Ezekiel · chapter 16 · verse 9
Ezekiel 16:9 in Kannada
ಆಮೇಲೆ ನಿನ್ನನ್ನು ನೀರಿನಿಂದ ತೊಳೆದೆನು; ಹೌದು, ನಿನ್ನ ರಕ್ತವನ್ನು ಶುದ್ಧವಾಗಿ ನಿನ್ನಿಂದ ತೊಳೆದೆನು; ನಿನಗೆ ಎಣ್ಣೆಯಿಂದ ಅಭಿಷೇಕ ಮಾಡಿದೆನು.
Aamele ninnannu neerininda toledenu; haudu, ninna raktavannu shuddhavaagi ninninda toledenu; ninage enneyinda abhisheka maadidenu.
Ezekiel 16:9 in English
- King James Version (KJV)
- Then washed I thee with water; yea, I throughly washed away thy blood from thee, and I anointed thee with oil.
- World English Bible (WEB)
- “‘“Then I washed you with water. Yes, I thoroughly washed away your blood from you, and I anointed you with oil.
- American Standard Version (ASV)
- Then washed I thee with water; yea, I thoroughly washed away thy blood from thee, and I anointed thee with oil.
- Bible in Basic English (BBE)
- Then I had you washed with water, washing away all your blood and rubbing you with oil.
- Darby Translation (DBY)
- And I washed thee with water, and thoroughly washed away thy blood from thee, and I anointed thee with oil;
- Webster's Bible (WBS)
- Then I washed thee with water; yes, I thoroughly washed away thy blood from thee, and I anointed thee with oil.
- Young's Literal Translation (YLT)
- And I do wash thee with water, And I wash away thy blood from off thee, And I anoint thee with perfume.
Read in context
- 7ಭೂಮಿಯಲ್ಲಿಯ ಮೊಳಿಕೆಯೋ ಎಂಬಂತೆ ನಾನು ನಿನ್ನನ್ನು ಬೆಳೆಸಲು (ಹೆಚ್ಚಿಸಲು) ನೀನು ಬಲಿತು ಪ್ರಾಯವು ತುಂಬಿ ಅತಿ ಸೌಂದರ್ಯವಂತೆಯಾದೆ; ನಿನ್ನ ಸ್ತನಗಳು ರೂಪಗೊಂಡವು; ನಿನ್ನ ಕೂದಲು ಬೆಳೆಯಿತು; ಆದರೆ ಮೊದಲು ನೀನು ಬರೀ ಬೆತ್ತಲೆ ಯಾಗಿದ್ದೆ.
- 8ಈಗ ನಾನು ನಿನ್ನ ಬಳಿ ಹಾದು ಹೋಗು ವಾಗ ನಿನ್ನನ್ನು ನೋಡಲು ಇಗೋ, ನಿನ್ನ ಕಾಲವು ಪ್ರೇಮಿಸುವ ಕಾಲವಾಗಿತ್ತು; ಆಗ ನಾನು ನನ್ನ ಸೆರಗನ್ನು ನಿನ್ನ ಮೇಲೆ ಹೊದಿಸಿ, ನಿನ್ನ ಬೆತ್ತಲೆಯನ್ನು ಮುಚ್ಚಿದೆನು. ಹೌದು, ನಾನು ನಿನಗೆ ಆಣೆಯಿಟ್ಟು ಒಡಂಬಡಿಕೆ ಮಾಡಿಕೊಂಡದ್ದರಿಂದ ನೀನು ನನ್ನವಳಾದೆ ಎಂದು ದೇವರಾದ ಕರ್ತನು ಹೇಳುತ್ತಾನೆ.
- 9ಆಮೇಲೆ ನಿನ್ನನ್ನು ನೀರಿನಿಂದ ತೊಳೆದೆನು; ಹೌದು, ನಿನ್ನ ರಕ್ತವನ್ನು ಶುದ್ಧವಾಗಿ ನಿನ್ನಿಂದ ತೊಳೆದೆನು; ನಿನಗೆ ಎಣ್ಣೆಯಿಂದ ಅಭಿಷೇಕ ಮಾಡಿದೆನು.
- 10ಇದಲ್ಲದೆ ನಾನು ಕಸೂ ತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲ ಪ್ರಾಣಿಯ ಜೋಡುಗಳನ್ನು ಕೊಟ್ಟೆನು, ನಯವಾದ ನಾರುಮಡಿ ಯನ್ನು ನಿನಗೆ ಉಡಿಸಿದೆನು, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆನು.
- 11ನಾನು ಆಭರಣಗಳಿಂದಲೂ ನಿನ್ನನ್ನು ಅಲಂಕರಿಸಿದೆನು; ನಾನು ನಿನ್ನ ಕೈಗಳಿಗೆ ಕಡಗ ಗಳನ್ನು, ನಿನ್ನ ಕೊರಳಿಗೆ ಸರವನ್ನು ಹಾಕಿದೆನು.
Cross references
- Psalm 23:5 ಕೀರ್ತನೆಗಳು 23:5ನನ್ನ ವೈರಿಗಳ ಎದುರಿನಲ್ಲಿ ನನ್ನ ಮುಂದೆ ಮೇಜನ್ನು ಸಿದ್ಧಮಾಡುತ್ತೀ; ನೀನು ನನ್ನ ತಲೆಯನ್ನು ಎಣ್ಣೆಯಿಂದ ಅಭಿಷೇಕಿಸುತ್ತೀ; ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.ನಿಶ್ಚಯವಾಗಿ ಒಳ್ಳೇತನವೂ ಕರುಣೆಯೂ ನನ್ನ ಜೀವನದ ದಿವಸ ಗಳಲ್ಲೆಲ್ಲಾ ನನ್ನನ್ನು ಹಿಂಬಾಲಿಸುವವು; ನಾನು ಕರ್ತನ ಮನೆಯಲ್ಲಿ ಎಂದೆಂದಿಗೂ ವಾಸಮಾಡುವೆನು.
- Ruth 3:3 ರೂತಳು 3:3ನೀನು ಸ್ನಾನಮಾಡಿ ಎಣ್ಣೆ ಹಚ್ಚಿಕೊಂಡು ನಿನ್ನ ವಸ್ತ್ರಗಳನ್ನು ಧರಿಸಿಕೊಂಡು ಆ ಕಣಕ್ಕೆ ಹೋಗು. ಆದರೆ ಆ ಮನುಷ್ಯನು ಅನ್ನಪಾನಗಳನ್ನು ತೆಗೆದು ಕೊಳ್ಳುವ ವರೆಗೂ ಅವನಿಗೆ ನೀನು ತಿಳಿಯದಂತೆ ಮರೆಯಾಗಿರು.
- 1 John 5:8 1 ಯೋಹಾನನು 5:8ಆತ್ಮ ನೀರು ರಕ್ತ ಈ ಮೂವರು ಭೂಮಿಯ ಮೇಲೆ ಸಾಕ್ಷಿ ಹೇಳುತ್ತಾರೆ; ಈ ಮೂವರು ಒಂದೇಯಾಗಿ ಒಪ್ಪಿಕೊಳ್ಳುತ್ತಾರೆ.
- 1 John 2:27 1 ಯೋಹಾನನು 2:27ಆದರೆ ಆತನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುವದರಿಂದ ಯಾವನಾದರೂ ನಿಮಗೆ ಉಪದೇಶಮಾಡುವದು ಅವಶ್ಯವಿಲ್ಲ. ಆ ಅಭಿಷೇಕವೇ ಎಲ್ಲಾ ವಿಷಯಗಳಲ್ಲಿ ನಿಮಗೆ ಉಪದೇಶ ಮಾಡುವಂಥ ದಾಗಿದ್ದು ಸತ್ಯವಾಗಿದೆ. ಸುಳ್ಳಲ್ಲ, ಅದು ನಿಮಗೆ ಉಪದೇಶ ಮಾಡಿದ ಪ್ರಕಾರವೇ ಆತನಲಿ
- 1 Corinthians 6:11 1 ಕೊರಿಂಥದವರಿಗೆ 6:11ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮನಲ್ಲಿಯೂ ತೊಳೆಯಲ್ಪಟ್ಟಿರಿ; ಶುದ್ಧೀಕರಿಸಲ್ಪಟ್ಟಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.
- Ezekiel 16:4 ಯೆಹೆಜ್ಕೇಲನು 16:4ನಿನ್ನ ಜನನವನ್ನು ಕುರಿತು ನೀನು ಹುಟ್ಟಿದ ದಿನದಲ್ಲಿ ನಿನ್ನ ಹೊಕ್ಕಳು ಕತ್ತರಿಸ ಲ್ಪಡಲಿಲ್ಲ; ಶುದ್ಧವಾಗುವ ಹಾಗೆ ನೀರಿನಿಂದ ತೊಳೆ ಯಲ್ಪಡಲಿಲ್ಲ, ನಿನಗೆ ಉಪ್ಪು ಹಾಕಲಿಲ್ಲ, ನಿನ್ನನ್ನು ಬಟ್ಟೆಯಿಂದ ಸುತ್ತಲಿಲ್ಲ.
- Isaiah 4:4 ಯೆಶಾಯ 4:4ಕರ್ತನು ನ್ಯಾಯತೀರ್ಪಿನ ಆತ್ಮದಿಂದಲೂ ದಹಿಸುವ ಆತ್ಮದಿಂದಲೂ ಚೀಯೋನಿನ ಕುಮಾರ್ತೆ ಯರ ಕಲ್ಮಷವನ್ನು ತೊಳೆದು ಯೆರೂಸಲೇಮಿನ ಮಧ್ಯ ದಲ್ಲಿರುವ ರಕ್ತವನ್ನು ಶುದ್ಧೀಕರಿಸುವನು.
- Psalm 51:7 ಕೀರ್ತನೆಗಳು 51:7ಹಿಸ್ಸೋಪ್ನಿಂದ ನನ್ನನ್ನು ತೊಳೆ; ಆಗ ನಾನು ಶುಚಿಯಾಗುವೆನು. ನನ್ನನ್ನು ತೊಳೆ, ಆಗ ಹಿಮಕ್ಕಿಂತ ಬಿಳುಪಾಗುವೆನು.
- Hebrews 9:10–14 ಇಬ್ರಿಯರಿಗೆ 9:10–14ಅವು ಅನ್ನಪಾನಾದಿಗಳಲ್ಲಿಯೂ ವಿವಿಧ ಸ್ನಾನಗಳ ಲ್ಲಿಯೂ ಶಾರೀರಕ ನಿಯಮಗಳಲ್ಲಿಯೂ ತಿದ್ದುಪಾಟಿನ ಕಾಲದವರೆಗೆ ಮಾತ್ರ ನೇಮಕವಾಗಿದ್ದವು. ಆದರೆ ಕ್ರಿಸ್ತನು ಬರಬೇಕಾಗಿದ್ದ ಮೇಲುಗಳ ಕುರಿತು ಮಹಾಯಾಜಕನಾಗಿ ಬಂದು ಕೈಯಿಂದ ಕಟ್ಟಲ್ಪಡದಂಥ ಅಂದರೆ ಈ ಕಟ್ಟಡಕ್ಕೆ ಸಂಬಂಧವಾ ಗಿರದೆ ಶ್ರೇಷ್ಠವಾಗಿಯೂ ಪರಿಪೂರ್ಣವಾಗಿಯೂ ಇರುವ ಗುಡಾರದ ಮೂಲಕ ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿದನು. ಹೋತ ಹೋರಿಗಳ ರಕ್ತವೂ ಹೊಲೆಯಾದವರ ಮೇಲೆ ಚಿಮು ಕಿಸುವ ಕಡಸಿನ ಬೂದಿಯೂ ಶರೀರ ವನ್ನು ಶುಚಿಮಾಡಿ ಪವಿತ್ರ ಮಾಡುವದಾದರೆ ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿ ಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ಬಿಡಿಸಿ ಜೀವವುಳ್ಳ ದೇವರನ್ನು ಸೇವಿಸುವಂತೆ ನಿಮ್ಮ ಮನ ಸ್ಸಾಕ್ಷಿಯನ್ನು ಶುದ್ಧೀಕರಿಸು ವದಲ್ಲವೇ.
- 1 John 2:20 1 ಯೋಹಾನನು 2:20ಆದರೆ ನೀವು ಪವಿತ್ರನಾಗಿರುವಾತನಿಂದ ಅಭಿಷೇಕವನ್ನು ಹೊಂದಿದ ವರಾಗಿದ್ದು ಎಲ್ಲವನ್ನು ತಿಳಿದವರಾಗಿದ್ದೀರಿ.
- 1 Corinthians 10:2 1 ಕೊರಿಂಥದವರಿಗೆ 10:2ಅವರೆಲ್ಲರೂ ಮೋಶೆ ಗಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ಬಾಪ್ತಿಸ್ಮ ಹೊಂದಿದರು;
- 2 Corinthians 1:21 2 ಕೊರಿಂಥದವರಿಗೆ 1:21ಕ್ರಿಸ್ತನಲ್ಲಿ ನಿಮ್ಮೊಂದಿಗೆ ನಮ್ಮನ್ನು ಸ್ಥಿರಪಡಿಸಿ ನಮ್ಮನ್ನು ಅಭಿಷೇಕಿಸಿದಾತನು ದೇವರೇ;