Ezekiel · chapter 23 · verse 47
Ezekiel 23:47 in Kannada
ಆ ಸಂಘದವರು ಅವರ ಮೇಲೆ ಕಲ್ಲೆಸೆದು ತಮ್ಮ ಕತ್ತಿಗಳಿಂದ ಕೊಯ್ದು ಅವರ ಕುಮಾರರನ್ನೂ ಕುಮಾರ್ತೆಯರನ್ನೂ ಕೊಂದು ಹಾಕಿ ಬೆಂಕಿಯಿಂದ ಅವರ ಮನೆಗಳನ್ನೆಲ್ಲಾ ಸುಟ್ಟು ಬಿಡುವರು.
Aa sanghadavaru avara mele kallesedu tamma kattigalinda koydu avara kumaararannoo kumaarteyarannoo kondu haaki benkiyinda avara manegalannellaa suttu biduvaru.
Ezekiel 23:47 in English
- King James Version (KJV)
- And the company shall stone them with stones, and dispatch them with their swords; they shall slay their sons and their daughters, and burn up their houses with fire.
- World English Bible (WEB)
- The company will stone them with stones and dispatch them with their swords. They will kill their sons and their daughters, and burn up their houses with fire.
- American Standard Version (ASV)
- And the company shall stone them with stones, and despatch them with their swords; they shall slay their sons and their daughters, and burn up their houses with fire.
- Bible in Basic English (BBE)
- And the meeting, after stoning her with stones, will put an end to her with their swords; they will put her sons and daughters to death and have her house burned up with fire.
- Darby Translation (DBY)
- And the assemblage shall stone them with stones, and despatch them with their swords; they shall kill their sons and their daughters, and burn their houses with fire.
- Webster's Bible (WBS)
- And the company shall stone them with stones, and dispatch them with their swords; they shall slay their sons and their daughters, and burn their houses with fire.
- Young's Literal Translation (YLT)
- And they have cast at them the stone of the assembly, And cut them with their swords, Their sons and their daughters they do slay, And their houses with fire they burn.
Read in context
- 45ನೀತಿ ಯುಳ್ಳ ಮನುಷ್ಯರು ಅವರಿಗೆ ನ್ಯಾಯತೀರಿಸಿ ವ್ಯಭಿ ಚಾರಿಣಿಯರಿಗೂ ರಕ್ತಸುರಿಸುವ ಹೆಂಗಸರಿಗೂ ತಕ್ಕ ದಂಡನೆಯನ್ನು ವಿಧಿಸುವರು; ಅವರು ವ್ಯಭಿಚಾರಿಣಿ ಯರು, ಅವರ ಕೈ ರಕ್ತವಾಗಿದೆ.
- 46ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಅವರಿಗೆ ವಿರೋಧವಾಗಿ ಸಂಘವನ್ನು ಕೂಡಿಸಿ ಅವರನ್ನು ತೆಗೆದುಹಾಕಲ್ಪಡು ವದಕ್ಕೂ ಸೂರೆಗೂ ಒಪ್ಪಿಸುವೆನು.
- 47ಆ ಸಂಘದವರು ಅವರ ಮೇಲೆ ಕಲ್ಲೆಸೆದು ತಮ್ಮ ಕತ್ತಿಗಳಿಂದ ಕೊಯ್ದು ಅವರ ಕುಮಾರರನ್ನೂ ಕುಮಾರ್ತೆಯರನ್ನೂ ಕೊಂದು ಹಾಕಿ ಬೆಂಕಿಯಿಂದ ಅವರ ಮನೆಗಳನ್ನೆಲ್ಲಾ ಸುಟ್ಟು ಬಿಡುವರು.
- 48ಹೀಗೆ ಸ್ತ್ರೀಯರೆಲ್ಲರೂ ನಿಮ್ಮ ದುಷ್ಕ ರ್ಮದ ಪ್ರಕಾರ ಮಾಡದಿರಲೆಂದು ಬೋಧಿಸಿ ದೇಶ ದೊಳಗಿಂದ ದುಷ್ಕರ್ಮವನ್ನು ತೆಗೆದುಹಾಕುವೆನು.ನಿಮ್ಮ ದುಷ್ಕರ್ಮದ ಫಲವನ್ನು ನಿಮ್ಮ ಮೇಲೆಯೇ ಮುಯ್ಯಿ ತೀರಿಸುವೆನು. ನೀವು ನಿಮ್ಮ ವಿಗ್ರಹಗಳ ಪಾಪಗಳನ್ನು ಹೊರುವಿರಿ; ಆಗ ದೇವರಾದ ಕರ್ತನು ನಾನೇ ಎಂದು ತಿಳಿದುಕೊಳ್ಳುವಿರಿ.
- 49ನಿಮ್ಮ ದುಷ್ಕರ್ಮದ ಫಲವನ್ನು ನಿಮ್ಮ ಮೇಲೆಯೇ ಮುಯ್ಯಿ ತೀರಿಸುವೆನು. ನೀವು ನಿಮ್ಮ ವಿಗ್ರಹಗಳ ಪಾಪಗಳನ್ನು ಹೊರುವಿರಿ; ಆಗ ದೇವರಾದ ಕರ್ತನು ನಾನೇ ಎಂದು ತಿಳಿದುಕೊಳ್ಳುವಿರಿ.
Cross references
- Ezekiel 24:21 ಯೆಹೆಜ್ಕೇಲನು 24:21ಇಸ್ರಾಯೇಲ್ಯರ ಮನೆ ತನದವರೊಂದಿಗೆ ಮಾತನಾಡಿ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು--ಇಗೋ, ನಾನು ನನ್ನ ಪರಿಶುದ್ಧ ಸ್ಥಳವನ್ನೂ ನಿಮ್ಮ ಬಲದ ಶ್ರೇಷ್ಠತ್ವವನ್ನೂ ನಿಮ್ಮ ನೇತ್ರಾನಂದಕರವಾದದ್ದನ್ನೂ ನಿಮ್ಮ ಮನಸ್ಸು ಅಭಿಲಾಷಿಸುವದನ್ನೂ ನಾನು ಅಪವಿತ್ರಪಡಿಸುವೆನು; ನೀವು ಬಿಟ್ಟಿರುವ ನಿಮ್ಮ ಕುಮಾರರೂ ಕುಮಾರ್ತೆಯರೂ ಕತ್ತಿಯಿಂದ ಬೀಳುವರು.
- Jeremiah 39:8 ಯೆರೆಮೀಯ 39:8ಅರಸನ ಮನೆಯನ್ನೂ ಜನರ ಮನೆಗಳನ್ನೂ ಕಸ್ದೀಯರು ಬೆಂಕಿಯಿಂದ ಸುಟ್ಟರು; ಮತ್ತು ಯೆರೂಸಲೇಮಿನ ಗೋಡೆಗಳನ್ನು ಕೆಡವಿಬಿಟ್ಟರು.
- Ezekiel 16:40–41 ಯೆಹೆಜ್ಕೇಲನು 16:40–41ಅವರು ನಿನಗೆ ವಿರುದ್ಧವಾಗಿ ಒಂದು ಕೂಟವನ್ನು ಕರಕೊಂಡು ಬಂದು ಕಲ್ಲುಗಳನ್ನು ನಿನ್ನ ಮೇಲೆ ಎಸೆದು, ತಮ್ಮ ಕತ್ತಿಗಳಿಂದ ನಿನ್ನನ್ನು ತಿವಿಯುವರು. ಅವರು ನಿನ್ನ ಮನೆಗಳನ್ನು ಸುಟ್ಟು ಬಹಳ ಸ್ತ್ರೀಯರ ಕಣ್ಣುಗಳ ಮುಂದೆ ನಿನಗೆ ನ್ಯಾಯ ತೀರಿಸುವರು; ನೀನು ವ್ಯಭಿಚಾರ ಮಾಡುವದನ್ನು ನಾನು ನಿಲ್ಲಿಸುವೆನು; ಆಗ ನೀನು ಕೂಲಿ ಸಹ ಕೊಡುವದನ್ನು ನಿಲ್ಲಿಸುವೆನು;
- Ezekiel 9:6 ಯೆಹೆಜ್ಕೇಲನು 9:6ವೃದ್ಧ ಯುವಕ ಯುವತಿ ಯರನ್ನು ಎಳೆಕೂಸುಗಳನ್ನು ಮತ್ತು ಹೆಂಗಸರನ್ನು ಸಂಪೂರ್ಣವಾಗಿ ಕೊಂದುಹಾಕಿರಿ. ಆದರೆ ಗುರುತು ಯಾವನ ಮೇಲೆ ಇದೆಯೋ ಅವನ ಹತ್ತಿರ ಹೋಗ ಬೇಡಿರಿ; ನನ್ನ ಪರಿಶುದ್ಧ ಸ್ಥಳದಿಂದಲೇ ಪ್ರಾರಂಭಿಸಿರಿ ಅಂದಾಗ, ಅವರು ಆಲಯದ ಮುಂದಿದ್ದ ಹಿರಿಯರಿಂದ ಪ್ರಾರಂಭಿಸಿದರು.
- Deuteronomy 13:16 ಧರ್ಮೋಪದೇಶಕಾಂಡ 13:16ಇದಲ್ಲದೆ ಅದರ ಎಲ್ಲಾ ಕೊಳ್ಳೆಯನ್ನು ಅದರ ಬೀದಿಯ ಮಧ್ಯದಲ್ಲಿ ಕೂಡಿಸಿ ಆ ಪಟ್ಟಣವನ್ನೂ ಅದರ ಎಲ್ಲಾ ಕೊಳ್ಳೆಯನ್ನೂ ಸಂಪೂರ್ಣವಾಗಿ ನಿನ್ನ ದೇವರಾದ ಕರ್ತನಿಗೆ ಬೆಂಕಿಯಿಂದ ಸುಟ್ಟುಬಿಡಬೇಕು; ಅದು ಎಂದೆಂದಿಗೂ ದಿಬ್ಬವಾಗಬೇಕು; ತರುವಾಯ ಅದನ್ನು ಕಟ್ಟಬಾರದು.
- Jeremiah 52:13 ಯೆರೆಮೀಯ 52:13ಕರ್ತನ ಆಲಯವನ್ನೂ ಅರಸನ ಮನೆಯನ್ನೂ ಯೆರೂಸಲೇಮಿನ ಎಲ್ಲಾ ಮನೆಗಳನ್ನೂ ದೊಡ್ಡವರ ಎಲ್ಲಾ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು;
- 2 Chronicles 36:17–19 2 ಪೂರ್ವಕಾಲವೃತ್ತಾಂತ 36:17–19ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು. ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು. ಅವರು ದೇವರ ಆಲಯವನ್ನು ಸುಟ್ಟು ಬಿಟ್ಟು ಯೆರೂಸಲೇಮಿನ ಗೋಡೆಯನ್ನು ಕೆಡವಿ ಹಾಕಿ ಅದರ ಅರಮನೆಗಳನ್ನು ಸುಟ್ಟು ಬಿಟ್ಟು ಅದರ ಬೆಲೆಯುಳ್ಳ ಸಾಮಾನುಗಳನ್ನೆಲ್ಲಾ ಕೆಡಿಸಿದರು.
- Ezekiel 24:6 ಯೆಹೆಜ್ಕೇಲನು 24:6ಆದಕಾರಣ ದೇವರಾದ ಕರ್ತನು ಹೀಗೆ ಹೇಳು ತ್ತಾನೆ; ರಕ್ತಮಯವಾದ ಆ ಪಟ್ಟಣಕ್ಕೆ ಅಯ್ಯೋ! ಯಾವದರ ಕಲ್ಮಶವು ಹೊರಗೆ ಬಾರದೆ ಅದರಲ್ಲಿ ಉಳಿದಿರುವದೋ ಆ ಹಂಡೆಗೆ ಅಯ್ಯೋ, ಅದರಿಂದ ತುಂಡು ತುಂಡಾಗಿ ಹೊರಗೆ ತೆಗೆ; ಆಯ್ಕೆಯ ಚೀಟಿಯು ಅದರ ಮೇಲೆ ಬೀಳದಿರಲಿ.
- Ezekiel 23:29 ಯೆಹೆಜ್ಕೇಲನು 23:29ಅವರು ನಿನ್ನ ವಿಷಯದಲ್ಲಿ ಹಗೆಯವರಾಗಿ ನಡೆಯುವರು; ನಿನ್ನ ಕಷ್ಟಾರ್ಜಿತವನ್ನು ತೆಗೆದುಕೊಂಡು ನಿನ್ನನ್ನು ಬೆತ್ತಲೆಯಾಗಿಯೂ ಬರಿದಾಗಿಯೂ ಮಾಡಿ ಬಿಡುವರು. ಆಗ ನಿನ್ನ ವ್ಯಭಿಚಾರವೂ ದುಷ್ಕರ್ಮವೂ ಜಾರತ್ವವೂ ಪ್ರಕಟವಾಗುವದು.
- Jeremiah 33:4–5 ಯೆರೆಮೀಯ 33:4–5ದಿಬ್ಬಗಳಿಂದಲೂ ಕತ್ತಿಯಿಂದಲೂ ಕೆಡವಿ ಹಾಕಲ್ಪಟ್ಟ ಈ ಪಟ್ಟಣದ ಮನೆಗಳ ವಿಷಯವೂ ಯೆಹೂದದ ಅರಸರ ಮನೆಗಳ ವಿಷಯವೂ ಇಸ್ರಾ ಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಅವರು ಕಸ್ದೀಯರ ಸಂಗಡ ಯುದ್ಧಮಾಡುವದಕ್ಕೂ ನಾನು ನನ್ನ ಕೋಪದಲ್ಲಿಯೂ ನನ್ನ ಉರಿಯಲ್ಲಿಯೂ ಕೊಂದುಹಾಕಿದ ಮನುಷ್ಯರ ಹೆಣಗಳಿಂದ ಅವುಗಳನ್ನು ತುಂಬಿಸುವದಕ್ಕೂ ಬರುತ್ತಾರೆ; ನಾನು ಈ ಪಟ್ಟಣಕ್ಕೆ ವಿರೋಧವಾಗಿ ಅದರ ಸಮಸ್ತ ಕೆಟ್ಟತನದ ನಿಮಿತ್ತ ನನ್ನ ಮುಖವನ್ನು ಮರೆಮಾಡಿದ್ದೇನೆ.
- Ezekiel 23:25 ಯೆಹೆಜ್ಕೇಲನು 23:25ಇದಲ್ಲದೆ ನನ್ನ ಅಸೂಯೆಯನ್ನು ನಿನಗೆ ವಿರುದ್ಧವಾಗಿ ಬರಮಾಡುವೆನು; ಅವರು ನಿನ್ನಲ್ಲಿ ಕೋಪತೀರಿಸಿ ಕೊಳ್ಳುವರು; ನಿನ್ನ ಮೂಗನ್ನೂ ಕಿವಿಗಳನ್ನೂ ತೆಗೆದು ಹಾಕುವರು; ನಿನ್ನಲ್ಲಿ ಉಳಿದವರು ಕತ್ತಿಯಿಂದ ಬೀಳು ವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನಲ್ಲಿ ಉಳಿದವರೆಲ್ಲರೂ ಅಗ್ನಿಗೆ ಆಹುತಿಯಾಗುವರು.