Ezekiel · chapter 11 · verse 3
Ezekiel 11:3 in Kannada
ಅದು ಸವಿಾಪವಲ್ಲ, ಮನೆಗ ಳನ್ನು ಕಟ್ಟೋಣ; ಈ ಪಟ್ಟಣವು ಅಂಡೆ, ನಾವು ಮಾಂಸವು ಎನ್ನುತ್ತಾರೆ.
Adu saviాpavalla, manega lannu kattona; ee pattanavu ande, naavu maansavu ennuttaare.
Ezekiel 11:3 in English
- King James Version (KJV)
- Which say, [It is] not near; let us build houses: this [city is] the caldron, and we [be] the flesh.
- World English Bible (WEB)
- who say, ‘The time is not near to build houses. This is the cauldron, and we are the meat.’
- American Standard Version (ASV)
- that say, [The time] is not near to build houses: this [city] is the caldron, and we are the flesh.
- Bible in Basic English (BBE)
- Who say, This is not the time for building houses: this town is the cooking-pot and we are the flesh.
- Darby Translation (DBY)
- who say, It is not the time to build houses: this is the cauldron, and we are the flesh.
- Webster's Bible (WBS)
- Who say, [It is] not near; let us build houses: this [city is] the caldron, and we [are] the flesh.
- Young's Literal Translation (YLT)
- who are saying, It [is] not near — to build houses, it [is] the pot, and we the flesh.
Read in context
- 1ಇದಲ್ಲದೆ ಆತ್ಮನು ನನ್ನನ್ನು ಎತ್ತಿ ಕರ್ತನ ಆಲಯದ ಪೂರ್ವಬಾಗಲಿಗೆ ಮೂಡಣದಿಕ್ಕಿಗೆ ಅಭಿಮುಖವಾಗಿರುವ ಕಡೆಗೆ ತೆಗೆದುಕೊಂಡು ಹೋದನು. ಆಗ ಇಗೋ, ಬಾಗಲಿನ ಮುಂದೆ ಇಪ್ಪತ್ತೈದು ಮಂದಿ ಮನುಷ್ಯರು; ಅವರೊಳಗೆ ನಾನು ಜನರ ಪ್ರಧಾನರಾದ ಅಜ್ಜೂರನ ಮಗನಾದ ಯಾಜನ್ಯ ನನ್ನೂ ಬೆನಾಯನ ಮಗನಾದ ಪೆಲತ್ಯನನ್ನೂ ನೋಡಿ ದೆನು.
- 2ಆಮೇಲೆ ಆತನು ನನಗೆ ಹೇಳಿದ್ದೇನಂದರೆ --ಮನುಷ್ಯಪುತ್ರನೇ, ಈ ಪಟ್ಟಣದಲ್ಲಿ ಕುತಂತ್ರಗ ಳನ್ನು ಕಲ್ಪಿಸಿ ದುರಾಲೋಚನೆಗಳನ್ನು ಹೇಳಿ ಕೊಡುವ ವರಾದ ಈ ಜನರು--
- 3ಅದು ಸವಿಾಪವಲ್ಲ, ಮನೆಗ ಳನ್ನು ಕಟ್ಟೋಣ; ಈ ಪಟ್ಟಣವು ಅಂಡೆ, ನಾವು ಮಾಂಸವು ಎನ್ನುತ್ತಾರೆ.
- 4ಆದದರಿಂದ ಓ ಮನುಷ್ಯ ಪುತ್ರನೇ, ಅವರಿಗೆ ವಿರೋಧವಾಗಿ ಪ್ರವಾದಿಸು.
- 5ಕರ್ತನ ಆತ್ಮನು ನನ್ನ ಮೇಲೆ ಬಂದು ನನಗೆ ಹೇಳಿದ್ದೇನಂದರೆ--ಮಾತನಾಡು; ಕರ್ತನು--ಇಸ್ರಾ ಯೇಲಿನ ಮನೆತನದವರೇ, ನೀವು ಹೀಗೆ ಹೇಳಿದ್ದೀರಿ. ಯಾಕಂದರೆ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಎಲ್ಲವುಗಳನ್ನೂ ನಾನು ಬಲ್ಲೆನು.
Cross references
- Ezekiel 12:22 ಯೆಹೆಜ್ಕೇಲನು 12:22ಮನುಷ್ಯಪುತ್ರನೇ, ದಿನಗಳು ಬಹಳವಾ ಗುತ್ತಿವೆ; ಪ್ರತಿ ದರ್ಶನವು ತಪ್ಪುತ್ತದೆ ಎಂದು ಇಸ್ರಾ ಯೇಲ್ ದೇಶದಲ್ಲಿ ಹೇಳಿಕೊಳ್ಳುವ ಆ ಗಾದೆ ಏನು?
- Ezekiel 12:27 ಯೆಹೆಜ್ಕೇಲನು 12:27ಮನುಷ್ಯಪುತ್ರನೇ, ಇಗೋ, ಇಸ್ರಾಯೇಲಿನ ಮನೆತನದವರು--ಇವನಿಗಾದ ದರ್ಶನವು ಬಹು ದೂರ ಕಾಲಕ್ಕೆ ಸಂಬಂಧಿಸಿದ್ದು, ದೂರ ಕಾಲವನ್ನು ಕುರಿತು ಪ್ರವಾದಿಸುತ್ತಾನೆಂದು ಹೇಳುತ್ತಾರೆ.ಆದದರಿಂದ ಅವರು ಹೀಗೆ ಹೇಳುವರೆಂದು ದೇವರಾದ ಕರ್ತನು ಹೇಳುತ್ತಾನೆ; ನನ್ನ ಮಾತುಗಳಲ್ಲಿ ಒಂದಾದರೂ ಇನ್ನು ಮೇಲೆ ದೂರವಾಗುವದಿಲ್ಲ; ನಾನು ಆಡಿದ ಮಾತು ನಡಿಸಲ್ಪಡುವದೆಂದು ದೇವರಾದ ಕರ್ತನು ಹೇಳುತ್ತಾನೆ.
- Isaiah 5:19 ಯೆಶಾಯ 5:19ನಾವು ಆತನ ಕೆಲಸವನ್ನು ನೋಡುವಂತೆ ಆತನು ತ್ವರೆಯಾಗಿ ಅದನ್ನು ಬೇಗನೆ ಮಾಡಲಿ; ನಾವು ಇಸ್ರಾ ಯೇಲಿನ ಪರಿಶುದ್ಧನ ಆಲೋಚನೆಯನ್ನು ತಿಳುಕೊ ಳ್ಳುವ ಹಾಗೆ ಅದು ಸವಿಾಪಿಸಿ ಬರಲಿ ಎಂದು ಹೇಳು ವವರಿಗೆ ಅಯ್ಯೋ!
- Ezekiel 24:3–14 ಯೆಹೆಜ್ಕೇಲನು 24:3–14ತಿರುಗಿ ಬೀಳುವ ಮನೆತನ ದವರಿಗೆ ಸಾಮ್ಯವನ್ನು ತಿಳಿಸಿ ಅವರಿಗೆ ಹೇಳಬೇಕಾದದ್ದೇ ನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಹಂಡೆಯನ್ನು ಒಲೆಯ ಮೇಲಿಡು, ಅದರಲ್ಲಿ ನೀರನ್ನು ಸುರಿ. ತೊಡೆಯನ್ನೂ ಹೆಗಲನ್ನೂ ಎಲ್ಲಾ ಒಳ್ಳೇ ತುಂಡುಗಳನ್ನೂ ಒಟ್ಟಿಗೆ ಸೇರಿಸಿ ಒಳ್ಳೆ ಎಲುಬುಗಳ ಜೊತೆ ಅದನ್ನು ತುಂಬಿಸಿ; ಹಿಂಡಿನಲ್ಲಿ ಶ್ರೇಷ್ಠವಾದ ದ್ದನ್ನು ತೆಗೆದುಕೊಂಡು ಎಲುಬಿನ ರಾಶಿಯನ್ನೂ ಅದರ ಕೆಳಗೆ ಇಟ್ಟು ಅದನ್ನು ಚೆನ್ನಾಗಿ ಕುದಿಸು; ಆ ಎಲುಬುಗಳೂ ಅದರಲ್ಲಿ ಚೆನ್ನಾಗಿ ಬೇಯಲಿ. ಆದಕಾರಣ ದೇವರಾದ ಕರ್ತನು ಹೀಗೆ ಹೇಳು ತ್ತಾನೆ; ರಕ್ತಮಯವಾದ ಆ ಪಟ್ಟಣಕ್ಕೆ ಅಯ್ಯೋ! ಯಾವದರ ಕಲ್ಮಶವು ಹೊರಗೆ ಬಾರದೆ ಅದರಲ್ಲಿ ಉಳಿದಿರುವದೋ ಆ ಹಂಡೆಗೆ ಅಯ್ಯೋ, ಅದರಿಂದ ತುಂಡು ತುಂಡಾಗಿ ಹೊರಗೆ ತೆಗೆ; ಆಯ್ಕೆಯ ಚೀಟಿಯು ಅದರ ಮೇಲೆ ಬೀಳದಿರಲಿ. ಅದರ ರಕ್ತವು ಅದರ ಮಧ್ಯದಲ್ಲಿದೆ; ಅದು ಅದನ್ನು ಬಂಡೆಯ ತುದಿಯಲ್ಲಿ ಇಟ್ಟಿದೆ; ದೂಳು ಮುಚ್ಚುವ ಹಾಗೆ ನೆಲದ ಮೇಲೆ ಚೆಲ್ಲಲಿಲ್ಲ; ಮುಯ್ಯಿಗೆಮುಯ್ಯಿ ತೀರಿಸುವದಕ್ಕೆ ರೋಷ ವನ್ನೆಬ್ಬಿಸುವ ಹಾಗೆ ನಾನು ಅದರ ರಕ್ತಾಪರಾಧವನ್ನು ಮುಚ್ಚಿಬಿಡದಂತೆ ಬಂಡೆಯ ತುದಿಯ ಮೇಲೆ ಇಟ್ಟಿ ದ್ದೇನೆ; ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಆ ರಕ್ತಾಪರಾಧವುಳ್ಳ ಪಟ್ಟಣವು ಹಾಳಾ ಗಲಿ, ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು. ಬಹಳ ಸೌದೆ ಹಾಕಿ, ಬೆಂಕಿಯನ್ನು ಹೆಚ್ಚಿಸಿ, ಮಾಂಸ ವನ್ನು ಬೇಯಿಸು; ಮಸಾಲೆ ಚೆನ್ನಾಗಿ ಇರಲಿ, ಮತ್ತು ಎಲುಬುಗಳು ಸುಡಲಿ. ಆಮೇಲೆ ಅದರ ಹಿತ್ತಾಳೆ ಬಿಸಿಯಾಗಿ ಮೈಲಿಗೆ ಕರಗಿ ಕಲ್ಮಶವು ಹೋಗುವ ಹಾಗೆ ಅದನ್ನು ಬರಿದು ಮಾಡಿ ಕೆಂಡಗಳ ಮೇಲೆ ಇಡು. ಅದರ ಕಲ್ಮಶವು ಆಯಾಸವನ್ನುಂಟು ಮಾಡಿತೇ ಹೊರತು ಅದಕ್ಕೆ ಹತ್ತಿದ್ದ ಆ ಬಹಳವಾದ ಕಿಲುಬು ಹೋಗಲಿಲ್ಲ, ಅದು ಬೆಂಕಿಯಲ್ಲಿರಲಿ; ನಿನ್ನ ಅಶುದ್ಧ ತ್ವವು ದುಷ್ಕರ್ಮವುಳ್ಳದ್ದು; ನಾನು ನಿನ್ನನ್ನು ಪರಿಶುದ್ಧ ಮಾಡಿದರೂ ನೀನು ಶುದ್ಧವಾಗದ ಕಾರಣ ನಾನು ನನ್ನ ರೋಷವನ್ನು ನಿನ್ನ ಮೇಲೆ ಕಳುಹಿಸುವಷ್ಟು ಕಾಲದ ವರೆಗೂ ಇನ್ನು ಮೇಲೆ ನೀನು ನಿನ್ನ ಅಪವಿತ್ರತ್ವದಿಂದ ಇನ್ನು ಶುದ್ಧವಾಗುವದಿಲ್ಲ. ಕರ್ತನಾದ ನಾನೇ ಅದನ್ನು ಹೇಳಿದ್ದೇನೆ, ಅದು ನಡೆಯುವದು; ನಾನು ಅದನ್ನು ಮಾಡದೆ ಬಿಡುವದಿಲ್ಲ; ಕಟಾಕ್ಷ ತೋರಿಸು ವದಿಲ್ಲ; ಪಶ್ಚಾತ್ತಾಪಪಡುವದಿಲ್ಲ. ನಿನ್ನ ಮಾರ್ಗಗಳ ಪ್ರಕಾರವೂ ನಿನ್ನ ಕ್ರಿಯೆಗಳ ಪ್ರಕಾರವೂ ನಿನಗೆ ನ್ಯಾಯ ತೀರಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
- Amos 6:5 ಆಮೋಸ 6:5ವೀಣೆಯ ಸ್ವರಕ್ಕೆ ಹಾಡುತ್ತಾರೆ; ದಾವೀದನ ಹಾಗೆ ತಮಗೆ ತಾವೇ ಗಾನ ವಾದ್ಯಗಳನ್ನು ಕಲ್ಪಿಸಿಕೊಳ್ಳು ತ್ತಾರೆ.
- 2 Peter 3:4 2 ಪೇತ್ರನು 3:4ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆ ಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳ ಬೇಕು.
- Ezekiel 11:7–11 ಯೆಹೆಜ್ಕೇಲನು 11:7–11ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವು ಅದರ ಮಧ್ಯದಲ್ಲಿ ಇಟ್ಟಿರುವ ಹತರಾದವರು ಅವರೇ ಮಾಂಸವಾಗಿದ್ದಾರೆ, ಈ ಪಟ್ಟಣವು ಹಂಡೆಯಾಗಿದೆ. ಆದರೆ ನಾನು ನಿಮ್ಮನ್ನು ಆದರಿಂದ ಹೊರಗೆ ತರುತ್ತೇನೆ. ನೀವು ಕತ್ತಿಗೆ ಭಯಪಟ್ಟಿರಿ; ನಾನು ನಿಮ್ಮ ಮೇಲೆ ಒಂದು ಕತ್ತಿ ಯನ್ನು ತರುತ್ತೇನೆ ಎಂದು ದೇವರಾದ ಕರ್ತನು ಹೇಳುತ್ತಾನೆ. ನಾನು ನಿಮ್ಮನ್ನು ಅದರ ಮಧ್ಯದಿಂದ ಹೊರಗೆ ತೆಗೆದು ನಿಮ್ಮನ್ನು ಪರಕೀಯರ ಕೈಗಳಿಗೆ ಒಪ್ಪಿಸುವೆನು ಮತ್ತು ನಿಮ್ಮಲ್ಲಿ ನ್ಯಾಯ ತೀರ್ಪುಗಳನ್ನು ನಡಿಸುವೆನು. ನೀವು ಕತ್ತಿಯ ಮೂಲಕ ಬೀಳುವಿರಿ; ನಾನು ನಿಮ್ಮ ಇಸ್ರಾಯೇಲಿನ ಮೇರೆಯಲ್ಲಿ ನ್ಯಾಯತೀರಿಸುವೆನು; ಆಗ ನಾನೇ ಕರ್ತನೆಂದು ನಿಮಗೆ ತಿಳಿಯುವದು. ಈ ಪಟ್ಟಣವು ನಿಮ್ಮ ಹಂಡೆ ಯಾಗುವದಿಲ್ಲ, ನೀವು ಅದರ ಮಧ್ಯದಲ್ಲಿ ಮಾಂಸ ವಾಗುವದಿಲ್ಲ; ಆದರೆ ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ನ್ಯಾಯತೀರಿ ಸುವೆನು.
- Ezekiel 7:7 ಯೆಹೆಜ್ಕೇಲನು 7:7ಓ ದೇಶದಲ್ಲಿ ವಾಸಿಸುವವನೇ, ನಿನಗಾಗಿ ಮುಂಜಾನೆ ಬಂತು, ಕಾಲವು ಬಂತು, ತೊಂದರೆಯ ದಿನವು ಹತ್ತಿರವಾಯಿತು ಮತ್ತು ಪರ್ವತಗಳ ಆರ್ಭಟದ ಧ್ವನಿ ಇಲ್ಲ.
- Jeremiah 1:11–13 ಯೆರೆಮೀಯ 1:11–13ಇದಲ್ಲದೆ ಕರ್ತನ ವಾಕ್ಯವು ನನಗೆ--ಯೆರೆವಿಾ ಯನೇ, ನೀನು ಏನು ನೋಡುತ್ತೀ ಎಂದು ಕೇಳಿದ್ದಕ್ಕೆ ನಾನು--ಬಾದಾಮಿ ಮರದ ಕೋಲನ್ನು ನೋಡುತ್ತೇನೆ ಅಂದೆನು. ಆಗ ಕರ್ತನು ನನಗೆ--ನೀನು ಚೆನ್ನಾಗಿ ನೋಡಿದ್ದೀ; ನನ್ನ ವಾಕ್ಯವನ್ನು ನೆರವೇರಿಸಲು ತ್ವರೆಪಡುವೆನು ಅಂದನು. ಎರಡನೇ ಸಾರಿ ಕರ್ತನ ವಾಕ್ಯವು ನನಗೆ ಉಂಟಾಗಿ--ನೀನು ಏನು ನೋಡುತ್ತೀ ಎಂದು ಕೇಳಿದ್ದಕ್ಕೆ ನಾನು--ಬೇಯುವ ಮಡಿಕೆಯನ್ನು ನೋಡುತ್ತೇನೆ; ಅದರ ಬಾಯಿ ಉತ್ತರದ ಕಡೆಗೆ ಇದೆ ಅಂದೆನು.