Ezekiel · chapter 19 · verse 10
Ezekiel 19:10 in Kannada
ನಿನ್ನ ತಾಯಿ ನಿನ್ನ ರಕ್ತದಲ್ಲಿ ನೀರಿನ ಬಳಿ ನೆಟ್ಟ ದ್ರಾಕ್ಷೆಯ ಗಿಡದ ಹಾಗೆ ಇದ್ದಾಳೆ; ಅದು ನೀರಾವರಿ ಯಿಂದಲೂ ಫಲವುಳ್ಳದ್ದಾಗಿಯೂ ತುಂಬಾ ಕೊಂಬೆ ಗಳುಳ್ಳದ್ದಾಗಿಯೂ ಇದೆ.
Ninna taayi ninna raktadalli neerina bali netta draaksheya gidada haage iddaale; adu neeraavari yindaloo phalavulladdaagiyoo tumbaa kombe galulladdaagiyoo ide.
Ezekiel 19:10 in English
- King James Version (KJV)
- Thy mother [is] like a vine in thy blood, planted by the waters: she was fruitful and full of branches by reason of many waters.
- World English Bible (WEB)
- “‘Your mother was like a vine in your blood, planted by the waters. It was fruitful and full of branches by reason of many waters.
- American Standard Version (ASV)
- Thy mother was like a vine, in thy blood, planted by the waters: it was fruitful and full of branches by reason of many waters.
- Bible in Basic English (BBE)
- Your mother was in comparison like a vine, planted by the waters: she was fertile and full of branches because of the great waters.
- Darby Translation (DBY)
- Thy mother was as a vine, in thy rest, planted by the waters: it was fruitful and full of branches by reason of many waters.
- Webster's Bible (WBS)
- Thy mother [is] like a vine in thy blood, planted by the waters: she was fruitful and full of branches by reason of many waters.
- Young's Literal Translation (YLT)
- Thy mother [is] as a vine in thy blood by waters planted, Fruitful and full of boughs it hath been, Because of many waters.
Read in context
- 8ಆಗ ಜನಾಂಗಗಳು ಸುತ್ತಲಿನ ಪ್ರಾಂತ್ಯಗಳೊಳಗಿಂದ ಕೂಡಿ ಬಂದು ಅದಕ್ಕೆ ವಿರೋಧವಾಗಿ ನಿಂತು ಅದರ ಮೇಲೆ ಬಲೆಯನ್ನೊಡ್ಡಿದರು. ಆಗ ಅದು ಅವರ ಹಳ್ಳದಲ್ಲಿ ಸಿಕ್ಕಿ ಬಿದ್ದಿತು.
- 9ಅದಕ್ಕೆ ಸಂಕೋಲೆಗಳನ್ನು ತೊಡಿಸಿ, ಕಾವಲಿರಿಸಿ, ಬಾಬೆಲಿನ ಅರಸನ ಬಳಿಗೆ ತೆಗೆದುಕೊಂಡು ಹೋದರು. ಅದರ ಶಬ್ದವು ಇನ್ನು ಮೇಲೆ ಇಸ್ರಾ ಯೇಲಿನ ಪರ್ವತಗಳ ಮೇಲೆ ಕೇಳಲ್ಪಡದ ಹಾಗೆ ಅದನ್ನು ದುರ್ಗದಲ್ಲಿರಿಸಿದರು.
- 10ನಿನ್ನ ತಾಯಿ ನಿನ್ನ ರಕ್ತದಲ್ಲಿ ನೀರಿನ ಬಳಿ ನೆಟ್ಟ ದ್ರಾಕ್ಷೆಯ ಗಿಡದ ಹಾಗೆ ಇದ್ದಾಳೆ; ಅದು ನೀರಾವರಿ ಯಿಂದಲೂ ಫಲವುಳ್ಳದ್ದಾಗಿಯೂ ತುಂಬಾ ಕೊಂಬೆ ಗಳುಳ್ಳದ್ದಾಗಿಯೂ ಇದೆ.
- 11ಆಳುವವರ ರಾಜದಂಡ ಗಳಿಗೆ ತಕ್ಕ ಬಲವುಳ್ಳ ಬಳ್ಳಿಗಳು ಅದರಲ್ಲಿವೆ; ಅದರ ಉದ್ದವು ಎಲ್ಲಾ ರೆಂಬೆಗಳಿಗಿಂತ ಹೆಚ್ಚಾಗಿವೆ; ಹಾಗೆಯೇ ಅದು ತನ್ನ ಎತ್ತರಕ್ಕೆ ಬಹು ಕೊಂಬೆಗಳ ಮಧ್ಯದಲ್ಲಿ ಉದ್ದವಾಗಿ ಕಾಣಬರುತ್ತಿದೆ.
- 12ಆದರೆ ಅದು ರೋಷ ದಲ್ಲಿ ಕೀಳಲ್ಪಟ್ಟು ನೆಲಕ್ಕೆ ಹಾಕಲ್ಪಟ್ಟಿತು; ಮೂಡಣ ಗಾಳಿಯು ಅದರ ಫಲವನ್ನು ಒಣಗಿಸಿತು; ಬಲವಾದ ಬಳ್ಳಿಗಳು ಮುರಿಯಲ್ಪಟ್ಟು ಒಣಗಿ ಹೋದವು; ಬೆಂಕಿಯು ಅವುಗಳನ್ನು ಸುಟ್ಟುಹಾಕಿತು.
Cross references
- Psalm 80:8–11 ಕೀರ್ತನೆಗಳು 80:8–11ನೀನು ದ್ರಾಕ್ಷೇಗಿಡವನ್ನು ಐಗುಪ್ತದಿಂದ ತಂದಿ; ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿ. ಅದರ ಮುಂದೆ ಸ್ಥಳ ಸಿದ್ಧಮಾಡಿದಿ; ಆಗ ಅದು ಬೇರೂರಿ ದೇಶವನ್ನು ತುಂಬಿತು. ಅದರ ನೆರಳಿನಿಂದ ಬೆಟ್ಟ ಗಳೂ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲ್ಪ ಟ್ಟವು. ಅದು ತನ್ನ ರೆಂಬೆಗಳನ್ನು ಸಮುದ್ರದ ವರೆಗೂ ತನ್ನ ಬಳ್ಳಿಗಳನ್ನು ನದಿಗೂ ಹರಡಿಸಿತು.
- Deuteronomy 8:7 ಧರ್ಮೋಪದೇಶಕಾಂಡ 8:7ನಿನ್ನ ದೇವರಾದ ಕರ್ತನು ನಿನ್ನನ್ನು ಉತ್ತಮ ದೇಶಕ್ಕೆ ಬರಮಾಡುತ್ತಾನೆ; ಅದು ನೀರಿನ ಹಳ್ಳಗಳೂ ತಗ್ಗಿನಲ್ಲಿಯೂ ಬೆಟ್ಟದಲ್ಲಿಯೂ ಉಕ್ಕುವ ಬುಗ್ಗೆಗಳುಳ್ಳ ದೇಶವೇ.
- Matthew 21:33–41 ಮತ್ತಾಯನು 21:33–41ಮತ್ತೊಂದು ಸಾಮ್ಯವನ್ನು ಕೇಳಿರಿ: ಒಬ್ಬ ಮನೇ ಯಜಮಾನನು ದ್ರಾಕ್ಷೇತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿ ಅದರೊಳಗೆ ತೊಟ್ಟಿಯನ್ನು ಅಗೆದು ಗೋಪುರವನ್ನು ಕಟ್ಟಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ದೂರದೇಶಕ್ಕೆ ಹೋದನು. ಫಲದ ಕಾಲವು ಸಮಾಪಿಸಿದಾಗ ತನ್ನ ಫಲಗಳನ್ನು ಪಡಕೊಳ್ಳು ವದಕ್ಕೆ ತನ್ನ ಸೇವಕರನ್ನು ಒಕ್ಕಲಿಗರ ಬಳಿಗೆ ಕಳುಹಿಸಿಕೊಟ್ಟನು. ಆಗ ಒಕ್ಕಲಿಗರು ಅವನ ಸೇವಕರನ್ನು ಹಿಡಿದು ಒಬ್ಬನನ್ನು ಹೊಡೆದು ಇನ್ನೊಬ್ಬ ನನ್ನು ಕೊಂದು ಹಾಕಿದರು. ಮತ್ತೊಬ್ಬನ ಮೇಲೆ ಕಲ್ಲೆಸೆದರು. ಅವನು ತಿರಿಗಿ ಮೊದಲನೆಯವರಿಗಿಂತ ಹೆಚ್ಚು ಸೇವಕರನ್ನು ಕಳುಹಿಸಿಕೊಟ್ಟನು; ಅವರು ಅದೇ ರೀತಿಯಲ್ಲಿ ಅವರಿಗೂ ಮಾಡಿದರು. ಆದರೆ ಅವನು-- ನನ್ನ ಮಗನನ್ನಾದರೂ ಅವರು ಸನ್ಮಾನಿ ಸಾರು ಎಂದು ಅಂದುಕೊಂಡು ಕಟ್ಟಕಡೆಗೆ ಅವನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಒಕ್ಕಲಿಗರು ಆ ಮಗನನ್ನು ನೋಡಿ ತಮ್ಮತಮ್ಮೊಳಗೆ--ಇವನೇ ಬಾಧ್ಯಸ್ಥನಾಗಿದ್ದಾನೆ, ಬನ್ನಿರಿ; ನಾವು ಇವನನ್ನು ಕೊಂದು ಇವನ ಸ್ವಾಸ್ತ್ಯವನ್ನು ಸ್ವಾಧೀನಮಾಡಿಕೊ ಳ್ಳೋಣ ಎಂದು ಅಂದು ಕೊಂಡರು. ಅವರು ಅವನನ್ನು ಹಿಡಿದು ದ್ರಾಕ್ಷೇ ತೋಟದಿಂದ ಹೊರಗೆ ಹಾಕಿ ಅವನನ್ನು ಕೊಂದು ಹಾಕಿದರು. ಹೀಗಿರುವ ದರಿಂದ ದ್ರಾಕ್ಷೇ ತೋಟದ ಯಜಮಾನನು ಬಂದಾಗ ಆ ಒಕ್ಕಲಿಗರಿಗೆ ಏನು ಮಾಡಾನು ಅಂದನು. ಅವರು ಆತನಿಗೆ--ಅವನು ಆ ದುಷ್ಟ ಮನುಷ್ಯರನು ಕ್ರೂರವಾಗಿ ಸಂಹರಿಸುವನು; ಮತ್ತು ತಕ್ಕಕಾಲದಲ್ಲಿ ತನಗೆ ಫಲಗಳನ್ನು ಸಲ್ಲಿಸುವ ಬೇರೆ ಒಕ್ಕಲಿಗರಿಗೆ ತನ್ನ ದ್ರಾಕ್ಷೇತೋಟವನ್ನು ವಾರಕ್ಕೆ ಕೊಡುವನು ಎಂದು ಹೇಳಿದರು.
- Numbers 24:6–7 ಅರಣ್ಯಕಾಂಡ 24:6–7ಅವು ಕಣಿವೆಗಳ ಹಾಗೆ ವಿಸ್ತರಿಸಿ ಅವೆ; ನದಿ ತೀರದಲ್ಲಿರುವ ತೋಟಗಳ ಹಾಗೆಯೂ ಕರ್ತನು ನೆಟ್ಟ ಅಗರು ಮರಗಳ ಹಾಗೆಯೂ ನೀರಿನ ಬಳಿ ಯಲ್ಲಿರುವ ದೇವದಾರುಗಳ ಹಾಗೆಯೂ ಇರುತ್ತವೆ. ತನ್ನ ತೊಟ್ಟಿಗಳಿಂದ ನೀರು ಹರಿಯಮಾಡುವನು; ಅವನ ಸಂತತಿಯೂ ಅನೇಕ ಜಲಗಳಲ್ಲಿ ಇರುವದು; ಅವನ ಅರಸನು ಅಗಾಗನಿಗಿಂತ ಉನ್ನತವಾಗಿರುವನು; ಅವನ ರಾಜ್ಯವು ಘನತೆಗೇರಿರುವದು.
- Hosea 2:2 ಹೋಶೇಯ 2:2ನಿಮ್ಮ ತಾಯಿಯ ಸಂಗಡ ವಾದಿಸಿರಿ, ವಾದಿಸಿರಿ; ಅವಳು ನನ್ನ ಹೆಂಡತಿಯಲ್ಲ; ಇಲ್ಲವೆ ನಾನು ಅವಳ ಗಂಡನಲ್ಲ; ಆದದರಿಂದ ಅವಳು ತನ್ನ ದೃಷ್ಟಿಯಿಂದ ತನ್ನ ವ್ಯಭಿಚಾರತ್ವಗಳನ್ನು ತನ್ನ ಸ್ತನಗಳ ಮಧ್ಯದಿಂದ ತನ್ನ ವ್ಯಭಿಚಾರಗಳನ್ನು ತೊಲಗಿಸಲಿ.
- Ezekiel 19:2 ಯೆಹೆಜ್ಕೇಲನು 19:2ಹೀಗೆ ಹೇಳು--ನಿನ್ನ ತಾಯಿ ಏನು? ಒಂದು ಸಿಂಹಿಣಿಯೇ, ಆಕೆ ಸಿಂಹಗಳ ಜೊತೆ ಮಲಗಿ ಪ್ರಾಯದ ಸಿಂಹಗಳ ಮಧ್ಯದಲ್ಲಿ ತನ್ನ ಮರಿಗಳನ್ನು ಸಾಕಿದಳು.
- Ezekiel 17:6 ಯೆಹೆಜ್ಕೇಲನು 17:6ಅದು ಮೊಳೆತು ತಗ್ಗಾದ ಪ್ರಮಾಣದಲ್ಲಿ ಹಬ್ಬುವ ದ್ರಾಕ್ಷೇ ಗಿಡವಾಯಿತು; ಅದರ ಬಳ್ಳಿಗಳು ಅದರ ಕಡೆಗೆ ತಿರುಗಿ ಕೊಂಡವು, ಅದರ ಬೇರುಗಳು ಅದರ ಕೆಳಗಿದ್ದವು; ಹೀಗೆ ಅದು ದ್ರಾಕ್ಷೇ ಗಿಡವಾಯಿತು, ಕೊಂಬೆಗಳು ಒಡೆದು ಬಳ್ಳಿಗಳು ಹಬ್ಬಿದವು.
- Hosea 2:5 ಹೋಶೇಯ 2:5ಅವರ ತಾಯಿ ಸೂಳೆ ತನ ಮಾಡಿದ್ದಾಳೆ; ಅವರನ್ನು ಹೆತ್ತವಳು ನಾಚಿಕೆಯಿ ಲ್ಲದೆ ನಡೆದಿದ್ದಾಳೆ; ಯಾಕಂದರೆ ಅವಳು--ನನ್ನ ರೊಟ್ಟಿ ಯನ್ನೂ ನನ್ನ ನೀರನ್ನೂ ನನ್ನ ಉಣ್ಣೆನಾರು ಗಳನ್ನೂ ನನ್ನ ತೈಲವನ್ನೂ ಪಾನವನ್ನೂ ನನಗೆ ಕೊಡುವ ನನ್ನ ಪ್ರಿಯರ ಹಿಂದೆ ಹೋಗುತ್ತೇನೆಂದು ಅಂದುಕೊಂಡಿದ್ದಾಳೆ.
- Psalm 89:25–29 ಕೀರ್ತನೆಗಳು 89:25–29ಸಮುದ್ರದಲ್ಲಿ ಅವನ ಕೈ ಯನ್ನೂ ನದಿಗಳಲ್ಲಿ ಅವನ ಬಲಗೈಯನ್ನೂ ಇರಿಸು ವೆನು. ಅವನು--ನೀನು ನನ್ನ ತಂದೆಯೂ ದೇವರೂ ರಕ್ಷಣೆಯ ಬಂಡೆಯೂ ಎಂದು ನನಗೆ ಮೊರೆಯಿಡು ವನು. ನಾನು ಅವನನ್ನು ನನ್ನ ಚೊಚ್ಚಲ ಮಗನ ನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾ ಗಿಯೂ ಮಾಡುವೆನು. ಎಂದೆಂದಿಗೂ ಅವನಿಗೋ ಸ್ಕರ ನನ್ನ ಕರುಣೆಯನ್ನು ಕಾದಿಡುವೆನು. ನನ್ನ ಒಡಂಬಡಿಕೆಯು ಅವನೊಂದಿಗೆ ದೃಢವಾಗಿರುವದು. ಅವನ ಸಂತತಿ ಯನ್ನು ಸಹ ಎಂದೆಂದಿಗೂ ಅವನ ಸಿಂಹಾಸನವನ್ನು ಆಕಾಶದ ದಿವಸಗಳ ಹಾಗೆಯೂ ಮಾಡುವೆನು.
- Isaiah 5:1–4 ಯೆಶಾಯ 5:1–4ನನ್ನ ಪ್ರಿಯನ ದ್ರಾಕ್ಷೇ ತೋಟದ ವಿಷಯವಾದ ಹಾಡನ್ನು ನನ್ನ ಅತಿ ಪ್ರಿಯನಿಗೆ ನಾನು ಹಾಡುವೆನು. ಫಲವತ್ತಾದ ಗುಡ್ಡದಲ್ಲಿ ನನ್ನ ಅತಿಪ್ರಿಯನಿಗೆ ದ್ರಾಕ್ಷೆಯ ತೋಟವಿದೆ. ಅವನು ಅದಕ್ಕೆ ಬೇಲಿ ಹಾಕಿ, ಅದರೊಳಗಿಂದ ಕಲ್ಲುಗಳನ್ನು ಆರಿಸಿ ತೆಗೆದು ಹಾಕಿ ಒಳ್ಳೇ ದ್ರಾಕ್ಷೆಯನ್ನು ನೆಟ್ಟು, ಅದರ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿ, ದ್ರಾಕ್ಷೇ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆ ದ್ರಾಕ್ಷೇ ಹಣ್ಣನ್ನು ಕೊಡುವದೆಂದು ಎದುರು ನೋಡು ತ್ತಿರಲು, ಅದು ಕಾಡುಹಣ್ಣನ್ನು ಬಿಟ್ಟಿತು. ಓ ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನನಗೂ ನನ್ನ ದ್ರಾಕ್ಷೆಯ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ. ನನ್ನ ದ್ರಾಕ್ಷೇ ತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಅದಕ್ಕೆ ಏನು ಮಾಡಬೇಕಾಗಿತ್ತು? ಹೀಗಿರಲು ಅದು ಒಳ್ಳೇ ದ್ರಾಕ್ಷೇ ಫಲವನ್ನು ಫಲಿಸುವದೆಂದು ನಾನು ನಿರೀಕ್ಷಿಸುತ್ತಿರಲು ಅದು ಕಾಡುಹಣ್ಣನ್ನು ಕೊಟ್ಟಿದ್ದು ಯಾಕೆ?
- Deuteronomy 8:9 ಧರ್ಮೋಪದೇಶಕಾಂಡ 8:9ನೀನು ಕೊರತೆಯಿಲ್ಲದೆ ರೊಟ್ಟಿ ತಿನ್ನುವ ಆ ದೇಶದಲ್ಲಿ ಯಾವದರ ಕೊರತೆ ನಿನಗೆ ಆಗದು; ಅದರ ಕಲ್ಲುಗಳು ಕಬ್ಬಿಣವಾಗಿಯೂ ಅದರ ಬೆಟ್ಟ ಗಳೊಳಗಿಂದ ತಾಮ್ರವನ್ನು ಅಗಿಯಬಹುದಾದದ್ದೂ ಆಗಿರುವ ದೇಶ.
- Ezekiel 15:2–8 ಯೆಹೆಜ್ಕೇಲನು 15:2–8ಮನುಷ್ಯಪುತ್ರನೇ, ದ್ರಾಕ್ಷೇಗಿಡವು ಬೇರೆ ಗಿಡಗಳಿಗಿಂತಲೂ ಇಲ್ಲವೆ ಅಡವಿ ಯಲ್ಲಿರುವ ಮರಗಳ ಕೊಂಬೆಗಳಿಗಿಂತಲೂ ಹೆಚ್ಚೇನು? ಕಟ್ಟಿಗೆಯನ್ನು ತೆಗೆದುಕೊಂಡು ಅದರಿಂದ ಯಾವ ಕೆಲಸವನ್ನಾದರೂ ಮಾಡುವರೋ? ಅಥವಾ ಅದರ ಮೇಲೆ ಯಾವ ಸಾಮಗ್ರಿಯನನ್ನಾದರೂ ನೇತುಹಾಕು ವದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ? ಇಗೋ, ಅದು ಸೌದೆಗಾಗಿ ಬೆಂಕಿಗೆ ಹಾಕಲ್ಪಡುತ್ತದೆ; ಬೆಂಕಿಯು ಅದರ ಎರಡು ಕೊನೆಗಳನ್ನು ತಿಂದುಬಿಡು ತ್ತದೆ; ಅದರ ಮಧ್ಯಭಾಗವು ಸುಟ್ಟುಹೋಗುತ್ತದೆ. ಇದೇನಾದರೂ ಕೆಲಸಕ್ಕೆ ಬರುವದೋ? ಇಗೋ, ಇದು ಸಂಪೂರ್ಣವಾಗಿದ್ದಾಗಲೇ ಕೆಲಸಕ್ಕೆ ಬರಲಿಲ್ಲ ಎಂದ ಮೇಲೆ ಬೆಂಕಿಯು ಅದನ್ನು ತಿಂದು ಸುಟ್ಟು ಬಿಟ್ಟಮೇಲೆ ಯಾವ ಕೆಲಸಕ್ಕೆ ಬಂದೀತು? ಆದದ ರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ವನವೃಕ್ಷಗಳಲ್ಲಿ ದ್ರಾಕ್ಷೇಗಿಡಗಳನ್ನು ನಾನು ಹೇಗೆ ಬೆಂಕಿಗೆ ಸೌದೆಗಾಗಿ ಮಾಡಿರುವೆನೋ? ಹಾಗೆಯೇ ನಾನು ಯೆರೂಸಲೇಮಿನ ನಿವಾಸಿಗಳನ್ನೂ ಕೊಟ್ಟಿದ್ದೇನೆ. ನನ್ನ ಮುಖವನ್ನು ಅವರಿಗೆ ವಿರೋಧವಾಗಿ ತಿರುಗಿಸುತ್ತೇನೆ. ಅವರು ಹೊರಗೆ ಬಂದು ಬೆಂಕಿಯೊಳಗಿಂದ ತಪ್ಪಿಸಿ ಕೊಂಡರೂ ಮತ್ತೊಂದು ಬೆಂಕಿಯು ಅವರನ್ನು ನುಂಗಿ ಬಿಡುವದು. ನಾನು ನನ್ನ ಮುಖವನ್ನು ಅವರಿಗೆ ವಿರೋಧವಾಗಿ ಇಡುವಾಗ ನಾನೇ ಕರ್ತನೆಂದು ತಿಳಿದುಕೊಳ್ಳುವಿರಿ.ಅವರು ಅತಿಕ್ರಮಿಸಿದ್ದರಿಂದ ನಾನು ಆ ದೇಶವನ್ನು ಹಾಳು ಮಾಡುವೆನೆಂದು ದೇವರಾದ ಕರ್ತನು ಹೇಳುತ್ತಾನೆ. ಅವರು ಅತಿಕ್ರಮಿಸಿದ್ದರಿಂದ ನಾನು ಆ ದೇಶವನ್ನು ಹಾಳು ಮಾಡುವೆನೆಂದು ದೇವರಾದ ಕರ್ತನು ಹೇಳುತ್ತಾನೆ.