Exodus · chapter 34 · verse 21
Exodus 34:21 in Kannada
ಆರು ದಿನಗಳು ಕೆಲಸಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು. ಬಿತ್ತುವ ಕಾಲದಲ್ಲಿಯೂ ಕೊಯ್ಯುವ ಕಾಲದಲ್ಲಿಯೂ (ಏಳನೆಯ ದಿನದಲ್ಲಿ) ವಿಶ್ರಮಿಸಿಕೊಳ್ಳಬೇಕು.
Aaru dinagalu kelasamaadi elaneya dinadalli vishramisikollabeku. Bittuva kaaladalliyoo koyyuva kaaladalliyoo (elaneya dinadalli) vishramisikollabeku.
Exodus 34:21 in English
- King James Version (KJV)
- Six days thou shalt work, but on the seventh day thou shalt rest: in earing time and in harvest thou shalt rest.
- World English Bible (WEB)
- “Six days you shall work, but on the seventh day you shall rest: in plowing time and in harvest you shall rest.
- American Standard Version (ASV)
- Six days thou shalt work, but on the seventh day thou shalt rest: in plowing time and in harvest thou shalt rest.
- Bible in Basic English (BBE)
- Six days let work be done, but on the seventh day take your rest: at ploughing time and at the grain-cutting you are to have a day for rest.
- Darby Translation (DBY)
- — Six days shalt thou work, but on the seventh day thou shalt rest; in ploughing time and in harvest thou shalt rest.
- Webster's Bible (WBS)
- Six days thou shalt work, but on the seventh day thou shalt rest: in time of plowing and in harvest thou shalt rest.
- Young's Literal Translation (YLT)
- 'Six days thou dost work, and on the seventh day thou dost rest; in ploughing-time and in harvest thou dost rest.
Read in context
- 19ಪ್ರಥಮ ಗರ್ಭ ತೆರೆಯುವದೆಲ್ಲಾ ನನ್ನದೇ. ನಿಮ್ಮ ಪಶುಗಳಾಗಲಿ ಎತ್ತುಗಳಾಗಲಿ ಟಗರುಗಳಾಗಲಿ ಮೊದಲು ಹುಟ್ಟುವ ಗಂಡಾದವುಗಳೆಲ್ಲಾ ನನ್ನವೇ.
- 20ಕತ್ತೆಗಳಲ್ಲಿ ಗರ್ಭ ತೆರೆಯುವಂಥದ್ದನ್ನು ಕುರಿಮರಿ ಯಿಂದ ವಿಮೋಚಿಸಬೇಕು. ನೀನು ವಿಮೋಚಿಸದೆ ಹೋದರೆ ಅದರ ಕುತ್ತಿಗೆಯನ್ನು ಮುರಿಯಬೇಕು. ನಿನ್ನ ಕುಮಾರರ ಚೊಚ್ಚಲಾದವರನ್ನೆಲ್ಲಾ ವಿಮೋಚಿಸ ಬೇಕು. ನನ್ನ ಮುಂದೆ ಯಾರೂ ಬರೀಗೈಯಿಂದ ಕಾಣಿಸಿ ಕೊಳ್ಳಬಾರದು.
- 21ಆರು ದಿನಗಳು ಕೆಲಸಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು. ಬಿತ್ತುವ ಕಾಲದಲ್ಲಿಯೂ ಕೊಯ್ಯುವ ಕಾಲದಲ್ಲಿಯೂ (ಏಳನೆಯ ದಿನದಲ್ಲಿ) ವಿಶ್ರಮಿಸಿಕೊಳ್ಳಬೇಕು.
- 22ಪ್ರಥಮ ಗೋದಿ ಸುಗ್ಗಿಯ ವಾರಗಳ ಹಬ್ಬವನ್ನೂ ಸಂವತ್ಸರದ ಕೊನೆಯಲ್ಲಿ (ಬೆಳೆ) ಸಂಗ್ರಹದ ಹಬ್ಬ ವನ್ನೂ ಆಚರಿಸಬೇಕು.
- 23ವರುಷಕ್ಕೆ ಮೂರುಸಾರಿ ನಿಮ್ಮ ಗಂಡು ಮಕ್ಕಳೆಲ್ಲಾ ಕರ್ತನಾದ ದೇವರ ಮುಂದೆ ಅಂದರೆ ಇಸ್ರಾಯೇಲಿನ ದೇವರ ಮುಂದೆ ಬರಬೇಕು.
Cross references
- Exodus 23:12 ವಿಮೋಚನಕಾಂಡ 23:12ಆರು ದಿವಸ ನೀನು ನಿನ್ನ ಕೆಲಸಗಳನ್ನು ಮಾಡ ಬೇಕು; ಏಳನೆಯ ದಿನದಲ್ಲಿ ನೀನು ನಿನ್ನ ಎತ್ತು ಕತ್ತೆಗಳು ವಿಶ್ರಮಿಸಿಕೊಳ್ಳಬೇಕು. ಇದಲ್ಲದೆ ನಿನ್ನ ದಾಸಿಯ ಮಗನು ಪರದೇಶಸ್ಥನು ದಣಿವಾರಿಸಿಕೊಳ್ಳಲಿ.
- Exodus 35:2 ವಿಮೋಚನಕಾಂಡ 35:2ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧದಿನವಾಗಿಯೂ ಕರ್ತನಿಗೆ ವಿಶ್ರಾಂತಿಯ ಸಬ್ಬತ್ತಾಗಿಯೂ ಇರಬೇಕು. ಆ ದಿನದಲ್ಲಿ ಕೆಲಸ ಮಾಡುವವನು ಕೊಲ್ಲಲ್ಪಡಬೇಕು.
- Luke 13:14 ಲೂಕನು 13:14ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ--ಆರು ದಿವಸಗಳಲ್ಲಿ ಮನು ಷ್ಯರು ಕೆಲಸ ಮಾಡತಕ್ಕದ್ದು. ಆದದರಿಂದ ಅವುಗಳಲ್ಲಿ ಅವರು ಬಂದು ಸ್ವಸ್ಥತೆ ಹೊಂದಲಿ; ಸಬ್ಬತ್ ದಿನದಲ್ಲಿ ಬೇಡ ಅಂದನು.
- Luke 23:56 ಲೂಕನು 23:56ಅವರು ಹಿಂತಿರುಗಿದವರಾಗಿ ಪರಿಮಳ ದ್ಯವ್ಯವನ್ನು ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡು ಆಜ್ಞಾನು ಸಾರವಾಗಿ ಸಬ್ಬತ್ತಿನ ದಿನದಲ್ಲಿ ವಿಶ್ರಮಿಸಿಕೊಂಡರು.
- Deuteronomy 5:12–15 ಧರ್ಮೋಪದೇಶಕಾಂಡ 5:12–15ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದಂತೆ ಸಬ್ಬತ್ ದಿವಸವನ್ನು ಪರಿಶುದ್ಧಮಾಡುವದಕ್ಕೆ ಅದನ್ನು ಕಾಪಾಡು. ಆರು ದಿವಸಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು. ಏಳನೇ ದಿವಸವು ನಿನ್ನ ದೇವರಾದ ಕರ್ತನ ಸಬ್ಬತ್ ದಿವಸವೇ; ಅದ ರಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಎತ್ತೂ ಕತ್ತೆಯೂ ಎಲ್ಲಾಪಶುಗಳೂ ನಿನ್ನ ಬಾಗಲುಗಳಲ್ಲಿರುವ ಪರವಾಸಿಯೂ ಯಾವ ಕೆಲಸ ವನ್ನೂ ಮಾಡಬಾರದು. ನಿನ್ನ ದಾಸನೂ ದಾಸಿಯೂ ನಿನ್ನ ಹಾಗೆ ವಿಶ್ರಮಿಸಿಕೊಳ್ಳಬೇಕು. ನೀನು ಐಗುಪ್ತ ದೇಶದಲ್ಲಿ ದಾಸನಾಗಿದ್ದಿ ಎಂದೂ ನಿನ್ನ ದೇವರಾದ ಕರ್ತನು ನಿನ್ನನ್ನು ಅಲ್ಲಿಂದ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಹೊರಗೆ ಬರಮಾಡಿದ ನೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದಕಾರಣ ನಿನ್ನ ದೇವರಾದ ಕರ್ತನು ನಿನಗೆ ಸಬ್ಬತ್ ದಿವಸವನ್ನು ಆಚರಿಸಬೇಕೆಂದು ಆಜ್ಞಾಪಿಸಿದ್ದಾನೆ.
- 1 Samuel 8:12 1 ಸಮುವೇಲನು 8:12ಕೆಲ ವರು ಅವನ ರಥಗಳ ಮುಂದೆ ಓಡುವರು. ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿ ಗಳಾಗಿಯೂ ತನ್ನ ಭೂಮಿಯನ್ನು ಉಳುವವರಾ ಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ತನ್ನ ರಥದ ಸಾಮಾನು ಗಳನ್ನು ಮಾಡುವವರಾಗಿಯೂ ನೇಮಿಸುವನು.
- Deuteronomy 21:4 ಧರ್ಮೋಪದೇಶಕಾಂಡ 21:4ಆ ಮೇಲೆ ಆ ಊರಿನ ಹಿರಿಯರು ಆ ಮಣಕವನ್ನು ನಿತ್ಯ ಹರಿಯುವ ಹಳ್ಳದ ಬಳಿಗೆ ಬೇಸಾಯವಾಗದಂಥ, ಬೀಜಹಾಕದಂಥ, ಸ್ಥಳಕ್ಕೆ ತಕ್ಕೊಂಡು ಹೋಗಿ ಅಲ್ಲಿ ಹಳ್ಳದಲ್ಲಿ ಮಣಕದ ಕುತ್ತಿಗೆಯನ್ನು ಕೊಯ್ಯಬೇಕು.
- Isaiah 30:24 ಯೆಶಾಯ 30:24ಹೊಲ ಉಳುವ ಎತ್ತುಗಳು, ಪ್ರಾಯದ ಕತ್ತೆಗಳು, ಮರದಿಂದಲೂ ಕವೇ ಕೋಲಿನಿಂದಲೂ ತೂರಿದ ಮೇವನ್ನು ತಿನ್ನುವವು.
- Exodus 20:9–11 ವಿಮೋಚನಕಾಂಡ 20:9–11ನೀನು ಆರು ದಿನಗಳು ದುಡಿದು ನಿನ್ನ ಕೆಲಸಗಳನ್ನೆಲ್ಲಾ ಮಾಡಿಕೋ. ಆದರೆ ಏಳನೆಯ ದಿನವು ನಿನ್ನ ದೇವರಾದ ಕರ್ತನ ಸಬ್ಬತ್ ಆಗಿದೆ. ಅದರಲ್ಲಿ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲ ಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು. ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು.
- Genesis 45:6 ಆದಿಕಾಂಡ 45:6ಈ ಎರಡು ವರುಷಗಳ ವರೆಗೆ ಭೂಮಿಯಲ್ಲಿ ಕ್ಷಾಮವಿತ್ತು. ಇದಲ್ಲದೆ ಇನ್ನೂ ಐದು ವರುಷಗಳ ವರೆಗೆ ಬಿತ್ತುವದೂ ಕೊಯ್ಯುವದೂ ಇರುವದಿಲ್ಲ.