Ezekiel · chapter 19 · verse 2
Ezekiel 19:2 in Kannada
ಹೀಗೆ ಹೇಳು--ನಿನ್ನ ತಾಯಿ ಏನು? ಒಂದು ಸಿಂಹಿಣಿಯೇ, ಆಕೆ ಸಿಂಹಗಳ ಜೊತೆ ಮಲಗಿ ಪ್ರಾಯದ ಸಿಂಹಗಳ ಮಧ್ಯದಲ್ಲಿ ತನ್ನ ಮರಿಗಳನ್ನು ಸಾಕಿದಳು.
Heege helu--ninna taayi enu? Ondu sinhiniye, aake sinhagala jote malagi praayada sinhagala madhyadalli tanna marigalannu saakidalu.
Ezekiel 19:2 in English
- King James Version (KJV)
- And say, What [is] thy mother? A lioness: she lay down among lions, she nourished her whelps among young lions.
- World English Bible (WEB)
- and say, ‘What was your mother? A lioness. She couched among lions, in the middle of the young lions she nourished her cubs.
- American Standard Version (ASV)
- and say, What was thy mother? A lioness: she couched among lions, in the midst of the young lions she nourished her whelps.
- Bible in Basic English (BBE)
- What was your mother? Like a she-lion among lions, stretched out among the young lions she gave food to her little ones.
- Darby Translation (DBY)
- and say, What was thy mother? A lioness: she lay down among lions, she nourished her whelps in the midst of the young lions.
- Webster's Bible (WBS)
- And say, What [is] thy mother: A lioness: she lay down among lions, she nourished her whelps among young lions.
- Young's Literal Translation (YLT)
- and thou hast said: What [is] thy mother? — a lioness, Among lions she hath crouched down, In the midst of young lions she hath multiplied her whelps.
Read in context
- 1ಇದಲ್ಲದೆ ನೀನು ಇಸ್ರಾಯೇಲಿನ ಪ್ರಧಾನ ವಿಷಯವಾಗಿ ಈ ಪ್ರಲಾಪ ವನ್ನೆತ್ತಿ
- 2ಹೀಗೆ ಹೇಳು--ನಿನ್ನ ತಾಯಿ ಏನು? ಒಂದು ಸಿಂಹಿಣಿಯೇ, ಆಕೆ ಸಿಂಹಗಳ ಜೊತೆ ಮಲಗಿ ಪ್ರಾಯದ ಸಿಂಹಗಳ ಮಧ್ಯದಲ್ಲಿ ತನ್ನ ಮರಿಗಳನ್ನು ಸಾಕಿದಳು.
- 3ತನ್ನ ಮರಿಗಳಲ್ಲಿ ಒಂದನ್ನು ಬೆಳೆಸಿದಳು; ಇದು ಪ್ರಾಯದ ಸಿಂಹವಾಯಿತು, ಇದು ಕೊಳ್ಳೆ ಹೊಡೆಯು ವದನ್ನು ಕಲಿತು ಮನುಷ್ಯರನ್ನು ನುಂಗಿಬಿಟ್ಟಿತು.
- 4ಜನಾಂಗಗಳವರು ಅದರ ಸುದ್ದಿಯನ್ನು ಕೇಳಿದರು; ಅವರ ಹಳ್ಳದಲ್ಲಿ ಇದನ್ನು ಹಿಡಿದುಕೊಂಡರು, ಸಂಕೋ ಲೆಗಳಿಂದ ಬಂಧಿಸಿ ಐಗುಪ್ತದೇಶಕ್ಕೆ ತೆಗೆದುಕೊಂಡು ಹೋದರು.
Cross references
- Zechariah 11:3 ಜೆಕರ್ಯ 11:3ಕುರುಬರು ಗೋಳಿಡುವ ಶಬ್ದವುಂಟು; ಅವರ ಗೌರವವು ಕೆಡಿಸಲ್ಪಟ್ಟಿದೆ, ಪ್ರಾಯದ ಸಿಂಹಗಳ ಘರ್ಜಿಸುವ ಶಬ್ದವುಂಟು; ಯೊರ್ದನಿನ ಗರ್ವ ಕೆಡಿಸಲ್ಪಟ್ಟಿದೆ.
- Isaiah 5:29 ಯೆಶಾಯ 5:29ಅವರ ಘರ್ಜ ನೆಯು ಸಿಂಹದಂತೆ ಅದೆ. ಪ್ರಾಯದ ಸಿಂಹಗಳಂತೆ ಆರ್ಭಟಿಸುತ್ತಾರೆ; ಹೌದು, ಘರ್ಜಿಸುತ್ತಾ ಬೇಟೆ ಹಿಡಿದು ಭದ್ರವಾಗಿ ಹೊತ್ತುಕೊಂಡು ಹೋಗುತ್ತಾರೆ ಅದನ್ನು ಬಿಡಿಸುವವನು ಒಬ್ಬನೂ ಇಲ್ಲ.ಆ ದಿನದಲ್ಲಿ ಅವರು ಸಮುದ್ರವು ಬೋರ್ಗರೆಯುವಂತೆ ಅವರ ಮೇಲೆ ಘರ್ಜಿಸುವರು; ಭೂಮಿಯನ್ನು ದೃಷ್ಟಿ ಸಿದರೆ ಅಂಧಕಾರವನ್ನೂ ದುಃಖವನ್ನೂ ನೋಡುವಿ. ಆಕಾಶಮಂಡಲದಲ್ಲಿ ಬೆಳಕು ಕತ್ತಲಾಗುವದು.
- Isaiah 11:6–9 ಯೆಶಾಯ 11:6–9ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆ ಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟ ಪಶುವೂ ಒಟ್ಟಿಗಿರುವವು; ಇವುಗಳನ್ನು ಒಂದು ಚಿಕ್ಕ ಮಗುವು ನಡಿಸುವದು. ಹಸುವು ಕರಡಿಯ ಸಂಗಡ ಮೇಯುವವು; ಅವುಗಳ ಮರಿಗಳು ಜೊತೆಯಾಗಿ ಮಲಗುವವು; ಸಿಂಹವು ಎತ್ತಿನಂತೆ ಹುಲ್ಲನ್ನು ಮೇಯು ವದು. ಮೊಲೆಕೂಸು ನಾಗರ ಹುತ್ತದ ಮೇಲೆ ಆಡುವದು, ಮೊಲೆ ಬಿಟ್ಟ ಮಗುವು ಹಾವಿನ ಬಿಲದ ಮೇಲೆ ಕೈಹಾಕುವದು. ನನ್ನ ಪರಿಶುದ್ಧ ಪರ್ವತದ ಲ್ಲೆಲ್ಲಾ ಕೇಡನ್ನಾಗಲಿ ನಾಶವನ್ನಾಗಲಿ ಯಾರೂ ಮಾಡು ವದಿಲ್ಲ; ಸಮುದ್ರವು ನೀರಿನಿಂದ ಮುಚ್ಚಿಕೊಂಡಿರು ವಂತೆ ಕರ್ತನ ತಿಳುವಳಿಕೆಯು ಭೂಮಿಯಲ್ಲಿ ತುಂಬಿ ಕೊಂಡಿರುವದು.
- Nahum 2:11–12 ನಹೂಮ 2:11–12ಸಿಂಹದ ಗವಿಯೂ ಎಳೇ ಸಿಂಹಗಳು ಮೇಯುವ ಸ್ಥಳವು ಎಲ್ಲಿ? ಅಲ್ಲಿ ಮುದಿಸಿಂಹ, ಸಿಂಹಿಣಿ ಸಿಂಹದ ಮರಿಗಳು ನಡೆದಾಡಿದರೂ ಯಾರೂ ಹೆದರಿ ಸಲಿಲ್ಲವಲ್ಲಾ? ಸಿಂಹವು ತನ್ನ ಮರಿಗಳಿಗೆ ಸಾಕಾ ಗುವಷ್ಟು ಸೀಳಿ ತನ್ನ ಸಿಂಹಿಣಿಗಳಿಗೋಸ್ಕರ ಕೊರಳು ಹಿಸುಕಿ ಕೊಳ್ಳೆಯಿಂದ ತನ್ನ ಗವಿಗಳನ್ನೂ ಸುಲಿಗೆಯಿಂದ ತನ್ನ ಗುಹೆಗಳನ್ನೂ ತುಂಬಿಸುತ್ತಿತ್ತು.ಸೈನ್ಯಗಳ ಕರ್ತನು ಹೇಳುವದೇನಂದರೆ -- ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ; ಅದರ ರಥಗಳನ್ನು ಹೊಗೆಯಾ ಗಲು ಸುಡುತ್ತೇನೆ; ಕತ್ತಿಯು ನಿನ್ನ ಎಳೇ ಸಿಂಹಗಳನ್ನು ನುಂಗಿಬಿಡುವದು; ನಿನ್ನ ಕೊಳ್ಳೆಯನ್ನು ಭೂಮಿಯ ಮೇಲಿನಿಂದ ಕಡಿದುಬಿಡುತ್ತೇನೆ; ನಿನ್ನ ಸೇವಕರ ಶಬ್ದವು ಇನ್ನು ಕೇಳಲ್ಪಡುವದಿಲ್ಲ.
- Job 4:11 ಯೋಬನು 4:11ಪ್ರಾಯದ ಸಿಂಹವು ಕೊಳ್ಳೆ ಇಲ್ಲದರಿಂದ ನಾಶವಾಗುತ್ತದೆ. ಸಿಂಹದ ಮರಿಗಳು ಚದುರಿಸಲ್ಪಡುತ್ತವೆ.
- Psalm 58:6 ಕೀರ್ತನೆಗಳು 58:6ಓ ದೇವರೇ, ಅವರ ಬಾಯಿ ಯಲ್ಲಿರುವ ಹಲ್ಲುಗಳನ್ನು ಮುರಿದುಬಿಡು; ಓ ಕರ್ತನೇ, ಪ್ರಾಯದ ಸಿಂಹಗಳ ಕೋರೆ ಹಲ್ಲುಗಳನ್ನು ಒಡೆದು ಬಿಡು;
- Zephaniah 3:1–4 ಚೆಫನ್ಯ 3:1–4ಅಸಹ್ಯವಾದ, ಮೈಲಿಗೆಯಾದ, ಶ್ರಮೆಪಡಿಸುವ ಪಟ್ಟಣಕ್ಕೆ ಅಯ್ಯೋ! ಅವಳು ಶಬ್ದಕ್ಕೆ ವಿಧೇಯಳಾಗಲಿಲ್ಲ, ಶಿಕ್ಷೆಗೆ ಒಳಪಡಲಿಲ್ಲ, ಕರ್ತನಲ್ಲಿ ಭರವಸವಿಡ ಲಿಲ್ಲ. ತನ್ನ ದೇವರ ಸವಿಾಪಕ್ಕೆ ಬರಲಿಲ್ಲ. ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ. ಅದರ ಪ್ರವಾದಿಗಳು ಹಗುರವಾಗಿಯೂ ವಂಚಕರಾಗಿಯೂ ಇದ್ದಾರೆ; ಅದರ ಯಾಜಕರು ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿ ದ್ದಾರೆ; ನ್ಯಾಯಪ್ರಮಾಣಕ್ಕೆ ಬಲಾತ್ಕಾರಮಾಡಿದ್ದಾರೆ.