Micah · chapter 7 · verse 10
Micah 7:10 in Kannada
ನನ್ನ ಶತ್ರುಗಳು ಸಹ ಅದನ್ನು ನೋಡುವರು; ನಿನ್ನ ದೇವರಾದ ಕರ್ತನು ಎಲ್ಲಿ ಎಂದು ನನಗೆ ಹೇಳಿದವಳನ್ನು ನಾಚಿಕೆಯು ಮುಚ್ಚುವದು; ನನ್ನ ಕಣ್ಣುಗಳು ಅವಳನ್ನು ನೋಡುವವು, ಈಗಲೇ ಬೀದಿಗಳಲ್ಲಿರುವ ಕೆಸರಿನಂತೆ ತುಳಿಯಲ್ಪಡು ವಳು.
Nanna shatrugalu saha adannu noduvaru; ninna devaraada kartanu elli endu nanage helidavalannu naachikeyu muchchuvadu; nanna kannugalu avalannu noduvavu, eegale beedigalalliruva kesarinante tuliyalpadu valu.
Micah 7:10 in English
- King James Version (KJV)
- Then [she that is] mine enemy shall see [it], and shame shall cover her which said unto me, Where is the LORD thy God? mine eyes shall behold her: now shall she be trodden down as the mire of the streets.
- World English Bible (WEB)
- Then my enemy will see it, and shame will cover her who said to me, “Where is the LORD your God?” My eyes will see her. Now she will be trodden down like the mire of the streets.
- American Standard Version (ASV)
- Then mine enemy shall see it, and shame shall cover her who said unto me, Where is Jehovah thy God? Mine eyes shall see [my desire] upon her; now shall she be trodden down as the mire of the streets.
- Bible in Basic English (BBE)
- And my hater will see it and be covered with shame; she who said to me, Where is the Lord your God? my eyes will see their desire effected on her, now she will be crushed under foot like the dust of the streets.
- Darby Translation (DBY)
- And mine enemy shall see [it], and shame shall cover her which said unto me, Where is Jehovah thy God? Mine eyes shall behold her; now shall she be trodden down, as the mire of the streets.
- Webster's Bible (WBS)
- Then [she that is] my enemy shall see [it] , and shame shall cover her who said to me, Where is the LORD thy God? my eyes shall behold her: now shall she be trodden down as the mire of the streets.
- Young's Literal Translation (YLT)
- And see doth mine enemy, And cover her doth shame, Who saith unto me, 'Where [is] Jehovah thy God?' Mine eyes do look on her, Now she is for a treading-place, As mire of the out-places.
Read in context
- 8ನನ್ನ ಶತ್ರುವೇ, ನನ್ನ ಮೇಲೆ ಸಂತೋಷಪಡಬೇಡ; ನಾನು ಬಿದ್ದಿದ್ದರೂ ತಿರುಗಿ ಏಳುವೆನು; ಕತ್ತಲೆಯಲ್ಲಿ ಕೂತುಕೊಂಡರೂ ನನಗೆ ಬೆಳಕು ಕರ್ತನೇ.
- 9ನಾನು ಕರ್ತನಿಗೆ ವಿರೋಧ ವಾಗಿ ಪಾಪ ಮಾಡಿದ್ದರಿಂದ ಆತನು ತನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡಿಸುವ ತನಕ ಆತನ ಕೋಪವನ್ನು ತಾಳುವೆನು; ಆತನು ನನ್ನನ್ನು ಬೆಳಕಿಗೆ ತರುವನು, ಆತನ ನೀತಿಯನ್ನು ನೋಡುವೆನು.
- 10ನನ್ನ ಶತ್ರುಗಳು ಸಹ ಅದನ್ನು ನೋಡುವರು; ನಿನ್ನ ದೇವರಾದ ಕರ್ತನು ಎಲ್ಲಿ ಎಂದು ನನಗೆ ಹೇಳಿದವಳನ್ನು ನಾಚಿಕೆಯು ಮುಚ್ಚುವದು; ನನ್ನ ಕಣ್ಣುಗಳು ಅವಳನ್ನು ನೋಡುವವು, ಈಗಲೇ ಬೀದಿಗಳಲ್ಲಿರುವ ಕೆಸರಿನಂತೆ ತುಳಿಯಲ್ಪಡು ವಳು.
- 11ನಿನ್ನ ಗೋಡೆಗಳು ತಿರುಗಿ ಕಟ್ಟಲ್ಪಡುವ ಆ ದಿನದಲ್ಲಿ ನಿರ್ಣಯವು ದೂರವಾಗಿ ಹೋಗುವದು.
- 12ಆ ದಿನದಲ್ಲಿ ಅಶ್ಶೂರಿನಿಂದಲೂ ಕೋಟೆಯುಳ್ಳ ಪಟ್ಟಣಗಳಿಂದಲೂ ಕೋಟೆಯಿಂದ ನದಿಯವರೆಗೂ ಸಮುದ್ರದಿಂದ ಸಮುದ್ರದ ವರೆಗೂ ಬೆಟ್ಟದಿಂದ ಬೆಟ್ಟದ ವರೆಗೂ ನಿನ್ನ ಬಳಿಗೆ ಬರುವರು.
Cross references
- Psalm 42:10 ಕೀರ್ತನೆಗಳು 42:10ನನ್ನ ವೈರಿಗಳು--ನಿನ್ನ ದೇವರು ಎಲ್ಲಿ ಎಂದು ದಿನವೆಲ್ಲಾ ನನಗೆ ಹೇಳಿ ನನ್ನನ್ನು ನಿಂದಿಸಿದ್ದರಿಂದ ನನ್ನ ಎಲುಬುಗಳು ಮುರಿದಹಾಗಿವೆ.ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ನಾನು ಇನ್ನೂ ಕೊಂಡಾಡುವೆನು.
- Jeremiah 50:33–34 ಯೆರೆಮೀಯ 50:33–34ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ-- ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಕೂಡ ಹಿಂಸಿಸಲ್ಪಟ್ಟರು; ಅವರನ್ನು ಸೆರೆಗೆ ಒಯ್ಯುವವ ರೆಲ್ಲರು ಅವರನ್ನು ಬಲವಾಗಿ ಹಿಡಿದು, ಕಳುಹಿಸಿ ಬಿಡಲೊಲ್ಲದೆ ಇದ್ದರು. ಅವರ ವಿಮೋಚಕನು ಬಲಿಷ್ಠನೇ, ಸೈನ್ಯಗಳ ಕರ್ತನು ಆತನ ಹೆಸರು; ಆತನು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ ಬಾಬೆಲಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವನು.
- Zechariah 10:5 ಜೆಕರ್ಯ 10:5ಅವರು ಯುದ್ಧ ದಲ್ಲಿ ಶತ್ರುವನ್ನು ಬೀದಿಗಳ ಕೆಸರಿನಲ್ಲಿ ತುಳಿಯುವ ಶೂರರ ಹಾಗಿರುವರು; ಕರ್ತನು ಅವರ ಸಂಗಡ ಇರುವದರಿಂದ ಯುದ್ಧಮಾಡುವರು; ಕುದುರೆಗಳ ಮೇಲೆ ಸವಾರಿ ಮಾಡುವವರನ್ನು ನಾಚಿಕೆಪಡಿಸುವರು.
- 2 Samuel 22:43 2 ಸಮುವೇಲನು 22:43ಆಗ ನಾನು ಅವರನ್ನು ನೆಲದ ಧೂಳಿನ ಹಾಗೆ ಪುಡಿಪುಡಿಮಾಡಿದೆನು; ಬೀದಿಯ ಕೆಸರಿನ ಹಾಗೆ ಅವರನ್ನು ತುಳಿದು ಚದರುವಂತೆ ಮಾಡಿದೆನು.
- Psalm 35:26 ಕೀರ್ತನೆಗಳು 35:26ನನ್ನ ಕೇಡಿನಲ್ಲಿ ಸಂತೋಷ ಪಡುವವರು ಕೂಡ ನಾಚಿಕೊಂಡು ಒಟ್ಟಿಗೆ ಗಲಿಬಿಲಿ ಯಾಗಿಲಿ, ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊದ್ದುಕೊಳ್ಳಲಿ.
- Joel 2:17 ಯೋವೇಲ 2:17ಕರ್ತನ ಸೇವಕರಾದ ಯಾಜಕರು ಅಂಗಳಕ್ಕೂ ಬಲಿಪೀಠಕ್ಕೂ ನಡುವೆ ಅತ್ತು ಹೀಗೆ ಹೇಳಲಿ--ಓ ಕರ್ತನೇ, ನಿನ್ನ ಜನರನ್ನು ಕನಿಕರಿಸು, ಜನಾಂಗಗಳು ಅವರ ಮೇಲೆ ಆಳುವ ಹಾಗೆ ನಿನ್ನ ಬಾಧ್ಯತೆಯನ್ನು ನಿಂದೆಗೆ ಒಪ್ಪಿಸಬೇಡ; ಅವರ ದೇವರು ಎಲ್ಲಿ ಎಂದು ಅವರು ಜನಗಳಲ್ಲಿ ಯಾಕೆ ಹೇಳಬೇಕು?
- Revelation 18:20 ಪ್ರಕಟನೆ 18:20ಪರಲೋಕವೇ, ಪರಿಶುದ್ಧರಾದ ಅಪೊಸ್ತಲರೇ, ಪ್ರವಾದಿಗಳೇ, ಅವಳ ವಿಷಯವಾಗಿ ಆನಂದಪಡಿರಿ. ಯಾಕಂದರೆ ನಿಮ್ಮ ನಿಮಿತ್ತವಾಗಿ ದೇವರು ಇವಳಿಗೆ ಪ್ರತಿ ದಂಡನೆಯನ್ನು ಮಾಡಿದನು ಎಂದು ಹೇಳಿತು.
- Psalm 18:42 ಕೀರ್ತನೆಗಳು 18:42ಗಾಳಿಯ ಮುಂದಿನ ಧೂಳಿನಹಾಗೆ ಅವ ರನ್ನು ಹೊಡೆದು ಪುಡಿಪುಡಿ ಮಾಡಿದನು; ಬೀದಿಯ ಕೆಸರಿನಹಾಗೆ ಅವರನ್ನು ಹೊರಗೆ ಚೆಲ್ಲಿಬಿಟ್ಟನು.
- Micah 4:11 ಮೀಕ 4:11ಆದರೆ ಈಗ ಅನೇಕ ಜನಾಂಗಗಳು ನಿನಗೆ ವಿರೋಧವಾಗಿ ಕೂಡಿಬಂದಿವೆ; ಅವರು--ಅವಳು ಕೆಡಿಸಲ್ಪಡಲಿ, ಚೀಯೋನಿನ ಮೇಲೆ ನಮ್ಮ ಕಣ್ಣುಗಳು ದೃಷ್ಟಿಸಲಿ ಎಂದು ಹೇಳುತ್ತಾರೆ.
- Psalm 79:10 ಕೀರ್ತನೆಗಳು 79:10ಅವರ ದೇವರು ಎಲ್ಲಿ ಎಂದು ಅನ್ಯಜನಾಂಗಗಳು ಯಾಕೆ ಹೇಳಬೇಕು? ಚೆಲ್ಲಿರುವ ನಿನ್ನ ಸೇವಕರ ರಕ್ತದ ಪ್ರತಿ ದಂಡನೆಯನ್ನು ನಮ್ಮ ಕಣ್ಣುಗಳ ಮುಂದೆ ಅನ್ಯ ಜನಾಂಗಗಳಲ್ಲಿ ತಿಳಿಯಲ್ಪಡಲಿ.
- 2 Kings 9:33–37 2 ಅರಸುಗಳು 9:33–37ಅವನು-- ಅವಳನ್ನು ಕೆಳಕ್ಕೆ ತಳ್ಳಿಬಿಡಿರಿ ಅಂದನು. ಅವರು ಅವ ಳನ್ನು ಕೆಳಕ್ಕೆ ತಳ್ಳಿಬಿಟ್ಟದ್ದರಿಂದ ಅವಳ ರಕ್ತವು ಗೋಡೆಯ ಮೇಲೆಯೂ ಕುದುರೆಗಳ ಮೇಲೆಯೂ ಚೆಲ್ಲಲ್ಪಟ್ಟಿತು. ಅವನು ಅವಳನ್ನು ತುಳಿಸಿದನು. ಅವನು ಒಳಗೆ ಹೋಗಿ ತಿಂದು ಕುಡಿದ ಮೇಲೆ ಅವರಿಗೆ -- ನೀವು ಹೋಗಿ ಆ ಶಪಿಸಲ್ಪಟ್ಟವಳನ್ನು ನೋಡಿಕೊಂಡು ಹೂಣಿಡಿರಿ; ಅವಳು ಅರಸನ ಮಗಳು ಅಂದನು. ಅವರು ಅವಳನ್ನು ಹೂಣಿಡಲು ಹೋದಾಗ ಅವಳ ತಲೆ ಬುರುಡೆಯೂ ಕಾಲುಗಳೂ ಅಂಗೈಗಳೂ ಹೊರತು ಮತ್ತೇನೂ ಕಾಣಲಿಲ್ಲ. ಅವರು ತಿರಿಗಿ ಬಂದು ಅವನಿಗೆ ತಿಳಿಸಿದರು. ಅದಕ್ಕವನುಕರ್ತನು ತನ್ನ ಸೇವಕನಾಗಿರುವ ತಿಷ್ಬೀಯನಾದ ಎಲೀ ಯನ ಮುಖಾಂತರ ಹೇಳಿದ ವಾಕ್ಯವು ಇದೇ--ಇಜ್ರೇಲಿನ ಹೊಲದಲ್ಲಿ ನಾಯಿಗಳು ಈಜೆಬೆಲಳ ಮಾಂಸವನ್ನು ತಿನ್ನುವವು.ಇದಲ್ಲದೆ ಇದೇ ಈಜೆ ಬೆಲಳೆಂದು ಹೇಳಕೂಡದ ಹಾಗೆ ಇಜ್ರೇಲಿನ ಪಾಲಿನ ಹೊಲದ ಮೇಲ್ಭಾಗದಲ್ಲಿ ಈಜೆಬೆಲಳ ಹೆಣ ಗೊಬ್ಬರದ ಹಾಗೆ ಇರುವದು ಎಂಬದೇ. ಇದಲ್ಲದೆ ಇದೇ ಈಜೆ ಬೆಲಳೆಂದು ಹೇಳಕೂಡದ ಹಾಗೆ ಇಜ್ರೇಲಿನ ಪಾಲಿನ ಹೊಲದ ಮೇಲ್ಭಾಗದಲ್ಲಿ ಈಜೆಬೆಲಳ ಹೆಣ ಗೊಬ್ಬರದ ಹಾಗೆ ಇರುವದು ಎಂಬದೇ.
- Jeremiah 51:51 ಯೆರೆಮೀಯ 51:51ನಾಚಿಕೆಪಡುತ್ತೇವೆ, ನಿಂದೆಯನ್ನು ಕೇಳಿದ್ದೇವೆ; ಅವಮಾನ ನಮ್ಮ ಮುಖಗಳನ್ನು ಮುಚ್ಚಿದೆ; ಅನ್ಯರು ಕರ್ತನ ಆಲಯದ ಪರಿಶುದ್ಧ ಸ್ಥಳಗಳಲ್ಲಿ ಬಂದಿದ್ದಾರೆ.