Ezekiel · chapter 17 · verse 14
Ezekiel 17:14 in Kannada
ಆ ರಾಜ್ಯವು ತಗ್ಗಾಗಿ ಮೇಲೇಳದ ಹಾಗಿದ್ದರೂ ಅವನು ಒಡಂಬಡಿಕೆಯನ್ನು ಕೈಕೊಳ್ಳುವದರಿಂದ ಅದು ನಿಲ್ಲುವದು.
Aa raajyavu taggaagi melelada haagiddaroo avanu odambadikeyannu kaikolluvadarinda adu nilluvadu.
Ezekiel 17:14 in English
- King James Version (KJV)
- That the kingdom might be base, that it might not lift itself up, [but] that by keeping of his covenant it might stand.
- World English Bible (WEB)
- that the kingdom might be brought low, that it might not lift itself up, but that by keeping his covenant it might stand.
- American Standard Version (ASV)
- that the kingdom might be base, that it might not lift itself up, but that by keeping his covenant it might stand.
- Bible in Basic English (BBE)
- So that the kingdom might be made low with no power of lifting itself up, but might keep his agreement to be his servants.
- Darby Translation (DBY)
- that the kingdom might be abased, that it might not lift itself up, that it might keep his covenant in order to stand.
- Webster's Bible (WBS)
- That the kingdom might be base, that it might not lift itself up, [but] that by keeping his covenant it might stand.
- Young's Literal Translation (YLT)
- That the kingdom may be humble, That it may not lift itself up, To keep his covenant — that it may stand.
Read in context
- 12ಇದರ ಅಭಿಪ್ರಾಯ ನಿಮಗೆ ತಿಳಿಯುವದಿಲ್ಲವೋ? ಅವರಿಗೆ ಎದುರು ಬೀಳುವ ಮನೆಯವರಿಗೆ ಹೀಗೆ ಹೇಳು--ಇಗೋ, ಬಾಬೆಲಿನ ಅರಸನು ಯೆರೂಸಲೇಮಿಗೆ ಬಂದು ಅದರ ಅರಸ ನನ್ನೂ ಅದರ ಪ್ರಧಾನರನ್ನೂ ಕರೆದುಕೊಂಡು ತನ್ನ ಬಳಿಗೆ ಬಾಬೆಲಿಗೆ ಒಯ್ದಿದ್ದಾನೆ.
- 13ಅರಸನ ಸಂತಾನ ದವರನ್ನು ಕರೆದುಕೊಂಡು ಅವನ ಸಂಗಡ ಒಡಂಬಡಿಕೆ ಮಾಡಿ ಅವನಿಂದ ಪ್ರಮಾಣಮಾಡಿಸಿ ದೇಶದ ಬಲಿಷ್ಠರನ್ನು ತೆಗೆದುಕೊಂಡು ಹೋಗಿದ್ದಾನೆ.
- 14ಆ ರಾಜ್ಯವು ತಗ್ಗಾಗಿ ಮೇಲೇಳದ ಹಾಗಿದ್ದರೂ ಅವನು ಒಡಂಬಡಿಕೆಯನ್ನು ಕೈಕೊಳ್ಳುವದರಿಂದ ಅದು ನಿಲ್ಲುವದು.
- 15ಆದರೆ ಇವನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು ತನ್ನ ರಾಯಭಾರಿಗಳನ್ನು ಐಗುಪ್ತಕ್ಕೆ ಕಳು ಹಿಸಿ ತನಗೆ ಕುದುರೆಗಳನ್ನೂ ಬಹಳ ಜನರನ್ನೂ ಕೊಡ ಬೇಕೆಂದು ಹೇಳಿ ಕಳುಹಿಸಿದನು. ಇವನು ಅಭಿವೃದ್ಧಿ ಯಾಗುವನೋ? ಇಂಥಾ ಸಂಗತಿಗಳನ್ನು ಮಾಡುವ ವನು ತಪ್ಪಿಸಿಕೊಳ್ಳುವನೋ? ಅಥವಾ ಒಡಂಬಡಿಕೆ ಯನ್ನು ಮುರಿದು ತಪ್ಪಿಸಿಕೊಳ್ಳಲಾಗುವದೋ?
- 16ನಿಶ್ಚ ಯವಾಗಿ ಅವನಿಗೆ ಅರಸುತನವನ್ನು ಕೊಟ್ಟ ಅರಸನೂ ಅಂದರೆ ಯಾವನ ಪ್ರಮಾಣವನ್ನು ತಿರಸ್ಕರಿಸಿದನೋ ಯಾವನ ಒಡಂಬಡಿಕೆಯನ್ನು ವಿಾರಿದನೋ ಅವನು ಇರುವಲ್ಲಿಯೇ ಬಾಬೆಲಿನ ಮಧ್ಯದಲ್ಲಿ ನನ್ನ ಜೀವದಾಣೆ, ಇವನು ಸಾಯುವನು ಎಂದು ದೇವರಾದ ಕರ್ತನು ಹೇಳುತ್ತಾನೆ.
Cross references
- Ezekiel 29:14 ಯೆಹೆಜ್ಕೇಲನು 29:14ನಾನು ಐಗುಪ್ತರನ್ನು ಸೆರೆಯಿಂದ ತಿರುಗಿ ಬಿಡಿಸಿ ಅವರನ್ನು ಪತ್ರೋಸಿನ ದೇಶಕ್ಕೆ ಅಂದರೆ ಅವರ ಜನ್ಮದೇಶಕ್ಕೆ ಮತ್ತೆ ಬರಮಾಡು ವೆನು; ಅಲ್ಲಿ ಅವರು ಕನಿಷ್ಠ ರಾಜ್ಯದವರಾಗಿರುವರು.
- Deuteronomy 28:43 ಧರ್ಮೋಪದೇಶಕಾಂಡ 28:43ನಿನ್ನ ಮಧ್ಯದಲ್ಲಿರುವ ಪರವಾಸಿ ಮೇಲೆ ಮೇಲಕ್ಕೆ ನಿನ್ನ ಮೇಲೆ ಏರುವನು; ಆದರೆ ನೀನು ಕೆಳ ಕೆಳಗೆ ಇಳಿಯುವಿ.
- Nehemiah 9:36–37 ನೆಹೆಮೀಯ 9:36–37ಇಗೋ, ಈ ದಿವಸ ನಾವು ದಾಸರಾಗಿದ್ದೇವೆ; ಅದರ ಫಲವನ್ನೂ ಉತ್ತಮವಾದದ್ದನ್ನೂ ತಿನ್ನುವದಕ್ಕೆ ನೀನು ನಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ಇಗೋ, ನಾವು ದಾಸರಾಗಿದ್ದೇವೆ. ನಮ್ಮ, ಪಾಪಗಳಿಗೋಸ್ಕರ ನೀನು ನಮ್ಮ ಮೇಲೆ ಇಟ್ಟ ಅರಸುಗಳಿಗೆ ಅದರ ಹುಟ್ಟುವಳಿ ಬಹಳ ಹೋಗುತ್ತದೆ. ಇದಲ್ಲದೆ ಅವರು ತಮ್ಮ ಇಚ್ಛೆಯ ಪ್ರಕಾರ ನಮ್ಮ ಶರೀರಗಳ ಮೇಲೆಯೂ ನಮ್ಮ ಪಶುಗಳ ಮೇಲೆಯೂ ಆಳುತ್ತಾರೆ; ನಾವು ಬಹು ಇಕ್ಕಟ್ಟಿನಲ್ಲಿದ್ದೇವೆ.ಇದೆಲ್ಲಾದರ ನಿಮಿತ್ತ ನಾವು ಒಡಂಬಡಿಕೆಯನ್ನು ಸ್ಥಿರಮಾಡಿ ಬರೆಯುತ್ತೇವೆ; ನಮ್ಮ ಪ್ರಧಾನರೂ ಲೇವಿಯರೂ ಯಾಜಕರೂ ಅದಕ್ಕೆ ಮುದ್ರೆ ಹಾಕುತ್ತಾರೆ ಅಂದನು.
- Lamentations 5:10 ಪ್ರಲಾಪಗಳು 5:10ಭಯಂಕರವಾದ ಕ್ಷಾಮದಿಂದ ನಮ್ಮ ಚರ್ಮ ಒಲೆಯ ಹಾಗೆ ಕಪ್ಪಾಗಿದೆ.
- Jeremiah 38:17 ಯೆರೆಮೀಯ 38:17ಆಗ ಯೆರೆವಿಾಯನು ಚಿದ್ಕೀಯನಿಗೆ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನಿಶ್ಚಯ ವಾಗಿ ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋದರೆ ನಿನ್ನ ಪ್ರಾಣವು ಬದುಕುವದು. ಈ ಪಟ್ಟಣವು ಬೆಂಕಿಯಿಂದ ಸುಡ ಲ್ಪಡುವದಿಲ್ಲ; ಮತ್ತು ನೀನೂ ನಿನ್ನ ಮನೆಯವರೂ ಬದುಕುವಿರಿ.
- 1 Samuel 2:7 1 ಸಮುವೇಲನು 2:7ಕರ್ತನು ಬಡತನವನ್ನು ಐಶ್ವರ್ಯ ವನ್ನು ಕೊಡುವಾತನೂ ತಗ್ಗಿಸುವಾತನೂ ಉನ್ನತಮಾಡು ವಾತನೂ ಆಗಿದ್ದಾನೆ.
- Matthew 22:17–21 ಮತ್ತಾಯನು 22:17–21ಆದದರಿಂದ-- ಕೈಸರನಿಗೆ ಕಪ್ಪವನ್ನು ಕೊಡುವದು ನ್ಯಾಯವೋ ನ್ಯಾಯವಲ್ಲವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು ಅಂದರು. ಯೇಸು ಅವರ ಕೆಟ್ಟತನವನ್ನು ತಿಳಿದು ಕೊಂಡವನಾಗಿ--ಕಪಟಿಗಳೇ, ನೀವು ನನ್ನನ್ನು ಯಾಕೆ ಶೋಧಿಸುತ್ತೀರಿ? ತೆರಿಗೆಯ ನಾಣ್ಯವನ್ನು ನನಗೆ ತೋರಿಸಿರಿ ಅಂದನು. ಆಗ ಅವರು ಒಂದು ಪಾವಲಿ ಯನ್ನು ತಂದುಕೊಟ್ಟರು. ಆತನು ಅವರಿಗೆ--ಈ ರೂಪವೂ ಮೇಲ್ಬರಹವೂ ಯಾರದು ಎಂದು ಕೇಳಿ ದನು. ಅದಕ್ಕೆ ಅವರು ಆತನಿಗೆ--ಕೈಸರನದು ಅಂದರು. ಆಗ ಆತನು ಅವರಿಗೆ-ಕೈಸರನದವುಗಳನ್ನು ಕೈಸರನಿಗೆ ಕೊಡಿರಿ; ದೇವರವುಗಳನ್ನು ದೇವರಿಗೆ ಕೊಡಿರಿ ಅಂದನು.
- Ezekiel 17:6 ಯೆಹೆಜ್ಕೇಲನು 17:6ಅದು ಮೊಳೆತು ತಗ್ಗಾದ ಪ್ರಮಾಣದಲ್ಲಿ ಹಬ್ಬುವ ದ್ರಾಕ್ಷೇ ಗಿಡವಾಯಿತು; ಅದರ ಬಳ್ಳಿಗಳು ಅದರ ಕಡೆಗೆ ತಿರುಗಿ ಕೊಂಡವು, ಅದರ ಬೇರುಗಳು ಅದರ ಕೆಳಗಿದ್ದವು; ಹೀಗೆ ಅದು ದ್ರಾಕ್ಷೇ ಗಿಡವಾಯಿತು, ಕೊಂಬೆಗಳು ಒಡೆದು ಬಳ್ಳಿಗಳು ಹಬ್ಬಿದವು.
- 1 Samuel 2:30 1 ಸಮುವೇಲನು 2:30ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳುವ ದೇನಂದರೆ--ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಕರ್ತನು ಹೇಳುವದೇನಂದರೆ--ನನಗೆ ಅದು ದೂರವಾಗಿರಲಿ; ಯಾಕಂದರೆ ನನ್ನನ್ನು ಸನ್ಮಾನಿಸು ವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸು ವವರನ್ನು ನಾನು ತಿರಸ್ಕರಿಸುವೆನು.
- Jeremiah 27:12–17 ಯೆರೆಮೀಯ 27:12–17ಆಗ ನಾನು ಯೆಹೂದದ ಅರಸನಾದ ಚಿದ್ಕೀ ಯನ ಸಂಗಡ ಈ ವಾಕ್ಯಗಳ ಪ್ರಕಾರ ಮಾತನಾಡಿ ದೆನು--ಬಾಬೆಲಿನ ಅರಸನ ನೊಗಕ್ಕೆ ನಿಮ್ಮ ಹೆಗಲು ಗಳನ್ನು ಕೊಟ್ಟು ಅವನಿಗೂ ಅವನ ಜನರಿಗೂ ಸೇವೆಮಾಡಿ ಬದುಕಿರಿ. ಬಾಬೆಲಿನ ಅರಸನಿಗೆ ಸೇವೆ ಮಾಡದ ಜನಾಂಗಕ್ಕೆ ವಿರೋಧವಾಗಿ ಕರ್ತನು ಮಾತ ನಾಡಿದ ಪ್ರಕಾರ--ನೀನೂ ನಿನ್ನ ಜನರೂ ಯಾಕೆ ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯುವಿರಿ? ಆದದರಿಂದ ಬಾಬೆಲಿನ ಅರಸನಿಗೆ ನೀವು ಸೇವೆಮಾಡಬೇಡಿರೆಂದು ನಿಮಗೆ ಹೇಳುವ ಪ್ರವಾದಿಗಳ ವಾಕ್ಯಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ. ನಾನು ಅವರನ್ನು ಕಳುಹಿಸಲಿಲ್ಲವೆಂದು ಕರ್ತನು ಅನ್ನುತ್ತಾನೆ; ಆದಾಗ್ಯೂ ಅವರು ನಾನು ನಿಮ್ಮನ್ನು ಓಡಿಸಿಬಿಡುವ ಹಾಗೆಯೂ ನೀವೂ ನಿಮಗೆ ಪ್ರವಾದಿಸುವ ಪ್ರವಾದಿಗಳೂ ನಾಶವಾಗುವ ಹಾಗೆಯೂ ನನ್ನ ಹೆಸರಿನಲ್ಲಿ ನಿಮಗೆ ಸುಳ್ಳಾಗಿ ಪ್ರವಾದಿಸುತ್ತಾರೆ. ನಾನು ಯಾಜಕರ ಸಂಗಡಲೂ ಈ ಜನರೆಲ್ಲರ ಸಂಗಡಲೂ ಮಾತನಾಡಿದೆನು; ಏನಂದರೆ, ಕರ್ತನು ಹೀಗೆ ಹೇಳುತ್ತಾನೆ--ಇಗೋ, ಕರ್ತನ ಆಲಯದ ಪಾತ್ರೆಗಳು ಬೇಗ ಬಾಬೆಲಿನಿಂದ ತಿರುಗಿ ತರಲ್ಪಡು ವದೆಂದು ನಿಮಗೆ ಪ್ರವಾದಿಸುವ ನಿಮ್ಮ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ. ಅವರಿಗೆ ಕಿವಿಗೊಡ ಬೇಡಿರಿ; ಬಾಬೆಲಿನ ಅರಸನಿಗೆ ಸೇವೆಮಾಡಿ ಬದುಕಿರಿ; ಈ ಪಟ್ಟಣವು ಯಾಕೆ ಹಾಳಾಗಬೇಕು?