Exodus · chapter 31 · verse 13
Exodus 31:13 in Kannada
ನೀನು ಇಸ್ರಾಯೇಲ್ ಮಕ್ಕಳೊಂದಿಗೆ ಸಹ ಮಾತ ನಾಡಿ--ನಿಶ್ಚಯವಾಗಿ ನೀವು ನನ್ನ ಸಬ್ಬತ್ತುಗಳನ್ನು ಕೈಕೊಳ್ಳಬೇಕು. ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ನೀವು ತಿಳಿಯುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರಿಗೂ ಗುರುತಾಗಿದೆ.
Neenu israayel makkalondige saha maata naadi--nishchayavaagi neevu nanna sabbattugalannu kaikollabeku. Nimmannu parishuddha maaduva kartanu naane endu neevu tiliyuvante ide nanagoo nimagoo nimma santatiyavarigoo gurutaagide.
Exodus 31:13 in English
- King James Version (KJV)
- Speak thou also unto the children of Israel, saying, Verily my sabbaths ye shall keep: for it [is] a sign between me and you throughout your generations; that [ye] may know that I [am] the LORD that doth sanctify you.
- World English Bible (WEB)
- “Speak also to the children of Israel, saying, ‘Most certainly you shall keep my Sabbaths; for it is a sign between me and you throughout your generations, that you may know that I am the LORD who sanctifies you.
- American Standard Version (ASV)
- Speak thou also unto the children of Israel, saying, Verily ye shall keep my sabbaths: for it is a sign between me and you throughout your generations; that ye may know that I am Jehovah who sanctifieth you.
- Bible in Basic English (BBE)
- Say to the children of Israel that they are to keep my Sabbaths; for the Sabbath day is a sign between me and you through all your generations; so that you may see that I am the Lord who makes you holy.
- Darby Translation (DBY)
- And thou, speak thou unto the children of Israel, saying, Surely my sabbaths shall ye keep; for this is a sign between me and you throughout your generations, that ye may know that it is I, Jehovah, who do hallow you.
- Webster's Bible (WBS)
- Speak thou also to the children of Israel, saying, Verily my sabbaths ye shall keep: for it [is] a sign between me and you throughout your generations; that [ye] may know that I [am] the LORD that doth sanctify you.
- Young's Literal Translation (YLT)
- 'And thou, speak unto the sons of Israel, saying, Only, My sabbaths ye do keep, for it [is] a sign between Me and you, to your generations, to know that I, Jehovah, am sanctifying you;
Read in context
- 11ಅಭಿಷೇಕಿಸುವ ತೈಲವನ್ನೂ ಪರಿಶುದ್ಧ ಸ್ಥಳಕ್ಕೋಸ್ಕರ ವಿರುವ ಪರಿಮಳ ಧೂಪವನ್ನೂ ನಾನು ನಿನಗೆ ಆಜ್ಞಾಪಿಸಿ ದವುಗಳೆಲ್ಲವನ್ನೂ ಅವರು ಮಾಡುವರು ಅಂದನು.
- 12ಕರ್ತನು ಮೋಶೆಯೊಂದಿಗೆ ಮಾತನಾಡಿ--
- 13ನೀನು ಇಸ್ರಾಯೇಲ್ ಮಕ್ಕಳೊಂದಿಗೆ ಸಹ ಮಾತ ನಾಡಿ--ನಿಶ್ಚಯವಾಗಿ ನೀವು ನನ್ನ ಸಬ್ಬತ್ತುಗಳನ್ನು ಕೈಕೊಳ್ಳಬೇಕು. ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ನೀವು ತಿಳಿಯುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರಿಗೂ ಗುರುತಾಗಿದೆ.
- 14ಹೀಗಿರುವದರಿಂದ ನೀವು ಸಬ್ಬತ್ತನ್ನು ಕೈಕೊಳ್ಳ ಬೇಕು, ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರಮಾಡುವ ಪ್ರತಿಯೊಬ್ಬನು ಖಂಡಿತವಾಗಿ ಸಾಯಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ ಅವರನ್ನು ತನ್ನ ಜನರೊಳಗಿಂದ ತೆಗೆದು ಹಾಕಬೇಕು.
- 15ಆರು ದಿವಸ ಕೆಲಸಮಾಡಬೇಕು; ಆದರೆ ಏಳನೆಯ ದಿನವು ಕರ್ತನಿಗೆ ಪರಿಶುದ್ಧವಾದ ವಿಶ್ರಾಂತಿಯ ಸಬ್ಬತ್ತು. ಸಬ್ಬತ್ ದಿನದಲ್ಲಿ ಕೆಲಸ ಮಾಡು ವವರೆಲ್ಲಾ ಖಂಡಿತವಾಗಿ ಸಾಯಬೇಕು.
Cross references
- Ezekiel 20:20 ಯೆಹೆಜ್ಕೇಲನು 20:20ನನ್ನ ಸಬ್ಬತ್ತುಗಳನ್ನು ಪರಿಶುದ್ಧಮಾಡಿರಿ ನಾನೇ ನಿಮ್ಮ ದೇವರಾದ ಕರ್ತನು ಎಂದು ಅವು ನಿಮಗೂ ನನಗೂ ನೀವು ತಿಳಿಯುವ ಹಾಗೆ ಗುರುತುಗಳಾಗಿರುವವು.
- Ezekiel 20:12 ಯೆಹೆಜ್ಕೇಲನು 20:12ಇದಲ್ಲದೆ ಅವರನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ಅವರು ತಿಳಿಯುವ ಹಾಗೆ ನನಗೂ ಅವರಿಗೂ ಗುರುತಾಗಿರುವದಕ್ಕೆ ನನ್ನ ಸಬ್ಬತ್ ದಿನಗಳನ್ನು ನಾನು ಅವರಿಗೆ ಕೊಟ್ಟೆನು.
- Leviticus 19:30 ಯಾಜಕಕಾಂಡ 19:30ನನ್ನ ಸಬ್ಬತ್ತುಗಳನ್ನು ನೀನು ಕೈಕೊಳ್ಳಬೇಕು; ನನ್ನ ಪವಿತ್ರ ಸ್ಥಳವನ್ನು ಭಯಭಕ್ತಿಯಿಂದ ಕಾಣಬೇಕು; ನಾನೇ ಕರ್ತನು.
- Exodus 31:17 ವಿಮೋಚನಕಾಂಡ 31:17ನನಗೂ ಇಸ್ರಾಯೇಲ್ ಮಕ್ಕ ಳಿಗೂ ಇದೇ ಶಾಶ್ವತವಾದ ಗುರುತು. ಯಾಕಂದರೆ ಆರು ದಿವಸಗಳಲ್ಲಿ ಕರ್ತನು ಆಕಾಶವನ್ನೂ ಭೂಮಿ ಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿ ಕೊಂಡು ಉಲ್ಲಾಸಗೊಂಡನು ಎಂದು ಹೇಳು ಅಂದನು.ಆತನು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ ಅವನಿಗೆ ಆ ಎರಡು ಸಾಕ್ಷಿ ಹಲಗೆಗಳನ್ನೂ ಕೊಟ್ಟನು. ಅವು ದೇವರ ಕೈಯಿಂದ ಕೆತ್ತಲ್ಪಟ್ಟ ಕಲ್ಲಿನ ಹಲಗೆಗಳಾಗಿದ್ದವು.
- Exodus 20:8–11 ವಿಮೋಚನಕಾಂಡ 20:8–11ಸಬ್ಬತ್ ದಿನವನ್ನು ಪರಿಶುದ್ಧವಾಗಿ ಇರುವಂತೆ ಜ್ಞಾಪಕದಲ್ಲಿಟ್ಟುಕೋ. ನೀನು ಆರು ದಿನಗಳು ದುಡಿದು ನಿನ್ನ ಕೆಲಸಗಳನ್ನೆಲ್ಲಾ ಮಾಡಿಕೋ. ಆದರೆ ಏಳನೆಯ ದಿನವು ನಿನ್ನ ದೇವರಾದ ಕರ್ತನ ಸಬ್ಬತ್ ಆಗಿದೆ. ಅದರಲ್ಲಿ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲ ಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು. ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು.
- 1 Thessalonians 5:23 1 ಥೆಸಲೊನೀಕದವರಿಗೆ 5:23ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಪವಿತ್ರ ಮಾಡಲಿ; ಇದಲ್ಲದೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಬರೋಣದಲ್ಲಿ ನಿಮ್ಮ ಆತ್ಮ ಪ್ರಾಣ ಶರೀರಗಳು ದೋಷವಿಲ್ಲದೆ ಸಂಪೂರ್ಣ ವಾಗಿ ಕಾಣಿಸುವಂತೆ ಮಾಡಲಿ.
- Leviticus 20:8 ಯಾಜಕಕಾಂಡ 20:8ನೀವು ನನ್ನ ನಿಯಮಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ನಿಮ್ಮನ್ನು ಶುದ್ಧಪಡಿಸುವ ಕರ್ತನು ನಾನೇ.
- Leviticus 19:3 ಯಾಜಕಕಾಂಡ 19:3ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತಾಯಿಗೂ ತಂದೆಗೂ ಭಯಪಟ್ಟು ನನ್ನ ಸಬ್ಬತ್ತುಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
- John 17:17 ಯೋಹಾನನು 17:17ನಿನ್ನ ಸತ್ಯದಿಂದ ಅವರನ್ನು ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು
- Ezekiel 44:24 ಯೆಹೆಜ್ಕೇಲನು 44:24ಜಗಳವಾಡುವಾಗ ಅವರು ನ್ಯಾಯಕ್ಕಾಗಿ ನಿಂತು, ನನ್ನ ನ್ಯಾಯವಿಧಿಗಳ ಪ್ರಕಾರ ಅವರಿಗೆ ತಿಳಿಸಬೇಕು. ಅವರು ನನ್ನ ನ್ಯಾಯಪ್ರಮಾಣಗಳನ್ನೂ ನಿಯಮಗ ಳನ್ನೂ ನನ್ನ ಸಭೆಗಳಲ್ಲಿ ಕೈಕೊಳ್ಳಬೇಕು; ನನ್ನ ಸಬ್ಬತ್ತು ಗಳನ್ನು ಪರಿಶುದ್ಧಪಡಿಸಬೇಕು.
- Leviticus 23:3 ಯಾಜಕಕಾಂಡ 23:3ಆರು ದಿವಸ ಕೆಲಸಮಾಡಬೇಕು, ಆದರೆ ಏಳನೆಯ ದಿವಸವು ವಿಶ್ರಾಂತಿಯ ಸಬ್ಬತ್ ದಿವಸವಾಗಿ ಪರಿಶುದ್ಧ ಸಭಾಕೂಟವಾಗಿರುವದು; ನೀವು ಆ ದಿನ ದಲ್ಲಿ ಕೆಲಸಮಾಡಬಾರದು; ನಿಮ್ಮ ಎಲ್ಲಾ ನಿವಾಸಗಳಲ್ಲಿ ಅದು ಕರ್ತನ ಸಬ್ಬತ್ತಾಗಿರುವದು.
- Ezekiel 37:28 ಯೆಹೆಜ್ಕೇಲನು 37:28ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಕರ್ತ ನಾದ ನಾನೇ ಇಸ್ರಾಯೇಲ್ಯರನ್ನು ಪರಿಶುದ್ಧ ಗೊಳಿಸಿದೆನೆಂದು ಅನ್ಯಜನರು ತಿಳಿದುಕೊಳ್ಳುವರು.