Ezekiel · chapter 21 · verse 10
Ezekiel 21:10 in Kannada
ಅದು ಕೊಂದೇ ಕೊಲ್ಲುವ ಹಾಗೆ ಹದಮಾಡಲ್ಪಟ್ಟಿದೆ; ಥಳಥಳಿಸುವ ಹಾಗೆ ಮಸೆಯಲ್ಪಟ್ಟಿದೆ; ಹಾಗಾದರೆ ನಾವು ಸಂತೋಷಪಡಬಹುದೋ? ನನ್ನ ಮಗನ ಕೋಲು ಪ್ರತಿಯೊಂದು ಮರವನ್ನು ತಿರಸ್ಕಾರ ಮಾಡು ತ್ತದೆ.
Adu konde kolluva haage hadamaadalpattide; thalathalisuva haage maseyalpattide; haagaadare naavu santoshapadabahudo? Nanna magana kolu pratiyondu maravannu tiraskaara maadu ttade.
Ezekiel 21:10 in English
- King James Version (KJV)
- It is sharpened to make a sore slaughter; it is furbished that it may glitter: should we then make mirth? it contemneth the rod of my son, [as] every tree.
- World English Bible (WEB)
- It is sharpened that it may make a slaughter. It is polished that it may be as lightning. Should we then make mirth? The rod of my son condemns every tree.
- American Standard Version (ASV)
- it is sharpened that it may make a slaughter; it is furbished that it may be as lightning: shall we then make mirth? the rod of my son, it contemneth every tree.
- Bible in Basic English (BBE)
- It has been made sharp to give death; it is polished so that it may be like a thunder-flame: ...
- Darby Translation (DBY)
- It is sharpened for sore slaughter, it is furbished that it may glitter. Shall we then make mirth, [saying,] The sceptre of my son contemneth all wood?
- Webster's Bible (WBS)
- It is sharpened to make a grievous slaughter; it is furbished that it may glitter: should we then make mirth? it contemneth the rod of my son, [as] every tree.
- Young's Literal Translation (YLT)
- So as to slaughter a slaughter it is sharpened. So as to have brightness it is polished, Desire hath rejoiced the sceptre of my son, It is despising every tree.
Read in context
- 8ಇದಲ್ಲದೆ ಮತ್ತೆ ಕರ್ತನ ವಾಕ್ಯವು ಬಂದು ನನಗೆ ಹೇಳಿದ್ದೇನಂದರೆ--
- 9ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು--ಕರ್ತನು ಹೀಗೆ ಹೇಳುವನೆಂದು ಹೇಳು--ಕತ್ತಿಯು, ಆ ಒಂದು ಕತ್ತಿಯು ಹದಮಾಡ ಲ್ಪಟ್ಟಿದೆ; ಮೆರುಗು ಸಹ ಮಾಡಲ್ಪಟ್ಟಿದೆ;
- 10ಅದು ಕೊಂದೇ ಕೊಲ್ಲುವ ಹಾಗೆ ಹದಮಾಡಲ್ಪಟ್ಟಿದೆ; ಥಳಥಳಿಸುವ ಹಾಗೆ ಮಸೆಯಲ್ಪಟ್ಟಿದೆ; ಹಾಗಾದರೆ ನಾವು ಸಂತೋಷಪಡಬಹುದೋ? ನನ್ನ ಮಗನ ಕೋಲು ಪ್ರತಿಯೊಂದು ಮರವನ್ನು ತಿರಸ್ಕಾರ ಮಾಡು ತ್ತದೆ.
- 11ಕೈಗೆ ಸಿದ್ದವಾಗುವಂತೆ ಅವನು ಅದನ್ನು ಮಸೆಯುವದಕ್ಕೆ ಕೊಟ್ಟಿದ್ದಾನೆ; ಕೊಲ್ಲುವವನ ಕೈಗೆ ಕೊಡುವ ಹಾಗೆ ಆ ಕತ್ತಿಗೆ ಹದವನ್ನೂ ಸಾಣೆಯನ್ನೂ ಮಾಡಲಾಗಿದೆ.
- 12ಮನುಷ್ಯಪುತ್ರನೇ, ಕೂಗು ಮತ್ತು ಗೋಳಾಡು; ಇದು ನನ್ನ ಜನರ ಮೇಲೆಯೂ ಇಸ್ರಾಯೇಲಿನ ಎಲ್ಲಾ ಅಧಿಪತಿಗಳ ಮೇಲೆಯೂ ಇರುವದು; ಕತ್ತಿಯ ಮುಖಾಂತರ ಅಂಜಿಕೆಯು ನನ್ನ ಜನರ ಮೇಲೆ ಬರುವದು. ಆದದರಿಂದ ತೊಡೆಯನ್ನು ಬಡಿದುಕೋ.
Cross references
- Psalm 110:5–6 ಕೀರ್ತನೆಗಳು 110:5–6ಕರ್ತನು ನಿನ್ನ ಬಲ ಪಾರ್ಶ್ವದಲ್ಲಿದ್ದು ತನ್ನ ಕೋಪದ ದಿವಸದಲ್ಲಿ ಅರಸ ರನ್ನು ಹೊಡೆಯುವನು. ಆತನು ಅನ್ಯಜನರಲ್ಲಿ ನ್ಯಾಯತೀರಿಸಿ ಹೆಣಗಳಿಂದ ತುಂಬಿಸುವನು; ಬಹು ದೇಶಗಳ ಮೇಲಿರುವ ತಲೆ ಗಳನ್ನು ಗಾಯಮಾಡುವನು.ದಾರಿಯಲ್ಲಿ ಹಳ್ಳದ ನೀರು ಕುಡಿಯುವನು; ಆದದರಿಂದ ಆತನು ತಲೆ ಎತ್ತುವನು.
- Ezekiel 20:47 ಯೆಹೆಜ್ಕೇಲನು 20:47ದಕ್ಷಿಣದ ಅರಣ್ಯಕ್ಕೆ ಹೇಳಬೇಕಾದ ದ್ದೇನಂದರೆ--ಕರ್ತನ ವಾಕ್ಯವನ್ನು ಕೇಳು, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನಲ್ಲಿ ಬೆಂಕಿ ಹಚ್ಚುತ್ತೇನೆ; ಅದು ನಿನ್ನಲ್ಲಿರುವ ಎಲ್ಲಾ ಹಸೀ ಮರಗಳನ್ನು ಮತ್ತು ಎಲ್ಲಾ ಒಣಮರಗಳನ್ನು ತಿಂದುಬಿಡುವದು; ಉರಿಯುವ ಉರಿ ಆರಿಹೋಗು ವದಿಲ್ಲ; ದಕ್ಷಿಣ ಮೊದಲುಗೊಂಡು ಉತ್ತರದ ವರೆಗೂ ಎಲ್ಲಾ ಮುಖಗಳು ಅದರಲ್ಲಿ ಸುಟ್ಟು ಹೋಗುವವು.
- Jeremiah 46:4 ಯೆರೆಮೀಯ 46:4ಕುದುರೆಗಳನ್ನು ಕಟ್ಟಿರಿ; ರಾಹುತರೇ, ಎದ್ದು ಶಿರಸ್ತ್ರಾಣಗಳನ್ನಿಟ್ಟು ನಿಂತುಕೊಳ್ಳಿರಿ, ಈಟಿಗಳನ್ನು ಮೆರುಗು ಮಾಡಿರಿ, ಕವಚಗಳನ್ನು ತೊಟ್ಟು ಕೊಳ್ಳಿರಿ;
- Ecclesiastes 3:4 ಪ್ರಸಂಗಿ 3:4ಅಳುವದಕ್ಕೆ ಒಂದು ಸಮಯ, ನಗುವದಕ್ಕೆ ಒಂದು ಸಮಯ; ಗೋಳಾಡುವದಕ್ಕೆ ಒಂದು ಸಮಯ, ಕುಣಿದಾಡುವದಕ್ಕೆ ಒಂದು ಸಮಯ;
- Isaiah 34:5–6 ಯೆಶಾಯ 34:5–6ನನ್ನ ಖಡ್ಗವು ಪರಲೋಕದಲ್ಲಿ ರೋಷ ಪಾನಮಾಡುವದು; ಇಗೋ, ಅದು ಎದೋ ಮಿನ ಮತ್ತು ನಾನು ಶಪಿಸಿದ ಜನರ ಮೇಲೆ ನ್ಯಾಯ ತೀರಿಸುವದಕ್ಕಾಗಿ ಕೆಳಗೆ ಇಳಿದು ಬರುವದು. ಕರ್ತನ ಖಡ್ಗವು ರಕ್ತದಿಂದ ತುಂಬಿದೆ; ಅದು ಕುರಿಹೋತಗಳ ರಕ್ತದಿಂದಲೂ ಟಗರುಗಳ ಮೂತ್ರಪಿಂಡದ ಕೊಬ್ಬಿ ನಿಂದಲೂ ಪುಷ್ಟಿಯಾಯಿತು; ಯಾಕಂದರೆ ಕರ್ತನು ಬೊಚ್ರದಲ್ಲಿ ಬಲಿಯನ್ನೂ ಎದೋಮಿನ ದೇಶದಲ್ಲಿ ದೊಡ್ಡ ಕೊಲೆಯನ್ನೂ ಉಂಟು ಮಾಡಿದ್ದಾನೆ.
- Revelation 2:27 ಪ್ರಕಟನೆ 2:27ನಾನು ನನ್ನ ತಂದೆಯಿಂದ ಹೊಂದಿದ ಪ್ರಕಾ ರವೇ ಅವನು ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವನು; ಅವರು ಕುಂಬಾರನ ಮಡಿಕೆಗಳಂತೆ ಒಡೆದು ಚೂರಾಗುವರು.
- Esther 3:15 ಎಸ್ತೇರಳು 3:15ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವು ತಳ ಮಳಗೊಂಡಿತು.
- Psalm 89:38–45 ಕೀರ್ತನೆಗಳು 89:38–45ಆದರೆ ನೀನು ಅಸಹ್ಯಿಸಿಬಿಟ್ಟು ತಿರಸ್ಕರಿಸಿ ನಿನ್ನ ಅಭಿಷಕ್ತನ ಮೇಲೆ ಉಗ್ರನಾದಿ; ನಿನ್ನ ಸೇವಕನ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ನೆಲಕ್ಕೆ ಹಾಕಿ ಹೊಲೆ ಮಾಡಿದ್ದೀ. ಅವನ ಬೇಲಿಗಳ ನ್ನೆಲ್ಲಾ ಮುರಿದು ಅವನ ಕೋಟೆಗಳನ್ನು ಹಾಳು ಮಾಡಿದ್ದೀ. ಮಾರ್ಗಸ್ಥರೆಲ್ಲರು ಅವನನ್ನು ಕೊಳ್ಳೇ ಹೊಡೆಯುತ್ತಾರೆ; ತನ್ನ ನೆರೆಯವರಿಗೆ ಅವನು ನಿಂದೆ ಯಾಗಿದ್ದಾನೆ. ಅವನ ವೈರಿಗಳ ಬಲಗೈಯನ್ನು ಉನ್ನತ ಮಾಡಿದ್ದೀ; ಶತ್ರುಗಳೆಲ್ಲರನ್ನು ಸಂತೋಷಪಡಿಸಿದ್ದೀ. ಅವನ ಕತ್ತಿಯ ಬಾಯನ್ನು ಹಿಂದಿರುಗಿಸಿ, ಯುದ್ಧ ದಲ್ಲಿ ಅವನನ್ನು ನಿಲ್ಲುವಂತೆ ಮಾಡಲಿಲ್ಲ. ಅವನ ಪ್ರಭೆಯನ್ನು ತಡೆದಿ; ಅವನ ಸಿಂಹಾಸನವನ್ನು ನೆಲಕ್ಕೆ ಹಾಕಿದ್ದೀ. ಅವನ ಯೌವನದ ದಿವಸಗಳನ್ನು ಕಡಿಮೆಮಾಡಿ, ನಾಚಿಕೆಯಿಂದ ಅವನನ್ನು ಮುಚ್ಚಿದ್ದೀ ಸೆಲಾ.
- Nahum 1:10 ನಹೂಮ 1:10ಅವರು ಮುಳ್ಳುಗಳ ಹಾಗೆ ಹೊಂದಿಕೊಂಡಿದ್ದರೂ ತಮ್ಮ ದ್ರಾಕ್ಷಾರಸದಿಂದ ಮತ್ತ ರಾಗಿದ್ದರೂ ಪೂರ್ಣವಾಗಿ ಒಣಗಿದ ಕೊಳೆಯಂತೆ ನಾಶವಾಗುವರು.
- Ezekiel 21:25–27 ಯೆಹೆಜ್ಕೇಲನು 21:25–27ದುಷ್ಟನಾದ ಭ್ರಷ್ಟ ಇಸ್ರಾಯೇಲನ ಪ್ರಭುವೇ, ನೀನು ಮಾಡಿದ ಅಕ್ರಮಗಳಿಂದ ನಿನಗೆ ಅಂತ್ಯ ದಿವಸವು ಬಂದಿತು. ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಮುಂಡಾಸವನ್ನು ಎತ್ತಿಡು, ಕಿರೀಟವನ್ನು ತೆಗೆದುಹಾಕು; ಅದು ಹಾಗೆಯೇ ಇರುವದಿಲ್ಲ; ತಗ್ಗಿಸಲ್ಪಟ್ಟವನನ್ನು ಹೆಚ್ಚಿಸಿ ಹೆಚ್ಚಿಸಲ್ಪಟ್ಟವನನ್ನು ತಗ್ಗಿಸು. ನಾನು ತಳ್ಳಿಬಿಡು ವೆನು, ತಳ್ಳಿಬಿಡುವೆನು, ಅದನ್ನು ತಳ್ಳಿಬಿಡುವೆನು; ನ್ಯಾಯ ಯಾರದು? ಅವನು ಬರುವ ವರೆಗೂ ಇದು ಇರುವದಿಲ್ಲ; ನಾನು ಅವನಿಗೆ ಇದನ್ನು ಕೊಟ್ಟು ಬಿಡುತ್ತೇನೆ.
- Psalm 2:7–9 ಕೀರ್ತನೆಗಳು 2:7–9ಕಟ್ಟಳೆಯನ್ನು ಸಾರುತ್ತೇನೆ; ಕರ್ತನು ನನಗೆ ಹೇಳಿದ್ದು--ನೀನು ನನ್ನ ಮಗನು, ನಾನು ಈ ಹೊತ್ತು ನಿನ್ನನ್ನು ಪಡೆದಿದ್ದೇನೆ. ನನ್ನನ್ನು ಕೇಳು; ಆಗ ಅನ್ಯಜನರನ್ನು ನಿನ್ನ ಬಾಧ್ಯತೆಯಾಗಿಯೂ ಭೂಮಿಯ ಕಟ್ಟಕಡೆಯ ವರೆಗೆ ನಿನ್ನ ಸ್ವಾಸ್ಥ್ಯವಾಗಿಯೂ ಕೊಡುವೆನು. ಕಬ್ಬಿಣದ ಕೋಲಿನಿಂದ ಅವರನ್ನು ಮುರಿದುಬಿಡುವಿ. ಕುಂಬಾರನ ಗಡಿಗೆಯ ಹಾಗೆ ಅವ ರನ್ನು ಒಡೆದು ಚೂರುಚೂರಾಗಿ ಮಾಡಿಬಿಡುವಿ.
- Habakkuk 3:11 ಹಬಕ್ಕೂಕ 3:11ಸೂರ್ಯ ಚಂದ್ರಗಳು ತಮ್ಮ ನಿವಾಸ ದಲ್ಲಿ ಕದಲದೆ ನಿಂತುಬಿಟ್ಟವು. ನಿನ್ನ ಬಾಣಗಳು ಬೆಳಕಿ ನಿಂದಲೂ ನಿನ್ನ ಈಟಿಯು ಮಿಂಚುವ ಪ್ರಕಾಶದಿಂದಲೂ ಹೊರಟವು.