Ezekiel · chapter 20 · verse 32
Ezekiel 20:32 in Kannada
ನಾವು ಅನ್ಯಜನಾಂಗಗಳ ಹಾಗೆಯೂ ದೇಶದಲ್ಲಿ ರುವ ಕುಟುಂಬಗಳ ಹಾಗೆಯೂ ಇದ್ದು ಮರಕ್ಕೂ ಕಲ್ಲಿಗೂ ಸೇವೆ ಮಾಡುತ್ತೇವೆಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆಯು ಎಷ್ಟು ಮಾತ್ರಕ್ಕೂ ಆಗದು.
Naavu anyajanaangagala haageyoo deshadalli ruva kutumbagala haageyoo iddu marakkoo kalligoo seve maaduttevendu nimma manassinalli huttuva yochaneyu eshtu maatrakkoo aagadu.
Ezekiel 20:32 in English
- King James Version (KJV)
- And that which cometh into your mind shall not be at all, that ye say, We will be as the heathen, as the families of the countries, to serve wood and stone.
- World English Bible (WEB)
- “‘“That which comes into your mind will not be at all, in that you say, ‘We will be as the nations, as the families of the countries, to serve wood and stone.’
- American Standard Version (ASV)
- and that which cometh into your mind shall not be at all, in that ye say, We will be as the nations, as the families of the countries, to serve wood and stone.
- Bible in Basic English (BBE)
- And that which comes into your minds will never take place; when you say, We will be like the nations, like the families of the countries, servants of wood and stone;
- Darby Translation (DBY)
- And that which cometh into your mind shall not be at all, that ye say, We will be as the nations, as the families of the countries, in serving wood and stone.
- Webster's Bible (WBS)
- And that which cometh into your mind shall not be at all, that ye say, We will be as the heathen, as the families of the countries, to serve wood and stone.
- Young's Literal Translation (YLT)
- And that which is going up on your mind, It is not at all — in that ye are saying: We will be as the nations, as the families of the lands, To serve wood and stone.
Read in context
- 30ಆದದರಿಂದ ನೀನು ಇಸ್ರಾಯೇಲಿನ ಮನೆತನದವರಿಗೆ ಹೇಳಬೇಕಾ ದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳು ತ್ತಾನೆ; ನಿಮ್ಮ ಪಿತೃಗಳ ಹಾಗೆ ನಿಮ್ಮನ್ನು ಅಪವಿತ್ರ ಪಡಿಸಿಕೊಳ್ಳುತ್ತೀರೋ? ಅವರ ಅಸಹ್ಯವಾದವುಗಳ ಪ್ರಕಾರ ವ್ಯಭಿಚಾರಮಾಡುತ್ತೀರೋ?
- 31ನಿಮ್ಮ ದಾನ ಗಳನ್ನು ತರುವಾಗಲೂ ನಿಮ್ಮ ಕುಮಾರರನ್ನು ಬೆಂಕಿ ಯಿಂದ ದಾಟಿಸುವಾಗಲೂ ನೀವು ಇಂದಿನ ವರೆಗೂ ನಿಮ್ಮ ಎಲ್ಲಾ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಪಡಿಸಿ ಕೊಳ್ಳುತ್ತೀರಿ; ಹೀಗಾದರೆ ನಾನು ನಿಮ್ಮಿಂದ ವಿಚಾರಿಸ ಲ್ಪಟ್ಟೆನೊ? ನನ್ನ ಜೀವದಾಣೆ ನಾನು ನಿಮ್ಮಿಂದ ವಿಚಾರಿಸ ಲ್ಪಡುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ;
- 32ನಾವು ಅನ್ಯಜನಾಂಗಗಳ ಹಾಗೆಯೂ ದೇಶದಲ್ಲಿ ರುವ ಕುಟುಂಬಗಳ ಹಾಗೆಯೂ ಇದ್ದು ಮರಕ್ಕೂ ಕಲ್ಲಿಗೂ ಸೇವೆ ಮಾಡುತ್ತೇವೆಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆಯು ಎಷ್ಟು ಮಾತ್ರಕ್ಕೂ ಆಗದು.
- 33ದೇವರಾದ ಕರ್ತನು ಹೇಳುವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಬಲವಾದ ಕೈಯಿಂ ದಲೂ ಚಾಚಿದ ತೋಳಿನಿಂದಲೂ ಸುರಿಸಿದ ರೋಷ ದಿಂದಲೂ ನಾನು ನಿಮ್ಮ ಮೇಲೆ ಅಧಿಕಾರ ನಡಿಸು ತ್ತೇನೆ.
- 34ಬಲವಾದ ಕೈಯಿಂದಲೂ ಚಾಚಿದ ತೋಳಿ ನಿಂದಲೂ ಸುರಿಸಿದ ರೋಷದಿಂದಲೂ ನಿಮ್ಮನ್ನು ಜನ ಗಳೊಳಗಿಂದ ಹೊರತಂದು ನೀವು ಚದರಿಹೋಗಿ ರುವ ದೇಶಗಳೊಳಗಿಂದ ನಿಮ್ಮನ್ನು ಒಂದಾಗಿ ಕೂಡಿಸಿ,
Cross references
- Ezekiel 11:5 ಯೆಹೆಜ್ಕೇಲನು 11:5ಕರ್ತನ ಆತ್ಮನು ನನ್ನ ಮೇಲೆ ಬಂದು ನನಗೆ ಹೇಳಿದ್ದೇನಂದರೆ--ಮಾತನಾಡು; ಕರ್ತನು--ಇಸ್ರಾ ಯೇಲಿನ ಮನೆತನದವರೇ, ನೀವು ಹೀಗೆ ಹೇಳಿದ್ದೀರಿ. ಯಾಕಂದರೆ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಎಲ್ಲವುಗಳನ್ನೂ ನಾನು ಬಲ್ಲೆನು.
- Jeremiah 44:17 ಯೆರೆಮೀಯ 44:17ಆದರೆ ಸ್ವಂತ ಬಾಯಿಂದ ಹೊರಡು ವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ; ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನದರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ, ನಮ್ಮ ತಂದೆಗಳೂ ನಮ್ಮ ಅರಸರೂ ನಮ್ಮ ಪ್ರಧಾನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ನಾವೂ ಮಾಡುವೆವು; ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ.
- Psalm 139:2 ಕೀರ್ತನೆಗಳು 139:2ನಾನು ಕೂತು ಕೊಳ್ಳುವದನ್ನೂ ಏಳುವದನ್ನೂ ನೀನು ತಿಳುಕೊಂಡಿದ್ದೀ; ನನ್ನ ಆಲೋಚನೆಯನ್ನು ದೂರದಿಂದ ಗ್ರಹಿಸಿ ಕೊಂಡ್ಡಿದ್ದೀ;
- Revelation 9:20 ಪ್ರಕಟನೆ 9:20ಈ ಉಪದ್ರವಗಳಿಂದ ಕೊಲ್ಲಲ್ಪಡದೆ ಉಳಿದ ಮನುಷ್ಯರು ದೆವ್ವಗಳನ್ನೂ ಬಂಗಾರದ ವಿಗ್ರಹಗಳನ್ನೂ ಬೆಳ್ಳಿಯ, ಹಿತ್ತಾಳೆಯ, ಕಲ್ಲಿನ ಮತ್ತು ಮರದ ವಿಗ್ರಹ ಗಳನ್ನೂ ಅಂದರೆ ನೋಡಲಾರದ ಕೇಳಲಾರದ ಇಲ್ಲವೆ ನಡೆಯಲಾರದವುಗಳನ್ನು ಆರಾಧಿಸದಂತೆ ಮಾನ ಸಾಂತರಪಡದೆ ಹೋದರು.ಇದಲ್ಲದೆ ತಾವು ಮಾಡುತ್ತಿದ್ದ ಕೊಲೆ ಮಾಟ ಜಾರತ್ವ ಕಳ್ಳತನ ಇವುಗಳಿ ಗಾಗಿಯೂ ಮಾನಸಾಂತರಪಡಲಿಲ್ಲ.
- Deuteronomy 4:28 ಧರ್ಮೋಪದೇಶಕಾಂಡ 4:28ಅಲ್ಲಿ ನೀವು ಮನುಷ್ಯರ ಕೈಕೆಲಸವಾದ ಅಂದರೆ ನೋಡದೆಯೂ ಕೇಳದೆಯೂ ಉಣ್ಣದೆಯೂ ಮೂಸಿ ನೋಡದೆಯೂ ಇರುವಂಥ ಮರ ಕಲ್ಲುಗಳಾದ ದೇವರುಗಳನ್ನು ಸೇವಿಸುವಿರಿ.
- Daniel 5:4 ದಾನಿಯೇಲನು 5:4ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಹೊಗಳತೊಡಗಿದರು.
- Deuteronomy 28:36 ಧರ್ಮೋಪದೇಶಕಾಂಡ 28:36ಕರ್ತನು ನಿನ್ನನ್ನೂ ನೀನು ನಿನ್ನ ಮೇಲೆ ಇರಿಸಿಕೊಳ್ಳುವ ಅರಸನನ್ನೂ ನೀನೂ ನಿನ್ನ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗ ಮಾಡುವನು; ಅಲ್ಲಿ ಮರವೂ ಕಲ್ಲೂ ಆಗಿರುವ ಬೇರೆ ದೇವರುಗಳನ್ನು ನೀನು ಸೇವಿಸುವಿ.
- Deuteronomy 28:64 ಧರ್ಮೋಪದೇಶಕಾಂಡ 28:64ಇದ ಲ್ಲದೆ ಕರ್ತನು ನಿನ್ನನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯ ವರೆಗೂ ಎಲ್ಲಾ ಜನಗಳಲ್ಲಿ ಚದರಿಸು ವನು; ಅಲ್ಲಿ ನೀನೂ ನಿನ್ನ ಪಿತೃಗಳೂ ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಸೇವಿಸುವಿ.
- Isaiah 37:19 ಯೆಶಾಯ 37:19ಅವು ದೇವರುಗಳಲ್ಲ, ಮರ, ಕಲ್ಲು, ಮನುಷ್ಯರ ಕೈ ಕೆಲಸ ಗಳೇ ಆದದರಿಂದಲೇ ಅವರು ಅವುಗಳನ್ನು ಹಾಳು ಮಾಡಿದರು.
- Lamentations 3:37 ಪ್ರಲಾಪಗಳು 3:37ಕರ್ತನು ಆಜ್ಞಾಪಿಸದಿರು ವಾಗ ಸಂಭವಿಸಿ ನಡೆಯುವ ಹಾಗೆ ಹೇಳುವವನು ಯಾರು?
- Romans 12:2 ರೋಮಾಪುರದವರಿಗೆ 12:2ಇಹಲೋಕವನ್ನು ಅನುಸರಿಸದೆ ಉತ್ತಮ ವಾದದ್ದೂ ಮೆಚ್ಚಿಕೆಯಾದದ್ದೂ ಪರಿಪೂರ್ಣ ವಾದದ್ದೂ ಆಗಿರುವ ದೇವರ ಚಿತ್ತವೇನೆಂದು ನೀವು ವಿವೇಚಿಸಿ ತಿಳಿದುಕೊಳ್ಳುವಂತೆ ನೂತನ ಮನಸ್ಸನ್ನು ಹೊಂದಿಕೊಂಡು ರೂಪಾಂತರಗೊಂಡವರಾಗಿರ್ರಿ.
- Ezekiel 38:10 ಯೆಹೆಜ್ಕೇಲನು 38:10ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇದೂ ಸಹ ಆಗುವದು, ಅದೇ ಸಮಯದಲ್ಲಿ ನಿನ್ನ ಮನಸ್ಸಿಗೆ ಕೆಲವು ಸಂಗತಿಗಳು ಬರುವವು ನೀನು ಒಂದು ಕೆಟ್ಟಯೋಚನೆಯನ್ನು ಯೋಚಿಸುವಿ,