Ezekiel · chapter 26 · verse 14
Ezekiel 26:14 in Kannada
ನಿನ್ನನ್ನು ಬಂಡೆಯ ತುದಿ ಯಂತೆ ಮಾಡುವೆನು. ನೀನು ಅಲ್ಲಿ ಬಲೆ ಹಾಸುವ ಸ್ಥಳವಾಗುವಿ. ಇನ್ನು ನೀನು ಕಟ್ಟಲ್ಪಡುವದಿಲ್ಲ; ಯಾಕಂ ದರೆ ಕರ್ತನಾದ ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ.
Ninnannu bandeya tudi yante maaduvenu. Neenu alli bale haasuva sthalavaaguvi. Innu neenu kattalpaduvadilla; yaakam dare kartanaada naane adannu heliddenendu devaraada kartanu heluttaane.
Ezekiel 26:14 in English
- King James Version (KJV)
- And I will make thee like the top of a rock: thou shalt be [a place] to spread nets upon; thou shalt be built no more: for I the LORD have spoken [it], saith the Lord GOD.
- World English Bible (WEB)
- I will make you a bare rock. You will be a place for the spreading of nets. You will be built no more; for I the LORD have spoken it,’ says the Lord GOD.
- American Standard Version (ASV)
- And I will make thee a bare rock; thou shalt be a place for the spreading of nets; thou shalt be built no more: for I Jehovah have spoken it, saith the Lord Jehovah.
- Bible in Basic English (BBE)
- I will make you an uncovered rock: you will be a place for the stretching out of nets; there will be no building you up again: for I the Lord have said it, says the Lord.
- Darby Translation (DBY)
- And I will make thee a bare rock; thou shalt be [a place] for the spreading of nets; thou shalt be built no more: for I Jehovah have spoken [it], saith the Lord Jehovah.
- Webster's Bible (WBS)
- And I will make thee like the top of a rock: thou shalt be [a place] to spread nets upon; thou shalt be built no more: for I the LORD have spoken [it] , saith the Lord GOD.
- Young's Literal Translation (YLT)
- And I have given thee up for a clear place of a rock, A spreading-place of nets thou art, Thou art not built up any more, For I, Jehovah, I have spoken, An affirmation of the Lord Jehovah.
Read in context
- 12ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ಸರಕುಗಳನ್ನು ಕೊಳ್ಳೇ ಹೊಡೆದು, ಗೋಡೆಗಳನ್ನು ಒಡೆದು, ರಮ್ಯವಾದ ಮನೆಗಳನ್ನು ಕೆಡವಿ, ಕಲ್ಲುಗಳನ್ನೂ ಮರಗಳನ್ನೂ ದೂಳನ್ನೂ ನೀರಿನಲ್ಲಿ ಹಾಕುವರು.
- 13ಆಗ ನಿನ್ನ ಹಾಡು ಗಳ ಶಬ್ದವನ್ನು ನಿಲ್ಲಿಸುವೆನು, ಇನ್ನು ನಿನ್ನ ಕಿನ್ನರಿಗಳ ಧ್ವನಿ ಕೇಳಲ್ಪಡುವದಿಲ್ಲ.
- 14ನಿನ್ನನ್ನು ಬಂಡೆಯ ತುದಿ ಯಂತೆ ಮಾಡುವೆನು. ನೀನು ಅಲ್ಲಿ ಬಲೆ ಹಾಸುವ ಸ್ಥಳವಾಗುವಿ. ಇನ್ನು ನೀನು ಕಟ್ಟಲ್ಪಡುವದಿಲ್ಲ; ಯಾಕಂ ದರೆ ಕರ್ತನಾದ ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ.
- 15ದೇವರಾದ ಕರ್ತನು ತೂರಿಗೆ ಹೀಗೆ ಹೇಳು ತ್ತಾನೆ--ನಿಮ್ಮನ್ನು ಬೀಳುವಿಕೆಯ ಶಬ್ದದಿಂದಲೂ ಗಾಯ ಪಟ್ಟವರು ಕೂಗುವಾಗಲೂ ನಿನ್ನ ಮಧ್ಯದಲ್ಲಿ ಕೊಲೆ ಯಾಗುವಾಗಲೂ ದ್ವೀಪಗಳು ನಡುಗುವದಿಲ್ಲವೇ?
- 16ಆಮೇಲೆ ಸಮುದ್ರದ ಎಲ್ಲಾ ಪ್ರಭುಗಳು ತಮ್ಮ ಸಿಂಹಾಸನಗಳನ್ನು ಬಿಟ್ಟು ಇಳಿಯುವರು; ತಮ್ಮ ನಿಲು ವಂಗಿಗಳನ್ನು ತೆಗೆದುಹಾಕುವರು, ಚಿತ್ರವಾಗಿ ಹೊಲಿದ ತಮ್ಮ ವಸ್ತ್ರಗಳನ್ನು ಇಟ್ಟುಬಿಡುವರು; ನಡುಗುವಿಕೆಯನ್ನು ಹೊದ್ದುಕೊಳ್ಳುವರು; ನೆಲದ ಮೇಲೆ ಕುಳಿತುಕೊಳ್ಳು ವರು, ಕ್ಷಣಕ್ಷಣಕ್ಕೂ ನಡುಗುವರು, ನಿನ್ನ ವಿಷಯ ವಾಗಿ ಆಶ್ಚರ್ಯಪಡುವರು.
Cross references
- Malachi 1:4 ಮಲಾಕಿಯ 1:4ಎದೋಮು--ನಾವು ಬಡಕಲಾದೆವು, ಆದರೆ ನಾವು ತಿರಿಗಿಕೊಂಡು ಹಾಳಾದ ಸ್ಥಳಗಳನ್ನು ಕಟ್ಟುವೆವೆಂದು ಹೇಳಿದರೂ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು; ಅದಕ್ಕ ವರು--ದುಷ್ಟತನದ ಮೇರೆಯೂ ಕರ್ತನ ನಿತ್ಯ ಕೋಪದ ಜನಾಂಗವೆಂದೂ ಕರೆಯುವರು.
- Job 12:14 ಯೋಬನು 12:14ಇಗೋ, ಆತನು ಕೆಡವುತ್ತಾನೆ; ಅದು ತಿರುಗಿ ಕಟ್ಟಲ್ಪಡುವದಿಲ್ಲ. ಆತನು ಮನುಷ್ಯನಿಂದ ಮುಚ್ಚಿಬಿಡುತ್ತಾನೆ; ಅದು ತೆರೆ ಯಲ್ಪಡುವದಿಲ್ಲ.
- Isaiah 14:27 ಯೆಶಾಯ 14:27ಸೈನ್ಯಗಳ ಕರ್ತನುಉದ್ದೇಶಿಸಿ ದ್ದಾನೆ; ಅದನ್ನು ಯಾರು ವ್ಯರ್ಥಪಡಿಸುವರು. ಆತನ ಕೈಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು ಎಂಬದೇ.
- Ezekiel 26:4–5 ಯೆಹೆಜ್ಕೇಲನು 26:4–5ಅವರು ತೂರಿನ ಗೋಡೆಗಳನ್ನು ಕೆಡಿಸಿ ಅದರ ಗೋಪುರಗಳನ್ನು ಒಡೆದು ಬಿಡುವರು, ನಾನು ಅದರ ದೂಳನ್ನು ಅದರಿಂದ ಒರಿಸಿ ಅದನ್ನು ಬಂಡೆಯ ತುದಿಯಂತೆ ಮಾಡುವೆನು. ಅದು ಸಮು ದ್ರದ ಮಧ್ಯದಲ್ಲಿ ಬಲೆಗಳನ್ನು ಹಾಕುವ ಸ್ಥಳವಾಗಿ ರುವದು; ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ. ಅದು ಜನಾಂಗಗಳಿಗೆ ಕೊಳ್ಳೆ ಯಾಗಿರುವದು,
- Numbers 23:19 ಅರಣ್ಯಕಾಂಡ 23:19ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ?
- Deuteronomy 13:16 ಧರ್ಮೋಪದೇಶಕಾಂಡ 13:16ಇದಲ್ಲದೆ ಅದರ ಎಲ್ಲಾ ಕೊಳ್ಳೆಯನ್ನು ಅದರ ಬೀದಿಯ ಮಧ್ಯದಲ್ಲಿ ಕೂಡಿಸಿ ಆ ಪಟ್ಟಣವನ್ನೂ ಅದರ ಎಲ್ಲಾ ಕೊಳ್ಳೆಯನ್ನೂ ಸಂಪೂರ್ಣವಾಗಿ ನಿನ್ನ ದೇವರಾದ ಕರ್ತನಿಗೆ ಬೆಂಕಿಯಿಂದ ಸುಟ್ಟುಬಿಡಬೇಕು; ಅದು ಎಂದೆಂದಿಗೂ ದಿಬ್ಬವಾಗಬೇಕು; ತರುವಾಯ ಅದನ್ನು ಕಟ್ಟಬಾರದು.
- Ezekiel 17:21–24 ಯೆಹೆಜ್ಕೇಲನು 17:21–24ಅವನ ಸೈನ್ಯಗಳೆಲ್ಲಾ ಚದರಿಸಲ್ಪಟ್ಟು ಓಡಿಹೋಗಿ ಅವನ ಸಂಗಡ ಕತ್ತಿಯಿಂದ ಬೀಳುವರು; ಉಳಿದವರು ಎಲ್ಲಾ ದಿಕ್ಕುಗಳಿಗೆ ಚದರಿಸ ಲ್ಪಡುವರು; ಆಗ ಕರ್ತನಾದ ನಾನೇ ಅದನ್ನು ಹೇಳಿ ದೆನೆಂದು ನಿಮಗೆ ತಿಳಿಯುವದು. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇದ ಲ್ಲದೆ ನಾನು ಉನ್ನತವಾದ ದೇವದಾರಿನ ಎತ್ತರವಾದ ರೆಂಬೆಗಳನ್ನು ತೆಗೆದುಕೊಂಡು ಅದನ್ನು ನೆಡುವೆನು; ಎಳೆಯದಾದ ಒಂದನ್ನು ಕತ್ತರಿಸಿ ಎತ್ತರವಾದ ಪರ್ವತದ ಮೇಲೆ ನಾಟುವೆನು. ಇಸ್ರಾಯೇಲಿನ ಉನ್ನತ ಪರ್ವತದಲ್ಲಿ ನಾನು ಅದನ್ನು ನೆಡುವೆನು; ಅದರ ಕೊಂಬೆಗಳು ಒಡೆದು ಫಲಫಲಿಸುವದು; ಘನವುಳ್ಳ ದೇವದಾರು ಆಗುವದು; ಪ್ರತಿಯೊಂದು ಪುಕ್ಕಗಳುಳ್ಳ ಪಕ್ಷಿಗಳು ಅದರ ಕೊಂಬೆಗಳ ನೆರಳಿನ ಕೆಳಗೆ ವಾಸ ಮಾಡುವವು; ಅದರಡಿಯಲ್ಲಿ ವಾಸಿಸುವವು.ಕರ್ತ ನಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾ ದದ್ದನ್ನು ಎತ್ತರಪಡಿಸಿ (ಬೆಳಸಿ) ಹಸುರಾಗಿರುವದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ ಎಂದು ಅರ ಣ್ಯದ ಸಕಲ ವೃಕ್ಷಗಳು ತಿಳಿಯುವವೆಂದು ಕರ್ತನಾದ ನಾನೇ ಮಾತನಾಡಿ ಅದನ್ನು ಮಾಡಿದ್ದೇನೆ. ಕರ್ತ ನಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾ ದದ್ದನ್ನು ಎತ್ತರಪಡಿಸಿ (ಬೆಳಸಿ) ಹಸುರಾಗಿರುವದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ ಎಂದು ಅರ ಣ್ಯದ ಸಕಲ ವೃಕ್ಷಗಳು ತಿಳಿಯುವವೆಂದು ಕರ್ತನಾದ ನಾನೇ ಮಾತನಾಡಿ ಅದನ್ನು ಮಾಡಿದ್ದೇನೆ.
- Ezekiel 5:15 ಯೆಹೆಜ್ಕೇಲನು 5:15ಹೀಗೆ ನಾನು ಕೋಪ ದಿಂದಲೂ ಉಗ್ರತ್ವದಿಂದಲೂ ಉಗ್ರತ್ವದ ಗದರಿಕೆಗ ಳಿಂದಲೂ ನಿನ್ನಲ್ಲಿ ನ್ಯಾಯತೀರ್ಪುಗಳನ್ನು ನಡಿಸು ವಾಗ ನಿನ್ನ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ ದೂಷಣೆಯೂ ಶಿಕ್ಷೆಯೂ ವಿಸ್ಮಯವೂ ಆಗುವದು, ಕರ್ತನಾದ ನಾನೇ ಇದನ್ನು ಹೇಳಿದ್ದೇನೆ.
- Ezekiel 5:17 ಯೆಹೆಜ್ಕೇಲನು 5:17ಹೀಗೆ ನಾನು ಬರಗಾಲವನ್ನೂ ಮತ್ತು ಕೆಟ್ಟ ಮೃಗಗಳನ್ನೂ ನಿಮ್ಮ ಮೇಲೆ ಕಳುಹಿಸುತ್ತೇನೆ. ಅವು ನಿಮ್ಮನ್ನು ದಿಕ್ಕಿಲ್ಲದವರನ್ನಾಗಿ ಮಾಡುವವು. ವ್ಯಾಧಿಯೂ ರಕ್ತವೂ ನಿಮ್ಮಲ್ಲಿ ಹಾದು ಹೋಗುವದು; ನಿಮ್ಮ ಮೇಲೆ ಕತ್ತಿಯನ್ನು ಬೀಸುತ್ತೇನೆ. ಕರ್ತನಾದ ನಾನೇ ಇದನ್ನು ಮಾತನಾಡಿದ್ದೇನೆ.
- Ezekiel 26:12 ಯೆಹೆಜ್ಕೇಲನು 26:12ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ಸರಕುಗಳನ್ನು ಕೊಳ್ಳೇ ಹೊಡೆದು, ಗೋಡೆಗಳನ್ನು ಒಡೆದು, ರಮ್ಯವಾದ ಮನೆಗಳನ್ನು ಕೆಡವಿ, ಕಲ್ಲುಗಳನ್ನೂ ಮರಗಳನ್ನೂ ದೂಳನ್ನೂ ನೀರಿನಲ್ಲಿ ಹಾಕುವರು.
- Ezekiel 21:32 ಯೆಹೆಜ್ಕೇಲನು 21:32ನೀನು ಅಗ್ನಿಗೆ ಆಹುತಿಯಾಗುವ ಸೌದೆಯಾ ಗುವಿ, ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವದು; ನೀನು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲವೆಂದು ಕರ್ತನಾದ ನಾನೇ ಹೇಳಿದ್ದೇನೆ.
- Ezekiel 22:14 ಯೆಹೆಜ್ಕೇಲನು 22:14ನಾನು ನಿನ್ನೊಳಗೆ ಕೆಲಸ ನಡೆಸುವ ದಿವಸಗಳಲ್ಲಿ ನಿನ್ನ ಹೃದಯವು ನಿಲ್ಲುವದೋ? ನಿನ್ನ ಕೈಗಳು ಬಲವಾಗಿರುವವೋ? ಕರ್ತನಾದ ನಾನೇ ಹೇಳಿದ್ದೇನೆ, ನಾನೇ ಅದನ್ನು ಮಾಡುತ್ತೇನೆ.