Ezekiel · chapter 20 · verse 38
Ezekiel 20:38 in Kannada
ಇದ ಲ್ಲದೆ ತಿರುಗಿಬಿದ್ದವರನ್ನೂ ನನಗೆ ವಿರೋಧವಾಗಿ ಅಪರಾಧಮಾಡಿದವರನ್ನೂ ನಿಮ್ಮೊಳಗಿಂದ ಶುದ್ಧಿ ಮಾಡುತ್ತೇನೆ. ಅವರು ತಂಗುವ ದೇಶದೊಳಗಿಂದ ಅವರನ್ನು ಹೊರಗೆ ತರುತ್ತೇನೆ. ಅವರು ಇಸ್ರಾಯೇಲ್ ದೇಶದೊಳಗೆ ಹೋಗದ ಹಾಗೆ ಮಾಡಿ ನಾನೇ ಕರ್ತ ನೆಂಬದನ್ನು ಅವರಿಗೆ ತಿಳಿಸುತ್ತೇನೆ.
Ida llade tirugibiddavarannoo nanage virodhavaagi aparaadhamaadidavarannoo nimmolaginda shuddhi maaduttene. Avaru tanguva deshadolaginda avarannu horage taruttene. Avaru israayel deshadolage hogada haage maadi naane karta nembadannu avarige tilisuttene.
Ezekiel 20:38 in English
- King James Version (KJV)
- And I will purge out from among you the rebels, and them that transgress against me: I will bring them forth out of the country where they sojourn, and they shall not enter into the land of Israel: and ye shall know that I [am] the LORD.
- World English Bible (WEB)
- I will purge out from among you the rebels and those who disobey me. I will bring them out of the land where they live, but they shall not enter into the land of Israel. Then you will know that I am the LORD.”
- American Standard Version (ASV)
- and I will purge out from among you the rebels, and them that transgress against me; I will bring them forth out of the land where they sojourn, but they shall not enter into the land of Israel: and ye shall know that I am Jehovah.
- Bible in Basic English (BBE)
- Clearing out from among you all those who are uncontrolled and who are sinning against me; I will take them out of the land where they are living, but they will not come into the land of Israel: and you will be certain that I am the Lord.
- Darby Translation (DBY)
- And I will purge out from among you the rebels, and them that transgress against me; I will bring them forth out of the country where they sojourn, but they shall not enter into the land of Israel: and ye shall know that I [am] Jehovah.
- Webster's Bible (WBS)
- And I will purge out from among you the rebels, and them that transgress against me: I will bring them forth out of the country where they sojourn, and they shall not enter into the land of Israel: and ye shall know that I [am] the LORD.
- Young's Literal Translation (YLT)
- And cleared out from you the rebels, And them transgressing against Me, From the land of their sojournings I bring them out, And unto the land of Israel they come not, And ye have known that I [am] Jehovah.
Read in context
- 36ಇದೇ ರೀತಿ ನಾನು ನಿಮ್ಮ ಪಿತೃಗಳ ಸಂಗಡ ಐಗುಪ್ತ ದೇಶದ ಅರಣ್ಯದಲ್ಲಿ ವಾದಿಸಿದೆನು; ಈಗಲೂ ನಿಮ್ಮ ಸಂಗಡ ವಾದಿಸಿದೆನು ಎಂದು ದೇವ ರಾದ ಕರ್ತನು ಹೇಳುತ್ತಾನೆ.
- 37ನಾನು ನಿಮ್ಮನ್ನು ಕೋಲಿನ ಕೆಳಗೆ ಹಾದುಹೋಗುವಂತೆ ಮಾಡಿ ಒಡಂಬ ಡಿಕೆಯ ಬಂಧನದಲ್ಲಿ ನಿಮ್ಮನ್ನು ಸೇರಿಸುತ್ತೇನೆ.
- 38ಇದ ಲ್ಲದೆ ತಿರುಗಿಬಿದ್ದವರನ್ನೂ ನನಗೆ ವಿರೋಧವಾಗಿ ಅಪರಾಧಮಾಡಿದವರನ್ನೂ ನಿಮ್ಮೊಳಗಿಂದ ಶುದ್ಧಿ ಮಾಡುತ್ತೇನೆ. ಅವರು ತಂಗುವ ದೇಶದೊಳಗಿಂದ ಅವರನ್ನು ಹೊರಗೆ ತರುತ್ತೇನೆ. ಅವರು ಇಸ್ರಾಯೇಲ್ ದೇಶದೊಳಗೆ ಹೋಗದ ಹಾಗೆ ಮಾಡಿ ನಾನೇ ಕರ್ತ ನೆಂಬದನ್ನು ಅವರಿಗೆ ತಿಳಿಸುತ್ತೇನೆ.
- 39ನಿಮ್ಮ ವಿಷಯ ವಾಗಿ ಓ ಇಸ್ರಾಯೇಲಿನ ಮನೆತನದವರೇ, ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ನನಗೆ ಕಿವಿಗೊಡದಿದ್ದರೆ ಹೋಗಿ ಇನ್ನು ಮೇಲೆಯೂ ನಿಮ್ಮ ನಿಮ್ಮ ವಿಗ್ರಹಗಳನ್ನು ಸೇವಿಸಿರಿ; ಆದರೆ ನಿಮ್ಮ ದಾನಗ ಳಿಂದಲೂ ವಿಗ್ರಹಗಳಿಂದಲೂ ಇನ್ನು ಮೇಲೆ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಪಡಿಸಬೇಡಿರಿ.
- 40ನನ್ನ ಪರಿಶುದ್ಧ ಪರ್ವತದಲ್ಲಿ ಅಂದರೆ ಇಸ್ರಾಯೇಲಿನ ಉನ್ನತ ಪರ್ವತದಲ್ಲಿಯೇ ಇಸ್ರಾಯೇಲಿನ ಮನೆತನ ದವರೆಲ್ಲರೂ ದೇಶದಲ್ಲಿರುವವರೆಲ್ಲರೂ ನನ್ನನ್ನು ಸೇವಿ ಸುವರು. ನಾನು ಅಲ್ಲಿ ಅವರಿಗೆ ಮೆಚ್ಚಿ ನಿಮ್ಮ ಎತ್ತುವ ಅರ್ಪಣೆಗಳನ್ನೂ ನಿಮ್ಮ ಕಾಣಿಕೆಗಳ ಪ್ರಥಮ ಫಲ ವನ್ನೂ ನಿಮ್ಮ ಎಲ್ಲಾ ಪರಿಶುದ್ಧ ಸಂಗತಿಗಳನ್ನೂ ಅಂಗೀಕರಿಸುವೆನು.
Cross references
- Amos 9:9–10 ಆಮೋಸ 9:9–10ಇಗೋ, ಮೊರದಲ್ಲಿ ಧಾನ್ಯವನ್ನು ಕೇರುವಂತೆ ನಾನು ಆಜ್ಞಾಪಿಸಿ ಇಸ್ರಾಯೇಲಿನ ಮನೆತನದವ ರನ್ನು ಎಲ್ಲಾ ಜನಾಂಗಗಳಲ್ಲಿ ಕೇರುವೆನು; ಆದಾಗ್ಯೂ ಒಂದು ಕಾಳಾದರೂ ನೆಲಕ್ಕೆ ಬೀಳುವದಿಲ್ಲ. ಕೇಡು ನಮ್ಮನ್ನು ಹಿಂದಟ್ಟದು, ನಮ್ಮನ್ನು ತಡೆಯುವದಿಲ್ಲ ಎನ್ನುವ ನನ್ನ ಜನರಲ್ಲಿರುವ ಪಾಪಿಷ್ಠರು ಕತ್ತಿಯಿಂದ ಸಾಯುವರು.
- Ezekiel 13:9 ಯೆಹೆಜ್ಕೇಲನು 13:9ವ್ಯರ್ಥವಾದದ್ದನ್ನು ದರ್ಶಿಸಿ, ಸುಳ್ಳು ಭವಿಷ್ಯಗಳನ್ನು ಹೇಳುವ ಪ್ರವಾದಿಗಳ ಮೇಲೆ ನನ್ನ ಕೈ ಮಾಡುವೆನು. ಅವರು ನನ್ನ ಜನರ ಸಭೆಯಲ್ಲಿ ಇರುವದೂ ಇಲ್ಲ, ಇಸ್ರಾಯೇಲನ ಮನೆತನದವರ ಪಟ್ಟಿಯಲ್ಲಿ ಬರೆಯಲ್ಪಡುವದೂ ಇಲ್ಲ; ಇಸ್ರಾಯೇಲಿನ ದೇಶದಲ್ಲಿ ಪ್ರವೇಶಿಸುವದೂ ಇಲ್ಲ; ನಾನೇ ದೇವರಾದ ಕರ್ತನೆಂದು ನೀವು ತಿಳಿದುಕೊಳ್ಳುವಿರಿ.
- Psalm 95:11 ಕೀರ್ತನೆಗಳು 95:11ಆದದರಿಂದ ನನ್ನ ವಿಶ್ರಾಂತಿಯಲ್ಲಿ ಅವರು ಪ್ರವೇಶಿಸರೆಂದು ಕೋಪ ದಿಂದ ಆಣೆ ಇಟ್ಟುಕೊಂಡೆನು.
- Zechariah 13:8–9 ಜೆಕರ್ಯ 13:8–9ಕರ್ತನು--ಇದಲ್ಲದೆ ಸಮಸ್ತ ದೇಶದಲ್ಲಿ ಆಗುವದೇನಂದರೆ-- ಅದರಲ್ಲಿ ಎರಡು ಪಾಲು ಕಡಿಯಲ್ಪಟ್ಟು ಸಾಯುವದು; ಆದರೆ ಮೂರನೇ ಪಾಲು ಅದರಲ್ಲಿ ಬಿಡಲ್ಪಡುವದು.ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ. ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ.
- Jeremiah 44:14 ಯೆರೆಮೀಯ 44:14ಐಗುಪ್ತ ದೇಶದಲ್ಲಿ ವಾಸಿಸುವದಕ್ಕೆ ಹೋಗಿರುವ ಯೆಹೂದದ ಉಳಿದಿರು ವವರು ತಾವು ತಿರುಗಿಕೊಂಡು ಯೆಹೂದದಲ್ಲಿ ವಾಸಮಾಡಬೇಕೆಂದು ಮನಸ್ಸು ಮಾಡಿರುವವರಲ್ಲಿ ಒಬ್ಬನಾದರೂ ಯೆಹೂದ ದೇಶಕ್ಕೆ ತಿರುಗಿಕೊಳ್ಳು ವದಕ್ಕೆ ತಪ್ಪಿಸಿಕೊಳ್ಳುವದಿಲ್ಲ, ನಿಲ್ಲುವದಿಲ್ಲ; ಓಡಿಹೋಗುವ ವರು ಅಲ್ಲದೆ ಇನ್ಯಾರೂ ಅಲ್ಲಿಗೆ ತಿರುಗಿ ಕೊಳ್ಳುವದಿಲ್ಲ.
- Ezekiel 6:7 ಯೆಹೆಜ್ಕೇಲನು 6:7ಹತವಾದವರು ನಿಮ್ಮ ಮಧ್ಯದಲ್ಲಿ ಬೀಳು ವರು, ಆಗ ನೀವು ನಾನೇ ಕರ್ತನೆಂದು ತಿಳಿಯುವಿರಿ.
- Malachi 4:1–3 ಮಲಾಕಿಯ 4:1–3ಇಗೋ, ಆ ದಿನವು ಬರುತ್ತದೆ; ಅದು ಒಲೆಯ ಹಾಗೆ ಉರಿಯುವದು; ಆಗ ಗರ್ವಿಷ್ಠರೆಲ್ಲರೂ ಹೌದು, ಕೆಟ್ಟದ್ದನ್ನು ಮಾಡುವವ ರೆಲ್ಲರೂ ಹುಲ್ಲಿನಂತಿರುವರು; ಬರುವ ಆ ದಿನವು ಅವರನ್ನು ಸುಟ್ಟುಬಿಡುವದು; ಬೇರನ್ನಾದರೂ ಕೊಂಬೆ ಯನ್ನಾದರೂ ಅವರಿಗೆ ಬಿಡದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಆದರೆ ನನ್ನ ಹೆಸರಿಗೆ ಭಯಪಡುವವರಾದ ನಿಮಗೆ ನೀತಿಯ ಸೂರ್ಯನು ತನ್ನ ರೆಕ್ಕೆಗಳಲ್ಲಿ ಸ್ವಸ್ಥತೆಯನ್ನುಂಟು ಮಾಡುವವನಾಗಿ ಉದಯಿಸುವನು; ನೀವು ಹೊರಟು ಕೊಟ್ಟಿಗೆಯಿಂದ ಬಿಟ್ಟ ಕರುಗಳ ಹಾಗೆ ಕುಣಿದಾಡುವಿರಿ. ದುಷ್ಟರನ್ನು ತುಳಿದುಬಿಡುವಿರಿ; ಯಾಕಂದರೆ ನಾನು ಕಾರ್ಯ ಸಾಧಿಸುವ ದಿನದಲ್ಲಿ ಅವರು ನಿಮ್ಮ ಪಾದಗಳ ಕೆಳಗೆ ಬೂದಿಯಾಗಿರುವರೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Malachi 3:3 ಮಲಾಕಿಯ 3:3ಆತನು ಬೆಳ್ಳಿಯನ್ನು ಕರಗಿಸಿ ಶುದ್ಧಮಾಡುವವನ ಹಾಗೆ ಕುಳಿತು ಲೇವಿಯ ಕುಮಾರರನ್ನು ಶುದ್ಧಮಾಡಿ ಬಂಗಾರದ ಹಾಗೆಯೂ ಬೆಳ್ಳಿಯ ಹಾಗೆಯೂ ಅವ ರನ್ನು ಶುದ್ಧಮಾಡುವನು.
- Psalm 9:16 ಕೀರ್ತನೆಗಳು 9:16ಕರ್ತನು ತಾನು ತೀರಿಸಿದ ನ್ಯಾಯತೀರ್ಪಿನಿಂದ ತನ್ನನ್ನು ಪ್ರಕಟಪಡಿಸಿಕೊಂಡಿ ದ್ದಾನೆ; ದುಷ್ಟನು ತನ್ನ ಕೈಕೆಲಸದಲ್ಲಿಯೇ ಸಿಕ್ಕಿಬಿದ್ದಿ ದ್ದಾನೆ. ಹಿಗ್ಗಾಯೋನ್. ಸೆಲಾ.
- Ezekiel 11:21 ಯೆಹೆಜ್ಕೇಲನು 11:21ಆದರೆ ಯಾರ ಹೃದಯವು ಅವರ ಹೇಸಿಗೆಗಳ ಮತ್ತು ಅವರ ಅಸಹ್ಯಗಳ ಹೃದಯದ ಬಳಿಗೆ ಹೋಗುತ್ತದೋ, ನಾನು ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸುತ್ತೇನೆ ಎಂದು ದೇವರಾದ ಕರ್ತನು ಹೇಳುತ್ತಾನೆ.
- Numbers 14:28–30 ಅರಣ್ಯಕಾಂಡ 14:28–30ಆದದರಿಂದ ನೀನು ಅವರಿಗೆ--ನನ್ನ ಜೀವದಾಣೆ, ನೀವು ನನ್ನ ಕಿವಿಗಳು ಕೇಳುವಂತೆ ಮಾತನಾಡಿದ ಪ್ರಕಾರವೇ ನಿಮಗೆ ಮಾಡುವೆನು ಎಂದು ಕರ್ತನು ಹೇಳುತ್ತಾನೆ. ಈ ಅರಣ್ಯದಲ್ಲಿ ನಿಮ್ಮ ಹೆಣಗಳು ಬೀಳುವವು. ನನಗೆ ವಿರೋಧವಾಗಿ ಗುಣುಗುಟ್ಟಿದವರೆಲ್ಲರೂ ನಿಮ್ಮ ಪೂರ್ಣ ಸಂಖ್ಯೆಯ ಪ್ರಕಾರ ಎಣಿಸಿದ ಇಪ್ಪತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಆದ ನೀವೇ. ಯೆಫುನ್ನೆಯ ಮಗನಾದ ಕಾಲೇಬನು ನೂನನ ಮಗನಾದ ಯೆಹೋಶುವನ ಹೊರತು ನಾನು ನಿಮ್ಮನ್ನು ವಾಸಮಾಡಿಸುವದಕ್ಕಾಗಿ ಪ್ರಮಾಣಮಾಡಿದ ದೇಶಕ್ಕೆ ನಿಸ್ಸಂದೇಹವಾಗಿ ನೀವು ಬಾರದೆ ಇರುವಿರಿ.
- Ezekiel 23:49 ಯೆಹೆಜ್ಕೇಲನು 23:49ನಿಮ್ಮ ದುಷ್ಕರ್ಮದ ಫಲವನ್ನು ನಿಮ್ಮ ಮೇಲೆಯೇ ಮುಯ್ಯಿ ತೀರಿಸುವೆನು. ನೀವು ನಿಮ್ಮ ವಿಗ್ರಹಗಳ ಪಾಪಗಳನ್ನು ಹೊರುವಿರಿ; ಆಗ ದೇವರಾದ ಕರ್ತನು ನಾನೇ ಎಂದು ತಿಳಿದುಕೊಳ್ಳುವಿರಿ.