದವರು ಇದನ್ನು ಕೇಳಿ ಆತನ ಬೋಧನೆಗೆ ವಿಸ್ಮಯಗೊಂಡರು.
- Genesis 32:9 ಆದಿಕಾಂಡ 32:9ಇದಲ್ಲದೆ ಯಾಕೋಬನು ಹೇಳಿದ್ದೇ ನಂದರೆ--ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರೇ, ನಿನ್ನ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ತಿರಿಗಿ ಹೋಗು, ಆಗ ನಿನಗೆ ಒಳ್ಳೇದನ್ನು ಮಾಡುವೆನು ಎಂದು ನನಗೆ ಹೇಳಿದ ಕರ್ತನೇ,
- Exodus 3:15 ವಿಮೋಚನಕಾಂಡ 3:15ದೇವರು ಮೋಶೆಗೆ--ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರು ಆಗಿರುವ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿ ದ್ದಾನೆಂದು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕು; ಇದೇ ಯುಗ ಯುಗಕ್ಕೆ ನನ್ನ ಹೆಸರೂ ತಲತಲಾಂತರಕ್ಕೆ ನನ್ನ ಸ್ಮರಣೆಯೂ ಆಗಿದೆ ಎಂದು ಹೇಳಿದನು.
- Genesis 28:13 ಆದಿಕಾಂಡ 28:13ಇಗೋ, ಕರ್ತನು ಅದರ ಮೇಲೆ ನಿಂತುಕೊಂಡು ಹೇಳಿದ್ದೇನಂದರೆ--ನಿನ್ನ ತಂದೆ ಯಾದ ಅಬ್ರಹಾಮನ ಕರ್ತನಾದ ದೇವರೂ ಇಸಾಕನ ದೇವರೂ ನಾನೇ, ನೀನು ಮಲಗಿರುವ ಭೂಮಿಯನ್ನು ನಿನಗೂ ನಿನ್ನ ಸಂತತಿಗೂ ಕೊಡುವೆನು.
- Genesis 28:21 ಆದಿಕಾಂಡ 28:21ನನ್ನನ್ನು ಸಮಾಧಾನ ವಾಗಿ ನನ್ನ ತಂದೆಯ ಮನೆಗೆ ತಿರಿಗಿ ಬರಮಾಡಿದರೆ ಕರ್ತನು ನನಗೆ ದೇವರಾಗಿರುವನು.ಇದಲ್ಲದೆ ಸ್ತಂಭವಾಗಿ ನಾನು ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗಿರುವದು. ಆಗ ನೀನು ನನಗೆ ಕೊಡುವದ ರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ನಿನಗೆ ನಾನು ಖಂಡಿತವಾಗಿ ಕೊಡುವೆನು ಅಂದನು.