Nahum · chapter 2 · verse 11
Nahum 2:11 in Kannada
ಸಿಂಹದ ಗವಿಯೂ ಎಳೇ ಸಿಂಹಗಳು ಮೇಯುವ ಸ್ಥಳವು ಎಲ್ಲಿ? ಅಲ್ಲಿ ಮುದಿಸಿಂಹ, ಸಿಂಹಿಣಿ ಸಿಂಹದ ಮರಿಗಳು ನಡೆದಾಡಿದರೂ ಯಾರೂ ಹೆದರಿ ಸಲಿಲ್ಲವಲ್ಲಾ?
Sinhada gaviyoo ele sinhagalu meyuva sthalavu elli? Alli mudisinha, sinhini sinhada marigalu nadedaadidaroo yaaroo hedari salillavallaa?
Nahum 2:11 in English
- King James Version (KJV)
- Where [is] the dwelling of the lions, and the feedingplace of the young lions, where the lion, [even] the old lion, walked, [and] the lion’s whelp, and none made [them] afraid?
- World English Bible (WEB)
- Where is the den of the lions, and the feeding place of the young lions, where the lion and the lioness walked with the lion’s cubs, and no one made them afraid?
- American Standard Version (ASV)
- Where is the den of the lions, and the feeding-place of the young lions, where the lion [and] the lioness walked, the lion’s whelp, and none made them afraid?
- Bible in Basic English (BBE)
- Where is the lions' hole, the place where the young lions got their food, where the lion and the she-lion were walking with their young, without cause for fear?
- Darby Translation (DBY)
- Where is [now] the den of the lions, and the feeding-place of the young lions, where the lion, the lioness, [and] the lion's whelp walked, and none made them afraid?
- Webster's Bible (WBS)
- Where [is] the dwelling of the lions, and the feeding-place of the young lions, where the lion, [even] the old lion, walked, [and] the lion's whelp, and none made [them] afraid?
- Young's Literal Translation (YLT)
- Where [is] the habitation of lionesses? And a feeding-place it [is] for young lions Where walked hath a lion, an old lion, A lion's whelp, and there is none troubling.
Read in context
- 9ಬೆಳ್ಳಿಯನ್ನು ಸುಲುಕೊಳ್ಳಿರಿ; ಬಂಗಾರವನ್ನು ಸುಲುಕೊಳ್ಳಿರಿ; ಕೂಡಿಸಿಟ್ಟ ಧನಕ್ಕೂ ಸಕಲ ವಿಧವಾದ ಶ್ರೇಷ್ಠ ವಸ್ತುಗಳ ನಿಧಿಗೂ ಪಾರವೇ ಇಲ್ಲ.
- 10ಅದು ಬರಿದಾಗಿಯೂ, ಬೈಲಾಗಿಯೂ, ಹಾಳಾ ಗಿಯೂ ಇತ್ತು; ಹೃದಯ ಕರಗುತ್ತದೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. ಎಲ್ಲಾ ನಡುವುಗಳಲ್ಲಿ ಹೆಚ್ಚು ಸಂಕಟ ಉಂಟು; ಎಲ್ಲಾ ಮುಖಗಳು ಕಳೆ ಗುಂದುತ್ತವೆ.
- 11ಸಿಂಹದ ಗವಿಯೂ ಎಳೇ ಸಿಂಹಗಳು ಮೇಯುವ ಸ್ಥಳವು ಎಲ್ಲಿ? ಅಲ್ಲಿ ಮುದಿಸಿಂಹ, ಸಿಂಹಿಣಿ ಸಿಂಹದ ಮರಿಗಳು ನಡೆದಾಡಿದರೂ ಯಾರೂ ಹೆದರಿ ಸಲಿಲ್ಲವಲ್ಲಾ?
- 12ಸಿಂಹವು ತನ್ನ ಮರಿಗಳಿಗೆ ಸಾಕಾ ಗುವಷ್ಟು ಸೀಳಿ ತನ್ನ ಸಿಂಹಿಣಿಗಳಿಗೋಸ್ಕರ ಕೊರಳು ಹಿಸುಕಿ ಕೊಳ್ಳೆಯಿಂದ ತನ್ನ ಗವಿಗಳನ್ನೂ ಸುಲಿಗೆಯಿಂದ ತನ್ನ ಗುಹೆಗಳನ್ನೂ ತುಂಬಿಸುತ್ತಿತ್ತು.ಸೈನ್ಯಗಳ ಕರ್ತನು ಹೇಳುವದೇನಂದರೆ -- ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ; ಅದರ ರಥಗಳನ್ನು ಹೊಗೆಯಾ ಗಲು ಸುಡುತ್ತೇನೆ; ಕತ್ತಿಯು ನಿನ್ನ ಎಳೇ ಸಿಂಹಗಳನ್ನು ನುಂಗಿಬಿಡುವದು; ನಿನ್ನ ಕೊಳ್ಳೆಯನ್ನು ಭೂಮಿಯ ಮೇಲಿನಿಂದ ಕಡಿದುಬಿಡುತ್ತೇನೆ; ನಿನ್ನ ಸೇವಕರ ಶಬ್ದವು ಇನ್ನು ಕೇಳಲ್ಪಡುವದಿಲ್ಲ.
- 13ಸೈನ್ಯಗಳ ಕರ್ತನು ಹೇಳುವದೇನಂದರೆ -- ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ; ಅದರ ರಥಗಳನ್ನು ಹೊಗೆಯಾ ಗಲು ಸುಡುತ್ತೇನೆ; ಕತ್ತಿಯು ನಿನ್ನ ಎಳೇ ಸಿಂಹಗಳನ್ನು ನುಂಗಿಬಿಡುವದು; ನಿನ್ನ ಕೊಳ್ಳೆಯನ್ನು ಭೂಮಿಯ ಮೇಲಿನಿಂದ ಕಡಿದುಬಿಡುತ್ತೇನೆ; ನಿನ್ನ ಸೇವಕರ ಶಬ್ದವು ಇನ್ನು ಕೇಳಲ್ಪಡುವದಿಲ್ಲ.
Cross references
- Isaiah 5:29 ಯೆಶಾಯ 5:29ಅವರ ಘರ್ಜ ನೆಯು ಸಿಂಹದಂತೆ ಅದೆ. ಪ್ರಾಯದ ಸಿಂಹಗಳಂತೆ ಆರ್ಭಟಿಸುತ್ತಾರೆ; ಹೌದು, ಘರ್ಜಿಸುತ್ತಾ ಬೇಟೆ ಹಿಡಿದು ಭದ್ರವಾಗಿ ಹೊತ್ತುಕೊಂಡು ಹೋಗುತ್ತಾರೆ ಅದನ್ನು ಬಿಡಿಸುವವನು ಒಬ್ಬನೂ ಇಲ್ಲ.ಆ ದಿನದಲ್ಲಿ ಅವರು ಸಮುದ್ರವು ಬೋರ್ಗರೆಯುವಂತೆ ಅವರ ಮೇಲೆ ಘರ್ಜಿಸುವರು; ಭೂಮಿಯನ್ನು ದೃಷ್ಟಿ ಸಿದರೆ ಅಂಧಕಾರವನ್ನೂ ದುಃಖವನ್ನೂ ನೋಡುವಿ. ಆಕಾಶಮಂಡಲದಲ್ಲಿ ಬೆಳಕು ಕತ್ತಲಾಗುವದು.
- Jeremiah 2:15 ಯೆರೆಮೀಯ 2:15ಪ್ರಾಯದ ಸಿಂಹಗಳು ಅವನಿಗೆ ವಿರೋಧವಾಗಿ ಘರ್ಜಿಸಿ, ಅಬ್ಬ ರಿಸುತ್ತವೆ. ಅವನ ದೇಶವನ್ನು ಹಾಳುಮಾಡುತ್ತವೆ; ಅವನ ಪಟ್ಟಣಗಳು ನಿವಾಸವಿಲ್ಲದೆ ಸುಟ್ಟುಹೋಗಿವೆ.
- Nahum 3:1 ನಹೂಮ 3:1ರಕ್ತವುಳ್ಳ ಪಟ್ಟಣಕ್ಕೆ ಅಯ್ಯೋ! ಅದೆಲ್ಲಾ ಸುಳ್ಳಿನಿಂದಲೂ ಕಳ್ಳತನದಿಂದಲೂ ತುಂಬಿ ಯದೆ; ಕೊಳ್ಳೆಯನ್ನು ಬಿಡುವದಿಲ್ಲ.
- Jeremiah 50:17 ಯೆರೆಮೀಯ 50:17ಇಸ್ರಾಯೇಲನು ಚದರಿಹೋದ ಕುರಿಯಾಗಿ ದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಶ್ಶೂರಿನ ಅರಸನು ಅವನನ್ನು ನುಂಗಿಬಿಟ್ಟನು. ಕಡೆಯಲ್ಲಿ ಬಾಬೆಲಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ.
- Genesis 49:9 ಆದಿಕಾಂಡ 49:9ಯೆಹೂದನು ಸಿಂಹದ ಮರಿಯಾಗಿದ್ದಾನೆ. ನನ್ನ ಮಗನೇ, ಕೊಳ್ಳೆಯಿಂದ ಮೇಲಕ್ಕೆ ಬಂದಿ. ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. ಅವನನ್ನು ಕೆಣಕು ವವರು ಯಾರು?
- Zephaniah 3:3 ಚೆಫನ್ಯ 3:3ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ.
- Job 4:10–11 ಯೋಬನು 4:10–11ಸಿಂಹದ ಘರ್ಜನೆಯೂ ಕ್ರೂರಸಿಂಹದ ಶಬ್ದವೂ ಸಿಂಹದ ಮರಿ ಗಳ ಹಲ್ಲುಗಳೂ ಮುರಿಯಲ್ಪಟ್ಟಿವೆ. ಪ್ರಾಯದ ಸಿಂಹವು ಕೊಳ್ಳೆ ಇಲ್ಲದರಿಂದ ನಾಶವಾಗುತ್ತದೆ. ಸಿಂಹದ ಮರಿಗಳು ಚದುರಿಸಲ್ಪಡುತ್ತವೆ.
- Jeremiah 4:7 ಯೆರೆಮೀಯ 4:7ಸಿಂಹವು ತನ್ನ ಅಡವಿಯೊಳಗಿಂದ ಏರಿ ಬರುತ್ತದೆ, ಅನ್ಯ ಜನಾಂಗ ಗಳನ್ನು ನಾಶಮಾಡುವವನು ಹೊರಟಿದ್ದಾನೆ, ನಿನ್ನ ದೇಶವನ್ನು ಹಾಳು ಮಾಡುವದಕ್ಕೆ ತನ್ನ ಸ್ಥಳವನ್ನು ಬಿಟ್ಟಿದ್ದಾನೆ; ನಿನ್ನ ಪಟ್ಟಣಗಳು ನಿವಾಸಿ ಇಲ್ಲದೆ ಪಾಳು ಬೀಳುವದು.
- Jeremiah 50:44 ಯೆರೆಮೀಯ 50:44ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ಉಕ್ಕುವಿಕೆಯಿಂದ ಬಲವಾದ ನಿವಾಸಕ್ಕೆ ಏರಿ ಬರುವನು; ಆದರೆ ನಾನು ಅವರನ್ನು ಕ್ಷಣಮಾತ್ರ ದಲ್ಲಿ ಅದಕ್ಕೆ ದೂರವಾಗಿ ಓಡಿಹೋಗುವಂತೆ ಮಾಡುವೆನು, ನಾನು ಅದರ ಮೇಲೆ ನೇಮಿಸತಕ್ಕ ಆಯಲ್ಪಟ್ಟವನು ಯಾರು? ನನ್ನ ಹಾಗೆ ಯಾರು? ಮತ್ತು ನನಗೆ ಕಾಲವನ್ನು ನೇಮಿಸುವವನಾರು? ನನ್ನ ಮುಂದೆ ನಿಲ್ಲತಕ್ಕ ಕುರುಬನು ಯಾರು?
- Ezekiel 19:2–8 ಯೆಹೆಜ್ಕೇಲನು 19:2–8ಹೀಗೆ ಹೇಳು--ನಿನ್ನ ತಾಯಿ ಏನು? ಒಂದು ಸಿಂಹಿಣಿಯೇ, ಆಕೆ ಸಿಂಹಗಳ ಜೊತೆ ಮಲಗಿ ಪ್ರಾಯದ ಸಿಂಹಗಳ ಮಧ್ಯದಲ್ಲಿ ತನ್ನ ಮರಿಗಳನ್ನು ಸಾಕಿದಳು. ತನ್ನ ಮರಿಗಳಲ್ಲಿ ಒಂದನ್ನು ಬೆಳೆಸಿದಳು; ಇದು ಪ್ರಾಯದ ಸಿಂಹವಾಯಿತು, ಇದು ಕೊಳ್ಳೆ ಹೊಡೆಯು ವದನ್ನು ಕಲಿತು ಮನುಷ್ಯರನ್ನು ನುಂಗಿಬಿಟ್ಟಿತು. ಜನಾಂಗಗಳವರು ಅದರ ಸುದ್ದಿಯನ್ನು ಕೇಳಿದರು; ಅವರ ಹಳ್ಳದಲ್ಲಿ ಇದನ್ನು ಹಿಡಿದುಕೊಂಡರು, ಸಂಕೋ ಲೆಗಳಿಂದ ಬಂಧಿಸಿ ಐಗುಪ್ತದೇಶಕ್ಕೆ ತೆಗೆದುಕೊಂಡು ಹೋದರು. ಆಗ ಅವಳು ಅದನ್ನು ನೋಡಿ ತನ್ನ ನಿರೀಕ್ಷೆ ಕೆಟ್ಟುಹೋಯಿತೆಂದು ಕಾದು ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು ಅದನ್ನು ಪ್ರಾಯದ ಸಿಂಹವಾಗಿ ಮಾಡಿದಳು. ಅದು ಸಿಂಹಗಳ ಮಧ್ಯೆ ತಿರುಗಾಡಿ ಪ್ರಾಯದ ಸಿಂಹವಾಗಿ ಕೊಳ್ಳೆ ಹೊಡೆ ಯುವದನ್ನು ಕಲಿತು ಮನುಷ್ಯರನ್ನು ನುಂಗಿಬಿಟ್ಟಿತು. ಅವರ ಅರಮನೆಗಳನ್ನು ಹಾಳು ಮಾಡಿತು; ಅವರ ನಗರಗಳನ್ನೂ ನಾಶಮಾಡಿತು. ಅದರ ಗರ್ಜನೆಯ ಶಬ್ದದಿಂದಾಗಿ ದೇಶವೂ ಅದರ ಪರಿಪೂರ್ಣತೆಯೂ ಬೀಡಾಗಿದ್ದನ್ನು ಅದು ತಿಳಿದುಕೊಂಡಿತು. ಆಗ ಜನಾಂಗಗಳು ಸುತ್ತಲಿನ ಪ್ರಾಂತ್ಯಗಳೊಳಗಿಂದ ಕೂಡಿ ಬಂದು ಅದಕ್ಕೆ ವಿರೋಧವಾಗಿ ನಿಂತು ಅದರ ಮೇಲೆ ಬಲೆಯನ್ನೊಡ್ಡಿದರು. ಆಗ ಅದು ಅವರ ಹಳ್ಳದಲ್ಲಿ ಸಿಕ್ಕಿ ಬಿದ್ದಿತು.
- Isaiah 31:4 ಯೆಶಾಯ 31:4ಕರ್ತನು ನನಗೆ ಹೀಗೆ ಹೇಳಿದ್ದಾನೆ -- ಸಿಂಹವು, ಪ್ರಾಯದ ಸಿಂಹವು ಬೇಟೆಯ ಮೇಲೆ ಬಿದ್ದು ಗುರು ಗುಟ್ಟುತ್ತಿರುವಾಗ ಕಾವಲುಗಾರನ ಕೂಗನ್ನು ಕೇಳಿ ಕುರುಬರ ಗುಂಪು ಅದಕ್ಕೆ ವಿರುದ್ಧವಾಗಿ ಕೂಡಿ ಬಂದರೂ ಹೇಗೆ ಅವರ ಶಬ್ದಕ್ಕೆ ಭಯಪಡದೆ ಇಲ್ಲವೆ ಅವರ ಗದ್ದಲಕ್ಕೆ ಕುಂದಿಹೋಗದೆ ಇರುವದೋ ಹಾಗೆಯೇ ಸೈನ್ಯಗಳ ಕರ್ತನು ಚೀಯೋನ್ ಪರ್ವತ ಕ್ಕೋಸ್ಕರವೂ ಅದರ ಗುಡ್ಡಕ್ಕೋಸ್ಕರವೂ ಯುದ್ಧ ಮಾಡಲು ಇಳಿದು ಬರುವನು.