Proverbs · chapter 14 · verse 1
Proverbs 14:1 in Kannada
ಜ್ಞಾನಿಯಾದ ಪ್ರತಿ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.
Jnyaaniyaada prati streeyu tanna maneyannu kattuttaale; buddhiheenalo tanna kaigalindale adannu kittuhaakuttaale.
Proverbs 14:1 in English
- King James Version (KJV)
- Every wise woman buildeth her house: but the foolish plucketh it down with her hands.
- World English Bible (WEB)
- Every wise woman builds her house, but the foolish one tears it down with her own hands.
- American Standard Version (ASV)
- Every wise woman buildeth her house; But the foolish plucketh it down with her own hands.
- Bible in Basic English (BBE)
- Wisdom is building her house, but the foolish woman is pulling it down with her hands.
- Darby Translation (DBY)
- The wisdom of women buildeth their house; but folly plucketh it down with her hands.
- Webster's Bible (WBS)
- Every wise woman buildeth her house: but the foolish plucketh it down with her hands.
- Young's Literal Translation (YLT)
- Every wise woman hath builded her house, And the foolish with her hands breaketh it down.
Read in context
- 1ಜ್ಞಾನಿಯಾದ ಪ್ರತಿ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.
- 2ತನ್ನ ಯಥಾರ್ಥತೆಯಲ್ಲಿ ನಡೆಯುವವನು ಕರ್ತನಿಗೆ ಭಯಪಡುತ್ತಾನೆ; ತನ್ನ ಮಾರ್ಗಗಳಲ್ಲಿ ವಕ್ರತೆಯುಳ್ಳವನು ಆತನನ್ನು ಅಸಡ್ಡೆಮಾಡುತ್ತಾನೆ.
- 3ಬುದ್ಧಿಹೀನನ ಬಾಯಿ ಯಲ್ಲಿ ಗರ್ವದ ಅಂಕುರವಿದೆ; ಜ್ಞಾನವಂತರ ತುಟಿಗಳು ಅವುಗಳನ್ನು ಕಾಯುವವು.
Cross references
- Proverbs 31:10–31 ಜ್ಞಾನೋಕ್ತಿಗಳು 31:10–31ಗುಣವತಿಯಾದ ಸ್ತ್ರೀಯನ್ನು ಯಾವನು ಕಂಡು ಕೊಂಡಾನು? ಅವಳ ಕ್ರಯ ಹವಳಕ್ಕಿಂತಲೂ ಅಮೂ ಲ್ಯವೇ. ತನಗೆ ಯಾವ ನಷ್ಟವೂ ಇರದಂತೆ ಅವಳ ಪತಿಯ ಹೃದಯವು ತನ್ನಲ್ಲಿ ನಿರ್ಭಯವಾಗಿ ಭರವಸೆ ಇಡುತ್ತದೆ. ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ, ಒಳ್ಳೇದನ್ನೇ ಮಾಡುವಳು. ಆಕೆಯು ಉಣ್ಣೆಯನ್ನೂ ಸಣಬನ್ನೂ ಹುಡುಕು ವವಳಾಗಿ ತನ್ನ ಕೈಗಳಿಂದ ಮನಃಪೂರ್ವಕವಾಗಿ ಕೆಲಸ ಮಾಡುತ್ತಾಳೆ. ಆಕೆಯು ವರ್ತಕರ ಹಡಗುಗಳಂತೆ ಇದ್ದಾಳೆ; ಆಕೆಯು ದೂರದಿಂದ ತನ್ನ ಆಹಾರವನ್ನು ತರುತ್ತಾಳೆ. ಆಕೆಯು ಇನ್ನೂ ಕತ್ತಲಿರುವಾಗಲೇ ಎದ್ದು ತನ್ನ ಮನೆಯವರಿಗೆ ಆಹಾರವನ್ನು ಕೊಟ್ಟು ತನ್ನ ದಾಸಿಯರಿಗೆ ಭತ್ಯವನ್ನು ಹಂಚುತ್ತಾಳೆ. ಆಕೆಯು ಯೋಚಿಸಿ ಹೊಲವನ್ನು ಕೊಂಡುಕೊಳ್ಳುತ್ತಾಳೆ; ತನ್ನ ಕೈಕೆಲಸದ ಫಲದಿಂದ ಆಕೆಯು ದ್ರಾಕ್ಷಾಲತೆಗಳನ್ನು ನೆಡುತ್ತಾಳೆ. ಆಕೆಯು ತನ್ನ ಬಲದಿಂದ ನಡುವನ್ನು ಕಟ್ಟಿಕೊಂಡು ತನ್ನ ತೋಳುಗಳನ್ನು ಶಕ್ತಿಗೊಳಿಸುತ್ತಾಳೆ. ತನ್ನ ವ್ಯಾಪಾರದ ಸರಕು ಒಳ್ಳೇದೆಂದು ಆಕೆಯು ತಿಳು ಕೊಳ್ಳುತ್ತಾಳೆ; ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು. ರಾಟೆಯ ಮೇಲೆ ಕೈಹಾಕಿ ತನ್ನ ಕೈಗಳು ಕದರನ್ನು ಹಿಡಿಯುತ್ತವೆ. ಆಕೆಯು ಬಡವರಿಗಾಗಿ ಕೈ ಬಿಚ್ಚುತ್ತಾಳೆ; ಹೌದು, ದಿಕ್ಕಿಲ್ಲದವರಿಗೆ ಆಕೆಯು ಕೈ ನೀಡುತ್ತಾಳೆ. ತನ್ನ ಮನೆಯವರಿಗಾಗಿ ಆಕೆಯು ಹಿಮಕ್ಕೆ ಭಯಪಡುವದಿಲ್ಲ; ಆಕೆಯ ಮನೆಯವ ರೆಲ್ಲರೂ ರಕ್ತಾಂಭರಗಳಿಂದ ಹೊದಿಸಲ್ಪಟ್ಟಿದ್ದಾರೆ. ಆಕೆಯು ತನಗಾಗಿ ರತ್ನ ಕಂಬಳಿಗಳನ್ನು ಮಾಡು ತ್ತಾಳೆ; ಆಕೆಯ ಉಡುಪೋ ರೇಷ್ಮೆ ರಕ್ತಾಂಭರ. ದೇಶದ ಹಿರಿಯರ ಮಧ್ಯದಲ್ಲಿ ತನ್ನ ಪತಿಯು ಕೂತಿ ರುವಾಗ ಅವನು ದ್ವಾರಗಳಲ್ಲಿ ಪ್ರಸಿದ್ಧನಾಗಿರುವನು. ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ; ಆಕೆಯು ವರ್ತಕನಿಗೆ ನಡುಕಟ್ಟುಗಳನ್ನು ಒಪ್ಪಿಸುತ್ತಾಳೆ. ಆಕೆಯ ಉಡುಪು ಬಲವೂ ಘನತೆಯೂ ಆಗಿವೆ; ಭವಿಷ್ಯತ್ತಿ ನಲ್ಲಿ ಆಕೆಯು ಸಂತೋಷಿಸುವಳು. ಆಕೆಯು ಜ್ಞಾನದಿಂದ ತನ್ನ ಬಾಯಿ ತೆರೆಯುತ್ತಾಳೆ; ತನ್ನ ನಾಲಿಗೆಯಲ್ಲಿ ದಯೆಯ ಉಪದೇಶವಿರುವದು. ಆಕೆಯು ತನ್ನ ಗೃಹಕೃತ್ಯಗಳ ನ್ನೆಲ್ಲಾ ಚೆನ್ನಾಗಿ ನೋಡಿಕೊಂಡವಳಾಗಿ ಸೋಮಾರಿ ತನದ ರೊಟ್ಟಿಯನ್ನು ತಿನ್ನುವದಿಲ್ಲ. ಆಕೆಯ ಮಕ್ಕಳು ಎದ್ದು ಆಕೆಯನ್ನು ಧನ್ಯಳೆಂದು ಕರೆಯುತ್ತಾರೆ; ಆಕೆಯ ಪತಿಯು ಸಹ ಹೊಗಳುತ್ತಾನೆ. ಅವನು--ಬಹು ಮಂದಿ ಕುಮಾರ್ತೆಯರು ಗುಣವತಿಯಾಗಿ ನಡೆದಿ ದ್ದಾರೆ; ಆದರೆ ನೀನು ಅವರೆಲ್ಲರಿಗಿಂತಲೂ ಶ್ರೇಷ್ಠಳು ಎಂದು ತನ್ನ ಪತಿಯು ಹೊಗಳುತ್ತಾನೆ. ಸೌಂದ ರ್ಯವು ಮೋಸಕರ; ಲಾವಣ್ಯವು ವ್ಯರ್ಥ; ಕರ್ತನಿಗೆ ಭಯಪಡುವವಳು ಹೊಗಳಲ್ಪಡುವಳು.ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ. ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.
- Proverbs 24:3–4 ಜ್ಞಾನೋಕ್ತಿಗಳು 24:3–4ಜ್ಞಾನದಿಂದ ಮನೆಯು ಕಟ್ಟಲ್ಪಡುತ್ತದೆ; ವಿವೇಕದಿಂದ ಅದು ಸ್ಥಿರಗೊಳ್ಳುತ್ತದೆ; ತಿಳುವಳಿಕೆಯಿಂದ ಎಲ್ಲಾ ಅಮೂಲ್ಯವಾದ ಮತ್ತು ಇಷ್ಟ ಸಂಪತ್ತಿನಿಂದ ಕೋಣೆಗಳು ತುಂಬಲ್ಪಡುವವು.
- Proverbs 21:9 ಜ್ಞಾನೋಕ್ತಿಗಳು 21:9ವಿಶಾಲವಾದ ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವದಕ್ಕಿಂತ ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವದು ಲೇಸು.
- Proverbs 21:19 ಜ್ಞಾನೋಕ್ತಿಗಳು 21:19ಕಾಡುವ ಕೋಪವುಳ್ಳ ಸ್ತ್ರೀಯೊಂದಿಗೆ ವಾಸಮಾಡುವದಕ್ಕಿಂತ ಅಡವಿಯಲ್ಲಿ ವಾಸಿಸುವದು ಲೇಸು.
- Ruth 4:11 ರೂತಳು 4:11ಇದಕ್ಕೆ ಈ ಹೊತ್ತು ನೀವು ಸಾಕ್ಷಿಗಳಾಗಿದ್ದೀರಿ ಅಂದನು. ಆಗ ಬಾಗಲಲ್ಲಿರುವ ಸಮಸ್ತ ಜನರೂ ಹಿರಿಯರೂ ಹೇಳಿದ್ದೇನಂದರೆ--ನಾವು ಸಾಕ್ಷಿಗಳೇ; ನಿನ್ನ ಮನೆಯಲ್ಲಿ ಬಂದ ಸ್ತ್ರೀಯನ್ನು ಕರ್ತನು ಇಸ್ರಾಯೇಲ್ ಮನೆಯನ್ನು ಕಟ್ಟಿದ ಇಬ್ಬರಾದ ರಾಹೇಲಳ ಹಾಗೆಯೂ ಲೇಯಳ ಹಾಗೆಯೂ ಮಾಡುವ ವನಾಗಲಿ; ಎಫ್ರಾತದಲ್ಲಿ ಯೋಗ್ಯ ಕಾರ್ಯ ಮಾಡು, ಬೇತ್ಲೆಹೇಮಿನಲ್ಲಿ ಹೆಸರುಗೊಂಡವನಾಗಿರು.
- Proverbs 9:13–15 ಜ್ಞಾನೋಕ್ತಿಗಳು 9:13–15ಬುದ್ಧಿಹೀನಳಾದ ಸ್ತ್ರೀಯು ಕೂಗಾಟದವಳು. ಅವಳು ಅಜ್ಞಾನಿ; ಏನೂ ತಿಳಿಯದವಳು. ತನ್ನ ಮನೆಯ ಬಾಗಲಿನಲ್ಲಿ ಪಟ್ಟಣದ ಎತ್ತರವಾದ ಸ್ಥಳಗಳ ಪೀಠದ ಮೇಲೆ ಕೂತುಕೊಂಡಿರುತ್ತಾಳೆ. ಮಾರ್ಗಕ್ಕನುಸಾರವಾಗಿ ಹೋಗುವ ಪ್ರಯಾಣಿಕ ರನ್ನು ಕರೆಯುತ್ತಾಳೆ.
- Proverbs 19:13 ಜ್ಞಾನೋಕ್ತಿಗಳು 19:13ಬುದ್ಧಿಹೀನನಾದ ಮಗನು ತನ್ನ ತಂದೆಗೆ ಹಾನಿಕ ರನು; ಹೆಂಡತಿಯ ಕಲಹಗಳು ಯಾವಾಗಲೂ ತೊಟ್ಟಿ ಕ್ಕುವ ಹನಿಗಳು.
- 1 Kings 16:31 1 ಅರಸುಗಳು 16:31ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಲ್ಲಿ ನಡೆಯು ವದು ಅವನಿಗೆ ಅಲ್ಪವಾಗಿತ್ತು; ಅವನು ಚೀದೋನ್ಯರ ಅರಸನಾಗಿರುವ ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾಗಿ ಬಾಳನನ್ನು ಸೇವಿಸಿ ಅವನಿಗೆ ಅಡ್ಡ ಬಿದ್ದನು.
- 2 Kings 11:1 2 ಅರಸುಗಳು 11:1ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತು ಹೋದದ್ದನ್ನು ನೋಡಿ ಎದ್ದು ರಾಜ ಸಂತಾನದವರನ್ನೆಲ್ಲಾ ನಾಶಮಾಡಿದಳು.
- 1 Kings 21:24–25 1 ಅರಸುಗಳು 21:24–25ಅಹಾಬನವರಲ್ಲಿ ಪಟ್ಟಣದೊಳಗೆ ಯಾವನು ಸಾಯುವನೋ ಅವನನ್ನು ನಾಯಿಗಳು ತಿನ್ನುವವು; ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವವು ಎಂದು ಹೇಳುತ್ತಾನೆ ಅಂದನು. ಆದರೆ ತನ್ನ ಹೆಂಡತಿಯಾದ ಈಜೆಬೆಲಳಿಂದ ಪ್ರೇರೇಪಿಸಲ್ಪಟ್ಟು ಕರ್ತನ ಸಮ್ಮುಖದಲ್ಲಿ ಕೆಟ್ಟತನವನ್ನು ಮಾಡಲು ತನ್ನನ್ನು ಮಾರಿಬಿಟ್ಟ ಅಹಾಬನ ಹಾಗೆ ಯಾವನೂ ಇರಲಿಲ್ಲ.