Exodus · chapter 35 · verse 25
Exodus 35:25 in Kannada
ಜ್ಞಾನ ಹೃದಯವುಳ್ಳ ಸ್ತ್ರೀಯರೆಲ್ಲರೂ ತಮ್ಮ ಕೈಗಳಿಂದ ನೇಯ್ದ ನೀಲಿ, ಧೂಮ್ರ, ರಕ್ತವರ್ಣ ಮತ್ತು ನಯವಾದ ನಾರುಮಡಿ ಇವುಗಳನ್ನು ತಂದರು.
Jnyaana hrudayavulla streeyarellaroo tamma kaigalinda neyda neeli, dhoomra, raktavarna mattu nayavaada naarumadi ivugalannu tandaru.
Exodus 35:25 in English
- King James Version (KJV)
- And all the women that were wise hearted did spin with their hands, and brought that which they had spun, [both] of blue, and of purple, [and] of scarlet, and of fine linen.
- World English Bible (WEB)
- All the women who were wise-hearted spun with their hands, and brought that which they had spun: the blue, the purple, the scarlet, and the fine linen.
- American Standard Version (ASV)
- And all the women that were wise-hearted did spin with their hands, and brought that which they had spun, the blue, and the purple, the scarlet, and the fine linen.
- Bible in Basic English (BBE)
- And all the women who were expert with their hands, made cloth, and gave the work of their hands, blue and purple and red and the best linen.
- Darby Translation (DBY)
- And every woman that was wise-hearted spun with her hands, and brought what she had spun: the blue, and the purple, and the scarlet, and the byssus.
- Webster's Bible (WBS)
- And all the women that were wise-hearted spun with their hands, and brought that which they had spun, [both] of blue, and of purple, [and] of scarlet, and of fine linen.
- Young's Literal Translation (YLT)
- And every wise-hearted woman hath spun with her hands, and they bring in yarn, the blue, and the purple, the scarlet, and the linen;
Read in context
- 23ನೀಲಿ, ಧೂಮ್ರ, ರಕ್ತವರ್ಣ ನಯವಾದ ನಾರುಮಡಿ, ಮೇಕೆಯ ಕೂದಲು; ಟಗರುಗಳ ಕೆಂಪು ಬಣ್ಣದ ಚರ್ಮಗಳು, ಕಡಲು ಹಂದಿಯ ಚರ್ಮಗಳು, ಯಾರ ಬಳಿಯಲ್ಲಿದ್ದವೋ ಅವರೆಲ್ಲರು ತಂದರು.
- 24ಬೆಳ್ಳಿ ಹಿತ್ತಾಳೆಗಳ ಕಾಣಿಕೆ ಗಳನ್ನು ಅರ್ಪಿಸುವದಕ್ಕೆ ಮನಸ್ಸಿದ್ದವರೆಲ್ಲರೂ ಕರ್ತನಿಗೆ ಕಾಣಿಕೆಗಳನ್ನು ತಂದರು. ಸೇವೆಯ ಎಲ್ಲಾ ಕೆಲಸ ಕ್ಕೋಸ್ಕರ ಜಾಲೀ ಮರವಿದ್ದವರು ಅದನ್ನು ತಂದರು.
- 25ಜ್ಞಾನ ಹೃದಯವುಳ್ಳ ಸ್ತ್ರೀಯರೆಲ್ಲರೂ ತಮ್ಮ ಕೈಗಳಿಂದ ನೇಯ್ದ ನೀಲಿ, ಧೂಮ್ರ, ರಕ್ತವರ್ಣ ಮತ್ತು ನಯವಾದ ನಾರುಮಡಿ ಇವುಗಳನ್ನು ತಂದರು.
- 26ಜ್ಞಾನದಲ್ಲಿ ಹೃದಯ ಪ್ರೇರಣೆ ಹೊಂದಿದ ಸ್ತ್ರೀಯರೆಲ್ಲರೂ ಮೇಕೆ ಕೂದಲುಗಳನ್ನೂ ನೇಯ್ದರು.
- 27ಅಧಿಪತಿಗಳು ಎಫೋ ದಿನಲ್ಲಿಯೂ ಎದೆಪದಕದಲ್ಲಿಯೂ ಕೂಡ್ರಿಸುವದಕ್ಕೆ ಗೋಮೇಧಿಕಗಳನ್ನೂ ರತ್ನಗಳನ್ನೂ
Cross references
- Luke 8:2–3 ಲೂಕನು 8:2–3ಇದಲ್ಲದೆ ದುರಾತ್ಮಗಳಿಂ ದಲೂ ರೋಗಗಳಿಂದಲೂ ಸ್ವಸ್ಥಮಾಡಲ್ಪಟ್ಟ ಕೆಲವು ಸ್ತ್ರೀಯರು ಮತ್ತು ಏಳು ದೆವ್ವಗಳು ಬಿಟ್ಟು ಹೋಗಿದ್ದ ಮಗ್ದಲಿನ ಎಂದು ಕರೆಯಲ್ಪಟ್ಟ ಮರಿಯಳೂ ಹೆರೋದನ ಮನೆವಾರ್ತೆಯವನಾದ ಕೂಜನ ಹೆಂಡತಿ ಯೋಹಾನಳೂ ಸುಸನ್ನಳೂ ಮತ್ತು ಬೇರೆ ಅನೇಕರು ತಮ್ಮ ಸೊತ್ತಿನಿಂದ ಆತನನ್ನು ಉಪಚರಿ ಸಿದವರು ಆತನೊಂದಿಗೆ ಇದ್ದರು.
- Proverbs 14:1 ಜ್ಞಾನೋಕ್ತಿಗಳು 14:1ಜ್ಞಾನಿಯಾದ ಪ್ರತಿ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.
- Romans 16:12 ರೋಮಾಪುರದವರಿಗೆ 16:12ಕರ್ತನಲ್ಲಿ ಪ್ರಯಾಸಪ ಡುವ ತ್ರುಫೈನಳಿಗೂ ತ್ರುಫೋಸಳಿಗೂ ವಂದನೆಗಳು. ಕರ್ತನಲ್ಲಿ ಹೆಚ್ಚಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀ ಸಳಿಗೆ ವಂದನೆ.
- Romans 16:1–4 ರೋಮಾಪುರದವರಿಗೆ 16:1–4ನಾನು ನಿಮಗೆ ಒಪ್ಪಿಸುವ ನಮ್ಮ ಸಹೋದರಿಯಾದ ಫೊಯಿಬೆಯನ್ನು ಪ್ರೀತಿಯಿಂದ ಅಂಗೀಕರಿಸಿರಿ. ಆಕೆಯು ಕೆಂಕ್ರೆಯ ಲ್ಲಿರುವ ಸಭೆಯ ಸೇವಕಳಾಗಿದ್ದಾಳೆ. ನೀವು ಆಕೆಯನ್ನು ಪರಿಶುದ್ಧರಿಗೆ ತಕ್ಕಂತೆ ಕರ್ತನಲ್ಲಿ ಅಂಗೀಕರಿಸಿ ಆಕೆಯ ಕೆಲಸದಲ್ಲಿ ಆಕೆಗೆ ಅವಶ್ಯವಾದ ಸಹಾಯವನ್ನು ಮಾಡಿರಿ; ಆಕೆಯು ನನಗೂ ಅನೇಕರಿಗೂ ಸಹಾಯ ಮಾಡಿದವಳಾಗಿದ್ದಾಳೆ. ಕ್ರಿಸ್ತ ಯೇಸುವಿನಲ್ಲಿ ನನ್ನ ಸಹಾಯಕರಾದ ಪ್ರಿಸ್ಕಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ. ಅವರು ನನ್ನ ಪ್ರಾಣಕ್ಕಾಗಿ ತಮ್ಮ ಕುತ್ತಿಗೆಗಳನ್ನೇ ಒಡ್ಡಿದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರನ್ನು ವಂದಿಸುತ್ತಾರೆ.
- Exodus 28:3 ವಿಮೋಚನಕಾಂಡ 28:3ಇದಲ್ಲದೆ ನಾನು ಜ್ಞಾನದ ಆತ್ಮವನ್ನು ತುಂಬಿಸಿದ ವಿವೇಕ ಹೃದಯ ವಿರುವವರ ಸಂಗಡ ನೀನು ಮಾತನಾಡು, ಅವರು ಆರೋನನ ವಸ್ತ್ರಗಳನ್ನು ಮಾಡಲಿ. ಅವನು ನನಗೆ ಯಾಜಕ ಸೇವೆಮಾಡುವಂತೆ ನೀನು ಅವನನ್ನು ಪ್ರತಿಷ್ಠಿಸ ಬೇಕು.
- Proverbs 31:19–24 ಜ್ಞಾನೋಕ್ತಿಗಳು 31:19–24ರಾಟೆಯ ಮೇಲೆ ಕೈಹಾಕಿ ತನ್ನ ಕೈಗಳು ಕದರನ್ನು ಹಿಡಿಯುತ್ತವೆ. ಆಕೆಯು ಬಡವರಿಗಾಗಿ ಕೈ ಬಿಚ್ಚುತ್ತಾಳೆ; ಹೌದು, ದಿಕ್ಕಿಲ್ಲದವರಿಗೆ ಆಕೆಯು ಕೈ ನೀಡುತ್ತಾಳೆ. ತನ್ನ ಮನೆಯವರಿಗಾಗಿ ಆಕೆಯು ಹಿಮಕ್ಕೆ ಭಯಪಡುವದಿಲ್ಲ; ಆಕೆಯ ಮನೆಯವ ರೆಲ್ಲರೂ ರಕ್ತಾಂಭರಗಳಿಂದ ಹೊದಿಸಲ್ಪಟ್ಟಿದ್ದಾರೆ. ಆಕೆಯು ತನಗಾಗಿ ರತ್ನ ಕಂಬಳಿಗಳನ್ನು ಮಾಡು ತ್ತಾಳೆ; ಆಕೆಯ ಉಡುಪೋ ರೇಷ್ಮೆ ರಕ್ತಾಂಭರ. ದೇಶದ ಹಿರಿಯರ ಮಧ್ಯದಲ್ಲಿ ತನ್ನ ಪತಿಯು ಕೂತಿ ರುವಾಗ ಅವನು ದ್ವಾರಗಳಲ್ಲಿ ಪ್ರಸಿದ್ಧನಾಗಿರುವನು. ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ; ಆಕೆಯು ವರ್ತಕನಿಗೆ ನಡುಕಟ್ಟುಗಳನ್ನು ಒಪ್ಪಿಸುತ್ತಾಳೆ.
- Galatians 3:28 ಗಲಾತ್ಯದವರಿಗೆ 3:28ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ ದಾಸನು ಸ್ವತಂತ್ರನು ಎಂದೂ ಗಂಡು ಹೆಣ್ಣು ಎಂದೂ ಭೇದವಿಲ್ಲ.ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.
- Acts 9:39 ಅಪೊಸ್ತಲರ ಕೃತ್ಯಗಳು 9:39ಪೇತ್ರನು ಎದು ಅವರ ಜೊತೆಯಲ್ಲಿ ಹೋದನು. ಅವನು ಬಂದಾಗ ಅವರು ಅವನನ್ನು ಮೇಲಂತಸ್ತಿನ ಕೊಠಡಿಗೆ ಕರೆದು ಕೊಂಡುಹೋದರು. ಅಲ್ಲಿ ವಿಧವೆಯರೆಲ್ಲರೂ ಅಳುತ್ತಾ ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಮೇಲಂಗಿಗಳನ್ನೂ ಒಳಂಗಿಗಳನ್ನೂ ತೋರಿಸಿ
- Romans 16:6 ರೋಮಾಪುರದವರಿಗೆ 16:6ನಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆ.
- Philippians 4:3 ಫಿಲಿಪ್ಪಿಯವರಿಗೆ 4:3ನಿಜ ಜೊತೆಗಾರನೇ, ನೀನು ಆ ಸ್ತ್ರೀಯರಿಗೆ ಸಹಾಯಕ ನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸ ಪಟ್ಟವರು. ಅವರ ಹೆಸರುಗಳು ಜೀವಗ್ರಂಥದಲ್ಲಿ ಬರೆದವೆ.
- Exodus 36:1 ವಿಮೋಚನಕಾಂಡ 36:1ತರುವಾಯ ಬೆಚಲೇಲನೂ ಒಹೋಲಿ ಯಾಬನೂ ಪರಿಶುದ್ಧ ಸ್ಥಳದ ಸೇವೆ ಗೋಸ್ಕರ ಎಲ್ಲಾ ವಿಧವಾದ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿಯುವ ಹಾಗೆ ಕರ್ತನಿಂದ ಜ್ಞಾನ ವಿವೇಕಗಳನ್ನು ಹೊಂದಿದ ಹೃದಯದವರೆಲ್ಲರೂ ಕರ್ತನು ಆಜ್ಞಾಪಿಸಿದಂತೆಯೇ ಎಲ್ಲವುಗಳನ್ನು ಮಾಡಿ ದರು. ತರುವಾಯ ಪರಿಶುದ್ಧ ಸ್ಥಳದ ಸೇವೆಗೋಸ್ಕರ ಪ್ರತಿ ವಿಧವಾದ ಕೆಲಸ ಮಾಡುವದನ್ನು ತಿಳುಕೊಳ್ಳುವ ದಕ್ಕಾಗಿ ಆತನು ಜ್ಞಾನ ವಿವೇಕಗಳನ್ನು ಅನುಗ್ರಹಿಸಿದ ಬೆಚಲೇಲನೂ ಒಹೋಲಿಯಾಬನೂ ಜ್ಞಾನ ವಿವೇಕ ವಿದ್ದವರೆಲ್ಲರೂ ಎಲ್ಲವನ್ನೂ ಕರ್ತನು ಆಜ್ಞಾಪಿಸಿದಂತೆ ಮಾಡಿದರು.
- Exodus 31:6 ವಿಮೋಚನಕಾಂಡ 31:6ನಾನು ಇಗೋ, ನಾನೇ ಅವನೊಂದಿಗೆ ದಾನ್ ಕುಲದವನೂ ಅಹೀಸಾ ಮಾಕನ ಮಗನೂ ಆದ ಒಹೊಲೀಯಾಬನನ್ನು ಕೊಟ್ಟಿ ದ್ದೇನೆ. ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವ ದಕ್ಕೆ ಜಾಣನಾದವರೆಲ್ಲರ ಹೃದಯಗಳಲ್ಲಿ ಜ್ಞಾನವನ್ನು ಇಟ್ಟಿದ್ದೇನೆ.