Ezekiel · chapter 16 · verse 6
Ezekiel 16:6 in Kannada
ನಾನು ನಿನ್ನ ಬಳಿಯಲ್ಲಿ ಹಾದು ಹೋಗುವಾಗ ನೀನು ನಿನ್ನ ಸ್ವಂತ ರಕ್ತದಲ್ಲಿ ಬಿದ್ದು ಹೊರಳಾಡುತ್ತಿದ್ದ ನಿನ್ನನ್ನು ನಾನು ನಿನ್ನ ರಕ್ತದಲ್ಲಿ ನೋಡಿದಾಗ ಬದುಕು ಎಂದೆನು; ಹೌದು, ನೀನು ನಿನ್ನ ರಕ್ತದಲ್ಲಿ ಬಿದ್ದಿರುವಾಗ ನಾನು ಬದುಕು ಅಂದೆನು.
Naanu ninna baliyalli haadu hoguvaaga neenu ninna svanta raktadalli biddu horalaaduttidda ninnannu naanu ninna raktadalli nodidaaga baduku endenu; haudu, neenu ninna raktadalli biddiruvaaga naanu baduku andenu.
Ezekiel 16:6 in English
- King James Version (KJV)
- And when I passed by thee, and saw thee polluted in thine own blood, I said unto thee [when thou wast] in thy blood, Live; yea, I said unto thee [when thou wast] in thy blood, Live.
- World English Bible (WEB)
- “‘“When I passed by you, and saw you wallowing in your blood, I said to you, ‘Though you are in your blood, live!’ Yes, I said to you, ‘Though you are in your blood, live!’
- American Standard Version (ASV)
- And when I passed by thee, and saw thee weltering in thy blood, I said unto thee, [Though thou art] in thy blood, live; yea, I said unto thee, [Though thou art] in thy blood, live.
- Bible in Basic English (BBE)
- And when I went past you and saw you stretched out in your blood, I said to you, Though you are stretched out in your blood, have life;
- Darby Translation (DBY)
- And I passed by thee, and saw thee weltering in thy blood, and I said unto thee, in thy blood, Live! yea, I said unto thee, in thy blood, Live!
- Webster's Bible (WBS)
- And when I passed by thee, and saw thee polluted in thy own blood, I said to thee [when thou wast] in thy blood, Live; yes, I said to thee [when thou wast] in thy blood, Live.
- Young's Literal Translation (YLT)
- And I do pass over by thee, And I see thee trodden down in thy blood, And I say to thee in thy blood, Live, And I say to thee in thy blood, Live.
Read in context
- 4ನಿನ್ನ ಜನನವನ್ನು ಕುರಿತು ನೀನು ಹುಟ್ಟಿದ ದಿನದಲ್ಲಿ ನಿನ್ನ ಹೊಕ್ಕಳು ಕತ್ತರಿಸ ಲ್ಪಡಲಿಲ್ಲ; ಶುದ್ಧವಾಗುವ ಹಾಗೆ ನೀರಿನಿಂದ ತೊಳೆ ಯಲ್ಪಡಲಿಲ್ಲ, ನಿನಗೆ ಉಪ್ಪು ಹಾಕಲಿಲ್ಲ, ನಿನ್ನನ್ನು ಬಟ್ಟೆಯಿಂದ ಸುತ್ತಲಿಲ್ಲ.
- 5ನಿನ್ನನ್ನು ಕರುಣಿಸಿ ಕಟಾಕ್ಷಿಸಿ ಯಾರೂ ನಿನಗೆ ಇಂಥ ಒಂದು ಸಹಾಯವನ್ನು ಮಾಡ ಲಿಲ್ಲ, ಆದರೆ ನೀನು ಹುಟ್ಟಿದ ದಿನದಲ್ಲಿ ಅಸಹ್ಯಪಟ್ಟು ನಿನ್ನನ್ನು ಹೊಲದಲ್ಲಿ ಬಿಸಾಡಿದರು.
- 6ನಾನು ನಿನ್ನ ಬಳಿಯಲ್ಲಿ ಹಾದು ಹೋಗುವಾಗ ನೀನು ನಿನ್ನ ಸ್ವಂತ ರಕ್ತದಲ್ಲಿ ಬಿದ್ದು ಹೊರಳಾಡುತ್ತಿದ್ದ ನಿನ್ನನ್ನು ನಾನು ನಿನ್ನ ರಕ್ತದಲ್ಲಿ ನೋಡಿದಾಗ ಬದುಕು ಎಂದೆನು; ಹೌದು, ನೀನು ನಿನ್ನ ರಕ್ತದಲ್ಲಿ ಬಿದ್ದಿರುವಾಗ ನಾನು ಬದುಕು ಅಂದೆನು.
- 7ಭೂಮಿಯಲ್ಲಿಯ ಮೊಳಿಕೆಯೋ ಎಂಬಂತೆ ನಾನು ನಿನ್ನನ್ನು ಬೆಳೆಸಲು (ಹೆಚ್ಚಿಸಲು) ನೀನು ಬಲಿತು ಪ್ರಾಯವು ತುಂಬಿ ಅತಿ ಸೌಂದರ್ಯವಂತೆಯಾದೆ; ನಿನ್ನ ಸ್ತನಗಳು ರೂಪಗೊಂಡವು; ನಿನ್ನ ಕೂದಲು ಬೆಳೆಯಿತು; ಆದರೆ ಮೊದಲು ನೀನು ಬರೀ ಬೆತ್ತಲೆ ಯಾಗಿದ್ದೆ.
- 8ಈಗ ನಾನು ನಿನ್ನ ಬಳಿ ಹಾದು ಹೋಗು ವಾಗ ನಿನ್ನನ್ನು ನೋಡಲು ಇಗೋ, ನಿನ್ನ ಕಾಲವು ಪ್ರೇಮಿಸುವ ಕಾಲವಾಗಿತ್ತು; ಆಗ ನಾನು ನನ್ನ ಸೆರಗನ್ನು ನಿನ್ನ ಮೇಲೆ ಹೊದಿಸಿ, ನಿನ್ನ ಬೆತ್ತಲೆಯನ್ನು ಮುಚ್ಚಿದೆನು. ಹೌದು, ನಾನು ನಿನಗೆ ಆಣೆಯಿಟ್ಟು ಒಡಂಬಡಿಕೆ ಮಾಡಿಕೊಂಡದ್ದರಿಂದ ನೀನು ನನ್ನವಳಾದೆ ಎಂದು ದೇವರಾದ ಕರ್ತನು ಹೇಳುತ್ತಾನೆ.
Cross references
- Ephesians 2:4–5 ಎಫೆಸದವರಿಗೆ 2:4–5ಆದರೆ ಕರುಣಾನಿಧಿಯಾದ ದೇವರು ತನ್ನ ಅಪಾರ ವಾದ ಪ್ರೀತಿಯ ನಿಮಿತ್ತ ನಮ್ಮನ್ನು ಪ್ರೀತಿಸಿ ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. (ನೀವು ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ;)
- Titus 3:3–7 ತೀತನಿಗೆ 3:3–7ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದ ವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ದಾಸರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆ ಮಾಡುವವರೂ ಆಗಿದ್ದೆವು. ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಪ್ರೀತಿಯೂ ಮನುಷ್ಯನ ಕಡೆಗೆ ಪ್ರತ್ಯಕ್ಷವಾದಾಗ ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು. ಆತನು (ದೇವರು) ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕ ಆತನನ್ನು (ಪವಿತ್ರಾತ್ಮನನ್ನು) ನಮ್ಮ ಮೇಲೆ ಧಾರಾಳವಾಗಿ ಸುರಿಸಿ ದ್ದಾನೆ. ನಾವು ಹೀಗೆ ಆತನ ಕೃಪೆಯಿಂದ ನೀತಿವಂತ ರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಗನು ಸಾರವಾಗಿ ಬಾಧ್ಯರಾದೆವು.
- John 5:25 ಯೋಹಾನನು 5:25ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಕುಮಾರನ ಧ್ವನಿಯನ್ನು ಕೇಳುವ ಗಳಿಗೆ ಬರುತ್ತದೆ; ಅದು ಈಗಲೇ ಬಂದಿದೆ; ಕೇಳುವವರು ಬದುಕುವರು.
- Acts 7:34 ಅಪೊಸ್ತಲರ ಕೃತ್ಯಗಳು 7:34ನಾನು ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದು ಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತ ದೇಶಕ್ಕೆ ಕಳುಹಿಸುತ್ತೇನೆ, ಬಾ ಎಂದು ಹೇಳಿದನು.
- Matthew 5:13 ಮತ್ತಾಯನು 5:13ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ ಅದಕ್ಕೆ ಇನ್ನಾತ ರಿಂದ ರುಚಿ ಬಂದೀತು? ಅಂದಿನಿಂದ ಅದು ನಿಷ್ಪ್ರಯೋಜನವಾದದ್ದಾಗಿ ಹೊರಗೆ ಬಿಸಾಡಲ್ಪಟ್ಟು ಜನರಿಂದ ತುಳಿದಾಡಲ್ಪಡುವದು.
- Exodus 19:4–6 ವಿಮೋಚನಕಾಂಡ 19:4–6ನಾನು ಐಗುಪ್ತ್ಯರಿಗೆ ಮಾಡಿದ್ದನ್ನು ನೀವು ನೋಡಿದ್ದೀರಿ; ನಿಮ್ಮನ್ನು ಹದ್ದುಗಳ ರೆಕ್ಕೆಗಳ ಮೇಲೆ ನಾನು ಹೇಗೆ ಹೊತ್ತುಕೊಂಡು ನನ್ನ ಬಳಿಗೆ ಬರಮಾಡಿದೆನೆಂಬದನ್ನೂ ನೀವು ನೋಡಿದ್ದೀರಿ; ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು ನನ್ನ ಅಸಮಾನ್ಯವಾದ ಸಂಪತ್ತಾಗಿರುವಿರಿ; ಭೂಮಿಯೆಲ್ಲಾ ನನ್ನದೇ. ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳ ಬೇಕಾದ ಮಾತುಗಳು ಇವೇ ಅಂದನು.
- Exodus 2:24–25 ವಿಮೋಚನಕಾಂಡ 2:24–25ದೇವರು ಅವರ ನರಳಾಟವನ್ನು ಕೇಳಿ ಅಬ್ರಹಾಮ ಇಸಾಕ ಯಾಕೋಬ ಇವರ ಸಂಗಡ ತಾನು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಂಡನು.ಆಗ ದೇವರು ಇಸ್ರಾಯೇಲ್ ಮಕ್ಕಳನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು. ಆಗ ದೇವರು ಇಸ್ರಾಯೇಲ್ ಮಕ್ಕಳನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು.
- Micah 7:10 ಮೀಕ 7:10ನನ್ನ ಶತ್ರುಗಳು ಸಹ ಅದನ್ನು ನೋಡುವರು; ನಿನ್ನ ದೇವರಾದ ಕರ್ತನು ಎಲ್ಲಿ ಎಂದು ನನಗೆ ಹೇಳಿದವಳನ್ನು ನಾಚಿಕೆಯು ಮುಚ್ಚುವದು; ನನ್ನ ಕಣ್ಣುಗಳು ಅವಳನ್ನು ನೋಡುವವು, ಈಗಲೇ ಬೀದಿಗಳಲ್ಲಿರುವ ಕೆಸರಿನಂತೆ ತುಳಿಯಲ್ಪಡು ವಳು.
- Isaiah 51:23 ಯೆಶಾಯ 51:23ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ.
- Deuteronomy 9:4 ಧರ್ಮೋಪದೇಶಕಾಂಡ 9:4ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ತಳ್ಳಿಹಾಕಿದಾಗ--ನನ್ನ ನೀತಿಯ ನಿಮಿತ್ತ ಈ ದೇಶವನ್ನು ಸ್ವತಂತ್ರಿಸಿಕೊಳ್ಳುವ ಹಾಗೆ ಕರ್ತನು ನನ್ನನ್ನು ಕರಕೊಂಡು ಬಂದಿದ್ದಾನೆಂದು ನಿನ್ನ ಹೃದಯದಲ್ಲಿ ಹೇಳಿಕೊಳ್ಳ ಬಾರದು; ಆ ಜನಾಂಗಗಳ ಕೆಟ್ಟತನದ ನಿಮಿತ್ತ ಕರ್ತನು ಅವರನ್ನು ನಿನ್ನ ಮುಂದೆ ಹೊರಡಿಸುತ್ತಾನೆ.
- Psalm 105:10–15 ಕೀರ್ತನೆಗಳು 105:10–15ಅದನ್ನು ಯಾಕೋಬನಿಗೆ ದೃಢ ಮಾಡಿದನು ಮತ್ತು ಇಸ್ರಾಯೇಲಗೆ ನಿತ್ಯ ಒಡಂಬಡಿಕೆ ಯಾಗಿ ಸ್ಥಾಪಿಸಿ ಹೇಳಿದ್ದೇನಂದರೆ-- ನಿನಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು. ಆಗ ಅವರು ಲೆಕ್ಕಕ್ಕೆ ಸ್ವಲ್ಪವಾಗಿಯೂ ಹೌದು, ಬಹಳ ಸ್ವಲ್ಪ ಮಂದಿಯಾಗಿಯೂ ಪರದೇಶಸ್ಥರಾ ಗಿಯೂ ಅದರಲ್ಲಿ ಇದ್ದರು. ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋದರು. ಮನುಷ್ಯರು ಅವರಿಗೆ ಕೇಡು ಮಾಡದಂತೆ ಆತನು ತಡೆದನು; ಹೌದು, ಅವರಿಗೋ ಸ್ಕರ ಆತನು ಅರಸುಗಳನ್ನು ಗದರಿಸಿದನು. ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ, ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ ಎಂದು ಹೇಳಿದನು.
- Exodus 3:7–8 ವಿಮೋಚನಕಾಂಡ 3:7–8ಆಗ ಕರ್ತನು--ಐಗುಪ್ತದಲ್ಲಿರುವ ನನ್ನ ಜನರ ವ್ಯಥೆಯನ್ನು ನಿಶ್ಚಯವಾಗಿಯೂ ಕಂಡಿದ್ದೇನೆ, ಬಿಟ್ಟೀ ಕೆಲಸಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನು ಬಲ್ಲೆನು. ಆದಕಾರಣ ಅವರನ್ನು ಐಗುಪ್ತ್ಯರ ಕೈಯೊ ಳಗಿಂದ ಬಿಡುಗಡೆ ಮಾಡುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡಿಸಿ ಕೊಂಡು ಹೋಗುವದಕ್ಕೂ ಇಳಿದು ಬಂದಿದ್ದೇನೆ.