Exodus · chapter 32 · verse 21
Exodus 32:21 in Kannada
ಮೋಶೆಯು ಆರೋನನಿಗೆ--ಈ ಜನರ ಮೇಲೆ ದೊಡ್ಡ ಪಾಪವನ್ನು ನೀನು ಬರಮಾಡುವಂತೆ ಅವರು ನಿನಗೆ ಏನು ಮಾಡಿದರು ಎಂದು ಕೇಳಿದನು.
Mosheyu aaronanige--ee janara mele dodda paapavannu neenu baramaaduvante avaru ninage enu maadidaru endu kelidanu.
Exodus 32:21 in English
- King James Version (KJV)
- And Moses said unto Aaron, What did this people unto thee, that thou hast brought so great a sin upon them?
- World English Bible (WEB)
- Moses said to Aaron, “What did these people do to you, that you have brought a great sin on them?”
- American Standard Version (ASV)
- And Moses said unto Aaron, What did this people unto thee, that thou hast brought a great sin upon them?
- Bible in Basic English (BBE)
- And Moses said to Aaron, What did the people do to you that you let this great sin come on them?
- Darby Translation (DBY)
- And Moses said to Aaron, What has this people done to thee, that thou hast brought so great a sin on them?
- Webster's Bible (WBS)
- And Moses said to Aaron, What did this people to thee, that thou hast brought so great a sin upon them?
- Young's Literal Translation (YLT)
- And Moses saith unto Aaron, 'What hath this people done to thee, that thou hast brought in upon it a great sin?'
Read in context
- 19ಇದಾದ ಮೇಲೆ ಮೋಶೆಯು ಪಾಳೆಯದ ಸವಿಾಪಕ್ಕೆ ಬಂದು ಆ ಕರುವನ್ನೂ ಅವರ ನಾಟ್ಯವನ್ನೂ ನೋಡಿ ಕೋಪ ಗೊಂಡು ಕೈಯಲ್ಲಿದ್ದ ಹಲಗೆಗಳನ್ನು ಬಿಸಾಡಿ ಬೆಟ್ಟದ ಅಡಿಯಲ್ಲಿ ಅವುಗಳನ್ನು ಒಡೆದುಬಿಟ್ಟನು.
- 20ಅವರು ಮಾಡಿದ ಕರುವನ್ನು ಅವನು ತೆಗೆದುಕೊಂಡು ಅದನ್ನು ಬೆಂಕಿಯಲ್ಲಿ ಸುಟ್ಟು ಪುಡಿಯಾಗುವ ವರೆಗೆ ಅರೆಸಿ ನೀರಿನ ಮೇಲೆ ಚೆಲ್ಲಿ ಆ ನೀರನ್ನು ಇಸ್ರಾಯೇಲ್ ಮಕ್ಕಳು ಕುಡಿಯುವಂತೆ ಮಾಡಿದನು.
- 21ಮೋಶೆಯು ಆರೋನನಿಗೆ--ಈ ಜನರ ಮೇಲೆ ದೊಡ್ಡ ಪಾಪವನ್ನು ನೀನು ಬರಮಾಡುವಂತೆ ಅವರು ನಿನಗೆ ಏನು ಮಾಡಿದರು ಎಂದು ಕೇಳಿದನು.
- 22ಅದಕ್ಕೆ ಆರೋನನು--ನನ್ನ ಒಡೆಯನ ಕೋಪ ಉರಿಯದೆ ಇರಲಿ. ಈ ಜನರು ಕೇಡಿನ ಮನಸ್ಸಿನವರಾಗಿದ್ದಾರೆಂದು ನೀನು ಬಲ್ಲೆ.
- 23ನಮಗೋಸ್ಕರ ನಮ್ಮ ಮುಂದೆ ಹೋಗುವ ದೇವರುಗಳನ್ನು ಮಾಡು. ಯಾಕಂದರೆ ಐಗುಪ್ತದೇಶದೊಳಗಿಂದ ನಮ್ಮನ್ನು ಬರಮಾಡಿದ ಈ ಮೋಶೆಗೆ ಏನಾಯಿತೋ ನಮಗೆ ತಿಳಿಯದು ಎಂದು ನನಗೆ ಅವರು ಹೇಳಿದರು.
Cross references
- Joshua 7:19–26 ಯೆಹೋಶುವ 7:19–26ಆಗ ಯೆಹೋಶುವನು ಆಕಾನನಿಗೆ--ನನ್ನ ಮಗನೇ, ನೀನು ಈಗ ಇಸ್ರಾ ಯೇಲಿನ ದೇವರಾದ ಕರ್ತನನ್ನು ಘನಪಡಿಸಿ ಆತನಿಗೆ ಅರಿಕೆಮಾಡು; ಏನು ಮಾಡಿದಿಯೋ ಅದನ್ನು ನನಗೆ ತಿಳಿಸು; ನನಗೆ ಮರೆಮಾಡಬೇಡ ಅಂದನು. ಆಗ ಆಕಾನನು ಯೆಹೋಶುವನಿಗೆ ಪ್ರತ್ಯುತ್ತರವಾಗಿ--ನಿಜವಾಗಿ ನಾನು ಇಸ್ರಾಯೇಲ್ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿ ಇಂತಿಂಥವುಗಳನ್ನು ಮಾಡಿದ್ದೇನೆ. ಏನಂದರೆ, ನಾನು ಕೊಳ್ಳೆಯಲ್ಲಿ ಬಾಬೆಲಿನ ಒಂದು ಒಳ್ಳೇ ನಿಲುವಂಗಿಯನ್ನೂ ಇನ್ನೂರು ಬೆಳ್ಳಿ ಶೇಕೆಲುಗಳನ್ನೂ ಐವತ್ತು ಶೇಕೆಲ್ ತೂಕವಾದ ಒಂದು ಬಂಗಾರದ ಗಟ್ಟಿಯನ್ನೂ ಕಂಡು ಅವುಗಳನ್ನು ಆಶಿಸಿ ತೆಗೆದುಕೊಂಡೆನು; ಇಗೋ, ಅವುಗಳನ್ನು ನನ್ನ ಗುಡಾರದ ಮಧ್ಯದಲ್ಲಿ ನೆಲದೊಳಗೆ ಬಚ್ಚಿಟ್ಟಿದ್ದೇನೆ; ಬೆಳ್ಳಿಯೂ ಅದರ ಕೆಳಗೆ ಇದೆ ಅಂದನು. ಆಗ ಯೆಹೋಶುವನು ದೂತರನ್ನು ಕಳುಹಿಸಿದನು; ಅವರು ಡೇರೆಗಳಿಗೆ ಓಡಿದರು; ಇಗೋ, ಡೇರೆಯಲ್ಲಿ ಅವು ಬಚ್ಚಿಡಲ್ಪಟ್ಟಿದ್ದವು; ಬೆಳ್ಳಿಯು ಅದರ ಕೆಳಗೆ ಇತ್ತು. ಅವರು ಅವುಗಳನ್ನು ಡೇರೆಯ ಮಧ್ಯದಿಂದ ತೆಗೆದುಕೊಂಡು ಯೆಹೋಶುವನ ಬಳಿಗೂ ಸಮಸ್ತ ಇಸ್ರಾಯೇಲ್ ಮಕ್ಕಳ ಬಳಿಗೂ ತಂದು ಕರ್ತನ ಮುಂದೆ ಇಟ್ಟರು. ಆಗ ಯೆಹೋಶುವನೂ ಅವ ನೊಂದಿಗೆ ಇಸ್ರಾಯೇಲ್ಯರೆಲ್ಲರೂ ಜೆರಹನ ಮಗನಾದ ಆಕಾನನನ್ನೂ ಆ ಬೆಳ್ಳಿಯನ್ನೂ ವಸ್ತ್ರವನ್ನೂ ಬಂಗಾರದ ಗಟ್ಟಿಯನ್ನೂ ಅವನ ಕುಮಾರರನ್ನೂ ಕುಮಾರ್ತೆಯ ರನ್ನೂ ಅವನ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಅವನ ಡೇರೆಯನ್ನೂ ಅವನಿಗಿದ್ದ ಸಮಸ್ತವನ್ನೂ ತೆಗೆದುಕೊಂಡು ಆಕೋರಿನ ತಗ್ಗಿಗೆ ತಂದರು. ಆಗ ಯೆಹೋಶುವನು ಅವನಿಗೆ--ನೀನು ನಮ್ಮನ್ನು ತೊಂದರೆ ಪಡಿಸಿದ್ದೇನು? ಇಂದು ಕರ್ತನು ನಿನ್ನನ್ನು ತೊಂದರೆ ಪಡಿಸುವನು ಅಂದನು. ಆಗ ಇಸ್ರಾಯೇಲ್ಯ ರೆಲ್ಲರೂ ಅವನ ಮೇಲೆ ಕಲ್ಲೆಸೆದರು. ತರುವಾಯ ಬೆಂಕಿಯಿಂದ ಅವರನ್ನು ಸುಟ್ಟುಬಿಟ್ಟುಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು. ಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು.
- Genesis 20:9 ಆದಿಕಾಂಡ 20:9ಅಬೀಮೆಲೆಕನು ಅಬ್ರಹಾ ಮನನ್ನು ಕರೆದು ಅವನಿಗೆ--ನೀನು ನಮಗೆ ಮಾಡಿ ದ್ದೇನು? ನೀನು ನನ್ನ ಮೇಲೆಯೂ ನನ್ನ ರಾಜ್ಯದ ಮೇಲೆಯೂ ದೊಡ್ಡ ಪಾಪವನ್ನು ಬರಮಾಡುವಂತೆ ನಾನು ನಿನಗೆ ಏನು ಅಪರಾಧ ಮಾಡಿದ್ದೇನೆ? ನನಗೆ ನೀನು ಮಾಡಬಾರದ ಕಾರ್ಯಗಳನ್ನು ಮಾಡಿದ್ದೀ ಅಂದನು.
- Deuteronomy 13:6–8 ಧರ್ಮೋಪದೇಶಕಾಂಡ 13:6–8ನಿನ್ನ ತಾಯಿಯ ಮಗನಾದ ನಿನ್ನ ಸಹೋದರ ನಾಗಲಿ ಮಗನಾಗಲಿ ಮಗಳಾಗಲಿ ಮಗ್ಗುಲಲ್ಲಿರುವ ಹೆಂಡತಿಯಾಗಲಿ ನಿನ್ನ ಪ್ರಾಣದಂತೆ ನಿನಗಿರುವ ಸ್ನೇಹಿತ ನಾಗಲಿ ನೀನೂ ನಿನ್ನ ಪಿತೃಗಳೂ ತಿಳಿಯದ ಬೇರೆ ದೇವರುಗಳನ್ನು ನಿನಗೆ ಸವಿಾಪವಾಗಲಿ ನಿನಗೆ ದೂರವಾಗಲಿ ಭೂಮಿಯ ಒಂದು ಕಡೆಯಿಂದ ಅದರ ಮತ್ತೊಂದು ಕಡೆಯ ವರೆಗೆ ನಿನ್ನ ಸುತ್ತಲಿರುವ ಜನಗಳ ದೇವರುಗಳನ್ನು ಹೋಗಿ ಸೇವಿಸೋಣ ಎಂದು ನಿನ್ನನ್ನು ಅಂತರಂಗದಲ್ಲಿ ಪ್ರೇರೇಪಿಸಿದರೆ ನೀನು ಅವನಿಗೆ ಸಮ್ಮತಿಸಬಾರದು; ಅವನ ಮಾತನ್ನು ಕೇಳಬಾರದು; ನಿನ್ನ ಕಣ್ಣು ಅವನನ್ನು ಕರುಣಿಸಬಾರದು; ನೀನು ಅವ ನನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು.
- Genesis 26:10 ಆದಿಕಾಂಡ 26:10ಆಗ ಅಬೀಮೆಲೆಕನು--ನೀನು ನಮಗೆ ಮಾಡಿದ್ದೇನು? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯ ಸಂಗಡ ಮಲಗಿದ್ದರೆ ನೀನು ನಮ್ಮ ಮೇಲೆ ಅಪರಾಧವನ್ನು ಬರಮಾಡುತ್ತಿದ್ದೆಯಲ್ಲಾ ಅಂದನು.
- 1 Kings 21:22 1 ಅರಸುಗಳು 21:22ನೀನು ನನಗೆ ಎಬ್ಬಿಸಿದ ಕೋಪದ ನಿಮಿತ್ತವೂ ಇಸ್ರಾಯೇಲನ್ನು ಪಾಪ ಮಾಡುವಂತೆ ಮಾಡಿದ್ದರ ನಿಮಿತ್ತವೂ ನಾನು ನಿನ್ನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗನಾದ ಬಾಷನ ಮನೆಯ ಹಾಗೆಯೂ ಮಾಡುವೆನು ಅಂದನು.
- 2 Kings 21:9–11 2 ಅರಸುಗಳು 21:9–11ಆದರೆ ಅವರು ಕೇಳದೆ ಹೋದರು; ಕರ್ತನು ಇಸ್ರಾಯೇಲ್ ಮಕ್ಕಳ ಮುಂದೆ ನಾಶಮಾಡಿದ ಜನಾಂಗಗಳ ಕೆಟ್ಟತನಕ್ಕಿಂತ ಅಧಿಕ ವಾಗಿ ಮಾಡಲು ಮನಸ್ಸೆಯು ಅವರನ್ನು ಮಾರ್ಗ ತಪ್ಪಿಸಿದನು. ಆದದರಿಂದ ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ್ದೇನಂದರೆ-- ಯೆಹೂದದ ಅರಸನಾದ ಮನಸ್ಸೆಯು ತನ್ನ ಮುಂದೆ ಇದ್ದ ಅಮೋರಿಯರು ಮಾಡಿದ ಎಲ್ಲಕ್ಕಿಂತ ಕೆಟ್ಟದ್ದಾದ ಈ ಅಸಹ್ಯಗಳನ್ನು ಮಾಡಿದನು. ಯೆಹೂದವನ್ನು ತನ್ನ ವಿಗ್ರಹಗಳಿಂದ ಪಾಪಮಾಡಿಸಿದನು. ಈ ಕಾರಣ ದಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳು ವದೇನಂದರೆ--
- 1 Kings 14:16 1 ಅರಸುಗಳು 14:16ಆತನು ಯಾರೊಬ್ಬಾಮನ ಪಾಪಗಳ ನಿಮಿತ್ತ ಇಸ್ರಾಯೇಲ್ಯರನ್ನು ಒಪ್ಪಿಸಿ ಬಿಡುವನು; ಅವನೇ ಪಾಪ ಮಾಡಿ ಪಾಪವನ್ನು ಮಾಡಲು ಇಸ್ರಾಯೇಲ್ಯರನ್ನು ಪ್ರೇರೇಪಿಸಿದನು ಅಂದನು.
- 1 Samuel 26:19 1 ಸಮುವೇಲನು 26:19ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಕರ್ತನು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ ಕಾಣಿಕೆಯನ್ನು ಅಂಗೀಕರಿಸಲಿ; ಆದರೆ ಮನುಷ್ಯರ ಮಕ್ಕಳು ಇದನ್ನು ಮಾಡಿದರೆ ಅವರು ಕರ್ತನ ಮುಂದೆ ಶಪಿಸಲ್ಪಡಲಿ. ಯಾಕಂದರೆ ನೀನು ಹೋಗಿ ಅನ್ಯದೇವರುಗಳನ್ನು ಸೇವಿಸು ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಕರ್ತನ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.