Exodus · chapter 34 · verse 5
Exodus 34:5 in Kannada
ಆಗ ಕರ್ತನು ಮೇಘದಲ್ಲಿ ಇಳಿದು ಬಂದು ಅವನ ಸಂಗಡ ಅಲ್ಲಿ ನಿಂತುಕೊಂಡು ಕರ್ತನ ಹೆಸರನ್ನು ಪ್ರಕಟ ಮಾಡಿದನು.
Aaga kartanu meghadalli ilidu bandu avana sangada alli nintukondu kartana hesarannu prakata maadidanu.
Exodus 34:5 in English
- King James Version (KJV)
- And the LORD descended in the cloud, and stood with him there, and proclaimed the name of the LORD.
- World English Bible (WEB)
- The LORD descended in the cloud, and stood with him there, and proclaimed the LORD’s name.
- American Standard Version (ASV)
- And Jehovah descended in the cloud, and stood with him there, and proclaimed the name of Jehovah.
- Bible in Basic English (BBE)
- And the Lord came down in the cloud and took his place by the side of Moses, and Moses gave worship to the name of the Lord.
- Darby Translation (DBY)
- And Jehovah came down in the cloud, and stood beside him there, and proclaimed the name of Jehovah.
- Webster's Bible (WBS)
- And the LORD descended in the cloud, and stood with him there, and proclaimed the name of the LORD.
- Young's Literal Translation (YLT)
- And Jehovah cometh down in a cloud, and stationeth Himself with him there, and calleth in the Name of Jehovah,
Read in context
- 3ಆದರೆ ಯಾರೂ ನಿನ್ನ ಸಂಗಡ ಮೇಲಕ್ಕೆ ಬರಬಾರದು, ಇಲ್ಲವೆ ಬೆಟ್ಟದ ಮೇಲೆ ಎಲ್ಲಿಯೂ ಯಾರೂ ಕಾಣಿಸಬಾರದು, ಇಲ್ಲವೆ ಆ ಬೆಟ್ಟದ ಎದುರಿನಲ್ಲಿ ಕುರಿ ದನಗಳು ಸಹ ಮೇಯ ಬಾರದು.
- 4ಆಗ ಮೋಶೆಯು ಮೊದಲಿನವುಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಕೆತ್ತಿಸಿ ಕೊಂಡನು. ಕರ್ತನು ತನಗೆ ಆಜ್ಞಾಪಿಸಿದಂತೆ ಅವನು ಬೆಳಿಗ್ಗೆ ಎದ್ದು ಎರಡು ಕಲ್ಲಿನ ಹಲಗೆಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟದ ಮೇಲಕ್ಕೆ ಹೋದನು.
- 5ಆಗ ಕರ್ತನು ಮೇಘದಲ್ಲಿ ಇಳಿದು ಬಂದು ಅವನ ಸಂಗಡ ಅಲ್ಲಿ ನಿಂತುಕೊಂಡು ಕರ್ತನ ಹೆಸರನ್ನು ಪ್ರಕಟ ಮಾಡಿದನು.
- 6ಕರ್ತನು ಅವನೆದುರಿಗೆ ಹಾದು ಹೋಗುತ್ತಾ--ಕರ್ತನು, ಕರ್ತನಾದ ದೇವರು, ಕರುಣಾಳುವೂ ಕೃಪಾಳುವೂ ದೀರ್ಘಶಾಂತನೂ ಒಳ್ಳೇತನದಲ್ಲಿ ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನೂ
- 7ಸಾವಿರ (ತಲೆಗಳ) ವರೆಗೂ ಕರುಣೆ ತೋರಿಸುವಾತನೂ ದೋಷಾಪರಾಧ ವನ್ನೂ ಪಾಪವನ್ನೂ ಕ್ಷಮಿಸುವಾತನೂ ಅಪರಾಧಿ ಯನ್ನು ನಿರಪರಾಧಿಯೆಂದು ಎಣಿಸದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆ ಗಳವರೆಗೂ ವಿಚಾರಿಸುವಾತನೂ ಎಂದು ಪ್ರಕಟಿಸಿ ಕೊಂಡನು.
Cross references
- Exodus 33:19 ವಿಮೋಚನಕಾಂಡ 33:19ಅದಕ್ಕೆ ಆತನು--ನಾನು ನನ್ನ ಸರ್ವೋತ್ತಮತ್ವವನ್ನು ನಿನ್ನೆದುರಿಗೆ ಹಾದು ಹೋಗಗೊಡಿಸಿ ಕರ್ತನ ಹೆಸರನ್ನು ನಿನ್ನ ಮುಂದೆ ಪ್ರಕಟಮಾಡಿ ನಾನು ಯಾರಿಗೆ ಕೃಪೆಯುಳ್ಳವ ನಾಗಿರಬೇಕೋ ಅವರಿಗೆ ಕೃಪೆಯುಳ್ಳವನಾಗಿರುವೆನು; ನಾನು ಯಾರಿಗೆ ಕರುಣೆಯನ್ನು ತೋರಿಸಬೇಕೋ ಅವರಿಗೆ ಕರುಣೆಯನ್ನು ತೋರಿಸುವೆನು ಅಂದನು.
- Numbers 11:25 ಅರಣ್ಯಕಾಂಡ 11:25ಕರ್ತನು ಮೇಘದೊಳಗೆ ಇಳಿದು ಬಂದು ಅವನ ಸಂಗಡ ಮಾತನಾಡಿ ಅವನ ಮೇಲಿರುವ ಆತ್ಮದಲ್ಲಿ ಪಾಲನ್ನು ತೆಗೆದು ಹಿರಿಯರಾದ ಎಪ್ಪತ್ತು ಮಂದಿಯ ಮೇಲೆ ಇಟ್ಟನು. ಆತ್ಮವು ಅವರ ಮೇಲೆ ನೆಲೆಯಾಗಿ ದ್ದಾಗ ಅವರು ಪ್ರವಾದಿಸಿದರು. ಅದನ್ನು ನಿಲ್ಲಿಸಲಿಲ್ಲ.
- Luke 9:34–35 ಲೂಕನು 9:34–35ಹೀಗೆ ಅವನು ಮಾತನಾಡು ತ್ತಿದ್ದಾಗಲೇ ಮೇಘವು ಬಂದು ಅವರನ್ನು ಕವಿದು ಕೊಂಡಿತು ಮತ್ತು ಅವರು ಆ ಮೇಘದೊಳಗೆ ಪ್ರವೇ ಶಿಸುತ್ತಿದ್ದಾಗ ಅವರು ಭಯಪಟ್ಟರು. ಆಗ ಮೇಘ ದೊಳಗಿಂದ--ಈತನು ಪ್ರಿಯನಾಗಿರುವ ನನ್ನ ಮಗನು; ಈತನ ಮಾತನ್ನು ಕೇಳಿರಿ ಎಂದು ಹೇಳುವ ಧ್ವನಿಯಾಯಿತು.
- Exodus 33:9 ವಿಮೋಚನಕಾಂಡ 33:9ತರುವಾಯ ಮೋಶೆಯು ಗುಡಾರದಲ್ಲಿ ಪ್ರವೇಶಿಸಿದಾಗ ಮೇಘಸ್ತಂಭವು ಇಳಿದು ಬಂದು ಗುಡಾರದ ಬಾಗಿಲಲ್ಲಿ ನಿಲ್ಲುತಿತ್ತು. ಕರ್ತನು ಮೋಶೆಯ ಸಂಗಡ ಮಾತನಾಡುವನು.
- Numbers 11:17 ಅರಣ್ಯಕಾಂಡ 11:17ನಾನು ಇಳಿದು ಬಂದು ನಿನ್ನ ಸಂಗಡ ಮಾತನಾಡಿ ನಿನ್ನ ಮೇಲಿರುವ ಆತ್ಮದಲ್ಲಿ ಪಾಲನ್ನು ತೆಗೆದು ಅವರ ಮೇಲೆ ಇಡುವೆನು; ಆಗ ನೀನು ಜನರ ಭಾರವನ್ನು ಒಬ್ಬನೇ ಹೊತ್ತುಕೊಳ್ಳದ ಹಾಗೆ ಅವರು ನಿನ್ನ ಸಂಗಡ ಅದನ್ನು ಹೊರುವರು.
- Proverbs 18:10 ಜ್ಞಾನೋಕ್ತಿಗಳು 18:10ಕರ್ತನ ನಾಮವು ಬಲವಾದ ಬುರುಜು; ನೀತಿವಂತನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುತ್ತಾನೆ.
- Psalm 102:21 ಕೀರ್ತನೆಗಳು 102:21ಕರ್ತನು ಸೆರೆಯವರ ನರಳುವಿಕೆಯನ್ನು ಕೇಳುವ ದಕ್ಕೂ ಮರಣಕ್ಕೆ ನೇಮಕವಾದವರನ್ನು ಬಿಡಿಸು ವದಕ್ಕೂ
- Isaiah 1:10 ಯೆಶಾಯ 1:10ಸೊದೋಮಿನ ಅಧಿಪತಿಗಳೇ, ನೀವು ಕರ್ತನ ಮಾತನ್ನು ಕೇಳಿರಿ; ಗೊಮೋರದ ಪ್ರಜೆಗಳೇ, ನಮ್ಮ ದೇವರ ನ್ಯಾಯಪ್ರಮಾಣಕ್ಕೆ ಕಿವಿಗೊಡಿರಿ.
- Exodus 19:18 ವಿಮೋಚನಕಾಂಡ 19:18ಕರ್ತನು ಅಗ್ನಿಯೊಳಗೆ ಸೀನಾಯಿ ಬೆಟ್ಟದ ಮೇಲೆ ಇಳಿದದ್ದರಿಂದ ಆ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆ ಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.
- Deuteronomy 32:3 ಧರ್ಮೋಪದೇಶಕಾಂಡ 32:3ಕರ್ತನ ಹೆಸರನ್ನು ನಾನು ಸಾರುತ್ತೇನೆ. ನಮ್ಮ ದೇವರಿಗೆ ಮಹತ್ವವನ್ನು ಕೊಡಿರಿ.
- Numbers 14:17 ಅರಣ್ಯಕಾಂಡ 14:17ಈಗ ನೀನು ಹೇಳಿದ ಪ್ರಕಾರ ನನ್ನ ಕರ್ತನ ಶಕ್ತಿಯು ದೊಡ್ಡದಾಗಿರಲಿ ಎಂದು ನಾನು ಬೇಡುತ್ತೇನೆ.
- 1 Kings 8:10–12 1 ಅರಸುಗಳು 8:10–12ಯಾಜಕರು ಪರಿಶುದ್ಧ ಸ್ಥಳದಿಂದ ಬಂದಾಗ ಮೇಘವು ಕರ್ತನ ಮಂದಿರವನ್ನು ತುಂಬಿತ್ತು. ಕರ್ತನ ತೇಜಸ್ಸಿ ನಿಂದ ವ್ಯಾಪ್ತವಾಗಿದ್ದ ಮೇಘವು ಆಲಯವನ್ನು ತುಂಬಿ ಕೊಂಡದರಿಂದ ಯಾಜಕರು ಅಲ್ಲಿ ನಿಂತು ಸೇವೆಮಾಡ ಲಾರದವರಾದರು. ಆಗ ಸೊಲೊಮೋನನು--ಕಾರ್ಗತ್ತಲಲ್ಲಿ ವಾಸ ವಾಗಿರುವೆನೆಂದು ಕರ್ತನು ಹೇಳಿದ್ದಾನೆ.