Exodus · chapter 40 · verse 12
Exodus 40:12 in Kannada
ಆರೋನನನ್ನೂ ಅವನ ಮಕ್ಕಳನ್ನೂ ಸಭೆಯ ಗುಡಾರದ ಬಾಗಿಲಿನ ಬಳಿಗೆ ಬರಮಾಡಿ ಅವರನ್ನು ನೀರಿನಿಂದ ತೊಳೆಯಬೇಕು.
Aaronanannoo avana makkalannoo sabheya gudaarada baagilina balige baramaadi avarannu neerininda toleyabeku.
Exodus 40:12 in English
- King James Version (KJV)
- And thou shalt bring Aaron and his sons unto the door of the tabernacle of the congregation, and wash them with water.
- World English Bible (WEB)
- “You shall bring Aaron and his sons to the door of the Tent of Meeting, and shall wash them with water.
- American Standard Version (ASV)
- And thou shalt bring Aaron and his sons unto the door of the tent of meeting, and shalt wash them with water.
- Bible in Basic English (BBE)
- Then let Aaron and his sons come to the door of the Tent of meeting; and after washing them with water,
- Darby Translation (DBY)
- And thou shalt bring Aaron and his sons near, at the entrance of the tent of meeting, and bathe them with water.
- Webster's Bible (WBS)
- And thou shalt bring Aaron and his sons to the door of the tabernacle of the congregation, and wash them with water.
- Young's Literal Translation (YLT)
- 'And thou hast brought near Aaron and his sons unto the opening of the tent of meeting, and hast bathed them with water;
Read in context
- 10ದಹನಬಲಿಪೀಠವನ್ನೂ ಅದರ ಎಲ್ಲಾ ಸಾಮಾನು ಗಳನ್ನೂ ನೀನು ಅಭಿಷೇಕಿಸಿ ಬಲಿಪೀಠವನ್ನು ಪವಿತ್ರ ಮಾಡು; ಆಗ ಅದು ಅತೀ ಪರಿಶುದ್ಧವಾದ ಬಲಿಪೀಠ ವಾಗುವದು.
- 11ಗಂಗಾಳವನ್ನೂ ಅದರ ಕಾಲುಗಳನ್ನೂ ನೀನು ಅಭಿಷೇಕಿಸಿ ಅದನ್ನು ಪರಿಶುದ್ಧ ಮಾಡಬೇಕು.
- 12ಆರೋನನನ್ನೂ ಅವನ ಮಕ್ಕಳನ್ನೂ ಸಭೆಯ ಗುಡಾರದ ಬಾಗಿಲಿನ ಬಳಿಗೆ ಬರಮಾಡಿ ಅವರನ್ನು ನೀರಿನಿಂದ ತೊಳೆಯಬೇಕು.
- 13ಆರೋನನು ನನಗೆ ಯಾಜಕ ಸೇವೆಮಾಡುವ ಹಾಗೆ ಅವನಿಗೆ ಪರಿಶುದ್ಧ ವಸ್ತ್ರಗಳನ್ನು ತೊಡಿಸಿ, ಅವನನ್ನು ಅಭಿಷೇಕಿಸಿ ಶುದ್ಧ ಮಾಡಬೇಕು.
- 14ಅವನ ಕುಮಾರರನ್ನು ನೀನು ಬರ ಮಾಡಿಕೊಂಡು ಅವರಿಗೆ ಅಂಗಿಗಳನ್ನು ತೊಡಿಸಿ
Cross references
- Leviticus 8:1–13 ಯಾಜಕಕಾಂಡ 8:1–13ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ -- ಆರೋನನನ್ನೂ ಅವನೊಂದಿಗೆ ಅವನ ಕುಮಾರರನ್ನೂ ಕರೆದು ಉಡುಪು ಗಳನ್ನೂ ಅಭಿಷೇಕ ತೈಲವನ್ನೂ ಪಾಪದ ಬಲಿಗಾಗಿ ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯನ್ನೂ ತೆಗೆದುಕೊಂಡು. ಸಭೆ ಯವರನ್ನೆಲ್ಲಾ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಒಟ್ಟಾಗಿ ಸೇರಿಸು ಅಂದನು. ಆಗ ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಅವನು ಮಾಡಿದನು. ಸಭೆಯು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಒಟ್ಟಾಗಿ ಸೇರಿಸಲ್ಪಟ್ಟಿತು. ಮೋಶೆಯು ಸಭೆಗೆ--ಕರ್ತನು ಮಾಡುವದಕ್ಕೆ ಆಜ್ಞಾಪಿಸಿರುವದು ಇದೇ. ಮೋಶೆಯು ಆರೋನನನ್ನೂ ಅವನ ಕುಮಾರ ರನ್ನೂ ಹತ್ತಿರಕ್ಕೆ ಬರಮಾಡಿ ಅವರಿಗೆ ಸ್ನಾನಮಾಡಿಸಿ ದನು. ಅವನಿಗೆ ಮೇಲಂಗಿಯನ್ನು ಹೊದಿಸಿ ನಡುಕಟ್ಟಿ ನಿಂದ ಅವನ ನಡುವನ್ನು ಕಟ್ಟಿ ನಿಲುವಂಗಿಯನ್ನು ತೊಡಿಸಿ ಅವನ ಮೇಲೆ ಎಫೋದನ್ನು ಹಾಕಿ ಎಫೋದಿನ ವಿಚಿತ್ರವಾದ ನಡುಕಟ್ಟಿನಿಂದ ನಡುವನ್ನು ಕಟ್ಟಿ ಅದ ರಿಂದ ಅವನನ್ನು ಬಿಗಿದನು. ಅವನ ಮೇಲೆ ಎದೆ ಕವಚವನ್ನು ಹಾಕಿ ಆ ಎದೆ ಕವಚದಲ್ಲಿ ಊರೀಮ್ ತುವ್ಮೆಾಮ್ ಇವುಗಳನ್ನು ಸಹ ಹಾಕಿದನು. ಅವನ ತಲೆಯ ಮೇಲೆ ಮುಂಡಾಸವನ್ನು ಇಟ್ಟು ಆ ಮುಂಡಾ ಸದ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನೂ ಪವಿತ್ರ ವಾದ ಕಿರೀಟವನ್ನೂ ಕರ್ತನು ಮೋಶೆಗೆ ಆಜ್ಞಾಪಿಸಿ ದಂತೆಯೇ ಇಟ್ಟನು. ಮೋಶೆಯು ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ ಅದರೊಳಗಿರುವದೆಲ್ಲವನ್ನೂ ಅಭಿಷೇ ಕಿಸಿ ಪವಿತ್ರಮಾಡಿದನು. ಅವನು ಅದರಿಂದ ಯಜ್ಞವೇದಿಯ ಮೇಲೆ ಏಳು ಸಾರಿ ಚಿಮುಕಿಸಿ ಯಜ್ಞ ವೇದಿಯನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಗಂಗಾಳ ವನ್ನೂ ಪೀಠವನ್ನೂ ಅಭಿಷೇಕಿಸಿ ಅವುಗಳನ್ನು ಪವಿತ್ರ ಮಾಡಿದನು. ಅವನು ಆರೋನನ ತಲೆಯ ಮೇಲೆ ಅಭಿಷೇಕ ತೈಲವನ್ನು ಸುರಿದು ಅವನನ್ನು ಪವಿತ್ರ ಮಾಡುವದಕ್ಕಾಗಿ ಅಭಿಷೇಕಿಸಿದನು. ಮೋಶೆಯು ಆರೋನನ ಮಕ್ಕಳನ್ನು ಕರತಂದು ಅವರ ಮೇಲೆ ಮೇಲಂಗಿಗಳನ್ನು ಹಾಕಿ ಅವರ ನಡುಗಳನ್ನು ಕಟ್ಟಿ ಕರ್ತನು ಮೋಶೆಗೆ ಆಜ್ಞಾಪಿಸಿದಂತೆ ಅವರ ಮೇಲೆ ಕುಲಾಯಿಗಳನ್ನು ಇಟ್ಟನು.
- Leviticus 9:1–24 ಯಾಜಕಕಾಂಡ 9:1–24ಎಂಟನೆಯ ದಿನದಲ್ಲಿ ಆದದ್ದೇನಂದರೆ, ಮೋಶೆಯು ಆರೋನನನ್ನೂ ಅವನ ಕುಮಾರರನ್ನೂ ಇಸ್ರಾಯೇಲಿನ ಹಿರಿಯರನ್ನೂ ಕರೆ ದನು; ಅವನು ಆರೋನನಿಗೆ ಹೇಳಿದ್ದೇನಂದರೆ--ಪಾಪದ ಬಲಿಗಾಗಿ ಒಂದು ಎಳೆಯ ಕರುವನ್ನೂ ದಹನ ಬಲಿಗಾಗಿ ದೋಷವಿಲ್ಲದ ಟಗರನ್ನೂ ನೀನು ತೆಗೆದು ಕೊಂಡು ಅವುಗಳನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸು. ನೀನು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕಾದದ್ದೇ ನಂದರೆ--ಪಾಪದ ಬಲಿಗಾಗಿ ಮೇಕೆಗಳಲ್ಲಿ ಮರಿ ಯನ್ನೂ ದಹನಬಲಿಗಾಗಿ ದೋಷವಿಲ್ಲದ ಒಂದು ವರ್ಷದ ಕರುವನ್ನೂ ಒಂದು ವರ್ಷದ ಕುರಿಮರಿ ಯನ್ನೂ ತೆಗೆದುಕೊಳ್ಳಬೇಕು. ಕರ್ತನ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಳಿಗಾಗಿ ಹೋರಿಯನ್ನೂ ಟಗರನ್ನೂ ಸಹ ತೆಗೆದುಕೊಳ್ಳಬೇಕು; ಆಹಾರದ ಅರ್ಪಣೆಯು ಎಣ್ಣೆಯೊಂದಿಗೆ ಬೆರೆತಿರಬೇಕು; ಈ ದಿನವೇ ಕರ್ತನು ನಿಮಗೆ ಕಾಣಿಸಿಕೊಳ್ಳುವನು. ಮೋಶೆಯು ಆಜ್ಞಾಪಿಸಿದವುಗಳನ್ನು ಅವರು ಸಭೆಯ ಗುಡಾರದ ಮುಂದೆ ತಂದರು; ಸಭೆಯೆಲ್ಲವೂ ಹತ್ತಿರ ಬಂದು ಕರ್ತನ ಮುಂದೆ ನಿಂತಿತು. ಆಗ ಮೋಶೆಯು--ಕರ್ತನು ಆಜ್ಞಾಪಿಸಿದ್ದು ಇದೇ, ನೀವು ಇದನ್ನು ಮಾಡಿರಿ; ಕರ್ತನ ಮಹಿಮೆಯು ನಿಮಗೆ ಕಾಣಿಸಿಕೊಳ್ಳುವದು ಅಂದನು. ಮೋಶೆಯು ಆರೋನನಿಗೆ--ಯಜ್ಞವೇದಿಯ ಹತ್ತಿರಕ್ಕೆ ಹೋಗಿ ಕರ್ತನು ಆಜ್ಞಾಪಿಸಿದಂತೆಯೇ ನಿನ್ನ ಪಾಪದಬಲಿಯನ್ನೂ ದಹನಬಲಿಯನ್ನೂ ಅರ್ಪಿಸಿ, ನಿನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು; ಜನರ ಸಮರ್ಪಣೆಗಳನ್ನು ಸಮರ್ಪಿಸಿ ಅವರಿ ಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು ಅಂದನು. ಆದದರಿಂದ ಆರೋನನು ಯಜ್ಞವೇದಿಯ ಕಡೆಗೆ ಹೋಗಿ ತನಗಾಗಿ ಪಾಪದ ಬಲಿಯ ಕರುವನ್ನು ವಧಿಸಿದನು. ಆಗ ಆರೋನನ ಕುಮಾರರು ಅವನ ಬಳಿಗೆ ರಕ್ತವನ್ನು ತಂದರು; ಅವನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ಅದನ್ನು ಯಜ್ಞವೇದಿಯ ಕೊಂಬು ಗಳಿಗೆ ಹಚ್ಚಿದನು; ಉಳಿದ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ದನು. ಆದರೆ ಪಾಪದ ಬಲಿಯ ಕೊಬ್ಬು, ಮೂತ್ರಜನಕಾಂಗಗಳು ಕಲಿಜದ ಮೇಲಿನ ಪೊರೆ ಇವುಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿ ದ್ದಂತೆಯೇ ಅವನು ಯಜ್ಞವೇದಿಯ ಮೇಲೆ ಸುಟ್ಟನು. ಮಾಂಸವನ್ನೂ ಚರ್ಮವನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು. ಅವನು ದಹನ ಬಲಿಯನ್ನು ವಧಿಸಿದಾಗ ಆರೋನನ ಕುಮಾರರು ಅವನಿಗೆ ರಕ್ತವನ್ನು ತಂದು ಕೊಟ್ಟರು, ಅದನ್ನು ಅವನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು. ಅವರು ಅವನಿಗೆ ದಹನಬಲಿಯನ್ನೂ ಅವುಗಳ ತುಂಡುಗಳೊಂದಿಗೆ ತಲೆಯನ್ನೂ ತಂದುಕೊಡಲು ಅವನು ಅವುಗಳನ್ನು ಯಜ್ಞವೇದಿಯ ಮೇಲೆ ಸುಟ್ಟನು. ಅವನು ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ಯಜ್ಞವೇದಿಯ ಮೇಲಿನ ದಹನಬಲಿಯ ಮೇಲೆ ಸುಟ್ಟನು. ಅವನು ಜನರ ಬಲಿಯನ್ನು ತಂದು, ಮೇಕೆಯನ್ನು ತೆಗೆದುಕೊಂಡು, ಜನರಿಗಾಗಿ ಪಾಪ ಬಲಿಯಾಗಿರು ವದನ್ನು ವಧಿಸಿ, ಮೊದಲನೆಯದರ ಹಾಗೆ ಪಾಪಕ್ಕಾಗಿ ಅದನ್ನು ಸಮರ್ಪಿಸಿದನು. ಅವನು ದಹನಬಲಿ ಯನ್ನು ತಂದು ಕ್ರಮದ ಪ್ರಕಾರವೇ ಅದನ್ನು ಸಮರ್ಪಿಸಿದನು. ಅವನು ಆಹಾರ ಸಮರ್ಪಣೆ ಯನ್ನು ತಂದು ಅದರಲ್ಲಿ ಒಂದು ಹಿಡಿ ತೆಗೆದುಕೊಂಡು ಯಜ್ಞವೇದಿಯ ಮೇಲೆ ಬೆಳಗಿನ ದಹನಬಲಿಯ ಪಕ್ಕದಲ್ಲಿ ಅದನ್ನು ಸುಟ್ಟನು. ಅವನು ಜನರಿಗಾಗಿ ಹೋರಿಯನ್ನೂ ಟಗರನ್ನೂ ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು; ಆರೋನನ ಕುಮಾರರು ರಕ್ತವನ್ನು ಅವನ ಬಳಿಗೆ ತರಲು ಅವನು ಅದನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು. ಹೋರಿ ಟಗರಿನ ಕೊಬ್ಬನ್ನೂ ಹಿಂಭಾಗವನ್ನೂ ಕರುಳುಗಳನ್ನು ಮುಚ್ಚುವ ಮೂತ್ರಜನಕಾಂಗಗಳನ್ನೂ ಕಲಿಜದ ಮೇಲಿರುವ ಪೊರೆಯನ್ನೂ ಅವರು ಎದೆ ಭಾಗಗಳ ಮೇಲೆ ಕೊಬ್ಬನ್ನು ಇಟ್ಟಾಗ ಅವನು ಯಜ್ಞ ವೇದಿಯ ಮೇಲೆ ಸುಟ್ಟನು. ಮೋಶೆಯು ಆಜ್ಞಾಪಿಸಿ ದಂತೆ ಆರೋನನು ಎದೆಯ ಭಾಗಗಳನ್ನು ಬಲಭುಜ ವನ್ನು ಆಡಿಸಿ ಕರ್ತನ ಮುಂದೆ ಸಮರ್ಪಣೆಗಾಗಿ ಆಡಿಸಿದನು. ಆರೋನನು ಜನರ ಕಡೆಗೆ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿ ಪಾಪದ ಬಲಿಯನ್ನೂ ದಹನಬಲಿಯನ್ನೂ ಸಮಾಧಾನದ ಬಲಿಗಳನ್ನೂ ಸಮರ್ಪಿಸಿದ ಮೇಲೆ ಇಳಿದು ಬಂದನು. ಮೋಶೆಯೂ ಆರೋನನೂ ಸಭೆಯ ಗುಡಾರದ ಒಳಗೆ ಹೋಗಿ ಹೊರಗೆ ಬಂದು ಜನರನ್ನು ಆಶೀರ್ವ ದಿಸಿದರು; ಆಗ ಕರ್ತನ ಮಹಿಮೆಯು ಜನರೆಲ್ಲರಿಗೂ ಕಾಣಿಸಿತು.ಆಗ ಅಲ್ಲಿ ಕರ್ತನ ಸನ್ನಿಧಿಯಿಂದ ಬೆಂಕಿಯು ಬಂದು ಯಜ್ಞವೇದಿಯ ಮೇಲಿದ್ದ ದಹನ ಬಲಿಯನ್ನೂ ಕೊಬ್ಬನ್ನೂ ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿ ಆರ್ಭಟಿಸಿ ಅಡ್ಡಬಿದ್ದರು. ಆಗ ಅಲ್ಲಿ ಕರ್ತನ ಸನ್ನಿಧಿಯಿಂದ ಬೆಂಕಿಯು ಬಂದು ಯಜ್ಞವೇದಿಯ ಮೇಲಿದ್ದ ದಹನ ಬಲಿಯನ್ನೂ ಕೊಬ್ಬನ್ನೂ ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿ ಆರ್ಭಟಿಸಿ ಅಡ್ಡಬಿದ್ದರು.
- Exodus 29:1–35 ವಿಮೋಚನಕಾಂಡ 29:1–35ಅವರು ನನಗೆ ಯಾಜಕ ಸೇವೆಮಾಡು ವಂತೆ ಅವರನ್ನು ಶುದ್ಧಮಾಡುವ ಹಾಗೆ ನೀನು ಅವರಿಗೆ ಮಾಡಬೇಕಾದದ್ದೇನಂದರೆ--ಒಂದು ಹೋರಿಯನ್ನೂ ದೋಷವಿಲ್ಲದ ಎರಡು ಟಗರುಗಳನೂ ವಂತೆ ಅವರನ್ನು ಶುದ್ಧಮಾಡುವ ಹಾಗೆ ನೀನು ಅವರಿಗೆ ಮಾಡಬೇಕಾದದ್ದೇನಂದರೆ--ಒಂದು ಹೋರಿಯನ್ನೂ ದೋಷವಿಲ್ಲದ ಎರಡು ಟಗರುಗಳನೂ ಇವುಗಳನ್ನು ಒಂದೇ ಪುಟ್ಟಿಯಲ್ಲಿ ಇಟ್ಟು ಕೊಂಡು ಹೋರಿ ಮತ್ತು ಎರಡು ಟಗರುಗಳ ಸಂಗಡ ತಕ್ಕೊಂಡು ಬರಬೇಕು. ಆರೋನನನ್ನೂ ಅವನ ಕುಮಾರರನ್ನೂ ಸಭೆಯ ಗುಡಾರದ ಬಾಗಲಿನ ಬಳಿಗೆ ತಂದು ನೀರಿನಲ್ಲಿ ಅವರನ್ನು ತೊಳೆಯಬೇಕು. ತರು ವಾಯ ಆ ವಸ್ತ್ರಗಳನ್ನು ತಕ್ಕೊಂಡು ಆರೋನನಿಗೆ ಅಂಗಿಯನ್ನೂ ಎಫೋದಿನ ನಿಲುವಂಗಿಯನ್ನೂ ಎಫೋ ದನ್ನೂ ಎದೆಪದಕವನ್ನೂ ತೊಡಿಸಿ ಎಫೋದಿನ ವಿಚಿತ್ರ ವಾದ ನಡುಕಟ್ಟನ್ನು ಅವನಿಗೆ ಕಟ್ಟಿ ಅವನ ತಲೆಗೆ ಮುಂಡಾಸವನ್ನು ಇಟ್ಟು ಮುಂಡಾಸದ ಮೇಲೆ ಪರಿಶುದ್ಧ ಕಿರೀಟವನ್ನು ಇಟ್ಟು ಅಭಿಷೇಕಿಸುವ ಎಣ್ಣೆಯನ್ನು ತೆಗೆದು ಕೊಂಡು ಅವನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಬೇಕು. ನೀನು ಅವನ ಕುಮಾರರನ್ನು ಕರಕೊಂಡು ಬಂದು ಅವರಿಗೆ ಮೇಲಂಗಿಗಳನ್ನು ತೊಡಿಸಿ ಆರೋನನಿಗೂ ಅವನ ಕುಮಾರರಿಗೂ ನಡುಕಟ್ಟುಗಳನ್ನು ಕಟ್ಟಿ ಅವರಿಗೆ ಕುಲಾಯಿಗಳನ್ನು ಇಡಬೇಕು. ಹೀಗೆ ಅವರಿಗೆ ಯಾಜಕ ಸೇವೆಯು ಶಾಶ್ವತ ಕಟ್ಟಳೆಯಾಗಿರುವದು. ಆರೋನ ನನ್ನೂ ಅವನ ಕುಮಾರರನ್ನೂ ನೀನು ಪ್ರತಿಷ್ಠೆ ಮಾಡಬೇಕು. ಇದಲ್ಲದೆ ಆ ಹೋರಿಯನ್ನು ಸಭೆಯ ಗುಡಾರದ ಮುಂದೆ ತರಬೇಕು. ಆರೋನನೂ ಅವನ ಕುಮಾರರೂ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. ತರುವಾಯ ನೀನು ಆ ಹೋರಿಯನ್ನು ಕರ್ತನ ಮುಂದೆ ಸಭೆಯ ಗುಡಾರದ ಬಾಗಲಲ್ಲಿ ವಧಿಸಬೇಕು. ನೀನು ಹೋರಿಯ ರಕ್ತವನ್ನು ತೆಗೆದುಕೊಂಡು ನಿನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ರಕ್ತವನ್ನೆಲ್ಲಾ ಯಜ್ಞವೇದಿಯ ಅಡಿಯಲ್ಲಿ ಸುರಿಯಬೇಕು. ನೀನು ಕರುಳುಗಳನ್ನೂ ಅವುಗಳ ಮೇಲೆ ಇರುವ ಎಲ್ಲಾ ಕೊಬ್ಬನ್ನೂ ಕಲಿಜದ ಮೇಲೆ ಬರುವ ಕೊಬ್ಬನ್ನೂ ಎರಡು ಮೂತ್ರಜನಕಾಂಗಗಳನ್ನೂ ಅವುಗಳ ಮೇಲೆ ಇರುವ ಕೊಬ್ಬನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಡಬೇಕು. ಇದಲ್ಲದೆ ಹೋರಿಯ ಮಾಂಸ ವನ್ನೂ ಅದರ ಚರ್ಮವನ್ನೂ ಸಗಣಿಯನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಡಬೇಕು. ಅದು ಪಾಪದ ಬಲಿಯಾಗಿದೆ. ನೀನು ಒಂದು ಟಗರನ್ನು ಸಹ ತೆಗೆದುಕೊಳ್ಳ ಬೇಕು. ಆರೋನನೂ ಅವನ ಕುಮಾರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. ತರು ವಾಯ ಆ ಟಗರನ್ನು ನೀನು ವಧಿಸಿ ಅದರ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಬೇಕು. ಇದಲ್ಲದೆ ಆ ಟಗರನ್ನು ತುಂಡು ತುಂಡಾಗಿ ಕಡಿದು ಅದರ ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅದರ ತುಂಡುಗಳನ್ನು ತಲೆಯ ಸಂಗಡ ಇಡಬೇಕು. ಆ ಟಗರನ್ನು ಯಜ್ಞವೇದಿಯ ಮೇಲೆ ಸುಡಬೇಕು, ಅದು ಕರ್ತನಿಗೆ ದಹನಬಲಿಯಾಗಿದೆ. ಅದು ಕರ್ತನಿಗೆ ಸುವಾಸನೆಯ ದಹನಬಲಿಯಾಗಿದೆ. ಇನ್ನೊಂದು ಟಗರನ್ನು ನೀನು ತಂದಾಗ ಆರೋ ನನೂ ಅವನ ಕುಮಾರರೂ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. ತರುವಾಯ ನೀನು ಅದನ್ನು ವಧಿಸಿ ಅದರ ರಕ್ತವನ್ನು ಆರೋನನ ಮತ್ತು ಅವನ ಕುಮಾರರ ಬಲ ಕಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೂ ಹಚ್ಚಿ ಮಿಕ್ಕ ರಕ್ತವನ್ನು ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು. ಆರೋನನೂ ಅವನ ವಸ್ತ್ರಗಳೂ ಅವನೊಂದಿಗೆ ಅವನ ಕುಮಾರರೂ ಅವರ ವಸ್ತ್ರಗಳೂ ಪರಿಶುದ್ಧ ವಾಗುವ ಹಾಗೆ ಯಜ್ಞವೇದಿಯ ಮೇಲಿರುವ ರಕ್ತವನ್ನೂ ಅಭಿಷೇಕ ತೈಲವನ್ನೂ ತೆಗೆದುಕೊಂಡು ಆರೋನನ ಮೇಲೆಯೂ ಅವನ ವಸ್ತ್ರಗಳ ಮೇಲೆಯೂ ಅವನ ಕುಮಾರರ ಮೇಲೆಯೂ ಅವರ ವಸ್ತ್ರಗಳ ಮೇಲೆಯೂ ನೀನು ಚಿಮುಕಿಸಬೇಕು. ಇದಲ್ಲದೆ ಆ ಟಗರಿನ ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಕೊಬ್ಬನ್ನೂ ಕಲಿಜದ ಮೇಲಿ ರುವ ಪರೆಯನ್ನೂ ಮೂತ್ರಜನಕಾಂಗಗಳನ್ನೂ ಅವು ಗಳ ಮೇಲಿರುವ ಕೊಬ್ಬನ್ನೂ ಬಲ ತೊಡೆಯನ್ನೂ ತೆಗೆದುಕೊಳ್ಳಬೇಕು. ಯಾಕಂದರೆ ಅದು ಪ್ರತಿಷ್ಠೆಯ ಟಗರು. ಕರ್ತನ ಮುಂದಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಒಂದು ರೊಟ್ಟಿಯನ್ನೂ ಎಣ್ಣೆಯ ಒಂದು ಹೋಳಿಗೆಯನ್ನೂ ಒಂದು ಪೂರಿ ಯನ್ನೂ ನೀನು ತೆಗೆದುಕೊಂಡು ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಕುಮಾರರ ಕೈಗಳಿಗೆ ಕೊಟ್ಟು ಅವರು ಕರ್ತನ ಮುಂದೆ ಅದನ್ನು ತೂಗು ಅರ್ಪಣೆಗಾಗಿ ತೂಗಬೇಕು. ನೀನು ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಯಜ್ಞವೇದಿಯ ಮೇಲೆ ದಹನಬಲಿ ಯಾಗಿ ಕರ್ತನ ಮುಂದೆ ಸುವಾಸನೆಗೋಸ್ಕರ ದಹಿಸ ಬೇಕು. ಅದು ಕರ್ತನಿಗೆ ಬೆಂಕಿಯಿಂದ ಮಾಡಿದ ಅರ್ಪಣೆ. ಇದಲ್ಲದೆ ಆರೋನನು ಪ್ರತಿಷ್ಠೆಯ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ಕರ್ತನ ಮುಂದೆ ತೂಗು ಅರ್ಪಣೆಗಾಗಿ ತೂಗಬೇಕು. ಅದು ನಿನ್ನ ಪಾಲಾಗಿರುವದು. ನೀನು ಟಗರಿನ ಎದೆಯ ಭಾಗದ ಆಡಿಸುವ ಅರ್ಪಣೆಯನ್ನು ಎತ್ತಿದ ಬಲದ ಮುಂದೊ ಡೆಯನ್ನು ಆರೋನನ ಮತ್ತು ಅವನ ಕುಮಾರರ ಪ್ರತಿಷ್ಠೆಗಾಗಿ ಎತ್ತಿದ್ದನ್ನೂ ಪರಿಶುದ್ಧ ಮಾಡು. ಅದು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಮಕ್ಕಳಿಗೆ ನಿತ್ಯ ಕಟ್ಟಳೆಯಾಗಿರತಕ್ಕದ್ದು. ಯಾಕಂದರೆ ಅದು ಎತ್ತುವ ಅರ್ಪಣೆಯಾಗಿದೆ. ಇಸ್ರಾಯೇಲ್ ಮಕ್ಕಳಿಂದ ಎತ್ತುವ ಅರ್ಪಣೆಯೂ ಅವರ ಸಮಾ ಧಾನದ ಬಲಿಗಳ ಅರ್ಪಣೆಗಳಿಂದ ಅವರು ಕರ್ತನಿಗೆ ಎತ್ತುವ ಅರ್ಪಣೆಯೂ ಆಗಿರಬೇಕು. ಇದಲ್ಲದೆ ಆರೋನನಿಗೆ ಇದ್ದ ಪರಿಶುದ್ಧ ವಸ್ತ್ರಗಳು ಅವನ ತರುವಾಯ ಅವನ ಕುಮಾರರಿಗೆ ಆಗಬೇಕು. ಅವರು ಅವುಗಳನ್ನು ತೊಟ್ಟುಕೊಂಡು ಅಭಿಷೇಕಿಸಲ್ಪಟ್ಟು ಪ್ರತಿಷ್ಠಿಸಲ್ಪಡಬೇಕು. ಅವನ ಬದಲಾಗಿ ಅವನ ಮಗನು ಯಾಜಕತ್ವವನ್ನು ನಡಿಸಿ ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವಂತೆ ಬರುವದಕ್ಕಿರುವವನು ಅವುಗಳನ್ನು ಏಳು ದಿನಗಳ ವರೆಗೆ ತೊಟ್ಟುಕೊಳ್ಳಬೇಕು. ಪ್ರತಿಷ್ಠೆಯ ಟಗರನ್ನು ತೆಗೆದುಕೊಂಡು ನೀನು ಅದರ ಮಾಂಸವನ್ನು ಪರಿಶುದ್ಧ ಸ್ಥಳದಲ್ಲಿ ಬೇಯಿಸು. ಆರೋನನೂ ಅವನ ಕುಮಾರರೂ ಟಗರಿನ ಮಾಂಸ ವನ್ನೂ ಪುಟ್ಟಿಯಲ್ಲಿರುವ ರೊಟ್ಟಿಯನ್ನೂ ಸಭೆಯ ಗುಡಾ ರದ ಬಾಗಲಿನ ಬಳಿಯಲ್ಲಿ ಊಟಮಾಡಬೇಕು. ಅವ ರನ್ನು ಪ್ರತಿಷ್ಠೆಮಾಡುವದಕ್ಕೋಸ್ಕರ ಮತ್ತು ಪರಿಶುದ್ಧ ಮಾಡುವದಕ್ಕೋಸ್ಕರ ಅವರಿಗಾಗಿ ಪ್ರಾಯಶ್ಚಿತ್ತ ಮಾಡಿ ದವುಗಳನ್ನು ಅವರೇ ಊಟಮಾಡಬೇಕು. ಅನ್ಯರು ಅವುಗಳನ್ನು ಉಣ್ಣಬಾರದು, ಯಾಕಂದರೆ ಅವುಗಳು ಪರಿಶುದ್ಧವಾದವುಗಳು. ಪ್ರತಿಷ್ಠೆಯ ಮಾಂಸದ ಲ್ಲಿಯೂ ರೊಟ್ಟಿಯಲ್ಲಿಯೂ ಮರುದಿನದ ವರೆಗೆ ಏನಾದರೂ ಮಿಕ್ಕಿದ್ದರೆ ಅದನ್ನು ಬೆಂಕಿಯಿಂದ ಸುಡ ಬೇಕು. ಅದು ಪರಿಶುದ್ಧವಾಗಿರುವದರಿಂದ ಅದನ್ನು ಊಟ ಮಾಡಬಾರದು. ಹೀಗೆ ಆರೋನನಿಗೂ ಅವನ ಕುಮಾರರಿಗೂ ನಾನು ನಿನಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರ ನಡಿಸಿ ಏಳು ದಿವಸ ಅವರನ್ನು ಪ್ರತಿಷ್ಠೆಮಾಡಬೇಕು.
- Isaiah 61:1–3 ಯೆಶಾಯ 61:1–3ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.
- Galatians 4:4 ಗಲಾತ್ಯದವರಿಗೆ 4:4ಆದರೆ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಸ್ತ್ರೀಯಿಂದ ಹುಟ್ಟಿದವನನ್ನಾಗಿಯೂ ನ್ಯಾಯ ಪ್ರಮಾಣಕ್ಕೆ ಒಳಗಾದವನನ್ನಾಗಿಯೂ ಮಾಡಿ ಕಳುಹಿಸಿದ್ದಲ್ಲದೆ
- Matthew 3:16 ಮತ್ತಾಯನು 3:16ಯೇಸು ಬಾಪ್ತಿಸ್ಮ ಮಾಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದ ಕೂಡಲೆ ಇಗೋ, ಆತನಿಗೆ ಆಕಾಶಗಳು ತೆರೆಯಲ್ಪಟ್ಟು ದೇವರ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದುಬರುವದನ್ನು ಆತನು ಕಂಡನು.ಆಗ--ಇಗೋ, ಈತನು ಪ್ರಿಯ ನಾಗಿರುವ ನನ್ನ ಮಗನು; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು.
- Romans 8:3 ರೋಮಾಪುರದವರಿಗೆ 8:3ನ್ಯಾಯಪ್ರಮಾಣವು ಶರೀರದ ಮೂಲಕ ನಿರ್ಬಲವಾಗಿ ಯಾವದನ್ನು ಮಾಡಲಾರದೆ ಇತ್ತೋ ಅದನ್ನು ದೇವರೇ ಮಾಡಿದನು; ಹೇಗಂದರೆ ಆತನು ತನ್ನ ಸ್ವಂತ ಮಗನನ್ನು ಪಾಪಶರೀರದ ಹೋಲಿಕೆ ಯಲ್ಲಿ ಕಳುಹಿಸಿ ಪಾಪಕ್ಕಾಗಿ ಆ ಶರೀರದಲ್ಲಿಯೇ ಪಾಪವನ್ನು ದಂಡಿಸಿದನು.
- Isaiah 11:1–5 ಯೆಶಾಯ 11:1–5ಇಷಯನ ಬುಡದಿಂದ ಒಂದು ಕೊಂಬೆ ಒಡೆಯುವದು ಅದರ ಬೇರಿನಿಂದ ಕೊಂಬೆ ಯು ಬೆಳೆಯುವದು. ಅವನ ಮೇಲೆ ಜ್ಞಾನ ವಿವೇಕ ದಾಯಕ ಆತ್ಮ, ಆಲೋಚನಾ ಪರಾಕ್ರಮದ ಆತ್ಮ,ತಿಳುವಳಿಕೆಯ ಆತ್ಮ ಕರ್ತನ ಭಯದ ಆತ್ಮ, ಅಂತೂ ಕರ್ತನ ಆತ್ಮನು ನೆಲೆಯಾಗುವನು; ಕರ್ತನ ಭಯ ದಲ್ಲಿ ಅವನಿಗೆ ಸೂಕ್ಷ್ಮ ತಿಳುವಳಿಕೆಯು ಉಂಟಾ ಗುವದು; ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡು ವದಿಲ್ಲ, ಇಲ್ಲವೆ ತನ್ನ ಕಿವಿಗಳ ಕೇಳ್ವಿಕೆಯ ಪ್ರಕಾರ ತೀರ್ಪುಮಾಡನು; ಆದರೆ ಬಡವರಿಗೆ ನೀತಿಯಿಂದ ನ್ಯಾಯತೀರಿಸುವನು; ಭೂಮಿಯ ದೀನರಿಗೆ ನ್ಯಾಯ ವಾಗಿ ತೀರ್ಪುಮಾಡುವನು; ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ಹೊಡೆಯುವನು, ತನ್ನ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವನು. ನೀತಿಯೇ ಅವನಿಗೆ ನಡುಕಟ್ಟು, ನಂಬಿಗಸ್ತಿಕೆಯು ಅವನ ಸೊಂಟದ ಪಟ್ಟಿ.
- John 3:34 ಯೋಹಾನನು 3:34ದೇವರು ಕಳುಹಿಸಿದಾತನು ದೇವರ ಮಾತುಗಳನ್ನೇ ಆಡುತ್ತಾನೆ; ದೇವರು ಆತನಿಗೆ ಆತ್ಮನನ್ನು ಅಳತೆ ಮಾಡದೆ ಕೊಡುತ್ತಾನೆ.
- Luke 1:35 ಲೂಕನು 1:35ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿ ಆಕೆಗೆ--ಪವಿತ್ರಾತ್ಮನು ನಿನ್ನ ಮೇಲೆ ಬರುವನು, ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸಿ ಕೊಳ್ಳುವದು; ಆದದರಿಂದ ನಿನ್ನಿಂದ ಹುಟ್ಟುವ ಆ ಪವಿತ್ರವಾದ ಶಿಶುವು ದೇವರ ಮಗನೆಂದು ಕರೆಯ ಲ್ಪಡುವನು.