Psalms · chapter 51 · verse 7
Psalm 51:7 in Kannada
ಹಿಸ್ಸೋಪ್ನಿಂದ ನನ್ನನ್ನು ತೊಳೆ; ಆಗ ನಾನು ಶುಚಿಯಾಗುವೆನು. ನನ್ನನ್ನು ತೊಳೆ, ಆಗ ಹಿಮಕ್ಕಿಂತ ಬಿಳುಪಾಗುವೆನು.
Hissopninda nannannu tole; aaga naanu shuchiyaaguvenu. Nannannu tole, aaga himakkinta bilupaaguvenu.
Psalm 51:7 in English
- King James Version (KJV)
- Purge me with hyssop, and I shall be clean: wash me, and I shall be whiter than snow.
- World English Bible (WEB)
- Purify me with hyssop, and I will be clean. Wash me, and I will be whiter than snow.
- American Standard Version (ASV)
- Purify me with hyssop, and I shall be clean: Wash me, and I shall be whiter than snow.
- Bible in Basic English (BBE)
- Make me free from sin with hyssop: let me be washed whiter than snow.
- Darby Translation (DBY)
- Purge me with hyssop, and I shall be clean; wash me, and I shall be whiter than snow.
- Webster's Bible (WBS)
- Purge me with hyssop, and I shall be clean: wash me, and I shall be whiter than snow.
- Young's Literal Translation (YLT)
- Thou cleansest me with hyssop and I am clean, Washest me, and than snow I am whiter.
Read in context
- 5ಇಗೋ, ನಾನು ಅಕ್ರ ಮದಲ್ಲಿ ರೂಪಿಸಲ್ಪಟ್ಟೆನು; ಪಾಪದಲ್ಲಿ ನನ್ನ ತಾಯಿ ನನ್ನನ್ನು ಗರ್ಭಧರಿಸಿದಳು.
- 6ಇಗೋ, ಅಂತರಂಗದಲ್ಲಿ ನೀನು ಸತ್ಯವನ್ನು ಅಪೇಕ್ಷಿಸುತ್ತೀ; ರಹಸ್ಯದಲ್ಲಿ ನನಗೆ ಜ್ಞಾನವನ್ನು ನೀನು ತಿಳಿಯಮಾಡು.
- 7ಹಿಸ್ಸೋಪ್ನಿಂದ ನನ್ನನ್ನು ತೊಳೆ; ಆಗ ನಾನು ಶುಚಿಯಾಗುವೆನು. ನನ್ನನ್ನು ತೊಳೆ, ಆಗ ಹಿಮಕ್ಕಿಂತ ಬಿಳುಪಾಗುವೆನು.
- 8ನಾನು ಉತ್ಸಾಹವನ್ನೂ ಸಂತೋಷವನ್ನೂ ಕೇಳುವ ಹಾಗೆ ಮಾಡು. ಆಗ ನನ್ನ ಮುರಿದ ಎಲುಬುಗಳು ಆನಂದಿಸುವವು.
- 9ನನ್ನ ಪಾಪಗಳನ್ನು ನೋಡದಂತೆ ನೀನು ವಿಮುಖನಾಗು; ನನ್ನ ಅಕ್ರಮಗಳನ್ನೆಲ್ಲಾ ಅಳಿಸಿ ಬಿಡು.
Cross references
- 1 John 1:7 1 ಯೋಹಾನನು 1:7ಆತನು ಬೆಳಕಿನಲ್ಲಿರು ವಂತೆಯೇ ನಾವೂ ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ; ಆತನ ಮಗನಾದ ಯೇಸುಕ್ರಿಸ್ತನ ರಕ್ತವು ನಮ್ಮನ್ನು ಸಕಲ ಪಾಪದಿಂದ ಶುದ್ಧಿಮಾಡುತ್ತದೆ.
- Isaiah 1:18 ಯೆಶಾಯ 1:18ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ ಎಂದು ಕರ್ತನು ಹೇಳುತ್ತಾನೆ; ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದಂತೆ ಬಿಳುಪಾಗುವವು; ಕಡು ಕೆಂಪಿನಂತೆ ಕೆಂಪಾಗಿದ್ದರೂ ಉಣ್ಣೆಯಂತೆ ಆಗುವವು.
- Hebrews 9:13–14 ಇಬ್ರಿಯರಿಗೆ 9:13–14ಹೋತ ಹೋರಿಗಳ ರಕ್ತವೂ ಹೊಲೆಯಾದವರ ಮೇಲೆ ಚಿಮು ಕಿಸುವ ಕಡಸಿನ ಬೂದಿಯೂ ಶರೀರ ವನ್ನು ಶುಚಿಮಾಡಿ ಪವಿತ್ರ ಮಾಡುವದಾದರೆ ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿ ಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ಬಿಡಿಸಿ ಜೀವವುಳ್ಳ ದೇವರನ್ನು ಸೇವಿಸುವಂತೆ ನಿಮ್ಮ ಮನ ಸ್ಸಾಕ್ಷಿಯನ್ನು ಶುದ್ಧೀಕರಿಸು ವದಲ್ಲವೇ.
- Numbers 19:18–20 ಅರಣ್ಯಕಾಂಡ 19:18–20ಪವಿತ್ರನಾದವನೊಬ್ಬನು ಹಿಸ್ಸೋಪನ್ನು ತಕ್ಕೊಂಡು ನೀರಿನಲ್ಲಿ ಅದ್ದಿ ಆ ಡೇರೆಯ ಮೇಲೆಯೂ ಸಮಸ್ತ ಸಾಮಾನುಗಳ ಮೇಲೆಯೂ ಅದರಲ್ಲಿರುವ ಮನುಷ್ಯರ ಮೇಲೆಯೂ ಎಲುಬನ್ನಾದರೂ ಕೊಲ್ಲಲ್ಪಟ್ಟ ವನನ್ನಾದರೂ ಸತ್ತವನನ್ನಾದರೂ ಸಮಾಧಿಯನ್ನಾದರೂ ಮುಟ್ಟಿದವನ ಮೇಲೆ ಚಿಮುಕಿಸಬೇಕು. ಪವಿತ್ರನಾ ದವನು ಅಪವಿತ್ರನಾದವನ ಮೇಲೆ ಮೂರನೇ ದಿವಸ ದಲ್ಲಿಯೂ ಏಳನೇ ದಿವಸದಲ್ಲಿಯೂ ಚಿಮುಕಿಸಲಿ. ಏಳನೇ ದಿವಸದಲ್ಲಿ ಅವನು ತನ್ನನ್ನು ಪವಿತ್ರಮಾಡಿ ಕೊಂಡು ತನ್ನ ವಸ್ತ್ರಗಳನ್ನು ಒಗೆದುಕೊಂಡು ಅವನು ಸ್ನಾನಮಾಡಿ ಸಾಯಂಕಾಲದಲ್ಲಿ ಪವಿತ್ರನಾಗುವನು. ಆದರೆ ಅಪವಿತ್ರನಾಗಿದ್ದು ತನ್ನನ್ನು ಶುದ್ಧಪಡಿಸಿ ಕೊಳ್ಳದವನು ಸಭೆಯ ಮಧ್ಯದಿಂದ ತೆಗೆದು ಹಾಕಲ್ಪ ಡಲಿ; ಅವನು ಕರ್ತನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚಿಮುಕಿಸಲ್ಪಡಲಿಲ್ಲ; ಅವನು ಅಪವಿತ್ರನೇ.
- Hebrews 9:19 ಇಬ್ರಿಯರಿಗೆ 9:19ಮೋಶೆಯು ಪ್ರತಿಯೊಂದು ವಿಧಿಯನ್ನು ನ್ಯಾಯಪ್ರಮಾಣದ ಪ್ರಕಾರ ಜನರೆಲ್ಲರಿಗೆ ಹೇಳಿದ ಮೇಲೆ ನೀರು, ಕೆಂಪು ಉಣ್ಣೇ, ಹಿಸ್ಸೋಪು ಇವು ಗಳೊಂದಿಗೆ ಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಗ್ರಂಥದ ಮೇಲೆ ಯೂ ಎಲ್ಲಾ ಜನರ ಮೇಲೆಯೂ ಪ್ರೋಕ್ಷಿಸಿ--
- Revelation 1:5 ಪ್ರಕಟನೆ 1:5ಆತನು ನಮ್ಮನ್ನು ಪ್ರೀತಿಸಿ ತನ್ನ ಸ್ವಂತ ರಕ್ತದಿಂದ ನಮ್ಮನ್ನು ನಮ್ಮ ಪಾಪಗಳಿಂದ ತೊಳೆದು
- Ephesians 5:26–27 ಎಫೆಸದವರಿಗೆ 5:26–27ಆತನು ಅದನ್ನು ವಾಕ್ಯವೆಂಬ ನೀರಿನಿಂದ ತೊಳೆದು ಪ್ರತಿಷ್ಠಿಸಿ ಶುದ್ಧ ಮಾಡಿದ್ದಲ್ಲದೆ ಅದನ್ನು ಕಳಂಕ ಸುಕ್ಕು ಇಂಥಾದ್ದು ಯಾವದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯ ನ್ನಾಗಿ ತನಗೆ ತಾನೇ ಸಮರ್ಪಿಸಿಕೊಳ್ಳಬೇಕೆಂದಿದ್ದಾನೆ.
- Exodus 12:22 ವಿಮೋಚನಕಾಂಡ 12:22ಹಿಸ್ಸೋಪಿನ ಕಟ್ಟನ್ನು ತೆಗೆದುಕೊಂಡು ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ ಬಾಗಿ ಲಿನ ಮೇಲಿನ ಅಡ್ಡಗಂಬಕ್ಕೂ ಪಕ್ಕದಲ್ಲಿರುವ ಎರಡು ನಿಲುವುಗಂಬಗಳಿಗೂ ಹಚ್ಚಿರಿ. ನಿಮ್ಮಲ್ಲಿ ಯಾರೂ ಬೆಳಗಾಗುವ ವರೆಗೆ ಮನೆಯ ಬಾಗಿಲನ್ನು ಬಿಟ್ಟು ಹೋಗಬಾರದು.
- Revelation 7:13–14 ಪ್ರಕಟನೆ 7:13–14ಆಗ ಹಿರಿಯರಲ್ಲಿ ಒಬ್ಬನು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಇವರು ಎಲ್ಲಿಂದ ಬಂದವರು ಎಂದು ನನ್ನನ್ನು ಕೇಳಿದನು. ಅದಕ್ಕೆ ನಾನು ಅಯ್ಯಾ, ನೀನೇ ಬಲ್ಲೆ ಅಂದೆನು. ಅವನು ನನಗೆ--ಇವರು ಮಹಾಸಂಕಟದೊಳಗಿಂದ ಬಂದವರು; ಕುರಿಮರಿಯಾ ದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಬೆಳ್ಳಗೆ ಮಾಡಿದ್ದಾರೆ.
- Leviticus 14:49–52 ಯಾಜಕಕಾಂಡ 14:49–52ಆ ಮನೆ ಯನ್ನು ಶುದ್ಧಪಡಿಸುವದಕ್ಕೊಸ್ಕರ ಎರಡು ಪಕ್ಷಿಗಳನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪನ್ನೂ ತೆಗೆದುಕೊಳ್ಳಬೇಕು. ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಒಂದು ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕು. ತರುವಾಯ ದೇವದಾರು ಕಟ್ಟಿಗೆಯನ್ನೂ ಹಿಸ್ಸೋಪನ್ನೂ ರಕ್ತವರ್ಣವುಳ್ಳ ದಾರ ವನ್ನೂ ಸಜೀವವುಳ್ಳ ಪಕ್ಷಿಯನ್ನೂ ತೆಗೆದುಕೊಂಡು ಅವುಗಳನ್ನು ವಧಿಸಲ್ಪಟ್ಟ ಪಕ್ಷಿಯ ರಕ್ತದಲ್ಲಿ ಮತ್ತು ಹರಿಯುವ ನೀರಿನಲ್ಲಿ ಅದ್ದಿ ಏಳುಸಾರಿ ಆ ಮನೆಗೆ ಚಿಮುಕಿಸಬೇಕು. ಅವನು ಪಕ್ಷಿಯ ರಕ್ತದಿಂದಲೂ ಹರಿಯುವ ನೀರಿನಿಂದಲೂ ಸಜೀವವುಳ್ಳ ಪಕ್ಷಿ ಯಿಂದಲೂ ದೇವದಾರು ಕಟ್ಟಿಗೆಯಿಂದಲೂ ಹಿಸ್ಸೋಪಿ ನಿಂದಲೂ ರಕ್ತವರ್ಣವುಳ್ಳ ದಾರದಿಂದಲೂ ಆ ಮನೆ ಯನ್ನು ಶುದ್ಧೀಕರಿಸಬೇಕು.
- Leviticus 14:4–7 ಯಾಜಕಕಾಂಡ 14:4–7ಆಗ ಶುದ್ಧಮಾಡಿಸಿ ಕೊಳ್ಳುವವನಿಗೊಸ್ಕರ ಜೀವವುಳ್ಳ ಶುದ್ಧವಾದ ಎರಡು ಪಕ್ಷಿಗಳನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣ ವುಳ್ಳ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಳ್ಳು ವಂತೆ ಯಾಜಕನು ಆಜ್ಞಾಪಿಸಬೇಕು. ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಪಾತ್ರೆ ಯಲ್ಲಿ ಕೊಲ್ಲಬೇಕೆಂದು ಯಾಜಕನು ಆಜ್ಞಾಪಿಸಬೇಕು. ಇದಲ್ಲದೆ ಜೀವವುಳ್ಳ ಪಕ್ಷಿಯನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣ ದಾರವನ್ನೂ ಹಿಸ್ಸೋಪನ್ನೂ ತೆಗೆದುಕೊಂಡು ಹರಿಯುವ ನೀರಿನ ಬಳಿಯಲ್ಲಿ ಕೊಲ್ಲಲ್ಪಟ್ಟ ಆ ಪಕ್ಷಿಯ ರಕ್ತದಲ್ಲಿ ಅದ್ದಿ ಕುಷ್ಠದಿಂದ ಶುದ್ಧಪಡಿಸಿಕೊಳ್ಳುವವನ ಮೇಲೆ ಏಳು ಸಾರಿ ಚಿಮುಕಿಸಿ ಅವನನ್ನು ಶುದ್ಧನೆಂದು ನುಡಿದು ಆ ಜೀವವುಳ್ಳ ಪಕ್ಷಿಯನ್ನು ಬಯಲಾದ ಹೊಲದಲ್ಲಿ ಬಿಟ್ಟು ಬಿಡ ಬೇಕು.