Psalms · chapter 110 · verse 5
Psalm 110:5 in Kannada
ಕರ್ತನು ನಿನ್ನ ಬಲ ಪಾರ್ಶ್ವದಲ್ಲಿದ್ದು ತನ್ನ ಕೋಪದ ದಿವಸದಲ್ಲಿ ಅರಸ ರನ್ನು ಹೊಡೆಯುವನು.
Kartanu ninna bala paarshvadalliddu tanna kopada divasadalli arasa rannu hodeyuvanu.
Psalm 110:5 in English
- King James Version (KJV)
- The Lord at thy right hand shall strike through kings in the day of his wrath.
- World English Bible (WEB)
- The Lord is at your right hand. He will crush kings in the day of his wrath.
- American Standard Version (ASV)
- The Lord at thy right hand Will strike through kings in the day of his wrath.
- Bible in Basic English (BBE)
- In the day of his wrath kings will be wounded by the Lord at your right hand.
- Darby Translation (DBY)
- The Lord at thy right hand will smite through kings in the day of his anger.
- Webster's Bible (WBS)
- The LORD at thy right hand will strike through kings in the day of his wrath.
- Young's Literal Translation (YLT)
- The Lord on thy right hand smote kings In the day of His anger.
Read in context
- 3ಪರಿಶುದ್ಧ ತೆಯ ಸೌಂದರ್ಯಗಳಲ್ಲಿ ಉದಯದ ಗರ್ಭದಲ್ಲಿಂದ ನಿನ್ನ ಜನರು ಬಲದ ದಿವಸದಲ್ಲಿ ಸ್ವಇಷ್ಟವುಳ್ಳವ ರಾಗಿರುವರು; ಇಬ್ಬನಿಯಂತೆ ನಿನ್ನ ಯೌವನವು ನಿನಗೆ ಇರುವದು.
- 4ನೀನು ಎಂದೆಂದಿಗೂ ಮೆಲ್ಕೀಜೆದೇಕನ ತರದ ಯಾಜಕನಾಗಿದ್ದೀ ಎಂದು ಕರ್ತನು ಆಣೆಯಿಟ್ಟು ನುಡಿ ದಿದ್ದಾನೆ; ಪಶ್ಚಾತ್ತಾಪಪಡನು.
- 5ಕರ್ತನು ನಿನ್ನ ಬಲ ಪಾರ್ಶ್ವದಲ್ಲಿದ್ದು ತನ್ನ ಕೋಪದ ದಿವಸದಲ್ಲಿ ಅರಸ ರನ್ನು ಹೊಡೆಯುವನು.
- 6ಆತನು ಅನ್ಯಜನರಲ್ಲಿ ನ್ಯಾಯತೀರಿಸಿ ಹೆಣಗಳಿಂದ ತುಂಬಿಸುವನು; ಬಹು ದೇಶಗಳ ಮೇಲಿರುವ ತಲೆ ಗಳನ್ನು ಗಾಯಮಾಡುವನು.ದಾರಿಯಲ್ಲಿ ಹಳ್ಳದ ನೀರು ಕುಡಿಯುವನು; ಆದದರಿಂದ ಆತನು ತಲೆ ಎತ್ತುವನು.
- 7ದಾರಿಯಲ್ಲಿ ಹಳ್ಳದ ನೀರು ಕುಡಿಯುವನು; ಆದದರಿಂದ ಆತನು ತಲೆ ಎತ್ತುವನು.
Cross references
- Romans 2:5 ರೋಮಾಪುರದವರಿಗೆ 2:5ಹೀಗೆ ನಿನ್ನ ಕಾಠಿಣ್ಯತೆ ಮತ್ತು ಪಶ್ಚಾತ್ತಾಪವಿಲ್ಲದ ಹೃದಯದಿಂದ ಉಗ್ರತೆಯ ದಿನಕ್ಕಾಗಿಯೂ ದೇವರ ನೀತಿಯುಳ್ಳ ನ್ಯಾಯತೀರ್ವಿಕೆಯ ಪ್ರತ್ಯಕ್ಷತೆಗಾಗಿಯೂ ದೇವರ ಕೋಪವನ್ನು ನಿನಗೋಸ್ಕರ ಕೂಡಿಸಿಟ್ಟುಕೊಳ್ಳುತ್ತಾ ಇದ್ಧೀ.
- Psalm 16:8 ಕೀರ್ತನೆಗಳು 16:8ನಾನು ಕರ್ತನನ್ನು ಯಾವಾಗಲೂ ನನ್ನ ಮುಂದೆ ಇಟ್ಟುಕೊಂಡಿದ್ದೇನೆ. ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಕದಲೆನು.
- Revelation 6:15–17 ಪ್ರಕಟನೆ 6:15–17ಭೂರಾಜರೂ ದೊಡ್ಡ ವರೂ ಐಶ್ವರ್ಯವಂತರೂ ಮುಖ್ಯಾಧಿಪತಿಗಳೂ ಪರಾ ಕ್ರಮಶಾಲಿಗಳೂ ಎಲ್ಲಾ ದಾಸರೂ ಸ್ವತಂತ್ರರೂ ಗವಿ ಗಳಲ್ಲಿಯೂ ಬೆಟ್ಟಗಳ ಬಂಡೆಗಳಲ್ಲಿಯೂ ಅಡಗಿ ಕೊಂಡು ಪರ್ವತಗಳಿಗೂ ಬಂಡೆಗಳಿಗೂ--ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿದ್ದಾತನ ಮುಖಕ್ಕೂ ಕುರಿಮರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ;ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು. ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು.
- Revelation 17:12–14 ಪ್ರಕಟನೆ 17:12–14ನೀನು ಕಂಡ ಆ ಹತ್ತು ಕೊಂಬುಗಳು ರಾಜ್ಯವನ್ನು ಇನ್ನೂ ಹೊಂದದಿರುವ ಹತ್ತು ಮಂದಿ ರಾಜರು. ಅವರು ಮೃಗದೊಂದಿಗೆ ರಾಜರಂತೆ ಒಂದು ತಾಸಿನವರೆಗೆ ಅಧಿಕಾರವನ್ನು ಹೊಂದುತ್ತಾರೆ. ಅವರು ಒಂದೇ ಮನಸ್ಸುಳ್ಳವರಾಗಿದ್ದು ತಮ್ಮ ಅಧಿಕಾರವನ್ನೂ ಶಕ್ತಿಯನ್ನೂ ಮೃಗಕ್ಕೆ ಕೊಡುತ್ತಾರೆ. ಇವರು ಕುರಿಮರಿಯಾದಾತನ ಮೇಲೆ ಯುದ್ಧ ಮಾಡುವರು, ಆದರೆ ಕುರಿಮರಿ ಯಾದಾತನು ಅವರನ್ನು ಜಯಿಸುವನು; ಯಾಕಂದರೆ ಆತನು ಕರ್ತರ ಕರ್ತನೂ ರಾಜಾಧಿರಾಜನು ಆಗಿದ್ದಾನೆ. ಇದಲ್ಲದೆ ಆತನೊಂದಿಗೆ ಇರುವವರು ಕರೆಯಲ್ಪಟ್ಟ ವರೂ ಆಯಲ್ಪಟ್ಟವರೂ ನಂಬಿಗಸ್ತರು ಆಗಿದ್ದಾರೆ.
- Psalm 68:14 ಕೀರ್ತನೆಗಳು 68:14ಸರ್ವಶಕ್ತನು ಅರಸುಗಳನ್ನು ಸಲ್ಮೋನಿನಲ್ಲಿ ಚದರಿಸಿದಾಗ ಅದರಲ್ಲಿ ಬಿಳೀ ಹಿಮದ ಹಾಗಿತ್ತು.
- Revelation 19:11–21 ಪ್ರಕಟನೆ 19:11–21ಪರಲೋಕವು ತೆರೆದಿರುವದನ್ನು ನಾನು ಕಂಡೆನು. ಆಗ ಬಿಳೀ ಕುದುರೆಯು ಕಾಣಿಸಿತು; ಅದರ ಮೇಲೆ ಕೂತಿದ್ದಾತನು ನಂಬಿಗಸ್ತನೂ ಸತ್ಯವಂತನೂ ಎಂದು ಕರೆಯಲ್ಪಟ್ಟನು. ಆತನು ನೀತಿಯಿಂದ ನ್ಯಾಯವಿಚಾರಣೆ ಮಾಡಿ ಯುದ್ಧ ಮಾಡುತ್ತಾನೆ; ಆತನ ಕಣ್ಣುಗಳು ಬೆಂಕಿಯ ಉರಿಯಂತಿದ್ದವು; ಆತನ ತಲೆಯ ಮೇಲೆ ಅನೇಕ ಕಿರೀಟಗಳು ಇದ್ದವು. ಬರೆಯಲ್ಪಟ್ಟ ಹೆಸರು ಆತನಿಗೆ ಇತ್ತು. ಅದು ಆತನಿಗೇ ಹೊರತು ಮತ್ತಾರಿಗೂ ತಿಳಿದಿರಲಿಲ್ಲ. ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿ ಕೊಂಡಿದ್ದನು. ಆತನ ಹೆಸರು ದೇವರವಾಕ್ಯ ವೆಂದು ಕರೆಯಲ್ಪಡುತ್ತದೆ. ಪರಲೋಕದಲ್ಲಿರುವ ಸೈನ್ಯಗಳು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಆತನ ಹಿಂದೆ ಬರುತ್ತಿದ್ದವು. ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. ಆತನು ಅವರನ್ನು ಕಬ್ಬಿಣದ ಕೋಲಿನಿಂದ ಆಳುವನು. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷೆಯ ತೊಟ್ಟಿಯಲ್ಲಿರುವದನ್ನು ತುಳಿಯುತ್ತಾನೆ. ಆತನ ತೊಡೆಯ ಮೇಲೆಯೂ ವಸ್ತ್ರದ ಮೇಲೆಯೂ--ರಾಜಾ ಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ. ಆಮೇಲೆ ಒಬ್ಬ ದೂತನು ಸೂರ್ಯನಲ್ಲಿ ನಿಂತಿರುವದನ್ನು ನಾನು ಕಂಡೆನು. ಅವನು ಮಹಾ ಶಬ್ದದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ--ಬನ್ನಿರಿ, ಮಹಾ ದೇವರ ಭೋಜನಕ್ಕೆ ಕೂಡಿಕೊಳ್ಳಿರಿ, ರಾಜರ ಮಾಂಸವನ್ನೂ ಸೈನ್ಯಾಧಿಪತಿ ಗಳ ಮಾಂಸವನ್ನೂ ಪರಾಕ್ರಮಶಾಲಿಗಳ ಮಾಂಸವನ್ನೂ ಕುದುರೆಗಳ ಮಾಂಸವನ್ನೂ ಅವುಗಳ ಮೇಲೆ ಕೂತವರ ಮಾಂಸವನ್ನೂ ಮತ್ತು ಸ್ವತಂತ್ರರೂ ದಾಸರೂ ಚಿಕ್ಕವರೂ ದೊಡ್ಡವರೂ ಇವರೆಲ್ಲರ ಮಾಂಸವನ್ನೂ ತಿನ್ನುವದಕ್ಕೆ ಬನ್ನಿರಿ ಎಂದು ಹೇಳಿದನು. ತರುವಾಯ ಆ ಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕೂತಿದ್ದಾತನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧ ಮಾಡುವದಕ್ಕಾಗಿ ಕೂಡಿಬಂದಿರುವದನ್ನು ನಾನು ಕಂಡೆನು. ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಆದರ ಜೊತೆಯಲ್ಲಿ ಸೆರೆ ಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕ ದಿಂದಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು. ಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು.
- Mark 16:19 ಮಾರ್ಕನು 16:19ಹೀಗೆ ಕರ್ತನು ಅವರೊಂದಿಗೆ ಮಾತನಾಡಿದ ನಂತರ ಆತನು ಮೇಲಕ್ಕೆ ಪರಲೋಕದಲ್ಲಿ ಸ್ವೀಕರಿ ಸಲ್ಪಟ್ಟು ದೇವರ ಬಲಪಾರ್ಶ್ವದಲ್ಲಿ ಕೂತುಕೊಂಡನು.ಮತ್ತು ಅವರು ಹೊರಟುಹೋಗಿ ಎಲ್ಲಾ ಕಡೆಯಲ್ಲಿ ಸಾರಿದರು. ಇದಲ್ಲದೆ ಕರ್ತನು ಅವರ ಜೊತೆಯಲ್ಲಿ ಕೆಲಸಮಾಡುತ್ತಾ ನಡೆದ ಸೂಚಕ ಕಾರ್ಯಗಳಿಂದ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದನು. ಆಮೆನ್.
- Revelation 11:18 ಪ್ರಕಟನೆ 11:18ಜನಾಂಗಗಳು ಕೋಪಿಸಿ ಕೊಂಡವು, ನಿನ್ನ ಕೋಪವು ಬಂದಿತು. ಸತ್ತವರು ತೀರ್ಪು ಹೊಂದುವದಕ್ಕೂ ನೀನು ನಿನ್ನ ಸೇವಕರಾದ ಪ್ರವಾದಿಗಳಿಗೂ ಪರಿಶುದ್ಧರಿಗೂ ನಿನ್ನ ನಾಮಕ್ಕೆ ಭಯಪಡುವ ಚಿಕ್ಕವರಿಗೂ ದೊಡ್ಡವರಿಗೂ ಪ್ರತಿ ಫಲವನ್ನು ಕೊಡುವದಕ್ಕೆ ಮತ್ತು ಭೂಮಿಯನ್ನು ನಾಶಮಾಡುವವರನುಆಗ ಪರಲೋಕದಲ್ಲಿ ದೇವಾಲಯವು ತೆರೆಯ ಲ್ಪಟ್ಟಿತು; ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು; ಇದಲ್ಲದೆ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆನೆಕಲ್ಲಿನ ಮಳೆಯೂ ಉಂಟಾದವು.
- Acts 2:34–36 ಅಪೊಸ್ತಲರ ಕೃತ್ಯಗಳು 2:34–36ಯಾಕಂದರೆ ದಾವೀದನು ಆಕಾಶಗಳಿಗೆ ಏರಿಹೋಗಲಿಲ್ಲ; ಆದರೆ ಕರ್ತನು ನನ್ನ ಕರ್ತನಿಗೆ-- ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ತಾನೇ ಹೇಳುತ್ತಾನೆ. ಆದದರಿಂದ ನೀವು ಶಿಲುಬೆಗೆ ಹಾಕಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂದು ಇಸ್ರಾಯೇಲ್ ಮನೆತನದವರೆಲ್ಲರಿಗೂ ನಿಶ್ಚಯವಾಗಿ ತಿಳಿದಿರಲಿ ಎಂದು ಹೇಳಿದನು.
- Acts 7:55–56 ಅಪೊಸ್ತಲರ ಕೃತ್ಯಗಳು 7:55–56ಆದರೆ ಅವನು ಪವಿತ್ರಾತ್ಮಭರಿತನಾಗಿ ಪರಲೋಕ ದೊಳಗೆ ದೃಷ್ಟಿಸಿ ನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು-- ಆಗೋ, ಪರಲೋಕವು ತೆರೆದಿರುವದನ್ನೂ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರು ವದನ್ನೂ ನಾನು ನೋಡುತ್ತೇನೆ ಎಂದು ಹೇಳಿದನು.
- Psalm 2:2–6 ಕೀರ್ತನೆಗಳು 2:2–6ಕರ್ತನಿಗೆ ವಿರೋಧ ವಾಗಿಯೂ ಆತನ ಅಭಿಷಕ್ತನಿಗೆ ವಿರೋಧವಾಗಿಯೂ ಭೂರಾಜರು ನಿಂತುಕೊಳ್ಳುತ್ತಾರೆ; ಪ್ರಭುಗಳು ಒಟ್ಟಾಗಿ ಆಲೋಚಿಸುತ್ತಾರೆ. ಅವರು--ಅವರ ಬಂಧನಗಳನ್ನು ತುಂಡುತುಂಡಾಗಿ ಮುರಿದು ಅವರ ಕಟ್ಟುಗಳನ್ನು ನಮ್ಮಿಂದ ಬಿಸಾಡೋಣ ಅನ್ನುತ್ತಾರೆ. ಪರಲೋಕದಲ್ಲಿ ಕೂತಿರುವಾತನು ಅದಕ್ಕೆ ನಗು ವನು! ಕರ್ತನು ಅವರನ್ನು ಪರಿಹಾಸ್ಯ ಮಾಡುವನು. ಆಗ ಆತನು ತನ್ನ ಕೋಪದಿಂದ ಅವರ ಸಂಗಡ ಮಾತನಾಡುವನು; ತನ್ನ ಕೋಪಾವೇಶದಿಂದ ಅವ ರನ್ನು ಕಳವಳಪಡಿಸುವನು. ಆದಾಗ್ಯೂ ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.
- Psalm 2:9–12 ಕೀರ್ತನೆಗಳು 2:9–12ಕಬ್ಬಿಣದ ಕೋಲಿನಿಂದ ಅವರನ್ನು ಮುರಿದುಬಿಡುವಿ. ಕುಂಬಾರನ ಗಡಿಗೆಯ ಹಾಗೆ ಅವ ರನ್ನು ಒಡೆದು ಚೂರುಚೂರಾಗಿ ಮಾಡಿಬಿಡುವಿ. ಆದದರಿಂದ ಓ ಅರಸುಗಳೇ, ಈಗ ಜ್ಞಾನವಂತ ರಾಗಿರಿ; ಭೂ ನ್ಯಾಯಾಧಿಪತಿಗಳೇ, ಶಿಕ್ಷಣ ಪಡೆಯಿರಿ. ಭಯದಿಂದ ಕರ್ತನನ್ನು ಸೇವಿಸಿರಿ, ನಡು ಗುತ್ತಾ ಉಲ್ಲಾಸಪಡಿರಿ.ಆತನ ಕೋಪವು ಉರಿ ಯುವದಕ್ಕೆ ಮುಂಚೆಯೇ ಮಗನಿಗೆ ಮುದ್ದಿಡಿರಿ; ಇಲ್ಲ ವಾದರೆ ಆತನ ಕೋಪದಿಂದ ನೀವು ದಾರಿಯಲ್ಲೇ ನಾಶವಾದೀರಿ. ಆತನಲ್ಲಿ ಭರವಸವಿಟ್ಟವರೆಲ್ಲರೂ ಧನ್ಯರು. ಆತನ ಕೋಪವು ಉರಿ ಯುವದಕ್ಕೆ ಮುಂಚೆಯೇ ಮಗನಿಗೆ ಮುದ್ದಿಡಿರಿ; ಇಲ್ಲ ವಾದರೆ ಆತನ ಕೋಪದಿಂದ ನೀವು ದಾರಿಯಲ್ಲೇ ನಾಶವಾದೀರಿ. ಆತನಲ್ಲಿ ಭರವಸವಿಟ್ಟವರೆಲ್ಲರೂ ಧನ್ಯರು.