Ezekiel · chapter 12 · verse 22
Ezekiel 12:22 in Kannada
ಮನುಷ್ಯಪುತ್ರನೇ, ದಿನಗಳು ಬಹಳವಾ ಗುತ್ತಿವೆ; ಪ್ರತಿ ದರ್ಶನವು ತಪ್ಪುತ್ತದೆ ಎಂದು ಇಸ್ರಾ ಯೇಲ್ ದೇಶದಲ್ಲಿ ಹೇಳಿಕೊಳ್ಳುವ ಆ ಗಾದೆ ಏನು?
Manushyaputrane, dinagalu bahalavaa guttive; prati darshanavu tapputtade endu israa yel deshadalli helikolluva aa gaade enu?
Ezekiel 12:22 in English
- King James Version (KJV)
- Son of man, what [is] that proverb [that] ye have in the land of Israel, saying, The days are prolonged, and every vision faileth?
- World English Bible (WEB)
- “Son of man, what is this proverb that you have in the land of Israel, saying, ‘The days are prolonged, and every vision fails’?
- American Standard Version (ASV)
- Son of man, what is this proverb that ye have in the land of Israel, saying, The days are prolonged, and every vision faileth?
- Bible in Basic English (BBE)
- Son of man, what is this saying which you have about the land of Israel, The time is long and every vision comes to nothing?
- Darby Translation (DBY)
- Son of man, what is that proverb which ye have in the land of Israel, saying, The days shall be prolonged, and every vision faileth?
- Webster's Bible (WBS)
- Son of man, what [is] that proverb [that] ye have in the land of Israel, saying, The days are prolonged, and every vision faileth?
- Young's Literal Translation (YLT)
- 'Son of man, what [is] this simile to you, concerning the land of Israel, saying, Prolonged are the days, and perished hath every vision?
Read in context
- 20ನಿವಾಸಿಗಳುಳ್ಳ ಪಟ್ಟಣಗಳು ಹಾಳಾಗುವವು. ದೇಶವು ನಿರ್ಜನವಾಗುವದು; ಆಗ ನಾನೇ ಕರ್ತ ನೆಂದು ನೀವು ತಿಳಿಯುವಿರಿ.
- 21ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇ ನಂದರೆ--
- 22ಮನುಷ್ಯಪುತ್ರನೇ, ದಿನಗಳು ಬಹಳವಾ ಗುತ್ತಿವೆ; ಪ್ರತಿ ದರ್ಶನವು ತಪ್ಪುತ್ತದೆ ಎಂದು ಇಸ್ರಾ ಯೇಲ್ ದೇಶದಲ್ಲಿ ಹೇಳಿಕೊಳ್ಳುವ ಆ ಗಾದೆ ಏನು?
- 23ಆದದರಿಂದ ಅವರಿಗೆ ಹೀಗೆ ಹೇಳು ದೇವರಾದ ಕರ್ತನು ಹೇಳುವದೇನಂದರೆ--ನಾನು ಈ ಗಾದೆ ಯನ್ನು ನಿಲ್ಲಿಸುತ್ತೇನೆ, ಅದನ್ನು ಇನ್ನು ಮೇಲೆ ಇಸ್ರಾ ಯೇಲಿನಲ್ಲಿ ಗಾದೆಯಂತೆ ಉಪಯೋಗಿಸುವದಿಲ್ಲ; ದಿನಗಳು ಹತ್ತಿರವಾಗಿವೆ ಪ್ರತಿ ದರ್ಶನವು ಸವಿಾಪ ವಾಗಿದೆ ಎಂದು ಅವರಿಗೆ ಹೇಳು.
- 24ಇಸ್ರಾಯೇಲಿನ ಮನೆತನದವರೊಳಗೆ ಇನ್ನು ಮೇಲೆ ಯಾವ ವ್ಯರ್ಥ ದರ್ಶನವೂ ಮೋಸದ ಶಕುನವೂ ಇರುವದಿಲ್ಲ.
Cross references
- Ezekiel 18:2–3 ಯೆಹೆಜ್ಕೇಲನು 18:2–3ತಂದೆಗಳು ಹುಳಿ ದ್ರಾಕ್ಷೆಗಳನ್ನು ತಿಂದರು ಮಕ್ಕಳ ಹಲ್ಲು ಉಳಿತು ಹೋಯಿತು ಎಂಬ ಗಾದೆಯನ್ನು ಇಸ್ರಾಯೇಲ್ ದೇಶದ ವಿಷಯವಾಗಿ ನೀವು ಉಪಯೋಗಿಸುವ ಇದರ ಅರ್ಥವೇನು? ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಾಯೇಲಿನಲ್ಲಿ ಇನ್ನು ಹೇಳುವ ಸಂದರ್ಭವು ಇರುವದಿಲ್ಲ.
- Ezekiel 11:3 ಯೆಹೆಜ್ಕೇಲನು 11:3ಅದು ಸವಿಾಪವಲ್ಲ, ಮನೆಗ ಳನ್ನು ಕಟ್ಟೋಣ; ಈ ಪಟ್ಟಣವು ಅಂಡೆ, ನಾವು ಮಾಂಸವು ಎನ್ನುತ್ತಾರೆ.
- Ezekiel 12:27 ಯೆಹೆಜ್ಕೇಲನು 12:27ಮನುಷ್ಯಪುತ್ರನೇ, ಇಗೋ, ಇಸ್ರಾಯೇಲಿನ ಮನೆತನದವರು--ಇವನಿಗಾದ ದರ್ಶನವು ಬಹು ದೂರ ಕಾಲಕ್ಕೆ ಸಂಬಂಧಿಸಿದ್ದು, ದೂರ ಕಾಲವನ್ನು ಕುರಿತು ಪ್ರವಾದಿಸುತ್ತಾನೆಂದು ಹೇಳುತ್ತಾರೆ.ಆದದರಿಂದ ಅವರು ಹೀಗೆ ಹೇಳುವರೆಂದು ದೇವರಾದ ಕರ್ತನು ಹೇಳುತ್ತಾನೆ; ನನ್ನ ಮಾತುಗಳಲ್ಲಿ ಒಂದಾದರೂ ಇನ್ನು ಮೇಲೆ ದೂರವಾಗುವದಿಲ್ಲ; ನಾನು ಆಡಿದ ಮಾತು ನಡಿಸಲ್ಪಡುವದೆಂದು ದೇವರಾದ ಕರ್ತನು ಹೇಳುತ್ತಾನೆ.
- 2 Peter 3:3–4 2 ಪೇತ್ರನು 3:3–4ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು-- ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆ ಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳ ಬೇಕು.
- Isaiah 5:19 ಯೆಶಾಯ 5:19ನಾವು ಆತನ ಕೆಲಸವನ್ನು ನೋಡುವಂತೆ ಆತನು ತ್ವರೆಯಾಗಿ ಅದನ್ನು ಬೇಗನೆ ಮಾಡಲಿ; ನಾವು ಇಸ್ರಾ ಯೇಲಿನ ಪರಿಶುದ್ಧನ ಆಲೋಚನೆಯನ್ನು ತಿಳುಕೊ ಳ್ಳುವ ಹಾಗೆ ಅದು ಸವಿಾಪಿಸಿ ಬರಲಿ ಎಂದು ಹೇಳು ವವರಿಗೆ ಅಯ್ಯೋ!
- Jeremiah 23:33–40 ಯೆರೆಮೀಯ 23:33–40ಇದಲ್ಲದೆ ಈ ಜನರಾಗಲಿ ಪ್ರವಾದಿಯಾಗಲಿ ಯಾಜಕನಾಗಲಿ ಕರ್ತನ ಭಾರವೇನೆಂದು ನಿನ್ನನ್ನು ಕೇಳುವಾಗ ನೀನು ಅವರಿಗೆ--ಏನು ಭಾರ? ನಾನು ನಿಮ್ಮನ್ನು ತಳ್ಳಿಬಿಡುವೆನೆಂದು ಕರ್ತನು ಅನ್ನುತ್ತಾನೆಂದು ಹೇಳಬೇಕು. ಕರ್ತನ ಭಾರವೆಂದೆನ್ನುವ ಪ್ರವಾದಿ ಯಾಗಲಿ ಯಾಜಕನಾಗಲಿ ಜನರಾಗಲಿ ಅವರ ವಿಷಯ ವೇನಂದರೆ--ನಾನು ಅಂಥಾ ಮನುಷ್ಯನನ್ನೂ ಅವನ ಮನೆಯನ್ನೂ ಶಿಕ್ಷಿಸುವೆನು. ನೀವು ನಿಮ್ಮ ನಿಮ್ಮ ನೆರೆಯವರಿಗೂ ನಿಮ್ಮ ನಿಮ್ಮ ಸಹೋದರರಿಗೂ--ಕರ್ತನು ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು. ಆದರೆ ಕರ್ತನ ಭಾರವನ್ನು ಇನ್ನು ಎಂದಿಗೂ ನುಡಿಯುವದಿಲ್ಲ; ಒಬ್ಬೊ ಬ್ಬನಿಗೆ ತನ್ನ ನುಡಿಯೇ ಭಾರವಾಗುವದು; ನೀವು ಜೀವವುಳ್ಳ ದೇವರ ವಾಕ್ಯಗಳನ್ನು ಅಂದರೆ ನಮ್ಮ ದೇವರಾದ ಸೈನ್ಯಗಳ ಕರ್ತನ ವಾಕ್ಯಗಳನ್ನೇ ಮಾರ್ಪಡಿ ಸಿದ್ದೀರಿ. ನೀನು ಪ್ರವಾದಿಗೆ--ಕರ್ತನು ನಿನಗೆ ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು. ಆದರೆ ನೀವು--ಕರ್ತನ ಭಾರವೆಂದು ಹೇಳುತ್ತಿದ್ದೀರಿ. ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಕರ್ತನ ಭಾರವೆಂದು ನೀವು ಹೇಳಬಾರದೆಂಬದಾಗಿ ನಾನು ನಿಮಗೆ ಹೇಳಿ ಕಳುಹಿ ಸಿದ ಮೇಲೆ ಕರ್ತನ ಭಾರವೆಂಬ ಈ ಮಾತನ್ನು ನೀವು ಹೇಳುವದರಿಂದ ಕರ್ತನು ಹೀಗೆ ಹೇಳು ತ್ತಾನೆ--ನಾನು ಇಗೋ, ನಾನೇ ನಿಮ್ಮನ್ನು ಪೂರ್ಣವಾಗಿ ಮರೆತುಬಿಡುವೆನು; ನಿಮ್ಮನ್ನು ನಿಮಗೂ ನಿಮ್ಮ ತಂದೆ ಗಳಿಗೂ ಕೊಟ್ಟ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತಳ್ಳಿಬಿಡುವೆನು.ಮರೆತು ಹೋಗಲಾರದ ನಿತ್ಯವಾದ ನಿಂದೆಯನ್ನೂ ನಿತ್ಯವಾದ ಅವಮಾನವನ್ನೂ ನಿನ್ನ ಮೇಲೆ ಬರಮಾಡುತ್ತೇನೆ. ಮರೆತು ಹೋಗಲಾರದ ನಿತ್ಯವಾದ ನಿಂದೆಯನ್ನೂ ನಿತ್ಯವಾದ ಅವಮಾನವನ್ನೂ ನಿನ್ನ ಮೇಲೆ ಬರಮಾಡುತ್ತೇನೆ.
- Amos 6:3 ಆಮೋಸ 6:3ನೀವು ಕೆಟ್ಟ ದಿನವನ್ನು ದೂರಮಾಡಿ ಕೊಂಡು ಬಲಾತ್ಕಾರದ ಪೀಠವನ್ನು ಹತ್ತಿರ ಮಾಡಿಕೊ ಳ್ಳುತ್ತೀರಿ.
- Jeremiah 5:12–13 ಯೆರೆಮೀಯ 5:12–13ಕರ್ತನನ್ನು ಸುಳ್ಳುಗಾರ ನನ್ನಾಗಿ ಮಾಡಿ ಅವರು--ಆತನು ಅಂಥವನಲ್ಲ; ನಮ್ಮ ಮೇಲೆ ಕೇಡುಬಾರದು; ಇಲ್ಲವೆ ಕತ್ತಿಯನ್ನಾದರೂ ಬರವನ್ನಾದರೂ ನಾವು ನೋಡುವದಿಲ್ಲ. ಪ್ರವಾದಿಗಳು ಗಾಳಿಯಾಗುವರು; ವಾಕ್ಯವು ಅವರಲ್ಲಿ ಇಲ್ಲ; ಅವರಿಗೆ ಹೀಗಾಗುವದು ಎಂದು ಹೇಳಿದ್ದಾರೆ.
- Ezekiel 16:44 ಯೆಹೆಜ್ಕೇಲನು 16:44ಇಗೋ, ಗಾದೆ ಹೇಳುವವರೆಲ್ಲರೂ--ತಾಯಿಯಂತೆ ಮಗಳು ಎಂಬ ಗಾದೆಯನ್ನು ನಿನಗೆ ವಿರುದ್ಧವಾಗಿ ಹೇಳುವರು.