Exodus · chapter 33 · verse 16
Exodus 33:16 in Kannada
ನನಗೂ ನಿನ್ನ ಜನರಿಗೂ ನಿನ್ನ ದೃಷ್ಟಿಯಲ್ಲಿ ಕೃಪೆ ದೊರಕಿತೆಂದು ಯಾವದರಿಂದ ತಿಳಿದು ಬರುವದು? ನೀನು ನಮ್ಮೊಂದಿಗೆ ಹೋಗುವ ದರಿಂದ ಅಲ್ಲವೋ? ಹೀಗೆ ನಾನೂ ನಿನ್ನ ಜನರೂ ಭೂಮಿಯ ಮೇಲಿರುವ ಎಲ್ಲಾ ಜನರಿಂದ ಪ್ರತ್ಯೇಕ ವಾಗುವೆವು ಅಂದನು.
Nanagoo ninna janarigoo ninna drushtiyalli krupe dorakitendu yaavadarinda tilidu baruvadu? Neenu nammondige hoguva darinda allavo? Heege naanoo ninna janaroo bhoomiya meliruva ellaa janarinda pratyeka vaaguvevu andanu.
Exodus 33:16 in English
- King James Version (KJV)
- For wherein shall it be known here that I and thy people have found grace in thy sight? [is it] not in that thou goest with us? so shall we be separated, I and thy people, from all the people that [are] upon the face of the earth.
- World English Bible (WEB)
- For how would people know that I have found favor in your sight, I and your people? Isn’t it that you go with us, so that we are separated, I and your people, from all the people who are on the surface of the earth?”
- American Standard Version (ASV)
- For wherein now shall it be known that I have found favor in thy sight, I and thy people? is it not in that thou goest with us, so that we are separated, I and thy people, from all the people that are upon the face of the earth?
- Bible in Basic English (BBE)
- For is not the fact of your going with us the sign that I and this people have grace in your eyes, so that we, that is, I and your people, are separate from all other people on the face of the earth?
- Darby Translation (DBY)
- And how shall it be known then that I have found grace in thine eyes — I and thy people? [Is it] not by thy going with us? so shall we be distinguished, I and thy people, from every people that is on the face of the earth.
- Webster's Bible (WBS)
- For wherein shall it be known here that I and thy people have found grace in thy sight? [Is it] not in that thou goest with us? So shall we be separated, I and thy people, from all the people that [are] upon the face of the earth.
- Young's Literal Translation (YLT)
- and in what is it known now, that I have found grace in Thine eyes — I and Thy people — is it not in Thy going with us? and we have been distinguished — I and Thy people — from all the people who [are] on the face of the ground.'
Read in context
- 14ಆಗ ಆತನು--ನನ್ನ ಸನ್ನಿಧಾನವು ನಿನ್ನ ಸಂಗಡ ಹೋಗುವದು; ನಾನು ನಿನಗೆ ವಿಶ್ರಾಂತಿಯನ್ನು ಕೊಡುವೆನು ಅಂದನು.
- 15ಮೋಶೆಯು ಆತನಿಗೆ--ನಿನ್ನ ಸನ್ನಿಧಾನವು ನನ್ನೊಂದಿಗೆ ಹೋಗದಿದ್ದರೆ ನಮ್ಮನ್ನು ಇಲ್ಲಿಂದ ಕರ ಕೊಂಡು ಹೋಗಬೇಡ.
- 16ನನಗೂ ನಿನ್ನ ಜನರಿಗೂ ನಿನ್ನ ದೃಷ್ಟಿಯಲ್ಲಿ ಕೃಪೆ ದೊರಕಿತೆಂದು ಯಾವದರಿಂದ ತಿಳಿದು ಬರುವದು? ನೀನು ನಮ್ಮೊಂದಿಗೆ ಹೋಗುವ ದರಿಂದ ಅಲ್ಲವೋ? ಹೀಗೆ ನಾನೂ ನಿನ್ನ ಜನರೂ ಭೂಮಿಯ ಮೇಲಿರುವ ಎಲ್ಲಾ ಜನರಿಂದ ಪ್ರತ್ಯೇಕ ವಾಗುವೆವು ಅಂದನು.
- 17ಅದಕ್ಕೆ ಕರ್ತನು ಮೋಶೆಗೆ--ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರಕಿತು. ನಾನು ನಿನ್ನನ್ನು ಹೆಸರಿನಿಂದ ತಿಳಿದಿದ್ದೇನೆ ಅಂದನು.
- 18ಅವನು--ನಿನ್ನ ಮಹಿಮೆಯನ್ನು ನನಗೆ ತೋರಿಸು ಎಂದು ನಾನು ನಿನ್ನನ್ನು ಬೇಡುತ್ತೇನೆ ಅಂದನು.
Cross references
- Deuteronomy 4:7 ಧರ್ಮೋಪದೇಶಕಾಂಡ 4:7ನಾವು ಆತನಿಗೆ ಮೊರೆ ಯಿಡುವ ಎಲ್ಲಾ ವಿಷಯಗಳಲ್ಲಿ ನಮ್ಮ ದೇವರಾದ ಕರ್ತನು ನಮಗೆ ಸವಿಾಪವಿರುವ ಪ್ರಕಾರ ಬೇರೆ ಸವಿಾಪವಾದ ದೇವರುಳ್ಳ ದೊಡ್ಡ ಜನಾಂಗ ಯಾವದು?
- Numbers 14:14 ಅರಣ್ಯಕಾಂಡ 14:14ಅವರು ಈ ದೇಶದ ನಿವಾಸಿ ಗಳಿಗೆ ಅದನ್ನು ಹೇಳುವರು; ಯಾಕಂದರೆ ಕರ್ತನಾದ ನೀನೇ ಈ ಜನರ ಸಂಗಡ ಇದ್ದೀಯೆಂದೂ ಕರ್ತ ನಾದ ನೀನೇ ಮುಖಾಮುಖಿಯಾಗಿ ಕಾಣಿಸಿಕೊಳ್ಳುತ್ತೀ ಯೆಂದೂ ನಿನ್ನ ಮೇಘವು ಅವರ ಮೇಲೆ ನಿಂತಿದೆ ಯೆಂದೂ ನೀನು ಹಗಲು ಹೊತ್ತಿನಲ್ಲಿ ಮೇಘ ಸ್ತಂಭದಲ್ಲಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ನಡೆಯುತ್ತೀಯೆಂದೂ ಅವರು ಕೇಳಿದ್ದಾರೆ.
- 1 Kings 8:53 1 ಅರಸುಗಳು 8:53ನೀನು ಐಗುಪ್ತದಿಂದ ನಮ್ಮ ಪಿತೃಗಳನ್ನು ಹೊರಡ ಮಾಡುವಾಗ ನಿನ್ನ ಸೇವಕನಾದ ಮೋಶೆಯ ಮುಖಾಂತರವಾಗಿ ಹೇಳಿದ ಹಾಗೆ ಅವರನ್ನು ನಿನ್ನ ಬಾಧ್ಯತೆಯಾಗಿ ಭೂಮಿಯ ಸಮಸ್ತ ಜನರೊಳಗಿಂದ ಪ್ರತ್ಯೇಕಿಸಿದಿ ಅಂದನು.
- Matthew 1:23 ಮತ್ತಾಯನು 1:23ಆ ಮಾತೇನಂದರೆ -- ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಳು; ಅವರು ಆತನ ಹೆಸರನ್ನು ಇಮ್ಮಾನುವೇಲ್ ಎಂದು ಕರೆಯುವರು ಎಂಬದೇ. ದೇವರು ನಮ್ಮ ಕೂಡ ಇದ್ದಾನೆ ಎಂಬದು ಇದರ ಅರ್ಥ.
- Exodus 34:10 ವಿಮೋಚನಕಾಂಡ 34:10ಅದಕ್ಕೆ ಕರ್ತನು--ಇಗೋ, ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ಸಮಸ್ತ ಭೂಮಿ ಯಲ್ಲಿಯೂ ಯಾವ ಜನಾಂಗದಲ್ಲಿಯೂ ಮಾಡ ದಿರುವಂಥ ಅದ್ಭುತಗಳನ್ನು ನಿನ್ನ ಜನರೆಲ್ಲರ ಮುಂದೆ ಮಾಡುವೆನು. ನೀನು ಯಾರ ಮಧ್ಯದಲ್ಲಿ ಇರುವಿಯೋ ಆ ಜನರೆಲ್ಲರು ಕರ್ತನ ಕಾರ್ಯವನ್ನು ನೋಡುವರು. ನಾನು ನಿಮಗೆ ಮಾಡುವಂಥದ್ದು ಭಯಂಕರ ವಾಗಿರುವದು.
- 2 Samuel 7:23 2 ಸಮುವೇಲನು 7:23ಭೂಲೋಕದಲ್ಲಿ ನಿನ್ನ ಜನರಾದ ಇಸ್ರಾಯೇಲ್ಯರಿಗೆ ಸಮಾನವಾದ ಜನಾಂಗ ಯಾವದು? ಅವರನ್ನು ಸ್ವಜನರಾಗಿ ವಿಮೋಚಿಸು ವಂತೆಯೂ ತನಗೆ ಹೆಸರನ್ನು ಪಡಕೊಳ್ಳುವಂತೆಯೂ ದೇವರು ಹೋದನು; ಅವರಿಗೋಸ್ಕರ ನಿನ್ನ ದೇಶಕ್ಕೆ, ಐಗುಪ್ತದಿಂದ ಜನಾಂಗಗಳಿಂದಲೂ ಅವರ ದೇವರು ಗಳಿಂದಲೂ ವಿಮೋಚಿಸಿದ ನಿನ್ನ ಜನರ ಮುಂದೆ ಈ ಮಹಾಭಯಂಕರವಾದ ಕಾರ್ಯಗಳನ್ನು ಮಾಡು ವದಕ್ಕಾಗಿಯೇ ದೇವರು ಹೋದನು.
- Exodus 19:5–6 ವಿಮೋಚನಕಾಂಡ 19:5–6ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು ನನ್ನ ಅಸಮಾನ್ಯವಾದ ಸಂಪತ್ತಾಗಿರುವಿರಿ; ಭೂಮಿಯೆಲ್ಲಾ ನನ್ನದೇ. ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳ ಬೇಕಾದ ಮಾತುಗಳು ಇವೇ ಅಂದನು.
- 2 Corinthians 6:17 2 ಕೊರಿಂಥದವರಿಗೆ 6:17ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರ್ತೆಯರಾಗಿರುವಿರಿ ಎಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.
- Exodus 8:22 ವಿಮೋಚನಕಾಂಡ 8:22ಆದರೆ ಆ ದಿವಸದಲ್ಲಿ ನಾನೇ ಭೂಲೋಕದಲ್ಲಿ ಕರ್ತನೆಂದು ನೀನು ತಿಳಿದುಕೊಳ್ಳುವಂತೆ ನನ್ನ ಜನರು ವಾಸಿಸುವ ಗೋಷೆನ್ ಸೀಮೆಯಲ್ಲಿ ನೊಣಗಳು ಇರದ ಹಾಗೆ ಅದನ್ನು ನಾನು ಪ್ರತ್ಯೇಕಿಸುವೆನು.
- Numbers 23:9 ಅರಣ್ಯಕಾಂಡ 23:9ಬಂಡೆಗಳ ತುದಿಯಿಂದ ಅವನನ್ನು ನೋಡು ತ್ತೇನೆ; ಗುಡ್ಡಗಳಿಂದ ಅವನನ್ನು ದೃಷ್ಟಿಸಿದ್ದೇನೆ; ಇಗೋ, ಆ ಜನಾಂಗವು ಒಂಟಿಯಾಗಿ ವಾಸಿಸುವದು, ಜನಾಂಗ ಗಳಲ್ಲಿ ಅದು ಎಣಿಸಲ್ಪಡುವದಿಲ್ಲ.
- Deuteronomy 4:34 ಧರ್ಮೋಪದೇಶಕಾಂಡ 4:34ಇಲ್ಲವೆ ನಿಮ್ಮ ದೇವರಾದ ಕರ್ತನು ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆ ನಿಮಗೆ ಮಾಡಿದ್ದೆಲ್ಲಾದರ ಹಾಗೆ ಬೇರೆ ದೇವರು ಹೋಗಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಮಧ್ಯ ದಿಂದ ಶೋಧನೆಗಳು ಗುರುತುಗಳು ಅದ್ಭುತಗಳು ಇವುಗಳ ಮೂಲಕವಾಗಿಯೂ ಯುದ್ಧದಿಂದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾಭೀತಿಯಿಂದಲೂ ತಕ್ಕೊಳ್ಳುವದಕ್ಕೆ ಪ್ರಯತ್ನ ಮಾಡಿದನೋ?
- Psalm 147:20 ಕೀರ್ತನೆಗಳು 147:20ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.