Exodus · chapter 31 · verse 14
Exodus 31:14 in Kannada
ಹೀಗಿರುವದರಿಂದ ನೀವು ಸಬ್ಬತ್ತನ್ನು ಕೈಕೊಳ್ಳ ಬೇಕು, ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರಮಾಡುವ ಪ್ರತಿಯೊಬ್ಬನು ಖಂಡಿತವಾಗಿ ಸಾಯಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ ಅವರನ್ನು ತನ್ನ ಜನರೊಳಗಿಂದ ತೆಗೆದು ಹಾಕಬೇಕು.
Heegiruvadarinda neevu sabbattannu kaikolla beku, adu nimage parishuddhavaadaddu. Adannu apavitramaaduva pratiyobbanu khanditavaagi saayabeku. Aa dinadalli yaaraadaroo kelasa maadidare avarannu tanna janarolaginda tegedu haakabeku.
Exodus 31:14 in English
- King James Version (KJV)
- Ye shall keep the sabbath therefore; for it [is] holy unto you: every one that defileth it shall surely be put to death: for whosoever doeth [any] work therein, that soul shall be cut off from among his people.
- World English Bible (WEB)
- You shall keep the Sabbath therefore, for it is holy to you. Everyone who profanes it shall surely be put to death; for whoever does any work therein, that soul shall be cut off from among his people.
- American Standard Version (ASV)
- Ye shall keep the sabbath therefore; for it is holy unto you: every one that profaneth it shall surely be put to death; for whosoever doeth any work therein, that soul shall be cut off from among his people.
- Bible in Basic English (BBE)
- So you are to keep the Sabbath as a holy day; and anyone not honouring it will certainly be put to death: whoever does any work on that day will be cut off from his people.
- Darby Translation (DBY)
- Keep the sabbath, therefore; for it is holy unto you; every one that profaneth it shall certainly be put to death: yea, whoever doeth work on it, that soul shall be cut off from among his peoples.
- Webster's Bible (WBS)
- Ye shall keep the sabbath therefore: for it [is] holy to you. Every one that profaneth it shall surely be put to death: for whoever doeth [any] work therein, that soul shall be cut off from among his people.
- Young's Literal Translation (YLT)
- and ye have kept the sabbath, for it [is] holy to you, he who is polluting it is certainly put to death — for any who doeth work in it — that person hath even been cut off from the midst of his people.
Read in context
- 12ಕರ್ತನು ಮೋಶೆಯೊಂದಿಗೆ ಮಾತನಾಡಿ--
- 13ನೀನು ಇಸ್ರಾಯೇಲ್ ಮಕ್ಕಳೊಂದಿಗೆ ಸಹ ಮಾತ ನಾಡಿ--ನಿಶ್ಚಯವಾಗಿ ನೀವು ನನ್ನ ಸಬ್ಬತ್ತುಗಳನ್ನು ಕೈಕೊಳ್ಳಬೇಕು. ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ನೀವು ತಿಳಿಯುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರಿಗೂ ಗುರುತಾಗಿದೆ.
- 14ಹೀಗಿರುವದರಿಂದ ನೀವು ಸಬ್ಬತ್ತನ್ನು ಕೈಕೊಳ್ಳ ಬೇಕು, ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರಮಾಡುವ ಪ್ರತಿಯೊಬ್ಬನು ಖಂಡಿತವಾಗಿ ಸಾಯಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ ಅವರನ್ನು ತನ್ನ ಜನರೊಳಗಿಂದ ತೆಗೆದು ಹಾಕಬೇಕು.
- 15ಆರು ದಿವಸ ಕೆಲಸಮಾಡಬೇಕು; ಆದರೆ ಏಳನೆಯ ದಿನವು ಕರ್ತನಿಗೆ ಪರಿಶುದ್ಧವಾದ ವಿಶ್ರಾಂತಿಯ ಸಬ್ಬತ್ತು. ಸಬ್ಬತ್ ದಿನದಲ್ಲಿ ಕೆಲಸ ಮಾಡು ವವರೆಲ್ಲಾ ಖಂಡಿತವಾಗಿ ಸಾಯಬೇಕು.
- 16ಹೀಗಿರ ಲಾಗಿ ಇಸ್ರಾಯೇಲ್ ಮಕ್ಕಳು ತಮ್ಮ ತಲತಲಾಂತರ ಗಳಲ್ಲಿ ನಿತ್ಯ ಒಡಂಬಡಿಕೆಯಾಗಿ ಆಚರಿಸುವಂತೆ ಸಬ್ಬತ್ತ ನ್ನು ಕೈಕೊಳ್ಳಬೇಕು.
Cross references
- Exodus 35:2–3 ವಿಮೋಚನಕಾಂಡ 35:2–3ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧದಿನವಾಗಿಯೂ ಕರ್ತನಿಗೆ ವಿಶ್ರಾಂತಿಯ ಸಬ್ಬತ್ತಾಗಿಯೂ ಇರಬೇಕು. ಆ ದಿನದಲ್ಲಿ ಕೆಲಸ ಮಾಡುವವನು ಕೊಲ್ಲಲ್ಪಡಬೇಕು. ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್ ದಿನದಲ್ಲಿ ಬೆಂಕಿಯನ್ನೂ ಹೊತ್ತಿಸಬಾರದು ಎಂದು ಹೇಳಿದನು.
- Numbers 15:32–36 ಅರಣ್ಯಕಾಂಡ 15:32–36ಇಸ್ರಾಯೇಲ್ ಮಕ್ಕಳು ಅರಣ್ಯದಲ್ಲಿದ್ದಾಗ ಸಬ್ಬತ್ ದಿನದಲ್ಲಿ ಕಟ್ಟಿಗೆಗಳನ್ನು ಕೂಡಿಸುವ ಮನುಷ್ಯನನ್ನು ಕಂಡರು. ಆಗ ಕಟ್ಟಿಗೆಗಳನ್ನು ಕೂಡಿಸುವದರಲ್ಲಿ ಅವನನ್ನು ಕಂಡುಕೊಂಡವರು ಅವನನ್ನು ಮೋಶೆ ಆರೋನರ ಬಳಿಗೂ ಸಮಸ್ತಸಭೆಗೂ ತಂದು ಅವ ನಿಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಯದ ಕಾರಣ ಅವನನ್ನು ಕಾವಲಲ್ಲಿ ಹಾಕಿದರು. ಆಗ ಕರ್ತನು ಮೋಶೆಗೆ--ಆ ಮನುಷ್ಯನು ಖಂಡಿತವಾ ಗಿಯೂ ಸಾಯಲೇಬೇಕು; ಸಭೆಯೆಲ್ಲಾ ಪಾಳೆಯದ ಹೊರಗೆ ಅವನನ್ನು ಕಲ್ಲೆಸೆಯಬೇಕು ಎಂದು ಹೇಳಿದನು. ಆಗ ಸಭೆಯೆಲ್ಲಾ ಅವನನ್ನು ಪಾಳೆಯದ ಹೊರಗೆ ತಕ್ಕೊಂಡು ಹೋಗಿ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನು ಸಾಯುವ ಹಾಗೆ ಅವನಿಗೆ ಕಲ್ಲೆಸೆದರು.
- Deuteronomy 5:12–15 ಧರ್ಮೋಪದೇಶಕಾಂಡ 5:12–15ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದಂತೆ ಸಬ್ಬತ್ ದಿವಸವನ್ನು ಪರಿಶುದ್ಧಮಾಡುವದಕ್ಕೆ ಅದನ್ನು ಕಾಪಾಡು. ಆರು ದಿವಸಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು. ಏಳನೇ ದಿವಸವು ನಿನ್ನ ದೇವರಾದ ಕರ್ತನ ಸಬ್ಬತ್ ದಿವಸವೇ; ಅದ ರಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಎತ್ತೂ ಕತ್ತೆಯೂ ಎಲ್ಲಾಪಶುಗಳೂ ನಿನ್ನ ಬಾಗಲುಗಳಲ್ಲಿರುವ ಪರವಾಸಿಯೂ ಯಾವ ಕೆಲಸ ವನ್ನೂ ಮಾಡಬಾರದು. ನಿನ್ನ ದಾಸನೂ ದಾಸಿಯೂ ನಿನ್ನ ಹಾಗೆ ವಿಶ್ರಮಿಸಿಕೊಳ್ಳಬೇಕು. ನೀನು ಐಗುಪ್ತ ದೇಶದಲ್ಲಿ ದಾಸನಾಗಿದ್ದಿ ಎಂದೂ ನಿನ್ನ ದೇವರಾದ ಕರ್ತನು ನಿನ್ನನ್ನು ಅಲ್ಲಿಂದ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಹೊರಗೆ ಬರಮಾಡಿದ ನೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದಕಾರಣ ನಿನ್ನ ದೇವರಾದ ಕರ್ತನು ನಿನಗೆ ಸಬ್ಬತ್ ದಿವಸವನ್ನು ಆಚರಿಸಬೇಕೆಂದು ಆಜ್ಞಾಪಿಸಿದ್ದಾನೆ.
- Ezekiel 20:12–13 ಯೆಹೆಜ್ಕೇಲನು 20:12–13ಇದಲ್ಲದೆ ಅವರನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ಅವರು ತಿಳಿಯುವ ಹಾಗೆ ನನಗೂ ಅವರಿಗೂ ಗುರುತಾಗಿರುವದಕ್ಕೆ ನನ್ನ ಸಬ್ಬತ್ ದಿನಗಳನ್ನು ನಾನು ಅವರಿಗೆ ಕೊಟ್ಟೆನು. ಆದರೆ ಇಸ್ರಾಯೇಲಿನ ಮನೆತನದವರು ಅರಣ್ಯದಲ್ಲಿಯೂ ನನಗೆ ವಿರುದ್ಧ ವಾಗಿ ತಿರುಗಿಬಿದ್ದರು; ಆಜ್ಞಾವಿಧಿಗಳನ್ನು ಅನುಸರಿಸುವ ಮನುಷ್ಯನು ಬದುಕುವನು. ಅವುಗಳಲ್ಲಿ ನಡೆಯದೆ ನನ್ನ ನ್ಯಾಯಗಳನ್ನು ಅಸಡ್ಡೆ ಮಾಡಿ ನನ್ನ ಸಬ್ಬತ್ ದಿನಗಳನ್ನು ಸಹ ಬಹಳವಾಗಿ ಅಪವಿತ್ರಪಡಿಸಿದರು; ಆಗ ನಾನು ಅವರ ಮೇಲೆ ನನ್ನ ರೋಷದಿಂದ ದಹಿಸಿಬಿಡುವೆನೆಂದು ಹೇಳಿದೆನು.
- Nehemiah 9:14 ನೆಹೆಮೀಯ 9:14ನೀನು ಪರಿಶುದ್ಧ ಸಬ್ಬತ್ ದಿವಸವನ್ನು ಅವರಿಗೆ ತಿಳಿಸಿ ನಿನ್ನ ಸೇವಕನಾದ ಮೋಶೆಯ ಮುಖಾಂತರ ಅವರಿಗೆ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಪ್ರಮಾಣವನ್ನೂ
- Ezekiel 20:24 ಯೆಹೆಜ್ಕೇಲನು 20:24ಅವರು ನನ್ನ ನ್ಯಾಯಗಳಲ್ಲಿ ನಡೆಯದೆ, ನನ್ನ ನಿಯಮಗಳನ್ನು ಅಲಕ್ಷಿಸಿ ನನ್ನ ಸಬ್ಬತ್ತುಗಳನ್ನು ಅಪವಿತ್ರಪಡಿಸಿದರು; ತಮ್ಮ ಪಿತೃಗಳ ವಿಗ್ರಹಗಳ ಕಡೆಗೆ ಕಣ್ಣಿಟ್ಟಿದ್ದರು.
- Isaiah 58:13–14 ಯೆಶಾಯ 58:13–14ನೀನು ಸಬ್ಬತ್ತಿನಲ್ಲಿ ನಿನ್ನ ಕಾಲನ್ನು ಹಿಂದೆಗೆದು, ನನ್ನ ಪರಿಶುದ್ಧ ದಿವಸದಲ್ಲಿ ನಿನ್ನ ಇಷ್ಟ ವನ್ನು ಮಾಡದೇ ಹೋದರೆ ಸಬ್ಬತ್ತನ್ನು ಆನಂದಕರ ವಾದದ್ದೆಂದೂ ಕರ್ತನ ಪರಿಶುದ್ಧ ದಿವಸವನ್ನು ಘನವುಳ್ಳದ್ದೆಂದೂ ಕರೆದರೆ, ಸ್ವಂತ ಕೆಲಸಗಳನ್ನು ಮಾಡದೆ ಸ್ವಂತ ಇಷ್ಟವನ್ನು ಕಂಡುಕೊಳ್ಳದೆ, ಸ್ವಂತ ಮಾತುಗಳನ್ನು ಆಡದೆ, ಅದನ್ನು ಘನಪಡಿಸಿದರೆ,ಆಗ ಕರ್ತನಲ್ಲಿ ಆನಂದಗೊಳ್ಳುವಿ; ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿ ಸುವಂತೆ ನಿನಗೆ ಮಾಡುವೆನು. ಕರ್ತನೇ ಇದನ್ನು ನುಡಿದಿದ್ದಾನೆ. ಆಗ ಕರ್ತನಲ್ಲಿ ಆನಂದಗೊಳ್ಳುವಿ; ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿ ಸುವಂತೆ ನಿನಗೆ ಮಾಡುವೆನು. ಕರ್ತನೇ ಇದನ್ನು ನುಡಿದಿದ್ದಾನೆ.
- Isaiah 56:2–6 ಯೆಶಾಯ 56:2–6ಇದನ್ನು ಮಾಡುವ ಮನುಷ್ಯನೂ ಇದನ್ನು ಹಿಡಿದು ಕೊಳ್ಳುವವರ ಪುತ್ರನೂ ಅಂದರೆ ಸಬ್ಬತ್ ದಿನವನ್ನು ಅಪವಿತ್ರಮಾಡದೆ ಕೈಕೊಳ್ಳುವನೋ ಯಾವ ಕೇಡನ್ನು ಮಾಡದ ಹಾಗೆ ತನ್ನ ಕೈಯನ್ನು ಕಾಯುವನೋ ಅವನು ಧನ್ಯನು. ಇಲ್ಲವೆ ಕರ್ತನೊಂದಿಗೆ ಅನ್ಯನ ಮಗನು ಸೇರಿಕೊಂಡು--ಕರ್ತನು ತನ್ನ ಜನರಿಂದ ನನ್ನನ್ನು ಸಂಪೂರ್ಣವಾಗಿ ಅಗಲಿಸುವನು ಎಂದು ಮಾತಾಡ ದಿರಲಿ; ಅಥವಾ ನಪುಂಸಕನು--ಇಗೋ, ನಾನು ಒಣಗಿದ ಮರವೆಂದು ಹೇಳದಿರಲಿ. ಕರ್ತನು ತನ್ನ ಸಬ್ಬತ್ತನ್ನು ಕೈಕೊಂಡು ತನಗೆ ಮೆಚ್ಚಿಕೆಯಾದದ್ದನ್ನು ಆದುಕೊಂಡು ತನ್ನ ಒಡಂಬಡಿಕೆಯನ್ನು ಹಿಡಿದು ಕೊಂಡಿರುವ ನಪುಂಸಕರಿಗೆ-- ನನ್ನ ಆಲಯದ ಲ್ಲಿಯೂ ಗೋಡೆಗಳ ಬಳಿಗೂ ಕುಮಾರ ಕುಮಾರ್ತೆ ಯರಿಗಿಂತ ಉತ್ತಮವಾದ ಸ್ಥಳವನ್ನೂ ಹೆಸರನ್ನೂ ನಾನು ಕೊಡುತ್ತೇನೆ. ಎಂದಿಗೂ ಅಳಿಯದ ಶಾಶ್ವತ ವಾದ ಹೆಸರನ್ನು ಅವರಿಗೆ ನಾನು ಕೊಡುವೆನು ಎಂದು ಹೇಳುತ್ತಾನೆ. ಕರ್ತನನ್ನು ಸೇವಿಸುವದಕ್ಕೂ ಆತನ ಹೆಸರನ್ನು ಪ್ರೀತಿಮಾಡುವದಕ್ಕೂ ಆತನ ಸೇವಕರಾಗಿ ರುವದಕ್ಕೂ ತಾವೇ ಕರ್ತನೊಂದಿಗೆ ಸೇರಿಕೊಂಡಿರುವ ಅನ್ಯರ ಮಕ್ಕಳನ್ನು ಸಬ್ಬತ್ ದಿನವನ್ನು ಅಪವಿತ್ರ ಮಾಡದೆ ಕೈಕೊಳ್ಳುವ ಪ್ರತಿಯೊಬ್ಬನನ್ನೂ ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವವರನೂ
- Exodus 20:8 ವಿಮೋಚನಕಾಂಡ 20:8ಸಬ್ಬತ್ ದಿನವನ್ನು ಪರಿಶುದ್ಧವಾಗಿ ಇರುವಂತೆ ಜ್ಞಾಪಕದಲ್ಲಿಟ್ಟುಕೋ.
- Ezekiel 20:21 ಯೆಹೆಜ್ಕೇಲನು 20:21ಆದಾಗ್ಯೂ ಮಕ್ಕಳು ನನಗೆ ವಿರೋಧವಾಗಿ ತಿರುಗಿ ಬಿದ್ದರು; ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ನನ್ನ ನ್ಯಾಯಗಳನ್ನು ಕೈಕೊಂಡುಮಾಡಲಿಲ್ಲ; ನನ್ನ ಸಬ್ಬತ್ತುಗಳನ್ನು ಅಪವಿತ್ರ ಪಡಿಸಿದಾಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ ನನ್ನ ಕೋಪ ವನ್ನು ಅರಣ್ಯದಲ್ಲಿ ಅವರ ಮೇಲೆ ತೀರಿಸಿಬಿಡುವೆ ನೆಂದೂ ಹೇಳಿದೆನು.
- Ezekiel 44:24 ಯೆಹೆಜ್ಕೇಲನು 44:24ಜಗಳವಾಡುವಾಗ ಅವರು ನ್ಯಾಯಕ್ಕಾಗಿ ನಿಂತು, ನನ್ನ ನ್ಯಾಯವಿಧಿಗಳ ಪ್ರಕಾರ ಅವರಿಗೆ ತಿಳಿಸಬೇಕು. ಅವರು ನನ್ನ ನ್ಯಾಯಪ್ರಮಾಣಗಳನ್ನೂ ನಿಯಮಗ ಳನ್ನೂ ನನ್ನ ಸಭೆಗಳಲ್ಲಿ ಕೈಕೊಳ್ಳಬೇಕು; ನನ್ನ ಸಬ್ಬತ್ತು ಗಳನ್ನು ಪರಿಶುದ್ಧಪಡಿಸಬೇಕು.
- Ezekiel 20:16 ಯೆಹೆಜ್ಕೇಲನು 20:16ಅವರ ಹೃದಯವು ತಮ್ಮ ವಿಗ್ರಹಗಳಲ್ಲಿ ಆಸಕ್ತವಾಗಿ ನನ್ನ ನಿಯಮಗಳನ್ನು ಅನುಸರಿಸದೆ ನಿರಾಕರಿಸಿ ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರ ಮಾಡಿದರು.
Original words (Hebrew)
- keep · H8104שָׁמַר shâmar
- sabbath · H7676שַׁבָּת shabbâth
- holy · H6944קֹדֶשׁ qôdesh
- defileth · H2490חָלַל châlal
- surely · H4191מוּת mûwth
- death · H4191מוּת mûwth
- doeth · H6213עָשָׂה ʻâsâh
- work · H4399מְלָאכָה mᵉlâʼkâh
- soul · H5315נֶפֶשׁ nephesh
- off · H3772כָּרַת kârath
- among · H7130קֶרֶב qereb
- people · H5971עַם ʻam